Tuesday, 16 August 2022

ವಿದ್ಯಾಪ್ರವೇಶ ದಿನ 57

 *ವಿದ್ಯಾಪ್ರವೇಶ ದಿನ-57* 

✒️🚁🎮🎨🎲🧮📏🔍


*ಅವಧಿ -1* (40ನಿ)

*ಶುಭಾಶಯ ವಿನಿಮಯ

(ಮಕ್ಕಳೊಂದಿಗೆ ಶಿಕ್ಷಕರ ಬೆಳಗಿನ ಕುಶಲೋಪರಿ)

೫೫ ನೇ ದಿನದ ಚಟುವಟಿಕೆಗಳನ್ನು ಮಾಡಿಸುವುದು

    *ಮಾತು ಕತೆ* 

( ಶಿಕ್ಷಕರು - ಮಕ್ಕಳೊಂದಿಗಿನ ಬೆಳಗಿನ ಸಾಮೂಹಿಕಚಟುವಟಿಕೆ)   

ವಿಧಾನ:

ಸಾಮಗ್ರಿಗಳು : ವಿವಿಧ ಚಿಹ್ನೆಗಳ ಚಿತ್ರ ಕಾರ್ಡುಗಳು

ಮಕ್ಕಳು ವೃತ್ತಾಕಾರದಲ್ಲಿ ಕೂರಿಸಿ.

ಚಿತ್ರಗಳನ್ನು ಬುಟ್ಟಿಯಲ್ಲಿ ಅಥವಾ ತೆರೆದ ಪೆಟ್ಟಿಗೆಯಲ್ಲಿ ಇರಿಸಿ.

ಒಂದು ಚಿತ್ರವನ್ನು ತೆಗೆದುಕೊಳ್ಳಲು ಮತ್ತು ಆ ಕುರಿತು ಮಾತನಾಡಲು ಮಕ್ಕಳಿಗೆ ತಿಳಿಸಿ.

ಶಿಕ್ಷಕರು ಮಕ್ಕಳನ್ನು ಸಂತೋಷದಿ0ದ ಚಟುವಟಿಕೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕು

---–------------------------------ 

ಅವಧಿ-2 (40ನಿ)

*ನನ್ನ ಸಮಯ* 

ಮಕ್ಕಳು ತಾವು ನಿರ್ವಹಿಸಲಿಚ್ಛಿಸಿದ ಕಲಿಕಾ ಮೂಲೆಗಳಿಗೆ ಸಾಗಿ ಚಟುವಟಿಕೆಗಳನ್ನು ನಿರ್ವಹಿಸುವುದು.

ಶಿಕ್ಷಕರು ಅನುಪಾಲನಾ ಸೂಚಿಯಂತೆ ಕಾರ್ಯ ನಿರ್ವಹಿಸುವುದು     ----------------------------–----–-

    ಅವಧಿ-3(40ನಿ)

*ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ* (ಶಿಕ್ಷಕರಿಂದ ನಿರ್ದೇಶಿತ ಚಟುವಟಿಕೆ)   

ಸಾಮರ್ಥ್ಯ:- ಎಣಿಕೆ ಮತ್ತು ಸಂಖ್ಯೆಯನ್ನು ಹುಡುಕುವುದು /ಅರ್ಥಮಾಡಿಕೊಳ್ಳುವುದು

ಚಟುವಟಿಕೆ : ವಸ್ತು ಹುಡುಕುವುದು ( ಗುರಿ-೩ )

ಉದ್ದೇಶ:- ಹೋಲಿಕೆ ಇರುವ ವಸ್ತುಗಳನ್ನು ಎಣಿಸುವುದು.

ಸಾಮಗ್ರಿಗಳು: ಸೀಮೆ ಸುಣ್ಣ, ಪೆನ್ಸಿಲ್, ಪುಸ್ತಕಗಳು, ಕಲ್ಲುಗಳು, ಚೀಲಗಳು (ಎಲ್ಲಾ ವಸ್ತುಗಳು ಮೂರಕ್ಕಿಂತ ಹೆಚ್ಚು ಇರಬೇಕು)

ವಿಧಾನ: ಶಿಕ್ಷಕರು ಮಕ್ಕಳಿಗೆ ಒಂದು ವಸ್ತುವನ್ನು ನೀಡಬೇಕು. ಅದೇ ರೀತಿಯ ಹೋಲಿಕೆ ಇರುವ ವಸ್ತುಗಳನ್ನು 

ತರಗತಿಯಲ್ಲಿ ಹುಡುಕಲು ಹೇಳುವುದು. ಈ ಆಟವು ಕೊಟ್ಟಿರುವ ವಿವಿಧ ವಸ್ತುಗಳೊಂದಿಗೆ ಪುನರಾರ್ವತಿಸಬೇಕು. 

ಶಿಕ್ಷಕರು ಒಂದು ಚಾರ್ಟ್ ಮಾಡಿ, ೨ ಗುಂಪುಗಳನ್ನು ಮಾಡುವುದು. ನೆಲದ ಮೇಲೆ ಅ ಮತ್ತು ಬ ಭಾಗಗಳನ್ನು 

ಮಾಡಿ ಗೆರೆ ಎಳೆಯುವುದು. ಆ ಭಾಗದಲ್ಲಿ ಒಂದೇ ವಸ್ತು ಬ ಭಾಗದಲ್ಲಿ ಅದಕ್ಕೆ ಹೋಲಿಕೆಯಿರುವ ವಸ್ತುಗಳನ್ನು 

ಎಣಿಸಿ ಇಡುತ್ತಾರೆ. ಆನಂತರ ಯಾವ ಭಾಗದಲ್ಲಿ ಎಷ್ಟು ವಸ್ತುಗಳು ಇವೆ ಎಂದು ಎಣಿಕೆ ಮಾಡಿಸುವುದು.

೨ನೇ ತರಗತಿ

ಹೋಲಿಕೆ ಇರುವ ಹಲವು ವಸ್ತುಗಳನ್ನು ನೀಡಿ ಎರಡು ಡಬ್ಬಗಳಿಗೆ ಒಂದೇ ತೆರನಾದ ವಸ್ತುಗಳನ್ನು ತುಂಬುವAತೆ 

ಮಗುವಿಗೆ ಹೇಳುವುದು. ಅವುಗಳನ್ನು ನೋಡಿ ಯಾವ ಗುಂಪು ಹೆಚ್ಚು ಇದೆ ಎಂದು ಕೇಳುವುದು.

೩ನೇ ತರಗತಿ

ಎರಡು ಗುಂಪುಗಳನ್ನು ಮಾಡಿ ಒಂದು ಗುಂಪು ಹಣ್ಣುಗಳ ಹೆಸರು, ಇನ್ನೊಂದು ಗುಂಪು ತರಕಾರಿಗಳ ಹೆಸರು 

ಪಟ್ಟಿ ಮಾಡಲು ತಿಳಿಸುವುದು. ಯಾವು ಗುಂಪು ಹೆಚ್ಚು ಹೆಸರು ಪಟ್ಟಿ ಮಾಡಿದೆ ಎಂಬುದನ್ನು ಆವಲೋಕಿಸುವುದು.

ಬಳಸಬೇಕಾದ ಅಭ್ಯಾಸದ ಹಾಳೆಗಳು: I. L. -೩೩ (ತರಗತಿ ೧, ೨,೩)   

----------------------–---------

ಅವಧಿ -4    (40ನಿ)

*ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳಚಟುವಟಿಕೆ)   

ಸಾಮರ್ಥ್ಯ: ಎಣಿಕೆ ಮತ್ತು ಸಂಖ್ಯೆಯನ್ನು ಹುಡುಕುವುದು /ಅರ್ಥಮಾಡಿಕೊಳ್ಳುವುದು

ಚಟುವಟಿಕೆ : ವಸ್ತು ಹುಡುಕುವುದು ( ಗುರಿ-೩ )

ಉದ್ದೇಶಗಳು: ಹೋಲಿಕೆ ಇರುವ ವಸ್ತುಗಳನ್ನು ಎಣಿಸುವುದು.

ಸಾಮಗ್ರಿಗಳು: ಸೀಮೆ ಸುಣ್ಣ, ಪೆನ್ಸಿಲ್, ಪುಸ್ತಕಗಳು, ಕಲ್ಲುಗಳು, ಚೀಲಗಳು (ಎಲ್ಲಾ ವಸ್ತುಗಳು ಮೂರಕ್ಕಿಂತ ಹೆಚ್ಚು ಇರಬೇಕು)

ವಿಧಾನ: ಶಿಕ್ಷಕರು ಮಕ್ಕಳಿಗೆ ಒಂದು ವಸ್ತುವನ್ನು ನೀಡಬೇಕು. ಅದೇ ರೀತಿಯ ಹೋಲಿಕೆ ಇರುವ ವಸ್ತುಗಳನ್ನು 

ತರಗತಿಯಲ್ಲಿ ಹುಡುಕಲು ಹೇಳುವುದು. ಈ ಆಟವು ಕೊಟ್ಟಿರುವ ವಿವಿಧ ವಸ್ತುಗಳೊಂದಿಗೆ ಪುನರಾರ್ವತಿಸಬೇಕು. 

ಶಿಕ್ಷಕರು ಒಂದು ಚಾರ್ಟ್ ಮಾಡಿ, ೨ ಗುಂಪುಗಳನ್ನು ಮಾಡುವುದು. ನೆಲದ ಮೇಲೆ ಅ ಮತ್ತು ಬ ಭಾಗಗಳನ್ನು 

ಮಾಡಿ ಗೆರೆ ಎಳೆಯುವುದು. ಆ ಭಾಗದಲ್ಲಿ ಒಂದೇ ವಸ್ತು ಬ ಭಾಗದಲ್ಲಿ ಅದಕ್ಕೆ ಹೋಲಿಕೆಯಿರುವ ವಸ್ತುಗಳನ್ನು 

ಎಣಿಸಿ ಇಡುತ್ತಾರೆ. ಆನಂತರ ಯಾವ ಭಾಗದಲ್ಲಿ ಎಷ್ಟು ವಸ್ತುಗಳು ಇವೆ ಎಂದು ಎಣಿಕೆ ಮಾಡಿಸುವುದು.

೨ನೇ ತರಗತಿ

ಹೋಲಿಕೆ ಇರುವ ಹಲವು ವಸ್ತುಗಳನ್ನು ನೀಡಿ ಎರಡು ಡಬ್ಬಗಳಿಗೆ ಒಂದೇ ತೆರನಾದ ವಸ್ತುಗಳನ್ನು ತುಂಬುವAತೆ 

ಮಗುವಿಗೆ ಹೇಳುವುದು. ಅವುಗಳನ್ನು ನೋಡಿ ಯಾವ ಗುಂಪು ಹೆಚ್ಚು ಇದೆ ಎಂದು ಕೇಳುವುದು.

೩ನೇ ತರಗತಿ

ಎರಡು ಗುಂಪುಗಳನ್ನು ಮಾಡಿ ಒಂದು ಗುಂಪು ಹಣ್ಣುಗಳ ಹೆಸರು, ಇನ್ನೊಂದು ಗುಂಪು ತರಕಾರಿಗಳ ಹೆಸರು 

ಪಟ್ಟಿ ಮಾಡಲು ತಿಳಿಸುವುದು. ಯಾವು ಗುಂಪು ಹೆಚ್ಚು ಹೆಸರು ಪಟ್ಟಿ ಮಾಡಿದೆ ಎಂಬುದನ್ನು ಆವಲೋಕಿಸುವುದು.


  -------------------------------

ಅವಧಿ -5(60ನಿ)

 *ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ* 

 *ಆಲಿಸುವುದು ಮತ್ತುಮಾತನಾಡುವುದು* 

ಸಾಮರ್ಥ್ಯ: ಕ್ರಿಯಾತ್ಮಕ ಸ್ವ ಅಭಿವ್ಯಕ್ತಿ, ಧ್ವನಿ ಸಂಕೇತ ಹಾಗೂ ಪ್ರಾಸದ ಅರಿವು, ಪರಿಸರ ಪ್ರಜ್ಞೆ, ಪದಸಂಪತ್ತಿನ 

ಬೆಳವಣಿಗೆ

ಚಟುವಟಿಕೆ : ಹಾಡು, ಪ್ರಾಸಗೀತೆ, ಪದ್ಯ/ನಾಟಕ. (ಗುರಿ-೨) 

ಉದ್ದೇಶಗಳು:

* ಧ್ವನಿ ಸಂಕೇತಗಳ ಅರಿವನ್ನು ಮೂಡಿಸುವುದು.

* ಪ್ರಾಸಗಳ ಅರಿವನ್ನು ಉಂಟು ಮಾಡುವುದು.

* ಕ್ರಿಯಾತ್ಮಕ ಸ್ವ-ಅಭಿವ್ಯಕ್ತಿಗೆ ಅವಕಾಶ ಕಲ್ಪಿಸುವುದು.

* ತನ್ನ ಸುತ್ತಲಿನ ಪರಿಸರದೊಂದಿಗೆ ಸಂಬ0ಧೀಕರಿಸುವುದು 

ಅಗತ್ಯ ಸಾಮಗ್ರಿಗಳು- ಇಲ್ಲ

ವಿಧಾನ: ಮಕ್ಕಳನ್ನು ವೃತ್ತಾಕಾರದಲ್ಲಿ ನಿಲ್ಲಿಸಿ. ಶಿಕ್ಷಕರು ಮಕ್ಕಳಿಗೆ ಹೊಸ ಪ್ರಾಸಗೀತೆಯನ್ನು ಅಭಿನಯದೊಂದಿಗೆ 

ಹಾಡಿ ತೋರಿಸಲಿ. ಶಿಕ್ಷಕರನ್ನು ಅನುಕರಿಸುತ್ತಾ ಮಕ್ಕಳು ಹಾಡನ್ನು ಪುನರುಚ್ಚರಿಸಲು ತಿಳಿಸಿ.

ನೆನಪಿಡಬೇಕಾದ ಅಂಶಗಳು:

* ಮಕ್ಕಳು ಹಾಡನ್ನು ಆನಂದಿಸಲು ಸೂಕ್ತ ಅಭಿನಯ ಹಾಗೂ ಉತ್ಸಾಹದಿಂದ ಹಾಡಿ.

* ಮಕ್ಕಳು ಗೀತೆಯಲ್ಲಿರುವ ಪ್ರಾಸ ಪದಗಳನ್ನು ಶಿಕ್ಷಕರ ಸಹಾಯದಿಂದ ಗುರುತಿಸಲಿ.

ತರಗತಿವಾರು ವಿವರ: ೨ನೇ ತರಗತಿಯ ಮಕ್ಕಳು ಪ್ರಾಸಗೀತೆಯಲ್ಲಿ ಬರುವ ಪ್ರಾಸ ಪದಗಳನ್ನು ಗುರುತಿಸುವುದು. 

೩ನೇ ತರಗತಿ ಮಕ್ಕಳು ಆ ಪ್ರಾಸ ಪದಗಳಿಗೆ ಇನ್ನಷ್ಟು ಪದಗಳನ್ನು ಸೇರಿಸುವುದು.( ೬೩ನೇ ದಿನಕ್ಕೆ ಮುಂದುವರೆದಿದೆ

*ಅರ್ಥಗ್ರಹಿಕೆಯೊಂದಿಗಿನ ಓದು*    

ಸಾಮರ್ಥ್ಯ : ಪದ ಗುರುತಿಸುವುದು, ಮುದ್ರಿತ ಪಠ್ಯದ ಅರಿವು, ಅರ್ಥಗ್ರಹಿಕೆ, ಪದ ಸಂಪತ್ತಿನ ಅಭಿವೃದ್ಧಿ.

ಚಟುವಟಿಕೆ : ಹೆಸರಿನ ಜಗತ್ತು (ಗುರಿ ೨)

ಉದ್ದೇಶ: ಪರಿಚಿತ ಸನ್ನಿವೇಶದಲ್ಲಿನ ವಸ್ತುಗಳನ್ನು ಲಿಪಿಸಂಕೇತಗಳೊ0ದಿಗೆ ಸಹ ಸಂಬ0ಧಿಕರಿಸಿಕೊಳ್ಳುವುದು. 

ಸಾಹಿತ್ಯ ಮತ್ತು ವಸ್ತು ಒಂದೇ ಇದೆ ಎಂಬ ತೀರ್ಮಾನಕ್ಕೆ ಬಂದು ಓದುವಿಕೆಯಲ್ಲಿ ಆಸಕ್ತಿ ಬೆಳಸಿಕೊಳ್ಳುವುದು.

ಅಗತ್ಯ ಸಾಮಗ್ರಿಗಳು : ನೋಟ್ ಪುಸ್ತಕ, ಚಾರ್ಟ್ ಪೇಪರ್, ಪೆನ್ಸಿಲ್, ಕ್ರೇಯಾನ್ಸ್, ನಮಗೆ ಕಣ್ಣಿಗೆ ಕಾಣುವ 

ಸುತ್ತಮುತ್ತಲಿನ ಸಾಮಾಗ್ರಿಗಳು.

ವಿಧಾನ :

- ಮಕ್ಕಳ ಸಹಾಯದಿಂದ ತರಗತಿಯಲ್ಲಿರುವ ಸಾಮಾನ್ಯ/ ಪರಿಚಿತ ವಸ್ತುಗಳ ಹೆಸರನ್ನು ಪಟ್ಟಿ ಮಾಡುವುದು.

ಉದಾ- ಮೇಜು, ಕುರ್ಚಿ, ಬಾಗಿಲು…ಇತ್ಯಾದಿ.

- ಸಿದ್ಧಪಡಿಸಿದ ನಾಮ ಫಲಕಗಳನ್ನು ಆಯಾ ವಸ್ತುಗಳ ಮೇಲೆ ಅಂಟಿಸುವುದು.

- ಇನ್ನೊಂದು ಸೆಟ್ ನಾಮ ಫಲಕಗಳ ಮಿಂಚುಪಟ್ಟಿಗಳನ್ನು ತಯಾರಿಸಿಟ್ಟುಕೊಳ್ಳುವುದು.

- ಪದಗಳ ಮಿಂಚುಪಟ್ಟಿಯನ್ನು ತರಗತಿಯಲ್ಲಿ ಪ್ರದರ್ಶಿಸುತ್ತಾ, ಮಕ್ಕಳಿಂದ ಗಟ್ಟಿಯಾಗಿ ಹೇಳಿಸುವುದು.

- ಪದ ಉಚ್ಛರಿಸುತ್ತಾ ಆ ವಸ್ತುವಿನ ಬಳಿಗೆ ಮಗು ಹೋಗಲು ತಿಳಿಸುವುದು.

_ ಮಗು ಕನಿಷ್ಟ ನಾಲ್ಕೆöದು ವಸ್ತುಗಳನ್ನಾದರೂ ಹೆಸರಿಸಲು ಅವಕಾಶ ಕಲ್ಪಿಸುವುದು..

_ ಆ ಪದಗಳನ್ನು ಕಥೆಯಲ್ಲಿ ಗುರುತಿಸಲು ಅವಕಾಶ ಕಲ್ಪಿಸುವುದು.

- ಚಿತ್ರ ಸಹಿತ ನಾಮಫಲಕ/ ಮಿಂಚುಪಟ್ಟಿಗಳನ್ನು ಸಿದ್ಧಪಡಿಸಿ, ಚಟುವಟಿಕೆ ಸ್ಥಳದಲ್ಲಿ/ ಸಮಯದಲ್ಲಿ ಮಕ್ಕಳಿಗೆ 

ಗುರುತಿಸಿ ಓದಲು (ಚಿತ್ರಗಳ ಸಹಾಯದಿಂದ) ಅವಕಾಶ ಕಲ್ಪಿಸುವುದು. 

೨ ಮತ್ತು ೩ನೇ ತರಗತಿ: ಕಥೆ/ ಪಠ್ಯದಲ್ಲಿ ಬಂದಿರುವ ಮುಖ್ಯಪದಗಳ 

ಮಿಂಚುಪಟ್ಟಿ ತಯಾರಿಸಿಕೊಳ್ಳುವುದು. ಮಕ್ಕಳಿಗೆ ಶಿಕ್ಷಕರು ಕಥೆ/ ಪಠ್ಯವನ್ನು 

ನೀಡಿ ಓದಲು ಅವಕಾಶ ಕಲ್ಪಿಸುವುದು. ನಂತರ ಮಿಂಚುಪಟ್ಟಿಯಲ್ಲಿರುವ 

ಪದಗಳನ್ನು ಕತೆಯಲ್ಲಿ ಹುಡುಕಲು ಸೂಚಿಸುವುದು. 

ಗಮನಿಸಿ : ಈ ಹಿಂದೆ ಈ ಚಟುವಟಿಕೆಗಳಲ್ಲಿ ಬಳಸಿದ ಪದಗಳನ್ನು ಹೊರತುಪಡಿಸಿ 

ಬೇರೆ ಬೇರೆ ಸ್ಥಳ, ಸನ್ನಿವೇಶದಲ್ಲಿ ಬರುವ ಪದಗಳನ್ನು ಬಳಸಿ ಚಟುವಟಿಕೆಯನ್ನು ನಿರ್ವಹಿಸುವುದು. 

.

        *ಉದ್ದೇಶಿತ ಬರಹ*    

ಸಾಮರ್ಥ್ಯ : ಸೂಕ್ಷö್ಮ ಸ್ನಾಯು ಚಲನಾ ಕೌಶಲಾಭಿವೃದ್ಧಿ. ಅಕ್ಷರಗಳನ್ನು ಗುರುತಿಸುವುದು.

ಚಟುವಟಿಕೆ: ಚುಕ್ಕಿ ಸೇರಿಸು - ಅಂಕಿ ಬರೆ (ಗುರಿ: ೨ ) 

ಉದ್ದೇಶಗಳು:

• ಸೂಕ್ಷö್ಮ ಸ್ನಾಯು ಚಲನಾ ಕೌಶಲಗಳನ್ನು ಅಭಿವೃದ್ಧಿಪಡಿಸುವುದು.

• ಅಕ್ಷರಗಳನ್ನು ಗುರುತಿಸುವುದು.

• ಚುಕ್ಕಿಗಳಿಂದ ಅಂಕಿಗಳನ್ನು ರಚಿಸುವುದು

ಅಗತ್ಯ ಸಾಮಗ್ರಿ: ನೋಟ್ ಪುಸ್ತಕ, ಪೆನ್ಸಿಲ್, ಕರಿ ಹಲಗೆ, ಸೀಮೆ ಸುಣ್ಣ

ವಿಧಾನ :

- ಮಕ್ಕಳಿಗೆ ಚುಕ್ಕಿ ಬಳಸಿ ೧, ೨, ೩, ೪, ೫ ಈ ಅಂಕಿಗಳನ್ನು ಬರೆಯುವ ವಿಧಾನವನ್ನು ಬರೆದು ತೋರಿಸುವುದು.

- ಮಕ್ಕಳು ೧, ೨, ೩, ೪, ೫, ಈ ಅಂಕಿಗಳ ಚುಕ್ಕಿಗಳನ್ನು ಸೇರಿಸಲು ಹೇಳುವುದು

ತರಗತಿವಾರು ವಿವರ: ೨ನೇ ತರಗತಿಯ ಮಕ್ಕಳು ೧ ರಿಂದ ೫ ರ ವರೆಗಿನ ಅಂಕಿಗಳನ್ನು ಚುಕ್ಕಿ ಬಳಸಿ ಬರೆಯಲು 

ತಿಳಿಸುವುದು. ೩ನೇ ತರಗತಿ ಮಕ್ಕಳು ೧ ರಿಂದ ೧೦ ರ ವರೆಗಿನ ಸಂಖ್ಯೆಗಳನ್ನು ಚುಕ್ಕಿ ಬಳಸಿ ಬರೆಯಲು ತಿಳಿಸುವುದು. 

(೫೭ನೇ ದಿನಕ್ಕೆ ಮುಂದುವರೆದಿದೆ)

--------------------------------

 ಅವಧಿ - 6(40ನಿ)

*ಹೊರಾಂಗಣ ಆಟಗಳು* 

೫೬ನೇ ದಿನದ ಚಟುವಟಿಕೆಗಳನ್ನು ಪುನರಾವರ್ತಿಸುವುದು

    -------------------------------- 

ಅವಧಿ - 7(40ನಿ)

*ಕಥಾ ಸಮಯ* 

ಶೀರ್ಷಿಕೆ : ಕೊಕ್ಕರೆ ಮತ್ತು ಏಡಿ

ಸಾಮಗ್ರಿಗಳು : ಹತ್ತಿಗೊಂಬೆಗಳು/ ಕಡ್ಡಿ ಚಿತ್ರಗಳು

ಉದ್ದೇಶಗಳು :

 ಆಲಿಸುವ ಸಾಮರ್ಥ್ಯ ಬೆಳೆಸುವುದು.

 ನಿರರ್ಗಳವಾಗಿ ಮಾತನಾಡುವ ಕೌಶಲ ರೂಢಿಸುವುದು.

 ಸೃಜನ ಶೀಲತೆಯನ್ನು ಅಭಿವೃದ್ಧಿ ಪಡಿಸುವುದು.

 ಕುತೂಹಲ ಮತ್ತು ಆಸಕ್ತಿಯನ್ನು ಉಂಟುಮಾಡುವುದು.

ವಿಧಾನ : ಕಡ್ಡಿಚಿತ್ರ/ಹತ್ತಿ ಗೊಂಬೆ ಪ್ರದರ್ಶನ

 ಕಡ್ಡಿಚಿತ್ರ/ ಹತ್ತಿ ಗೊಂಬೆಗಳನ್ನು ಪ್ರದರ್ಶಿಸಿ ಕಥೆಯನ್ನು ನಿರೂಪಿಸುವುದು. ವಿವಿಧ ಕಾರ್ಯತಂತ್ರಗಳ ಅಡಿಯಲ್ಲಿ 

ಕಥಾಸಮಯವನ್ನು ಮನೋರಂಜನಾತ್ಮಕವಾಗಿ ಸೃಜಿಸುವುದು.

(ಕಥೆಯನ್ನು ಆನಂದಿಸುವುದರ ಜೊತೆಗೆ ಆಲಿಸುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು)

.-----------------------------------

    ಅವಧಿ -8(20ನಿ)

*ಮತ್ತೆ ಸಿಗೋಣ*    

 ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು ಪುನರಾವರ್ತಿಸಿ/ನೆನಪಿಸಿ

 ಈ ದಿನ ಮಕ್ಕಳು ನಿರ್ವಹಿಸಿದ ಎಲ್ಲಾ ಚಟುವಟಿಕೆಗಳನ್ನು ಪೋಷಕರೊಂದಿಗೆ ಮತ್ತು ಕುಟುಂಬದ 

ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಿ.

 ಮರುದಿನ ಮಕ್ಕಳು ಸಂತೋಷದಿ0ದ ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು ಏರ್ಪಡಿಸಿ, 

ಬೀಳ್ಕೊಡಿ.

 ಮುಂದಿನ ವಾರದಲ್ಲಿ “ಹೊರಸಂಚಾರಕ್ಕೆ ಯೋಜನೆ” ರೂಪಿಸಿ ಮಕ್ಕಳು ವಿವಿಧ ಸಸ್ಯಗಳನ್ನು, ಮರಗಳನ್ನು 

ವೀಕ್ಷಿಸಲಿ ಇದಕ್ಕಾಗಿ ಅಗತ್ಯ ಸಿದ್ಧತೆ ತಯಾರಿ ಮಾಡಿಕೊಳ್ಳುವುದು

http://diethassan.karnataka.gov.in

【ವಿದ್ಯಾ ಪ್ರವೇಶ ಮತ್ತು ಕಲಿಕಾ ಹಾಳೆಗಳ ಮಾಹಿತಿಯ ಅಪ್ ಡೇಟ್ ವೀಕ್ಷಿಸಲು  ಮೇಲೆ ಕ್ಲಿಕ್ ಮಾಡಿ ಅದರಲ್ಲಿ ಶಾಲಾ ವಿಭಾಗಕ್ಕೆ ಹೋಗಿ ಅದರಲ್ಲಿ ಕಲಿಕಾ ಚೇತರಿಕೆಯ ಅಪ್ಡೇಟ್ ವೀಕ್ಷಿಸಬಹುದು】


[ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ]

ಮೂಲ ಸಾಹಿತ್ಯಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ವೆಬ್ಸೈಟ್ ಅಲ್ಲಿ ಪಡೆಯಬಹುದು ಲಿಂಕ್

------------------------------


 *ವಂದನೆಗಳೊಂದಿಗೆ* ,

ರೇಣುಕಾರಾಧ್ಯ ಪಿ ಪಿ 

    ಶಿಕ್ಷಕ (ನಲಿಕಲಿ ರಾ.ಸಂ.ವ್ಯ.)

ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು

ಅರಸೀಕೆರೆ, ಹಾಸನ


 *ಸಲಹೆ ಮತ್ತು ಮಾರ್ಗದರ್ಶನ* 

ಶ್ರೀಯುತ ಎಂ.ಎಸ್.ಫಣೀಶ 

ಹಿರಿಯ ಉಪನ್ಯಾಸಕರು ಡಯಟ್ ಹಾಸನ

ಶ್ರೀಯುತ ಆರ್.ಡಿ.ರವೀಂದ್ರ

ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಕೊಪ್ಪ

No comments:

Post a Comment