Wednesday, 17 August 2022

ವಿದ್ಯಾಪ್ರವೇಶ ದಿನ 58

 *ವಿದ್ಯಾಪ್ರವೇಶ ದಿನ-58* 

✒️🚁🎮🎨🎲🧮📏🔍

*ಅವಧಿ -1* (40ನಿ)

*ಶುಭಾಶಯ ವಿನಿಮಯ* 

(ಮಕ್ಕಳೊಂದಿಗೆ ಶಿಕ್ಷಕರ ಬೆಳಗಿನ ಕುಶಲೋಪರಿ)     

ಚಟುವಟಿಕೆ :

೧. ಮಕ್ಕಳನ್ನು ಹಲವು ಗುಂಪುಗಳನ್ನಾಗಿ ಮಾಡಿಕೊಂಡು ಸ್ವಾಗತ ಚಪ್ಪಾಳೆಯನ್ನು ಹೇಳಿಕೊಡುವುದು.

೨. ಮೊದಲ ಗುಂಪಿಗೆ ಶಿಕ್ಷಕರು ಸ್ವಾಗತ ಚಪ್ಪಾಳೆಯ ಮೂಲಕ ತರಗತಿಗೆ ಸ್ವಾಗತ ಕೋರುವುದು.

೩. ಈಗ ಮೊದಲು ಬಂದ ಗುಂಪು ಉಳಿದವರಿಗೆ ಸ್ವಾಗತ ಚಪ್ಪಾಳೆಯ ಮೂಲಕ ತರಗತಿಗೆ ಸ್ವಾಗತ ಕೋರುವುದು.

     *ಮಾತು ಕತೆ* 

( ಶಿಕ್ಷಕರು - ಮಕ್ಕಳೊಂದಿಗಿನ ಬೆಳಗಿನ ಸಾಮೂಹಿಕ ಚಟುವಟಿಕೆ)    

ದಿನ ೫೧ ರ ಮಾತುಕತೆ ಚಟುವಟಿಕೆಯನ್ನು ಮುಂದುವರೆಸಿ.---–------------------------------ 

ಅವಧಿ-2 (40ನಿ)

*ನನ್ನ ಸಮಯ* 

ಮಕ್ಕಳು ತಾವು ನಿರ್ವಹಿಸಲಿಚ್ಛಿಸಿದ ಕಲಿಕಾ ಮೂಲೆಗಳಿಗೆ ಸಾಗಿ ಚಟುವಟಿಕೆಗಳನ್ನು ನಿರ್ವಹಿಸುವುದು.

ಶಿಕ್ಷಕರು ಅನುಪಾಲನಾ ಸೂಚಿಯಂತೆ ಕಾರ್ಯ ನಿರ್ವಹಿಸುವುದು.

----------------------------–----–-

     ಅವಧಿ-3(40ನಿ)

*ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ* (ಶಿಕ್ಷಕರಿಂದ ನಿರ್ದೇಶಿತ ಚಟುವಟಿಕೆ)    

ಸಾಮರ್ಥ್ಯ: ಸಂಖ್ಯೆಗಳನ್ನು ತಿಳಿಯುವುದು

ಚಟುವಟಿಕೆ : ಸಂಖ್ಯಾ ನಕಲು (ಗುರಿ – ೩)

ಉದ್ದೇಶ:- ಅಂಕಿ ಸಂಖ್ಯೆಗಳ ಆಕಾರಗಳನ್ನು ತಿಳಿಯುವುದು

ಸಾಮಗ್ರಿಗಳು: ಬೀಜಗಳು, ಹಿಟ್ಟು, ಮರಳು ಪೆಟ್ಟಿಗೆ, ಮರಳು ತುಂಬಿದ ಪಾತ್ರೆ, ಕಡ್ಡಿಗಳು, ಸೀಮೆಸುಣ್ಣ, ಜೇಡಿಮಣ್ಣು.

ವಿಧಾನ: ಮೊದಲು ಸಂಖ್ಯೆಗಳನ್ನು ಹೇಳಿಸಿ ಪರಿಚಯ ಮಾಡಿಸುವುದು. ನೆಲದ ಮೇಲೆ ಅಂಕಿಗಳನ್ನು ಬರೆದು 

ಅದರ ಮೇಲೆ ಬೀಜ ಕಲ್ಲು,ಹಿಟ್ಟನ್ನು ಹಾಕಿ ಅಂಕಿಗಳನ್ನು ಬರೆಯುವುದನ್ನು ಹೇಳಿಕೊಡುವುದು. ಮರಳು ಪೆಟ್ಟಿಗೆ 

/ ಮರಳು ತುಂಬಿದ ಪಾತ್ರೆಯಲ್ಲಿ ಸೀಮೆಸುಣ್ಣ / ಕಡ್ಡಿಗಳಿಂದ ಕೈ ಬೆರಳಿನಿಂದ ೦-೯ ರವರೆಗೆ ಅಂಕಿಗಳನ್ನು ಅವುಗಳ ಆಕಾರಗಳನ್ನು ಬರೆಸಿ ಪತ್ತೆ ಹಚ್ಚಲು ಪ್ರೋತ್ಸಾಹ ನೀಡುವುದು. ಆಟದ ಮೈದಾನದಲ್ಲಿ ಕೋಲು ಮತ್ತು ಕಡ್ಡಿಗಳಿಂದ ಅಂಕಿಗಳನ್ನು ಬರೆದು ಬೀಜ, ಬೇಳೆ, ಕಲ್ಲುಗಳನ್ನು ಅದರ ಮೇಲೆ ಇಡಲು ಹೇಳುವುದು. ಜೇಡಿಮಣ್ಣು ಅಥವಾ ಹಿಟ್ಟಿನಿಂದ ಅಂಕಿಗಳನ್ನು ರಚಿಸಲು ಮಕ್ಕಳಿಗೆ ಹೇಳುವುದು. ೦-೯ ರ ಸಂಖ್ಯೆ ರಚಿಸಿ ಪ್ರದರ್ಶನ ಮಾಡಲು ಅವಕಾಶವನ್ನು ಕೊಡುವುದು.

೨ನೇ ತರಗತಿ

* ಮರಳಿನ ಮೇಲೆ ೦ ಯಿಂದ ೯ ರವರೆಗಿನ ಅಂಕಿಗಳನ್ನು ಬರೆಯಲು ತಿಳಿಸುವುದು.

* ಗಾಳಿಯಲ್ಲಿ ಅಂಕಿಗಳನ್ನು ಬರೆಯಲು ತಿಳಿಸಿ ಬೇರೆಯವರಿಂದ ಬರೆದ ಸಂಖ್ಯೆಯನ್ನು ಹೇಳಲು ತಿಳಿಸುವುದು.

೩ನೇ ತರಗತಿ

ಕಡ್ಡಿ ಮತ್ತು ಕೋಲಿನಿಂದ ಸಂಖ್ಯೆಗಳನ್ನು ಬರೆಸಿ ಅದಕ್ಕೆ ರಂಗೋಲಿ ಮತ್ತು ಬಣ್ಣವನ್ನು ತುಂಬಿಸಿ ಸಂಖ್ಯೆಗಳನ್ನುಹೇಳಿಸುವುದು.

ಬಳಸಬೇಕಾದ ಅಭ್ಯಾಸದ ಹಾಳೆಗಳು: I. L. -೩೪ (ತರಗತಿ ೧, ೨, ೩)

----------------------–---------

ಅವಧಿ -4     (40ನಿ)

*ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳಚಟುವಟಿಕೆ)    

ಸಾಮರ್ಥ್ಯ : ಸೂಕ್ಷö್ಮ ಚಲನಾ ಕೌಶಲಗಳ ಅಭಿವೃದ್ಧಿ ಮತ್ತು ಸೃಜನಶೀಲತೆಯ ವಿಕಾಸ, ಕಣ್ಣು ಕೈಗಳ ಸಮನ್ವಯತೆ.ಆಕಾರಗಳ ಪರಿಕಲ್ಪನೆ.

ಚಟುವಟಿಕೆ : ಅಕ್ಷರಗಳ ಮೇಲೆ ತಿದ್ದುವುದು (ಗುರಿ - ೧)

ಉದ್ದೇಶಗಳು:

•     ಸೂಕ್ಷö್ಮ ಸ್ನಾಯುಗಳ ಅಭಿವೃದ್ದಿಯಾಗುವುದು.

•     ಕಣ್ಣು ಕೈಗಳ ನಡುವೆ ಸಮನ್ವಯ ಸಾಧಿಸಲು ಸಾಧ್ಯವಾಗುವುದು.

•     ಸ್ಥಳದ ಪರಿಕಲ್ಪನೆಯನ್ನು ತಿಳಿಯುವುದು. 

ಸಾಮಗ್ರಿಗಳು : ಹಾಳೆ, ಬಣ್ಣ ಮತ್ತು ರಬ್ಬರ್ ಅಕ್ಷರಗಳು.

ವಿಧಾನ : ಮಕ್ಕಳಿಗೆ ಅಕ್ಷರಗಳ ಆಕಾರದ ರೇಖಾ ಚಿತ್ರಗಳನ್ನು ಕೊಟ್ಟು ಬಣ್ಣ ತುಂಬಲು ಹೇಳುವುದು.ಮಗು ತನಗೆ 

ಬರುವ ಇಂಗ್ಲೀಷ್ ಪದಗಳ ರೇಖಾ ಚಿತ್ರಗಳನ್ನು ಬರೆದು ಬಣ್ಣ ತುಂಬಿಸಲು ಹೇಳುವುದು.

ವಿವರ: ೨ಮತ್ತು ೩ ನೇ ತರಗತಿಗೆ ಯಾವುದಾದರೊಂದು ಅಕ್ಷರವನ್ನು ಆಯ್ಕೆ ಮಾಡಿ ಅದರಿಂದ ಪ್ರಾರಂಭವಾಗುವ 

ಪದಗಳ ರೇಖಾ ಚಿತ್ರಗಳನ್ನು ಬರೆದು ಬಣ್ಣ ತುಂಬಲು ಹೇಳುವುದು.

* ಬಳಸಬೇಕಾದ ಅಭ್ಯಾಸ ಹಾಳೆಗಳು: H.W.-೧ ೪ ( ೦೧, ೦೨,೦೩ನೇ ತರಗತಿ)

    -------------------------------

ಅವಧಿ -5(60ನಿ)

 *ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ* 

 *ಆಲಿಸುವುದು ಮತ್ತುಮಾತನಾಡುವುದು

ಸಾಮರ್ಥ್ಯ: ಧ್ವನಿ ಸಂಕೇತಗಳ ಸಂಯೋಜನೆ, ಅವಧಾನ ಮತ್ತು ಆಲಿಸುವುದು.

ಚಟುವಟಿಕೆ : ಮಧ್ಯದ ಅಕ್ಷರ ಗುರ್ತಿಸು (ಅ ರ ಸ) (ಗುರಿ-೨) ಇಅಐ-೨೧

ಉದ್ದೇಶಗಳು : * ಪದಗಳಲ್ಲಿಯ ಅಕ್ಷರಗಳ ಅಕ್ಷರ–ಧ್ವನಿ ಸಹ ಸಂಬ0ಧ ಗುರುತಿಸುವುದು.

* ಗಮನವಿಟ್ಟು ಆಲಿಸಿ ಅಕ್ಷರ-ಧ್ವನಿ ಸಹ ಸಂಬ0ಧ ಅರ್ಥೈಸಿಕೊಳ್ಳುವುದು.

ಅಗತ್ಯ ಸಾಮಗ್ರಿಗಳು : ಕಪ್ಪು ಹಲಗೆ, ಮಿಂಚುಪಟ್ಟಿ

ವಿಧಾನ: ಮಿಂಚುಪಟ್ಟಿಯಲ್ಲಿ ಬರೆದ ಪದಗಳನ್ನು ಪ್ರದರ್ಶಿಸುವುದು. ಮಕ್ಕಳನ್ನು ವೃತ್ತಾಕಾರದಲ್ಲಿ ಕೂರಿಸಿ, 

ಸ್ವರಾಕ್ಷರಗಳನ್ನು ಪರಿಚಯಿಸುವುದು. ಪದದ ಮಧ್ಯದಲ್ಲಿರುವ ಅಕ್ಷರವನ್ನು ಗುರುತಿಸಲು ತಿಳಿಸುವುದು. ಕಪ್ಪುಹಲಗೆಯಲ್ಲಿ 

ಬರೆಯುವುದು. ಮಕ್ಕಳಿಂದ ಹೇಳಿಸುವುದು. ಅಕ್ಷರ ಮತ್ತು ಶಬ್ದಗಳನ್ನು ಸಂಯೋಜಿಸುವುದು ಮತ್ತು ಗುರ್ತಿಸುವುದು

 ತರಗತಿವಾರು ವಿವರ: ೨ನೇ ತರಗತಿಯ ಮಕ್ಕಳು ಗುರುತಿಸಿದ ಅಕ್ಷರ ಮಧ್ಯದಲ್ಲಿ ಬರುವಂತೆ ವಿವಿಧ ಪದಗಳನ್ನು ಗುರುತಿಸುವುದು. ೩ನೇ ತರಗತಿಯ ಮಕ್ಕಳು ತಾವೇ ವಿವಿಧ ಪದಗಳಲ್ಲಿ ಮಧ್ಯದ ಅಕ್ಷರ ಗುರುತಿಸುವ ಚಟುವಟಿಕೆ ರೂಪಿಸುವುದು.

ಬಳಸಬೇಕಾದ ಅಭ್ಯಾಸದ ಹಾಳೆಗಳು: EC-೧೪ (ತರಗತಿ ೧, ೨, ೩)

*ಅರ್ಥಗ್ರಹಿಕೆಯೊಂದಿಗಿನ ಓದು* 

ಸಾಮರ್ಥ್ಯ : ಅವಧಾನ ಮತ್ತು ಆಲಿಸುವಿಕೆ, ಅನುಕ್ರಮ ಚಿಂತನೆ, ಸ್ಥೂಲ ಸ್ನಾಯು ಕೌಶಲಗಳ ಅಭಿವೃದ್ಧಿ.

ಚಟುವಟಿಕೆ : ಧ್ವನಿ ವ್ಯತ್ಯಾಸಗಳು (ಗುರಿ–೨)

ಉದ್ದೇಶ : ಮಕ್ಕಳು ಪದಗಳನ್ನು ಆಲಿಸುವುದರ ಮೂಲಕ ದ್ವನಿ ವ್ಯತ್ಯಾಸಗಳನ್ನು ಗುರುತಿಸುವರು.

ಅಗತ್ಯ ಸಾಮಾಗ್ರಿಗಳು : ಸೀಮೆಸುಣ್ಣ, ಮಾರ್ಕರ್, ಕ್ರೇಯಾನ್ಸ್, ಕ್ರಮಸಂಖ್ಯೆ ಬರೆದಿರುವ ಚಾರ್ಟ್.

ವಿಧಾನ: ಶಿಕ್ಷಕರು ಕಪ್ಪು ಹಲಗೆಯ ಮೇಲೆ ೩ ಒಂದೇ ಧ್ವನಿಯಿಂದ ಪ್ರಾರಂಭವಾಗುವ ಪದಗಳನ್ನು ಹಾಗು ೧ ವಿಭಿನ್ನ ರೀತಿಯ ಧ್ವನಿಯಿಂದ ಪ್ರಾರಂಭವಾಗುವ ಪದವನ್ನು ಬರೆದು ಗಟ್ಟಿಯಾಗಿ ಓದುವುದು ಅವುಗಳಲ್ಲಿ ವಿಭಿನ್ನ ಪದವನ್ನು ಗುರುತಿಸಿ ಮಕ್ಕಳ ಅನುಭವಕ್ಕೆ ತರವುದು. ಉದಾಹರಣೆ ಪಟ, ಪದಕ, ಚರಕ ಪುಸ್ತಕ ಇವುಗಳಲ್ಲಿ ವಿಭಿನ್ನ ಧ್ವನಿಯ ಪದ ಯಾವುದು? ಎಂದು ಕೇಳುವುದು. ಮಕ್ಕಳು ಗುರುತಿಸಿರುವ ಪದಗಳನ್ನು ಚಾರ್ಟ್ನಲ್ಲಿ ಬರೆಯುವುದು.

೨ ಮತ್ತು ೩ನೇ ತರಗತಿಯ ಮಕ್ಕಳಿಗೆ: ಮಕ್ಕಳಿಂದ ಧ್ವನಿ ವ್ಯತ್ಯಾಸದ ಪದಗಳನ್ನು ಓದಿಸುವುದು. ಉದಾಹರಣೆ: ಹಕ್ಕಿ-

ಅಕ್ಕಿ. ಆರು- ಹಾರು.

         *ಉದ್ದೇಶಿತ ಬರಹ*      

ಸಾಮರ್ಥ್ಯ: ಉದ್ದೇಶಿತ ಬರವಣಿಗೆ, ವೀಕ್ಷಣೆ, ಕಲ್ಪನೆ, ಸೃಜನಶೀಲ ಚಿಂತನೆ, ಪರಿಸರ ಪ್ರಜ್ಞೆ,

ಚಟುವಟಿಕೆ: ಹವಾಮಾನ ನಕ್ಷೆ (ಗುರಿ-೨)  (೫೨ನೇ ದಿನದಿಂದ ಮುಂದುವರೆದಿದೆ)

ಉದ್ದೇಶಗಳು:

•     ಉದ್ದೇಶಿತ ಬರವಣಿಗೆಯನ್ನು ರೂಢಿಸುವುದು.

•     ವೀಕ್ಷಣಾ ಕೌಶಲವನ್ನು ಬೆಳೆಸುವುದು.

•     ಸೃಜನಶೀಲ ಚಿಂತನೆಯನ್ನು ಉತ್ತೇಜಿಸುವುದು.

•     ಪರಿಸರ ಪ್ರಜ್ಞೆ ಮೂಡಿಸುವುದು.

ಅಗತ್ಯ ಸಾಮಗ್ರಿಗಳು : ಕಾಗದ/ ಹಾಳೆಗಳು, ಪೆನ್ಸಿಲ್

ವಿಧಾನ : ವಾರದ ದಿನಗಳ ಬಗ್ಗೆ ಮಕ್ಕಳೊಂದಿಗೆ ಚರ್ಚಿಸುವುದು.

- ವಾರದ ದಿನಗಳ ಪಟ್ಟಿಯನ್ನು ತರಗತಿಯಲ್ಲಿ ಪ್ರದರ್ಶೀಸುವುದು.

- ಗುಂಪು ಚಟುವಟಿಕೆಯ ಸಮಯದಲ್ಲಿ ಆ ದಿನದ ಹವಾಮಾನವನ್ನು ಗಮನಿಸಲು ತಿಳಿಸುವುದು.

- ಇದರ ಬಗ್ಗೆ ಮಕ್ಕಳೊಂದಿಗೆ ಚರ್ಚಿಸಿ ಖಾಲಿ ಹಾಳೆಗಳನ್ನ ನೀಡಿ ನಿನ್ನೆ-ಇಂದಿನ ಹವಾಮಾನದ ಚಿತ್ರವನ್ನು ಬರೆಯಲು ತಿಳಿಸುವುದು.

- ಮಕ್ಕಳ ಕಾರ್ಯಗಳನ್ನು ತರಗತಿಯಲ್ಲಿ ಪ್ರದರ್ಶಿಸುವುದು.

ತರಗತಿವಾರು ವಿವರ: ೨ನೇ ತರಗತಿಯ ಮಕ್ಕಳು ದಿನದ ಹವಾಮಾನವನ್ನು ತಮ್ಮ ಪುಸ್ತಕದಲ್ಲಿ ದಾಖಲಿಸುವಂತೆಯೂ 

೩ನೇ ತರಗತಿಯ ಮಕ್ಕಳು ತರಗತಿ ಹವಾಮಾನ ನಕ್ಷೆಯಲ್ಲಿ ದಿನದ ಹವಾಮಾನವನ್ನು ದಾಖಲಿಸಲು ತಿಳಿಸುವುದು. 

(೬೪ನೇ ದಿನಕ್ಕೆ ಮುಂದುವರೆದಿದೆ)

ಬರವಣಿಗೆಯ ಮಾದರಿ:

ಶಿಕ್ಷಕರು ಮಕ್ಕಳೆದುರು ಕಪ್ಪುಹಲಗೆಯಲ್ಲಿ ಬರೆಯುವುದು. ಬರವಣಿಗೆಯ ಸರಿಯಾದ ಕ್ರಮವನ್ನು ಮಕ್ಕಳು ನೋಡಲು ಅವಕಾಶ ಕಲ್ಪಿಸುವುದು.

ಮಕ್ಕಳ ಹೆಸರು, ಮಕ್ಕಳು ಬರೆದ ಚಿತ್ರಗಳ ಹೆಸರು ಮೊದಲಾದವುಗಳನ್ನು ಮಕ್ಕಳೆದುರೇ ಬರೆಯುವುದು. ಶಿಕ್ಷಕರು ತರಗತಿಯಲ್ಲಿ ಏನನ್ನೇ ಬರೆಯುವುದಾದರೂ ಮಕ್ಕಳ ಎದುರಿನಲ್ಲಿಯೇ ಬರೆಯುವುದು.

--------------------------------

 ಅವಧಿ - 6(40ನಿ)

*ಹೊರಾಂಗಣ ಆಟಗಳು* 

೫೬ನೇ ದಿನದ ಚಟುವಟಿಕೆಗಳನ್ನು ಪುನರಾವರ್ತಿಸುವುದು.

    -------------------------------- 

ಅವಧಿ - 7(40ನಿ)

*ಕಥಾ ಸಮಯ* 

ಶೀರ್ಷಿಕೆ : ಕೊಕ್ಕರೆ ಮತ್ತು ಏಡಿ

ಸಾಮಗ್ರಿಗಳು : ಸಾಹಿತ್ಯ

ಉದ್ದೇಶಗಳು :

 ಸೃಜನ ಶೀಲತೆಯನ್ನು ಅಭಿವೃದ್ಧಿ ಪಡಿಸುವುದು.

 ಕುತೂಹಲ ಮತ್ತು ಆಸಕ್ತಿಯನ್ನು ಉಂಟುಮಾಡುವುದು.

 ಪ್ರಶಿನಿಸುವ ಮನೋಭಾವ ಬೆಳೆಸುವುದು.ಪದ ಸಂಪತ್ತನ್ನು ಹೆಚ್ಚಿಸುವುದು.

ವಿಧಾನ : ಕಥೆಯ ಸಾಹಿತ್ಯ ಓದು

ಕಥೆಯ ಸಾರಾಂಶವನ್ನು ಹೇಳಿದ ನಂತರ ಸಾಹಿತ್ಯವನ್ನು ಗಟ್ಟಿಯಾಗಿ ಓದಿ, ಕಥೆಯ ಸಂಭಾಷಣೆಯಲ್ಲಿನ ಸಾಲುಗಳನ್ನು ಪುನರುಚ್ಚರಿಸುವುದು ಮತ್ತು ಬರೆಯುವುದು. ಕಥಾಸಮಯವನ್ನು ಮನೋರಂಜನಾತ್ಮಕವಾಗಿ ಸೃಜಿಸುವುದು.ಕಥೆಯನ್ನು ಹೇಳಿದ ನಂತರ ಸರಳ ಪ್ರಶ್ನೆಗಳನ್ನು ಕೇಳಿ.

 ಏಡಿಯು ಕೊಕ್ಕರೆಯ ಕುತ್ತಿಗೆಯ ಮೇಲೆ ಕುಳಿತುಕೊಳ್ಳುವೆನು ಎಂದು ಹೇಳಲು ಕಾರಣವೇನು?

(ಕಥೆಯನ್ನು ಆನಂದಿಸುವುದರ ಜೊತೆಗೆ ಆಲಿಸುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು)

-----------------------------------

     ಅವಧಿ -8(20ನಿ)

*ಮತ್ತೆ ಸಿಗೋಣ*     

•     ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು ಪುನರಾವರ್ತಿಸಿ/ನೆನಪಿಸಿ

•     ಈ ದಿನ ಮಕ್ಕಳು ನಿರ್ವಹಿಸಿದ ಎಲ್ಲಾ ಚಟುವಟಿಕೆಗಳನ್ನು ಪೋಷಕರೊಂದಿಗೆ ಮತ್ತು ಕುಟುಂಬದ 

ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಿ.

•     ಮರುದಿನ ಮಕ್ಕಳು ಸಂತೋಷದಿ0ದ ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು ಏರ್ಪಡಿಸಿ, ಬೀಳ್ಕೊಡಿ.

•     ಮುಂದಿನ ವಾರದಲ್ಲಿ “ಹೊರಸಂಚಾರಕ್ಕೆ ಯೋಜನೆ” ರೂಪಿಸಿ ಮಕ್ಕಳು ವಿವಿಧ ಸಸ್ಯಗಳನ್ನು, ಮರಗಳನ್ನು ವೀಕ್ಷಿಸಲಿ ಇದಕ್ಕಾಗಿ ಅಗತ್ಯ ಸಿದ್ಧತೆ ತಯಾರಿ ಮಾಡಿಕೊಳ್ಳುವುದು.

http://diethassan.karnataka.gov.in


【ವಿದ್ಯಾ ಪ್ರವೇಶ ಮತ್ತು ಕಲಿಕಾ ಹಾಳೆಗಳ ಮಾಹಿತಿಯ ಅಪ್ ಡೇಟ್ ವೀಕ್ಷಿಸಲು  ಮೇಲೆ ಕ್ಲಿಕ್ ಮಾಡಿ ಅದರಲ್ಲಿ ಶಾಲಾ ವಿಭಾಗಕ್ಕೆ ಹೋಗಿ ಅದರಲ್ಲಿ ಕಲಿಕಾ ಚೇತರಿಕೆಯ ಅಪ್ಡೇಟ್ ವೀಕ್ಷಿಸಬಹುದು】

[ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ]

ಮೂಲ ಸಾಹಿತ್ಯಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ವೆಬ್ಸೈಟ್ ಅಲ್ಲಿ ಪಡೆಯಬಹುದು ಲಿಂಕ್

------------------------------

 *ವಂದನೆಗಳೊಂದಿಗೆ* ,

ರೇಣುಕಾರಾಧ್ಯ ಪಿ ಪಿ 

    ಶಿಕ್ಷಕ (ನಲಿಕಲಿ ರಾ.ಸಂ.ವ್ಯ.)

ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು

ಅರಸೀಕೆರೆ, ಹಾಸನ

*ಸಲಹೆ ಮತ್ತು ಮಾರ್ಗದರ್ಶನ* 

ಶ್ರೀಯುತ ಎಂ.ಎಸ್.ಫಣೀಶ 

ಹಿರಿಯ ಉಪನ್ಯಾಸಕರು ಡಯಟ್ ಹಾಸನ

ಶ್ರೀಯುತ ಆರ್.ಡಿ.ರವೀಂದ್ರ

ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಕೊಪ್ಪ

No comments:

Post a Comment