Tuesday, 23 August 2022

ವಿದ್ಯಾಪ್ರವೇಶ ದಿನ - 63

 *ವಿದ್ಯಾಪ್ರವೇಶ ದಿನ-63* 

✒️🚁🎮🎨🎲🧮📏🔍

*ಅವಧಿ -1* (40ನಿ)

*ಶುಭಾಶಯ ವಿನಿಮಯ* 

(ಮಕ್ಕಳೊಂದಿಗೆ ಶಿಕ್ಷಕರ ಬೆಳಗಿನ ಕುಶಲೋಪರಿ)

೬೧ ನೇ ದಿನದ ಚಟುವಟಿಕೆಗಳನ್ನು ಮಾಡಿಸುವುದು 

     *ಮಾತು ಕತೆ* 

( ಶಿಕ್ಷಕರು - ಮಕ್ಕಳೊಂದಿಗಿನ ಬೆಳಗಿನ ಸಾಮೂಹಿಕ ಚಟುವಟಿಕೆ)    

 ಮಾತುಕತೆ

ಚಟುವಟಿಕೆ : ಹಬ್ಬಗಳು

ವಿಧಾನ: (ಕೆರೆ ದಂಡೆ ಆಟದ ಮಾದರಿ)

• ತರಗತಿಯಲ್ಲಿ ನೆಲದ ಮೇಲೆ ದೊಡ್ಡ ವೃತ್ತವನ್ನು ಎಳೆಯಿರಿ (ಮಕ್ಕಳ ಶಕ್ತಿಗೆ ಅನುಗುಣವಾಗಿ)

• ಮಕ್ಕಳನ್ನು ವೃತ್ತದ ಹೊರಗೆ ನಿಲ್ಲಿಸಿ.

• ಶಿಕ್ಷಕರು ಹಬ್ಬಗಳ ಹೆಸರುಗಳನ್ನು ಹೇಳಿದರೆ, ಮಕ್ಕಳು ವೃತ್ತ ಒಳಗೆ ಜಿಗಿಯಬೇಕು ಮತ್ತು ವಾರಗಳ 

ಹೆಸರುಗಳನ್ನು ಹೇಳಿದರೆ ಅವರು ವೃತ್ತದ ಹೊರಗೆ ಜಿಗಿಯಬೇಕು ಮತ್ತು ಯಾರಾದರೂ ತಪ್ಪು ಮಾಡಿದರೆ, 

ಅವನು /ಅವಳು ಆಟದಿಂದ ಔಟ್ ಆಗುತ್ತಾರೆ.

ದಿನ ೬೧ ರ ಚಟುವಟಿಕೆಯನ್ನು ಮುಂದುವರೆಸಿ.

ಚಟುವಟಿಕೆ: ನಮ್ಮ ಹಬ್ಬಗಳ ಸುತ್ತಲೂ

ಅಗತ್ಯವಿರುವ ಸಾಮಗ್ರಿಗಳು: ತಮ್ಮ ಪ್ರದೇಶದಲ್ಲಿ ಆಚರಿಸುತ್ತಿರುವ ವಿವಿಧ ರೀತಿಯ ಹಬ್ಬಗಳ ಚಿತ್ರ ಕಾರ್ಡ್ಗಳು

ಕಾರ್ಯವಿಧಾನ:

೧. ಮಕ್ಕಳನ್ನು ಅರೆ-ವೃತ್ತದಲ್ಲಿ ಕುಳಿತುಕೊಳ್ಳುವಂತೆ ಮಾಡಿ

೨. ಚಿತ್ರ ಕಾರ್ಡ್ ಗಳನ್ನು ಚೀಲದಲ್ಲಿ ಇರಿಸಿ.

೩. ಚೀಲವನ್ನು ಪಾಸ್ ಮಾಡಿ ಮತ್ತು ಸಂಗೀತವನ್ನು ನುಡಿಸಿ.

೪. ನಡುವೆ ಸಂಗೀತವನ್ನು ನಿಲ್ಲಿಸಿ.

೫. ಮ್ಯೂಸಿಕ್ ನಿಂತಾಗ, ಚೀಲವನ್ನು ಹೊಂದಿರುವ ಮಗುವು ತನ್ನ ಕೈಯನ್ನು ಚೀಲದೊಳಗೆ ಹಾಕಿ ಚೀಲದಿಂದ 

ಕಾರ್ಡ್ ಅನ್ನು ಹೊರತೆಗೆಯಬೇಕಾಗುತ್ತದೆ

೬. ಕಾರ್ಡ್ ನಲ್ಲಿ ಹಬ್ಬದ ಚಿತ್ರವನ್ನು ನೋಡಿದ ನಂತರ, ಮಗುವು ತನ್ನ ಮನೆಯಲ್ಲಿ ಆಚರಿಸುತ್ತಿರುವ ಹಬ್ಬಗಳ 

ಬಗ್ಗೆ ತನ್ನ ಅಭಿಪ್ರಾಯವನ್ನು ಹಂಚಿಕೊಳ್ಳಬೇಕು.

೭. ಹಬ್ಬಗಳಂದು ಅವರ ಆಲೋಚನೆಗಳನ್ನು / ಆಲೋಚನೆಗಳನ್ನು ಹೊರತರಲು ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಿ.

---–------------------------------ 

ಅವಧಿ-2 (40ನಿ)

*ನನ್ನ ಸಮಯ* 

ಕಲಿಕಾ ಸಿದ್ಧತಾ ಭಾಗವಾಗಿ ೮ ಮೂಲೆಗಳಲ್ಲಿ ಮೊದಲ ಹಂತದಲ್ಲಿ ನಿಗದಿಪಡಿಸಿರುವ ಮೂಲೆವಾರು ಚಟುವಟಿಕೆಗಳ 

ಬಗ್ಗೆ ಹಾಗೂ ಆಯಾ ಮೂಲೆಗಳ ಸಾಮಗ್ರಿಗಳನ್ನು ಬಳಸುವ ಬಗ್ಗೆ ಶಿಕ್ಷಕರು ಮಕ್ಕಳಿಗೆ ಪರಿಚಯ ಒದಗಿಸುವರು. 

ಮಕ್ಕಳಿಗೆ ಪ್ರಶ್ನೆಗಳನ್ನು ಕೇಳುತ್ತ ಅವರ ಅರ್ಥೈಸಿಕೊಳ್ಳುವಿಕೆಯನ್ನು ಖಾತ್ರಿ ಪಡಿಸಿಕೊಳ್ಳುವರು.

(* ಮೂಲೆವಾರು ಸಲಹಾತ್ಮಕ ಚಟುವಟಿಕೆಗಳನ್ನು ನೀಡಿದ್ದು, ಸಾಮರ್ಥ್ಯಗಳನ್ನು ಸಾಧಿಸಲು ಅನುಕೂಲವಾಗುವಂತೆ

ಮಕ್ಕಳಿಗೆಹೆಚ್ಚುವರಿ ಚಟುವಟಿಕೆಗಳನ್ನು ಯೋಜಿಸಬಹುದಾಗಿದೆ.)

ಬಿಲ್ಡಿಂಗ್ ಬ್ಲಾಕ್ಸ್ ಮೂಲೆ:- 

ಸಾಮರ್ಥ್ಯ: ಕಣ್ಣು ಮತ್ತು ಕೈಗಳ ಸಂಯೋಜನೆಯನ್ನು 

ಸಾಧಿಸುವರು.

ಚಟುವಟಿಕೆ : ಪಿರಮಿಡ್ ರಚನೆ

ಉದ್ದೇಶ : ವಸ್ತುಗಳನ್ನು ನಿರ್ದಿಷ್ಟವಾಗಿ ಜೋಡಿಸುವ ಕೌಶಲ್ಯ, 

ಏಕಾಗ್ರತೆ, ಸೌಂದರ್ಯಪ್ರಜ್ಞೆ ಹಾಗೂ ಆತ್ಮವಿಶ್ವಾಸ ಬೆಳೆಸುವುದು.

ಸಾಮಗ್ರಿಗಳು: ಬ್ಲಾಕ್ಸ್, ಪೇಪರ್ ಕಪ್ಸ್ ಇತ್ಯಾದಿ

ವಿಧಾನ : (೧, ೨ & ೩ ನೇ ತರಗತಿ

ಒದಗಿಸಲಾದ ವಸ್ತುಗಳನ್ನು ಪಿರಮಿಡ್ ಆಕಾರದಲ್ಲಿ ಜೋಡಿಸುವುದು.    

ಗಣಿತ ಮೂಲೆ:-

ಸಾಮರ್ಥ್ಯ: ವಸ್ತುಗಳ ಗಾತ್ರ, ಎತ್ತರ-ಗಿಡ್ಡ, ಭಾರ-ಹಗುರ, ಆಧಾರದ ಮೇಲೆ ವರ್ಗೀಕರಿಸುವುದು ಹಾಗೂ 

ಸಾಂಕೇತಿಕವಾಗಿ ಸಂಖ್ಯೆಗಳ ಹೋಲಿಕೆ ಮಾಡುವರು.

ಚಟುವಟಿಕೆ :

ಉದ್ದೇಶ : ನಿರ್ದಿಷ್ಟ ಅಂಕಿಯ ವಸ್ತುಗಳ ಗುಂಪು ಮಾಡುವುದು.

ಸಾಮಗ್ರಿ:- ಮಣಿಗಳು, ಹರಳುಗಳು, ಬೀಜಗಳು, ಗೋಲಿಗಳು ಇತ್ಯಾದಿ.

ವಿಧಾನ:

೧ನೇ ತರಗತಿ : ಶಿಕ್ಷಕರು ಬಿಳಿಹಾಳೆಯ ಮೇಲೆ ಗುರುತಿಸಿರುವ ಚುಕ್ಕಿಗಳಿಗೆ ಸಮನಾದ ಅಂಕಿಯ ಹರಳು/ಬೀಜ/

ಮಣಿಗಳನ್ನು ಹಾಳೆಯ ಮೇಲೆ ಇಡುವರು. 

೨ ನೇ & ೩ ನೇ ತರಗತಿ :

ಶಿಕ್ಷಕರು ಬಿಳಿಹಾಳೆಯ ಮೇಲೆ ಬರೆದಿರುವ ಸಂಖ್ಯೆಗನುಗುಣವಾಗಿ ಮಕ್ಕಳು ಹರಳು/ ಬೀಜ/ ಮಣಿಗಳ ಮೂಲಕ 

ಹತ್ತು, ಬಿಡಿಗಳಾಗಿ ವಿಂಗಡಿಸುವರು. 

ಅನ್ವೇಷಣೆ ಅಥವಾ ವಿಜ್ಞಾನ ಮೂಲೆ:

ಸಾಮರ್ಥ್ಯ: ವೈಜ್ಙಾನಿಕ, ಅನ್ವೇಷಣಾ ಹಾಗೂ ಚಿಂತನಾ ಮನೋಭಾವಗಳನ್ನು ಬೆಳೆಸಿಕೊಳ್ಳುವರು. 

ಚಟುವಟಿಕೆ: ಜಾರು .. ಹಾರು

ಉದ್ದೇಶ : ಗಾಳಿಯಿಂದ ಕೆಲವು ವಸ್ತುಗಳ ಸ್ಥಾನ ಪಲ್ಲಟದ ಬಗ್ಗೆ ತಿಳಿಯುವುದು.

ಸಾಮಗ್ರಿ:- ಹತ್ತಿ, ಪೇಪರ್, ರೆಕ್ಕೆ, ಪುಕ್ಕ, , ಒಣಗಿದ ಎಲೆ, ಪ್ಲಾಸ್ಟಿಕ್ ಚೆಂಡು, ಸ್ಕೇಲ್

ವಿಧಾನ:

೧ನೇ ತರಗತಿ :

ನೀಡಲಾಗಿರುವ ವಸ್ತುಗಳನ್ನು ಊದುವುದು. ಕೆಲವು ವಸ್ತುಗಳು ಜಾರುತ್ತವೆ ಹಾಗೂ ಕೆಲವು ವಸ್ತುಗಳು 

ಹಾರುವುದರಿಂದ ಆದ ಸ್ಥಾನ ಪಲ್ಲಟವನ್ನು ಗಮನಿಸುವರು. 

೨ & ೩ ನೇ ತರಗತಿ :

ಪರಿಸರದಲ್ಲಿ ತಾನು ನೋಡುವ ಹಾರುವ..ಹಾರದಿರುವ ವಸ್ತುಗಳನ್ನು ಹೆಸರಿಸುವರು.

ಗೊಂಬೆಗಳ ಮೂಲೆ :

ಸಾಮರ್ಥ್ಯ: ಸೌಂದರ್ಯೋಪಾಸನೆ, ವೈಯಕ್ತಿಕ ಸ್ವಚ್ಛತೆ, ಅಭಿವ್ಯಕ್ತಿ ಕೌಶಲ್ಯ ಬೆಳೆಸಿಕೊಳ್ಳುವರು.

ಚಟುವಟಿಕೆ : ಗೊಂಬೆ ಕಥೆ

ಉದ್ದೇಶ : ನಿರ್ದಿಷ್ಠ ವಿಷಯದ ಕುರಿತು ಅಭಿವ್ಯಕ್ತಿ ಬೆಳೆಸುವುದು.

ಸಾಮಗ್ರಿಗಳು: ಹಸು, ಹುಲಿ, ಆನೆ, ನವಿಲು, ಕೋಳಿ, ಪಾರಿವಾಳ, ಹಾಗೂ ಇತರೆ ಪ್ರಾಣಿ-ಪಕ್ಷಿಗಳ ಗೊಂಬೆಗಳು

ಇತ್ಯಾದಿ

ವಿಧಾನ : (೧ನೇ ಹಾಗೂ ೨& ೩ ನೇ ತರಗತಿ)

ಮಕ್ಕಳು ತಮಗಿಷ್ಟವಾದ ಎರಡು - ಮೂರು ಗೊಂಬೆಗಳನ್ನು ಆಯ್ದುಕೊಂಡು ತನ್ನ ಕಲ್ಪನೆಯಂತೆ ಕಥೆಯನ್ನು 

ಕಲ್ಪಿಸಿ ಅಭಿವ್ಯಕ್ತಿಸುವರು.

ಓದುವ/ ತರಗತಿ ಗ್ರಂಥಾಲಯ ಮೂಲೆ :

ಸಾಮರ್ಥ್ಯ: ಚಿತ್ರಗಳನ್ನು ಓದುವುದರೊಂದಿಗೆ ಅರ್ಥೈಸಿಕೊಳ್ಳುವುದು, ಕಲ್ಪನಾಶಕ್ತಿ, ಅಭಿವ್ಯಕ್ತಿ ಸಾಮರ್ಥ್ಯವನ್ನು 

ಬೆಳೆಸಿಕೊಳ್ಳುವರು. 

ಚಟುವಟಿಕೆ: ವಾಚಕ ಓದು

ಉದ್ದೇಶ : ವಾಚಕ, ಸರಳ ಚಿತ್ರ ಸಹಿತ ಕಥೆ ಓದಲುವ ಪ್ರಯತ್ನ ಮಾಡುವುದು.

ಸಾಮಗ್ರಿ:- ಸರಳ ಕಥೆಯ ಸರಣಿ ಚಿತ್ರಗಳು, ವಾಚಕಗಳು.

ವಿಧಾನ : (೧ನೇ ಹಾಗೂ ೨& ೩ ನೇ ತರಗತಿ)

ಪರಿಚಿತ ಕಥೆಯ ಚಿತ್ರ ಸರಣಿ, ವಾಚಕಗಳ ಸಹಾಯದಿಂದ ಕಥೆಯನ್ನು ಅರ್ಥೈಸಿಕೊಂಡು ಹೇಳುವರು.

ಕಲೆಗೊಂದು ನೆಲೆ/ಕರಕುಶಲ ಮೂಲೆ: 

ಸಾಮರ್ಥ್ಯ: ಸೂಕ್ಷö್ಮ ಸ್ನಾಯು ಬೆಳವಣಿಗೆಯೊಂದಿಗೆ ಸೌಂದರ್ಯೋಪಾಸನೆ, ಸೃಜನಶೀಲತೆಯನ್ನು ಬೆಳೆಸಿಕೊಳ್ಳುವರು.

ಚಟುವಟಿಕೆ: ಗ್ರೀಟಿಂಗ್ ಕಾರ್ಡ್

ಉದ್ದೇಶ : ಸೌಂದರ್ಯ ಪ್ರಜ್ಞೆ ಹಾಗೂ ಸೃಜನಾತ್ಮಕ ಕೌಶಲ್ಯ ಬೆಳೆಸುವುದು

ಸಾಮಗ್ರಿ:- ಒಣಗಿದ ಎಲೆಗಳು, ಕಡ್ಡಿಗಳು, ಸಣ್ಣ-ಸಣ್ಣ ಕಲ್ಲುಗಳು,

ಬಣ್ಣ, ಬಿಳಿಹಾಳೆಗಳು, ಫೆವಿಕಾಲ್ , ಬಣ್ಣ

ವಿಧಾನ : (೧ನೇ ಹಾಗೂ ೨ & ೩ ನೇ ತರಗತಿ )

ನೀಡಲಾದ ವಸ್ತುಗಳನ್ನು ಬಿಳಿಹಾಳೆಯ ಮೇಲೆ ಅಂಟಿಸಿ ವೈವಿಧ್ಯಮಯ ಚಿತ್ರಗಳನ್ನು ರಚಿಸುವರು. 

ಬರೆಯುವ ಮೂಲೆ : 

ಸಾಮರ್ಥ್ಯ : ಬರವಣಿಗೆ ಸಿದ್ಧತಾ ಅಭ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದ ರೊಂದಿಗೆ ಅಕ್ಷರಗಳ ವಿನ್ಯಾಸವನ್ನು 

ರಚಿಸುವರು.

ಚಟುವಟಿಕೆ: ಅಕ್ಷರ ರಚಿಸೋಣ

ಉದ್ದೇಶ : ಅಕ್ಷರ ರಚಿಸುವ ಸರಳ ಕೌಶಲ್ಯ ಹೊಂದುವುದು.

ಸಾಮಗ್ರಿ: ಬಣ್ಣಬಣ್ಣದ ಕ್ಲೇ (ಜೇಡಿಮಣ್ಣು)

ವಿಧಾನ : (೧ನೇ ೨ & ೩ ನೇ ತರಗತಿ)

ಕ್ಲೇ/ ಜೇಡಿಮಣ್ಣಿನ ಸಹಾಯದಿಂದ ಅಕ್ಷರದ ಮಾದರಿಗಳನ್ನು ರಚಿಸುವರು.

ಆಟಿಕೆ / ಮಾಡಿ ನೋಡು ಮೂಲೆ :

ಸಾಮರ್ಥ್ಯ: ಆಲೋಚನಾಶಕ್ತಿ, ಸೃಜನಶೀಲತೆಯೊಂದಿಗೆ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವರು.

ಚಟುವಟಿಕೆ: ಸ್ಪಾಂಜ್ ಡಾಲ್ ತಯಾರಿಕೆ

ಉದ್ದೇಶ : * ವ್ಯವಸ್ಥಿತವಾಗಿ ಮತ್ತು ಕ್ರಮಬದ್ಧವಾಗಿ ನೀಡಿದ ನಿರ್ದೇಶನಗಳ ಪಾಲಿಸುವಿಕೆ.

ಸಾಮಗ್ರಿ:- ಸ್ಪಾಂಜ್, ರಬ್ಬರ್ ಬ್ಯಾಂಡ್‌ಗಳು, ಬಿಂದಿಗಳು, ಮಾರ್ಕರ್ ಪೆನ್.

ವಿಧಾನ :

೧ನೇ, ೨ನೇ & ೩ನೇ ತರಗತಿ :

ಸ್ಪಾಂಜ್‌ನ್ನು ಉದ್ದವಾಗಿ ಹಿಡಿದು ಮೇಲ್ಭಾಗದ ಎರಡು ತುದಿಗಳಿಗೆ ರಬ್ಬರ್ ಬ್ಯಾಂಡ್ ಹಾಕಿ ಕಿವಿಗಳ ರಚನೆ 

ಮಾಡುವರು. 

ಮಧ್ಯ ಭಾಗದಲ್ಲಿ ಸಡಿಲವಾಗಿ ಚಿತ್ರದಲ್ಲಿ ತೋರಿಸಿರುವಂತೆ ರಬ್ಬರ್ ಬ್ಯಾಂಡ್ ಹಾಕುವುದು.

ಬಿಂದಿಗಳನ್ನು ಕಣ್ಣಿನ ಜಾಗದಲ್ಲಿ ಅಂಟಿಸುವುದು.

ಮಾರ್ಕರ್ ನಿಂದ ಬಾಯಿಯ ಭಾಗದಲ್ಲಿ ಗೆರೆ ಮೂಡಿಸುವುದು.

ಬಣ್ಣದ ಬಿಂದಿಗಳಿ0ದ ಗೊಂಬೆಯನ್ನು ಅಲಂಕರಿಸುವುದು.

೨ ನೇ & ೩ ನೇ ತರಗತಿ :

ತನ್ನದೇ ಆದ ರೀತಿಯಲ್ಲಿ ಗೊಂಬೆಗೆ ಅಲಂಕಾರ ಮಾಡುವರು.

----------------------------–----–-

     ಅವಧಿ-3(40ನಿ)

*ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ* (ಶಿಕ್ಷಕರಿಂದ ನಿರ್ದೇಶಿತ ಚಟುವಟಿಕೆ)    

ಸಾಮರ್ಥ್ಯ: ಹಣ್ಣುಗಳ ಬಗ್ಗೆ ಅರಿವು ಬೆಳೆಸಿಕೊಳ್ಳುವುದು, ಆರೋಗ್ಯಕರ ಆಹಾರ ಸೇವನೆ

ಚಟುವಟಿಕೆ:        ಹಣ್ಣುಗಳ ಬಗ್ಗೆ ತಿಳಿಯೋಣ (ಗುರಿ-೩)

ಉದ್ದೇಶ:- ಆರೋಗ್ಯಕರ ಅಭ್ಯಾಸದಲ್ಲಿ ಹಣ್ಣುಗಳ ಮಹತ್ವ ಅರಿಯುವುದು.

ಅಗತ್ಯ ಸಾಮಗ್ರಿಗಳು : ವಿವಿಧ ಬಣ್ಣಗಳ ಹಾಳೆಗಳು, ಕತ್ತರಿ

ವಿಧಾನ : ಹಣ್ಣುಗಳ ಬಗ್ಗೆ ಕೆಲವು ಪ್ರಶ್ನೆ ಕೇಳುವುದರ ಮೂಲಕ ತರಗತಿಯನ್ನು ಪ್ರಾರಂಭಿಸುವುದು. ಉದಾ: ನೀವು 

ತಿನ್ನುವ ಹಣ್ಣುಗಳ ಹೆಸರು ಹೇಳಿ.

* ನಿಮ್ಮ ನೆಚ್ಚಿನ ಹಣ್ಣು ಯಾವುದು?


* ಮಕ್ಕಳು ತಮಗೆ ಇಷ್ಟವಾದ ಚಿತ್ರ ಬಿಡಿಸಿ ಬಣ್ಣ ತುಂಬುವುದು. ಕತ್ತರಿಯ ಸಹಾಯದಿಂದ ಹಣ್ಣಿನ ಚಿತ್ರವನ್ನು 

ಕತ್ತರಿಸಿ ಕಟೌಟ್ ಸಿದ್ಧಪಡಿಸುವುದು. ಮಕ್ಕಳ ತಲೆಯ ಸುತ್ತ ಹಾಳೆಯ ಪಟ್ಟಿ ಧರಿಸುವುದು. ಕತ್ತರಿಸಿದ ಹಣ್ಣಿನ 

ಚಿತ್ರವನ್ನು ತಲೆಯ ಸುತ್ತ ಧರಿಸಿದ ಹಾಳೆಗೆ ಅಂಟಿಸಿ ಮುಖವಾಡವಾಗಿ ಬಳಸುವುದು.

* ಹಣ್ಣುಗಳನ್ನು ಮತ್ತು ಹಸಿರು ತರಕಾರಿಗಳನ್ನು ಹೆಚ್ಚು ಸೇವಿಸಲು ಮಕ್ಕಳನ್ನು ಪ್ರೋತ್ಸಾಹಿಸುವುದು.

೨ನೇ ತರಗತಿ

ನಿಮಗೆ ತಿಳಿದಿರುವ ಹಣ್ಣುಗಳ ಹೆಸರುಗಳನ್ನು ಹೇಳಿರಿ. ನಿಮಗೆ ಇಷ್ಟವಾದ ಹಣ್ಣಿನ ಚಿತ್ರ ಬರೆದು ಬಣ್ಣ ತುಂಬಿ 

ಎಂದು ಸೂಚಿಸುವುದು. 

೩ನೇ ತರಗತಿ

ಮಕ್ಕಳು ಸೇವಿಸಿರುವ/ನೋಡಿರುವ ಹಣ್ಣುಗಳ ಹೆಸರುಗಳನ್ನು ಪಟ್ಟಿ ಮಾಡಲು ಹೇಳುವುದು. ಮಾವಿನ ಹಣ್ಣಿನ ಚಿತ್ರ 

ಬರೆದು ಬಣ್ಣ ಹಾಕಲು ಹೇಳುವುದು. 

----------------------–---------

ಅವಧಿ -4     (40ನಿ)

*ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳಚಟುವಟಿಕೆ)    

ಸಾಮರ್ಥ್ಯ : ತನ್ನನ್ನು ತಾನು ಅರಿತುಕೊಳ್ಳುವುದು ಮತ್ತು ಇತರರ ಬಗ್ಗೆ ಅರಿವು ಮೂಡಿಸಿಕೊಳ್ಳುವುದು, ಭಾಷಾ 

ವಿಕಾಸ, ಪದ ಸಂಪತ್ತಿನ ಅಭಿವೃದ್ದಿ.

ಚಟುವಟಿಕೆ: ಹಾಡು.

ಉದ್ದೇಶಗಳು:

•     ಶಾರೀರಿಕ ಬೆಳವಣಿಗೆಯ ವಿಕಾಸ ಹೊಂದುತ್ತಾರೆ.

•     ಪದಸಂಪತ್ತು ಹೆಚ್ಚುವುದರೊಂದಿಗೆ ಪ್ರಾಸ, ಲಯ, ಸಂದರ್ಭ ಹಾಗೂ ಸ್ಪಷ್ಟ ಉಚ್ಛಾರಣೆ ಮಾಡುತ್ತಾರೆ.

•     ಆಂಗಿಕ ಭಾವನೆಗಳನ್ನು ಗುರ್ತಿಸುತ್ತಾರೆ.

•     ಪ್ರಾಸಪದಗಳನ್ನು ಕೇಳಿ ಆನಂದಿಸುವರು..

ಸಾಮಗ್ರಿಗಳು : ಹಾಡಿನ ಪ್ರತಿ

ವಿಧಾನ : ಮಕ್ಕಳನ್ನು ವೃತ್ತಾಕಾರವಾಗಿ ನಿಲ್ಲಿಸುವುದು. ಸುಗಮಕಾರರು ತಾಳ ಬದ್ಧ ಚಟುವಟಿಕೆಗಳನ್ನು ನಡೆಸಲು 

ಮಕ್ಕಳಿಗೆ ಅವಕಾಶ ಕಲ್ಪಿಸುವುದು. ಅಭಿನಯ ಗೀತೆಗಳು / ಹಾಡುಗಳಿಗೆ ಪರಿಕರಗಳನ್ನು ಉಪಯೋಗಿಸಿ ಅಥವಾ 

ಆಂಗಿಕ ಚಲನವಲನಗಳಿಂದ ಹಾಡಿಸುವುದು.

ವಿವರ: ೨ ಮತ್ತು ೩ ನೇ ತರಗತಿ ಮಕ್ಕಳಿಗೆ ಹಾಡಿಗೆ ಸಂಭ0ದಿಸಿ  ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯುವುದು.

    -------------------------------

ಅವಧಿ -5(60ನಿ)

 *ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ* 

 *ಆಲಿಸುವುದು ಮತ್ತುಮಾತನಾಡುವುದು* 

ಸಾಮರ್ಥ್ಯ: ಕ್ರಿಯಾತ್ಮಕ ಸ್ವ-ಅಭಿವ್ಯಕ್ತಿ, ಧ್ವನಿ ಸಂಕೇತ ಹಾಗೂ ಪ್ರಾಸದ ಅರಿವು, ಪರಿಸರ ಪ್ರಜ್ಞೆ, ಪದಸಂಪತ್ತಿನ 

ಬೆಳವಣಿಗೆ

ಚಟುವಟಿಕೆ : ಹಾಡು, ಪ್ರಾಸಗೀತೆ, ಪದ್ಯ/ ನಾಟಕ. (ಗುರಿ-೨) ಇಅಐ-೩ (೫೭ನೇ ದಿನದಿಂದ ಮುಂದುವರೆದಿದೆ)

ಉದ್ದೇಶಗಳು:

* ಧ್ವನಿ ಸಂಕೇತಗಳ ಅರಿವನ್ನು ಮೂಡಿಸುವುದು.

* ಪ್ರಾಸಗಳ ಅರಿವನ್ನು ಉಂಟು ಮಾಡುವುದು.

* ಕ್ರಿಯಾತ್ಮಕ ಸ್ವ-ಅಭಿವ್ಯಕ್ತಿಗೆ ಅವಕಾಶ ಕಲ್ಪಿಸುವುದು.

* ತನ್ನ ಸುತ್ತಲಿನ ಪರಿಸರದೊಂದಿಗೆ ಸಂಬAಧೀಕರಿಸುವುದು.

ಅಗತ್ಯ ಸಾಮಗ್ರಿಗಳು: ಇಲ್ಲ

ವಿಧಾನ: ಮಕ್ಕಳನ್ನು ವೃತ್ತಾಕಾರದಲ್ಲಿ ನಿಲ್ಲಿಸಿ. ಶಿಕ್ಷಕರು ಮಕ್ಕಳಿಗೆ ೫೭ ನೇ ದಿನ ಹೇಳಿಕೊಟ್ಟ ಪ್ರಾಸಗೀತೆಯನ್ನೇ 

ಅಭಿನಯದೊಂದಿಗೆ ಹಾಡಿ ತೋರಿಸಲಿ. ಶಿಕ್ಷಕರನ್ನು ಅನುಕರಿಸುತ್ತಾ ಮಕ್ಕಳು ಹಾಡನ್ನು ಪುನರುಚ್ಚರಿಸಲು ತಿಳಿಸಿ.

ನೆನಪಿಡಬೇಕಾದ ಅಂಶಗಳು:

* ಮಕ್ಕಳು ಹಾಡನ್ನು ಆನಂದಿಸಲು ಸೂಕ್ತ ಅಭಿನಯ ಹಾಗೂ ಉತ್ಸಾಹದಿಂದ ಹಾಡಿ.

* ಮಕ್ಕಳು ಗೀತೆಯಲ್ಲಿರುವ ಪ್ರಾಸ ಪದಗಳನ್ನು ಶಿಕ್ಷಕರ ಸಹಾಯದಿಂದ ಗುರುತಿಸಲಿ.

ತರಗತಿವಾರು ವಿವರ: ೨ನೇ ತರಗತಿಯ ಮಕ್ಕಳು ಪ್ರಾಸಗೀತೆಯಲ್ಲಿ ಬರುವ ಪ್ರಾಸ ಪದಗಳನ್ನು ಗುರುತಿಸುವುದು.

೩ನೇ ತರಗತಿ ಮಕ್ಕಳು ಆ ಪ್ರಾಸ ಪದಗಳಿಗೆ ಇನ್ನಷ್ಟು ಪದಗಳನ್ನು ಸೇರಿಸುವುದು.


*ಅರ್ಥಗ್ರಹಿಕೆಯೊಂದಿಗಿನ ಓದು*     

 ಸಾಮರ್ಥ್ಯ : ಪದ ಗುರುತಿಸುವುದು, ಮುದ್ರಿತ ಪಠ್ಯದ ಅರಿವು, ಅರ್ಥಗ್ರಹಿಕೆ, ಪದ ಸಂಪತ್ತಿನ ಅಭಿವೃದ್ಧಿ.

ಚಟುವಟಿಕೆ : ಹೆಸರಿನ ಜಗತ್ತು (ಗುರಿ ೨)

ಉದ್ದೇಶ: ಪರಿಚಿತ ಸನ್ನಿವೇಶದಲ್ಲಿನ ವಸ್ತುಗಳನ್ನು ಲಿಪಿಸಂಕೇತಗಳೊ0ದಿಗೆ ಸಹ ಸಂಬ0ಧೀಕರಿಸಿಕೊಳ್ಳುವುದು. 

ಸಾಹಿತ್ಯ ಮತ್ತು ವಸ್ತು ಒಂದೇ ಇದೆ ಎಂಬ ತೀರ್ಮಾನಕ್ಕೆ ಬಂದು ಓದುವಿಕೆಯಲ್ಲಿ ಆಸಕ್ತಿ ಬೆಳಸಿಕೊಳ್ಳುವುದು.

ಅಗತ್ಯ ಸಾಮಗ್ರಿಗಳು : ನೋಟ್ ಪುಸ್ತಕ, ಚಾರ್ಟ್ ಪೇಪರ್, ಪೆನ್ಸಿಲ್, ಕ್ರೇಯಾನ್ಸ್, ನಮಗೆ ಕಣ್ಣಿಗೆ ಕಾಣುವ 

ಸುತ್ತಮುತ್ತಲಿನ ಸಾಮಗ್ರಿಗಳು

ವಿಧಾನ :

- ಮಕ್ಕಳ ಸಹಾಯದಿಂದ ತರಗತಿಯಲ್ಲಿರುವ ಸಾಮಾನ್ಯ/ ಪರಿಚಿತ ವಸ್ತುಗಳ ಹೆಸರನ್ನು ಪಟ್ಟಿ ಮಾಡುವುದು.

ಉದಾ: ಮೇಜು, ಕುರ್ಚಿ, ಬಾಗಿಲು…ಇತ್ಯಾದಿ.

- ಸಿದ್ಧಪಡಿಸಿದ ನಾಮಫಲಕಗಳನ್ನು ಆಯಾ ವಸ್ತುಗಳ ಮೇಲೆ ಅಂಟಿಸುವುದು.

- ಇನ್ನೊಂದು ಸೆಟ್ ನಾಮಫಲಕಗಳ ಮಿಂಚುಪಟ್ಟಿಗಳನ್ನು ತಯಾರಿಸಿಟ್ಟುಕೊಳ್ಳುವುದು.

- ಪದಗಳ ಮಿಂಚುಪಟ್ಟಿಯನ್ನು ತರಗತಿಯಲ್ಲಿ ಪ್ರದರ್ಶಿಸುತ್ತಾ, ಮಕ್ಕಳಿಂದ ಗಟ್ಟಿಯಾಗಿ ಹೇಳಿಸುವುದು.

- ಪದ ಉಚ್ಛರಿಸುತ್ತಾ ಆ ವಸ್ತುವಿನ ಬಳಿಗೆ ಮಗು ಹೋಗಲು ತಿಳಿಸುವುದು.

_ ಮಗು ಕನಿಷ್ಟ ನಾಲ್ಕೆöದು ವಸ್ತುಗಳನ್ನಾದರೂ ಹೆಸರಿಸಲು ಅವಕಾಶ ಕಲ್ಪಿಸುವುದು..

_ ಆ ಪದಗಳನ್ನು ಕಥೆಯಲ್ಲಿ ಗುರುತಿಸಲು ಅವಕಾಶ ಕಲ್ಪಿಸುವುದು.

- ಚಿತ್ರ ಸಹಿತ ನಾಮಫಲಕ/ ಮಿಂಚುಪಟ್ಟಿಗಳನ್ನು ಸಿದ್ಧಪಡಿಸಿ, ಚಟುವಟಿಕೆ ಸ್ಥಳದಲ್ಲಿ/ ಸಮಯದಲ್ಲಿ ಮಕ್ಕಳಿಗೆ 

ಗುರುತಿಸಿ ಓದಲು (ಚಿತ್ರಗಳ ಸಹಾಯದಿಂದ) ಅವಕಾಶ ಕಲ್ಪಿಸುವುದು.

೨ ಮತ್ತು ೩ನೇ ತರಗತಿ: ಕಥೆ/ ಪಠ್ಯದಲ್ಲಿ ಬಂದಿರುವ ಮುಖ್ಯಪದಗಳ ಮಿಂಚುಪಟ್ಟಿ ತಯಾರಿಸಿಕೊಳ್ಳುವುದು. 

ಮಕ್ಕಳಿಗೆ ಶಿಕ್ಷಕರು ಕಥೆ/ ಪಠ್ಯವನ್ನು ನೀಡಿ ಓದಲು ಅವಕಾಶ ಕಲ್ಪಿಸುವುದು. ನಂತರ 

ಮಿಂಚುಪಟ್ಟಿಯಲ್ಲಿರುವ ಪದಗಳನ್ನು ಕಥೆಯಲ್ಲಿ ಹುಡುಕಲು ಸೂಚಿಸುವುದು.

ಗಮನಿಸಿ : ಈ ಹಿಂದೆ ಈ ಚಟುವಟಿಕೆಗಳಲ್ಲಿ ಬಳಸಿದ ಪದಗಳನ್ನು ಹೊರತುಪಡಿಸಿ 

ಬೇರೆ ಬೇರೆ ಸ್ಥಳ, ಸನ್ನಿವೇಶದಲ್ಲಿ ಬರುವ ಪದಗಳನ್ನು ಬಳಸಿ ಚಟುವಟಿಕೆಯನ್ನು 

ನಿರ್ವಹಿಸುವುದು.

         *ಉದ್ದೇಶಿತ ಬರಹ*      

ಸಾಮರ್ಥ್ಯ : ಸೂಕ್ಷö್ಮ ಸ್ನಾಯು ಚಲನಾ ಕೌಶಲಾಭಿವೃದ್ಧಿ, ಅಕ್ಷರಗಳನ್ನು ಗುರುತಿಸುವುದು.

ಚಟುವಟಿಕೆ: ಚುಕ್ಕಿ ಸೇರಿಸು – ಅಕ್ಷರ ಬರೆ (ಗುರಿ: ೨) 

ಉದ್ದೇಶಗಳು :

•     ಸೂಕ್ಷö್ಮ ಸ್ನಾಯು ಚಲನಾ ಕೌಶಲಗಳನ್ನು ಅಭಿವೃದ್ಧಿಪಡಿಸುವುದು.

•     ಅಕ್ಷರಗಳನ್ನು ಗುರುತಿಸುವುದು.

•     ಚುಕ್ಕಿಗಳಿಂದ ಅಕ್ಷರಗಳನ್ನು ರಚಿಸುವುದು.

ಅಗತ್ಯ ಸಾಮಗ್ರಿ: ನೋಟ್ ಪುಸ್ತಕ, ಪೆನ್ಸಿಲ್, ಕರಿ ಹಲಗೆ, ಸೀಮೆ ಸುಣ್ಣ

ವಿಧಾನ :

- ಮಕ್ಕಳಿಗೆ ಚುಕ್ಕಿ ಬಳಸಿ ಂ, ಃ, ಅ, ಆ, ಇ ಈ ಅಕ್ಷರಗಳನ್ನು ಬರೆಯುವ ವಿಧಾನವನ್ನು ಬರೆದು ತೋರಿಸುವುದು.

- ಮಕ್ಕಳು ಂ, ಃ, ಅ, ಆ, ಇ ಈ ಅಕ್ಷರಗಳ ಚುಕ್ಕಿಗಳನ್ನು ಸೇರಿಸಲು ಹೇಳುವುದು.

ತರಗತಿವಾರು ವಿವರ: ೨ನೇ ತರಗತಿಯ ಮಕ್ಕಳು ಇಂಗ್ಲಿಷ್ ವರ್ಣಮಾಲೆಯ ಯಾವುದಾದರೂ ೫ ಅಕ್ಷರಗಳನ್ನು 

ಚುಕ್ಕಿ ಬಳಸಿ ಬರೆಯಲು ತಿಳಿಸುವುದು. ೩ನೇ ತರಗತಿ ಮಕ್ಕಳು ತಮಗೆ ತಿಳಿದ ೫ ಇಂಗ್ಲಿಷ್ ಪದಗಳನ್ನು ಚುಕ್ಕಿ 

ಬಳಸಿ ಬರೆಯಲು ತಿಳಿಸುವುದು. (೬೯ನೇ ದಿನಕ್ಕೆ ಮುಂದುವರೆದಿದೆ)

ಬರವಣಿಗೆಯ ಮಾದರಿ:

ಶಿಕ್ಷಕರು ಮಕ್ಕಳೆದುರು ಕಪ್ಪುಹಲಗೆಯಲ್ಲಿ ಬರೆಯುವುದು. ಬರವಣಿಗೆಯ ಸರಿಯಾದ ಕ್ರಮವನ್ನು ಮಕ್ಕಳು 

ನೋಡಲು ಅವಕಾಶ ಕಲ್ಪಿಸುವುದು.

ಮಕ್ಕಳ ಹೆಸರು, ಮಕ್ಕಳು ಬರೆದ ಚಿತ್ರಗಳ ಹೆಸರು ಮೊದಲಾದವುಗಳನ್ನು ಮಕ್ಕಳೆದುರೇ ಬರೆಯುವುದು. ಶಿಕ್ಷಕರು 

ತರಗತಿಯಲ್ಲಿ ಏನನ್ನೇ ಬರೆಯುವುದಾದರೂ ಮಕ್ಕಳ ಎದುರಿನಲ್ಲಿಯೇ ಬರೆಯುವುದು.

--------------------------------

 ಅವಧಿ - 6(40ನಿ)

*ಹೊರಾಂಗಣ ಆಟಗಳು* 

ಚಟುವಟಿಕೆ : ಸ್ಥಿರ ಸಮತೋಲನ (Sಣಚಿಣiಛಿ ಃಚಿಟಚಿಟಿಛಿe)

ಸಾಮರ್ಥ್ಯ: ಸ್ಥೂಲ ಸ್ನಾಯು ಚಲನ ಕೌಶಲ ಬೆಳವಣಿU,ೆ ದೇಹದ ಬೇರೆ ಬೇರೆ ಭಾಗಗಳ ಸಮತೋಲನ ಸಾಧಿಸುವುದು.

ಬೇಕಾಗುವ ಸಾಮಗ್ರಿ: ಮೃದುವಾದ ಜಾಗ, ಚಾಪೆ, ಜಮಖಾನ

ವಿಧಾನ :

• ಈ ಚಟುವಟಿಕೆಯನ್ನು ತರಗತಿ ಕೋಣೆಯೊಳಗೆ/ ಸಭಾಂಗಣದಲ್ಲಿ ಮಾಡಿಸುವುದು.

• ಚಾಪೆಯನ್ನು/ ಜಮಖಾನ ಹಾಸಿ ಮಕ್ಕಳಿಗೆ ಅಗತ್ಯವಿದಷ್ಟು ಜಾಗವನ್ನು ನೀಡುವುದು.

• ಮಕ್ಕಳು ಚಾಪೆಯ ಮೇಲೆ ಅಂಗಾತ ಮಲಗಲು ಸೂಚಿಸುವುದು.

• ಸ್ವಲ್ಪ ಸಮಯದ ನಂತರ ಹೊಟ್ಟೆಯ ಮೇಲೆ (ಬೋರಲು) ಮಲಗಲು ಸೂಚಿಸುವುದು.

ಎರಡನೇ ಮತ್ತು ಮೂರನೇ ತರಗತಿ ಮಕ್ಕಳಿಗೆಅಂಗಾತಮಲಗಿದಾಗ ಎರಡು ಕಾಲನ್ನು ಎತ್ತಲು ಹಾಗೂ ಕೈ ಗಳನ್ನೂಎತ್ತಲು ಸೂಚಿಸುವುದು.

    -------------------------------- 

ಅವಧಿ - 7(40ನಿ)

*ಕಥಾ ಸಮಯ* 

ಶೀರ್ಷಿಕೆ : ಒಂಟೆ ಮತ್ತು ನರಿ

ಸಾಮಗ್ರಿಗಳು : ಪಪೆಟ್, ಸ್ಕಿçನ್

ಉದ್ದೇಶಗಳು :

 ಆಲೋಚನಾ ಶಕ್ತಿಯನ್ನು ಹೆಚ್ಚಿಸುವುದು.

 ಏಕಾಗ್ರತೆಯನ್ನು ಹೆಚ್ಚಿಸುವುದು.

 ಅಭಿನಯ ಕೌಶಲ ಹೆಚ್ಚಿಸುವುದು.

 ಸಂಭಾಷಣೆಯ ಕೌಶಲವನ್ನು ಹೆಚ್ಚಿಸುವುದು.

ವಿಧಾನ : ಪಪೆಟ್ ಪ್ರದರ್ಶನ

 ಪಪೆಟ್ ಗೊಂಬೆಗಳನ್ನು ಪರದೆಯ ಮೇಲೆ ಪ್ರದರ್ಶಿಸಿ ಕಥೆಯನ್ನು ನಿರೂಪಿಸುವುದು. ಶಿಕ್ಷಕರು ಕಥೆಯ 

ಸಂಭಾಷಣೆಯನ್ನು ಮಕ್ಕಳಿಂದ ಹೇಳಿಸುತ್ತ ನಿರೂಪಣೆ ಮಾಡುವುದು. ನಂತರ ಏಕೆ? ಹಾಗಾದರೆ? 

ಹಾಗಾಗದಿದ್ದg? ಇತ್ಯಾದಿ ಪ್ರಶ್ನೆಗಳನ್ನು ಹಿರಿಯ ಮಕ್ಕಳಿಗೆ ಕೇಳಿ ಉತ್ತರ ಪಡೆಯುವುದು.

(ಕಥೆಯನ್ನು ಆನಂದಿಸುವುದರ ಜೊತೆಗೆ ಆಲಿಸುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು

-----------------------------------

     ಅವಧಿ -8(20ನಿ)

*ಮತ್ತೆ ಸಿಗೋಣ*     

• ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು ಪುನರಾವರ್ತಿಸಿ/ನೆನಪಿಸಿ

• ಈ ದಿನ ಮಕ್ಕಳು ನಿರ್ವಹಿಸಿದ ಎಲ್ಲಾ ಚಟುವಟಿಕೆಗಳನ್ನು ಪೋಷಕರೊಂದಿಗೆ ಮತ್ತು ಕುಟುಂಬದ 

ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಿ.

• ಮರುದಿನ ಮಕ್ಕಳು ಸಂತೋಷದಿ0ದ ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು ಏರ್ಪಡಿಸಿ, 

ಬೀಳ್ಕೊಡಿ.

http://diethassan.karnataka.gov.in


【ವಿದ್ಯಾ ಪ್ರವೇಶ ಮತ್ತು ಕಲಿಕಾ ಹಾಳೆಗಳ ಮಾಹಿತಿಯ ಅಪ್ ಡೇಟ್ ವೀಕ್ಷಿಸಲು  ಮೇಲೆ ಕ್ಲಿಕ್ ಮಾಡಿ ಅದರಲ್ಲಿ ಶಾಲಾ ವಿಭಾಗಕ್ಕೆ ಹೋಗಿ ಅದರಲ್ಲಿ ಕಲಿಕಾ ಚೇತರಿಕೆಯ ಅಪ್ಡೇಟ್ ವೀಕ್ಷಿಸಬಹುದು】


[ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ]

ಮೂಲ ಸಾಹಿತ್ಯಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ವೆಬ್ಸೈಟ್ ಅಲ್ಲಿ ಪಡೆಯಬಹುದು ಲಿಂಕ್

------------------------------

*ವಂದನೆಗಳೊಂದಿಗೆ* ,

ರೇಣುಕಾರಾಧ್ಯ ಪಿ ಪಿ 

    ಶಿಕ್ಷಕ (ನಲಿಕಲಿ ರಾ.ಸಂ.ವ್ಯ.)

ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು

ಅರಸೀಕೆರೆ, ಹಾಸನ


 *ಸಲಹೆ ಮತ್ತು ಮಾರ್ಗದರ್ಶನ* 

ಶ್ರೀಯುತ ಎಂ.ಎಸ್.ಫಣೀಶ 

ಹಿರಿಯ ಉಪನ್ಯಾಸಕರು ಡಯಟ್ ಹಾಸನ

ಶ್ರೀಯುತ ಆರ್.ಡಿ.ರವೀಂದ್ರ

ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಕೊಪ್ಪ

No comments:

Post a Comment