*ವಿದ್ಯಾಪ್ರವೇಶ ದಿನ-62*
✒️🚁🎮🎨🎲🧮📏🔍
*ಅವಧಿ -1* (40ನಿ)
*ಶುಭಾಶಯ ವಿನಿಮಯ*
(ಮಕ್ಕಳೊಂದಿಗೆ ಶಿಕ್ಷಕರ ಬೆಳಗಿನ ಕುಶಲೋಪರಿ)
೬೧ ನೇ ದಿನದ ಚಟುವಟಿಕೆಗಳನ್ನು ಮಾಡಿಸುವುದು
*ಮಾತು ಕತೆ*
( ಶಿಕ್ಷಕರು - ಮಕ್ಕಳೊಂದಿಗಿನ ಬೆಳಗಿನ ಸಾಮೂಹಿಕ ಚಟುವಟಿಕೆ)
ದಿನ ೬೧ ರ ಚಟುವಟಿಕೆಯನ್ನು ಮುಂದುವರೆಸಿ.
---–------------------------------
ಅವಧಿ-2 (40ನಿ)
*ನನ್ನ ಸಮಯ*
* ಮಗು ಎಲ್ಲಾ ಮೂಲೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದನ್ನು ಹಾಗೂ ಸೂಕ್ತವಾಗಿ
ಪೂರ್ಣಗೊಳಿಸಿರುವುದನ್ನು ಖಚಿತ ಪಡಿಸಿಕೊಳ್ಳುವುದು.
* ಅಪೂರ್ಣಗೊಳಿಸಿರುವ ಚಟುವಟಿಕೆಗಳನ್ನು ಮಗು ಪೂರ್ಣಗೊಳಿಸಲು ಸಹಕರಿಸುವುದು.
* ಮುಂದಿನ ದಿನಗಳಲ್ಲಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಯಾವ ಮಕ್ಕಳ ಕಡೆಗೆ ಹೆಚ್ಚು ಗಮನಹರಿಸಬೇಕೆಂಬ
ಬಗ್ಗೆ ಶಿಕ್ಷಕರು ಮಾನಸಿಕವಾಗಿ ಸಿದ್ಧರಾಗುವುದು.
* ದಿನದ ಅಂತ್ಯಕ್ಕೆ ಕಲಿಕಾ ಮೂಲೆಗಳಲ್ಲಿ ಮುಂದಿನ ಹಂತಕ್ಕೆ ಹೊಂದಿಸಬೇಕಾದ ಸಾಮಗ್ರಿಗಳನ್ನು
ಸಿದ್ಧಪಡಿಸಿಕೊಳ್ಳುವುದು.
----------------------------–----–-
ಅವಧಿ-3(40ನಿ)
*ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ* (ಶಿಕ್ಷಕರಿಂದ ನಿರ್ದೇಶಿತ ಚಟುವಟಿಕೆ)
ಸಾಮರ್ಥ್ಯ: ಪರಿಸರದ ಅರಿವು, ಆವಿಷ್ಕರಿಸುವುದು, ಪ್ರಯೋಗ ಶೀಲತೆ ಬೆಳೆಸುವುದು
ಚಟುವಟಿಕೆ : ಸಸ್ಯದ ಅವಶ್ಯಕತೆಗಳ ಬಗ್ಗೆ ತಿಳಿಯೋಣ (ಗುರಿ-೩)
ಉದ್ದೇಶ:- ಸಸ್ಯದ ಬೆಳವಣಿಗೆ ಮತ್ತು ಉಪಯೋಗ ತಿಳಿಯುತ್ತಾರೆ.
ಅಗತ್ಯ ಸಾಮಗ್ರಿಗಳು : ಕಾಗದದ ಲೋಟ/ತೆಂಗಿನ ಕಾಯಿ ಚಿಪ್ಪು, ಮಣ್ಣು, ಬೀಜಗಳು
ವಿಧಾನ : ಸಸ್ಯವನ್ನು ಪರಿಚಯಿಸುವುದು,
- ಸಸ್ಯ ಬೆಳೆಯಲು ಅವಶ್ಯಕ ಅಂಶಗಳಾದ ಮಣ್ಣು, ನೀರು, ಗಾಳಿ, ಬೀಜ ಮತ್ತು ಅವಕಾಶಗಳ ಬಗ್ಗೆ ತಿಳಿಸುವುದು.
- ಕಾಗದದ ಲೋಟದಲ್ಲಿ ಮಣ್ಣು ಹಾಕಿ ವಿವಿಧ ರೀತಿಯ ಬೀಜಗಳನ್ನು ನೆಟ್ಟು, ಪ್ರತಿದಿನ ನೀರುಣಿಸಿ, ಆಗುವ
ಬದಲಾವಣೆಯನ್ನು ಇತರರೊಂದಿಗೆ ಹಂಚಿಕೊಳ್ಳಲು ತಿಳಿಸುವುದು.
- ಹಾಡು ಹೇಳಿಕೊಡುವುದು.
ಮರ
ಮಣ್ಣಿನಿಂದ ಹುಟ್ಟುವೆ
ಮಣ್ಣು ಹಿಡಿದು ನಿಲ್ಲುವೆ
ಹಣ್ಣುಗಳನು ನೀಡುವೆ
ಇನ್ನು ಇನ್ನು ಬೆಳೆಯುವೆ
ಬಿಸಿಲಿನಲ್ಲಿ ನಿಲ್ಲುವೆ
ನಮಗೆ ನೆರಳು ನೀಡುವೆ
ಶುದ್ಧ ಗಾಳಿ ನೀಡುತಾ
ಎಲ್ಲರನ್ನು ಸಲಹುವೆ
೨ನೇ ತರಗತಿ : ಸಸ್ಯಗಳು ಬೆಳೆಯಲು ಬೇಕಾಗುವ ಅವಶ್ಯಕ ವಸ್ತುಗಳನ್ನು ಹೇಳಿಸುವುದು. ನಿಮ್ಮ ಮನೆಯಲ್ಲಿ
ಇರುವ/ತಿಳಿದಿರುವ ಧಾನ್ಯಗಳ ಹೆಸರು ಹೇಳು ಎಂದು ಕೇಳುವುದು.
೩ನೇ ತರಗತಿ : ರಾಗಿ, ಜೋಳ, ಭತ್ತ, ಹೆಸರು ಇತ್ಯಾದಿ ಧಾನ್ಯಗಳನ್ನು ಚಿಪ್ಪು ಅಥವಾ ಲೋಟದಲ್ಲಿ ಮಣ್ಣು
ತುಂಬಿಸಿ ಬೀಜಗಳನ್ನು ನೆಡಿಸಿ ನೀರು ಹಾಕಿ ಬೆಳೆಸಲು ಹೇಳುವುದು. ಧಾನ್ಯಗಳನ್ನು ಬೆಳೆದ ಕ್ರಮದ ಬಗ್ಗೆ ಮಕ್ಕಳಿಂದ ಹೇಳಿಸುವುದು.
----------------------–---------
ಅವಧಿ -4 (40ನಿ)
*ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳಚಟುವಟಿಕೆ)
ಸಾಮರ್ಥ್ಯ : ಸೂಕ್ಷö್ಮ ಚಲನಾ ಕೌಶಲಗಳ ಅಭಿವೃದ್ಧಿ ಮತ್ತು ಸೃಜನಶೀಲತೆಯ ವಿಕಾಸ, ಕಣ್ಣು ಕೈಗಳ ಸಮನ್ವಯತೆ.
ಆಕಾರಗಳ ಪರಿಕಲ್ಪನೆ.
ಚಟುವಟಿಕೆ: ಟ್ರೇಸಿಂಗ್, (ಮರಳು). ಗುರಿ - ೧
ಉದ್ದೇಶಗಳು: • ಸೂಕ್ಷö್ಮ ಸ್ನಾಯುಗಳ ಅಭಿವೃದ್ದಿಯಾಗುವುದು.
• ಕಣ್ಣು ಕೈಗಳ ನಡುವೆ ಸಮನ್ವಯ ಸಾಧಿಸಲು ಸಾಧ್ಯವಾಗುವುದು.
ಸಾಮಗ್ರಿಗಳು : ಮರಳು.ಲೋಟ, ತೆಂಗಿನ ಚಿಪ್ಪು, ಚಮಚ.ರಟ್ಟುಗಳು.
ವಿಧಾನ : ಮಕ್ಕಳಿಗೆ ಮೇಲ್ಕಂಡ ವಸ್ತುಗಳನ್ನು ನೀಡಿ ಮನೆ, ಗೂಡು, ಬೆಟ್ಟ , ಕಾಲುವೆ, ಕಟ್ಟೆ ಕಟ್ಟುವುದು ಇತ್ಯಾದಿ
ಮಾದರಿಯಲ್ಲಿ ಮರಳನ್ನು ಹಾಕಲು ಹೇಳಿ ಅದರ ಬಗ್ಗೆ ವಿವರಿಸಲು ಹೇಳುವುದು.
ವಿವರ: ೨ ಮತ್ತು ೩ ನೇ ತರಗತಿಗೆ ಮಕ್ಕಳಿಗೆ ಮೇಲಿನ ಚಟುವಟಿಕೆಯನ್ನೇ ಮಾಡಿಸುವುದು.
-------------------------------
ಅವಧಿ -5(60ನಿ)
*ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ*
*ಆಲಿಸುವುದು ಮತ್ತುಮಾತನಾಡುವುದು*
ಸಾಮರ್ಥ್ಯ : ಧ್ವನಿ ಮತ್ತು ಸಂಕೇತಗಳ ಸಂಯೋಜನೆ, ಪದ ಸಂಪತ್ತಿ ಅಭಿವೃದ್ಧಿ, ಅಕ್ಷರ ಗುರುತಿಸುವುದು.
ಚಟುವಟಿಕೆ : ಪದದ ಕೊನೆಯ ಧ್ವನಿಯನ್ನು ಗುರುತಿಸುವರು ಮತ್ತು ಹೊಂದಿಸುವರು (ಗುರಿ : ೨) ಇಅಐ-೨೨
ಉದ್ದೇಶಗಳು : * ಧ್ವನಿ ಸಂಕೇತಗಳ ಅರಿವು ಮೂಡಿಸುವುದು.
* ಪದಗಳನ್ನು ಗ್ರಹಿಸಿ ಗುರುತಿಸುವುದು.
* ಪದಗಳಲ್ಲಿಯ ಅಕ್ಷರಗಳ ಅಕ್ಷರ–ಧ್ವನಿ ಸಹಸಂಬ0ಧ ಗುರುತಿಸುವುದು.
* ಗಮನವಿಟ್ಟು ಆಲಿಸಿ ಅಕ್ಷರ-ಧ್ವನಿ ಸಹಸಂಬ0ಧ ಅರ್ಥೈಸಿಕೊಳ್ಳುವುದು.
ಅಗತ್ಯ ಸಾಮಗ್ರಿ: ಕರಿ ಹಲಗೆ
ವಿಧಾನ : ಮಕ್ಕಳನ್ನು ವೃತ್ತಾಕಾರದಲ್ಲಿ ಕೂರಿಸಿ, ಕೆಲವು ಪರಿಚಿತ ಪದಗಳನ್ನು ಹೇಳಲು ತಿಳಿಸುವುದು.
ಉದಾ : ಸರ, ಮರ, ಅರ, ದರ, ಬರ,
- (ಒಂದೇ ರೀತಿಯ) ಕೊನೆಯ ಅಕ್ಷರದ ಧ್ವನಿ ಗುರುತಿಸುವುದು ತಿಳಿಸುವುದು.
- ಹೊಸ ಪದವೊಂದನ್ನು ಹೇಳಿ, ಅದೇ ಶಬ್ಧದಿಂದ ಕೊನೆಯಾಗುವ ಪದಗಳನ್ನು ಹೇಳಿಸುವುದು.
- ವಿವಿಧ ಪದಗಳನ್ನು ಪ್ರದರ್ಶಿಸುತ್ತಾ, ಒಂದೇ ರೀತಿಯ ಧ್ವನಿಯಿಂದ ಕೊನೆಯಾಗುವ ಪದಗಳನ್ನು
ಪರಿಚಯಿಸುವುದು.
ತರಗತಿವಾರು ವಿವರ : ೨ ನೇ ತರಗತಿಯ ಮಕ್ಕಳು ಸೂಚಿಸಿದ ಧ್ವನಿ ಅಂತ್ಯದಲ್ಲಿ ಬರುವಂತೆ ವಿವಿಧ ಪದಗಳನ್ನು
ಪಟ್ಟಿ ಮಾಡುವುದು. ೩ನೇ ತರಗತಿಯ ಮಕ್ಕಳು ವಿವಿಧ ಪದಗಳಲ್ಲಿ ಸೂಚಿತ ಅಂತ್ಯ ಅಕ್ಷರದ ಪದ ಗುರುತಿಸಿ, ಆ
ಪದ ಬಳಸಿ ವಾಕ್ಯ ರಚಿಸುವುದು.
ಬಳಸಬೇಕಾದ ಅಭ್ಯಾಸದ ಹಾಳೆಗಳು: EC-೧೬ (ತರಗತಿ ೧, ೨, ೩)
*ಅರ್ಥಗ್ರಹಿಕೆಯೊಂದಿಗಿನ ಓದು*
ಸಾಮರ್ಥ್ಯ: ಧ್ವನಿ ಸಂಕೇತಗಳ ಸಂಯೋಜನೆ, ಅಕ್ಷರಗಳನ್ನು ಗುರುತಿಸುವುದು, ಸೂಕ್ಷö್ಮ ಸ್ನಾಯು ಕೌಶಲಗಳ
ಅಭಿವೃದ್ಧಿ.
ಚಟುವಟಿಕೆ : ಅಕ್ಷರಗಳನ್ನು ಧ್ವನಿಗಳೊಂದಿಗೆ ಸಂಯೋಜಿಸುವುದು (ಗುರಿ-೨)
ಅಗತ್ಯ ಸಾಮಾಗ್ರಿಗಳು : ಮಣಿಗಳು, ಗುಂಡಿಗಳು, ಮಣ್ಣು, ಮರಳು, ಕಡ್ಡಿ, ಅಕ್ಷರಗಳ ಆಕಾರ ಇತ್ಯಾದಿ
ವಿಧಾನ: ತರಗತಿಯಲ್ಲಿರುವ ವಸ್ತುಗಳ ಹಾಗೂ ಮಕ್ಕಳ ಹೆಸರುಗಳಲ್ಲಿರುವ ಅಕ್ಷರಗಳನ್ನು ಗುರುತಿಸಲು ತಿಳಿಸುವುದು.
* ಗುರುತಿಸಿದ ಅಕ್ಷರಗಳನ್ನು ಅದರ ಧ್ವನಿಯೊಂದಿಗೆ ಸಂಯೋಜಿಸುವುದು.
* ವಿವಿಧ ವಸ್ತುಗಳನ್ನು ಬಳಸಿ (ಮಣಿಗಳು, ಗುಂಡಿಗಳು, ಮಣ್ಣು, ಮರಳು, ಕಡ್ಡಿ) ಅಕ್ಷರಗಳ ಆಕಾರಗಳ
ಕಲ್ಪನೆಯನ್ನು ಮೂಡಿಸುವುದು.
* ಮರಳು ಮತ್ತು ಮಣ್ಣಿನ ಮೇಲೆ ಅಕ್ಷರಗಳನ್ನು ಅಭ್ಯಾಸ ಮಾಡಿಸುವುದು.
* ಅಕ್ಷರಗಳನ್ನು ಬರೆದು, ಅಕ್ಷರಗಳ ಒಳಗೆ ಬಣ್ಣ ತುಂಬಲು ಹೇಳುವುದು.
* ನೆಲದ ಮೇಲೆ ನೀರಿನಿಂದ ಅಕ್ಷರದ ಆಕಾರಗಳನ್ನು ರಚಿಸುವುದು.
* ಕಾಗದ ಮತ್ತು ಪೆನ್ಸಿಲ್‌ಗಳನ್ನು ಹೊರತುಪಡಿಸಿ ಅಕ್ಷರಗಳನ್ನು ರಚಿಸಲು ಅವಕಾಶ ಕಲ್ಪಿಸುವುದು.
* ಅಕ್ಷರಗಳ ಧ್ವನಿಗಳಿಗೆ ಒತ್ತು ನೀಡುವುದು. ಪರಿಚಿತ ಪದಗಳೊಂದಿಗೆ ಅವುಗಳನ್ನು ಸಂಬ0ಧೀಕರಿಸುವುದು.
*ಉದ್ದೇಶಿತ ಬರಹ*
ಸಾಮರ್ಥ್ಯ: ಸೂಕ್ಷö್ಮ ಸ್ನಾಯು ಕೌಶಲಗಳ ಅಭಿವೃದ್ಧಿ, ಉದ್ದೇಶಿತ ಬರವಣಿಗೆ
ಚಟುವಟಿಕೆ: ಚಿತ್ರಿಸುವುದು ಮತ್ತು ಹೆಸರಿಸುವುದು. (ಗುರಿ-೨)
ಉದ್ದೇಶಗಳು:
• ಸೂಕ್ಷö್ಮ ಸ್ನಾಯು ಕೌಶಲಗಳನ್ನು ಅಭಿವೃದ್ಧಿಪಡಿಸುವುದು.
• ಉದ್ದೇಶಿತ ಬರವಣಿಗೆಗೆ ಅಣಿಗೊಳಿಸುವುದು.
• ಆಯ್ಕೆಯ ಚಿತ್ರ ಬಿಡಿಸುವುದು.
ಅಗತ್ಯ ಸಾಮಗ್ರಿಗಳು : ಕಾಗದ, ಕ್ರೇಯಾನ್ಸ್, ಪೆನ್ಸಿಲ್
ವಿಧಾನ : ಮಕ್ಕಳು ತಮ್ಮ ಆಯ್ಕೆಯ ಪ್ರಾಣಿ/ ಪಕ್ಷಿಗಳಗಳ ಚಿತ್ರ ಬಿಡಿಸುವುದು. ಬರೆದ ಚಿತ್ರಕ್ಕೆ ಬಣ್ಣ ತುಂಬಿ
ಹೆಸರಿಸಲು ತಿಳಿಸುವುದು.
ತರಗತಿವಾರು ವಿವರ: ೨ ಮತ್ತು ೩ನೇ ತರಗತಿಯ ಮಕ್ಕಳು ತಮ್ಮ ಆಯ್ಕೆಯ ಪ್ರಾಣಿ/ ಪಕ್ಷಿಗಳ ಚಿತ್ರವನ್ನು ರಚಿಸಿ,
ಹೆಸರಿಸಲು ತಿಳಿಸುವುದು.
ಬರವಣಿಗೆಯ ಮಾದರಿ:
ಶಿಕ್ಷಕರು ಮಕ್ಕಳೆದುರು ಕಪ್ಪುಹಲಗೆಯಲ್ಲಿ ಬರೆಯುವುದು. ಬರವಣಿಗೆಯ ಸರಿಯಾದ ಕ್ರಮವನ್ನು ಮಕ್ಕಳು ನೋಡಲು
ಅವಕಾಶ ಕಲ್ಪಿಸುವುದು.
ಮಕ್ಕಳ ಹೆಸರು, ಮಕ್ಕಳು ಬರೆದ ಚಿತ್ರಗಳ ಹೆಸರು ಮೊದಲಾದವುಗಳನ್ನು ಮಕ್ಕಳೆದುರೇ ಬರೆಯುವುದು. ಶಿಕ್ಷಕರು ತರಗತಿಯಲ್ಲಿ ಏನನ್ನೇ ಬರೆಯುವುದಾದರೂ ಮಕ್ಕಳ ಎದುರಿನಲ್ಲಿಯೇ ಬರೆಯುವುದು.
--------------------------------
ಅವಧಿ - 6(40ನಿ)
*ಹೊರಾಂಗಣ ಆಟಗಳು*
ಸಾಮರ್ಥ್ಯ: ಸ್ಥೂಲ ಸ್ನಾಯು ಚಲನ ಕೌಶಲ ಬೆಳವಣಿಗೆ, ದೇಹದ ಬೇರೆ ಬೇರೆ ಭಾಗಗಳ ಸಮತೋಲನ ಸಾಧಿಸುವುದು.
ಸಾಮಗ್ರಿ: ಮೃದುವಾದ ಜಾಗ, ಚಾಪೆ, ಜಮಖಾನ.
ಚಟುವಟಿಕೆ - ಸ್ಥಿರ ಸಮತೋಲನ
ವಿಧಾನ : ಈ ಚಟುವಟಿಕೆಯನ್ನು ತರಗತಿ ಕೋಣೆಯೊಳಗೆ/ಸಭಾಂಗಣದಲ್ಲಿ ಮಾಡಿಸುವುದು.
• ಮಕ್ಕಳು ಚಾಪೆಯ ಮೇಲೆ ಬೆನ್ನ ಮೇಲೆ ಮಲಗಲು ಸೂಚಿಸುವುದು.
• ಎಡಕ್ಕೆ ಹೊರಳಿ ಮಲಗಲು ಸೂಚಿಸುವುದು. ಬಲಗಾಲು ಮತ್ತು ಬಲಗೈ ಎತ್ತಲು ಸೂಚಿಸುವುದು.
• ಬಲಕ್ಕೆ ಹೊರಳಿ ಮಲಗಲು ಸೂಚಿಸುವುದು. ಎಡಗಾಲು ಮತ್ತು ಬಲಗೈ ಎತ್ತಲು ಸೂಚಿಸುವುದು.
ಎರಡನೇ ಮತ್ತು ಮೂರನೇ ತರಗತಿ ಮಕ್ಕಳಿಗೆ ಇದೇ ಚಟುವಟಿಕೆಯನ್ನು ಮುಂದುವರಿಸುವುದು
--------------------------------
ಅವಧಿ - 7(40ನಿ)
*ಕಥಾ ಸಮಯ*
• ಮೊದಲ ದಿನದ ಉದ್ದೇಶದಂತೆ ಕಥಾ ಸಮಯವು ಮುಂದುವರೆಯುತ್ತದೆ.
ಕಥಾ ಸಾಹಿತ್ಯ ನಿರೂಪಣೆ
• ಶಿಕ್ಷಕರು ಕಥೆಯನ್ನು ನಿರೂಪಿಸುವುದರಜೊತೆಗೆ ಮಕ್ಕಳ ನೆರವನ್ನು ಪಡೆದುಕೊಳ್ಳುವುದರ ಮೂಲಕ ಕಥೆಯನ್ನು ಪೂರ್ಣ ಗೊಳಿಸುವುದು
ಉದಾ : ಅವರು ಎಲ್ಲಿಗೆ ಹೋದರು? ನಂತರ ಏನಾಯಿತು? ಇತ್ಯಾದಿ
ಕಥೆಯನ್ನು ಹೇಳಿದ ನಂತರ ಸರಳ ಪ್ರಶ್ನೆಗಳನ್ನು ಕೇಳಿ.
• ಕಬ್ಬಿನ ಗದ್ದೆ ಎಲ್ಲಿತ್ತು ?
• ಕಬ್ಬನ್ನು ತಿಂದ ನಂತರ ನರಿಯು ಏನೆಂದು ಹೇಳಿತು?
(ಕಥೆಯನ್ನು ಆನಂದಿಸುವುದರ ಜೊತೆಗೆ ಆಲಿಸುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು)
-----------------------------------
ಅವಧಿ -8(20ನಿ)
*ಮತ್ತೆ ಸಿಗೋಣ*
• ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು ಪುನರಾವರ್ತಿಸಿ/ನೆನಪಿಸಿ
• ಈ ದಿನ ಮಕ್ಕಳು ನಿರ್ವಹಿಸಿದ ಎಲ್ಲಾ ಚಟುವಟಿಕೆಗಳನ್ನು ಪೋಷಕ ರೊಂದಿಗೆ ಮತ್ತು ಕುಟುಂಬದ
ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಿ.
• ಮರುದಿನ ಮಕ್ಕಳು ಸಂತೋಷದಿ0ದ ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು ಏರ್ಪಡಿಸಿ,
ಬೀಳ್ಕೊಡಿ.
http://diethassan.karnataka.gov.in
【ವಿದ್ಯಾ ಪ್ರವೇಶ ಮತ್ತು ಕಲಿಕಾ ಹಾಳೆಗಳ ಮಾಹಿತಿಯ ಅಪ್ ಡೇಟ್ ವೀಕ್ಷಿಸಲು ಮೇಲೆ ಕ್ಲಿಕ್ ಮಾಡಿ ಅದರಲ್ಲಿ ಶಾಲಾ ವಿಭಾಗಕ್ಕೆ ಹೋಗಿ ಅದರಲ್ಲಿ ಕಲಿಕಾ ಚೇತರಿಕೆಯ ಅಪ್ಡೇಟ್ ವೀಕ್ಷಿಸಬಹುದು】
[ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ]
ಮೂಲ ಸಾಹಿತ್ಯಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ವೆಬ್ಸೈಟ್ ಅಲ್ಲಿ ಪಡೆಯಬಹುದು ಲಿಂಕ್
------------------------------
*ವಂದನೆಗಳೊಂದಿಗೆ* ,
ರೇಣುಕಾರಾಧ್ಯ ಪಿ ಪಿ
ಶಿಕ್ಷಕ (ನಲಿಕಲಿ ರಾ.ಸಂ.ವ್ಯ.)
ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು
ಅರಸೀಕೆರೆ, ಹಾಸನ
*ಸಲಹೆ ಮತ್ತು ಮಾರ್ಗದರ್ಶನ*
ಶ್ರೀಯುತ ಎಂ.ಎಸ್.ಫಣೀಶ
ಹಿರಿಯ ಉಪನ್ಯಾಸಕರು ಡಯಟ್ ಹಾಸನ
ಶ್ರೀಯುತ ಆರ್.ಡಿ.ರವೀಂದ್ರ
ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಕೊಪ್ಪ
No comments:
Post a Comment