Thursday, 7 January 2021

ದಿನಕ್ಕೊಂದು ಲೋಗೋ 84

 🏵️🏵️🏵️🏵️🏵️🏵️🏵️

*ದಿನಕ್ಕೊಂದು ಲೋಗೋ**

       *ದಿನ -84* 

 (ಮೂಲ : ಬೆಳ್ಳಿಮೋಡ ನಲಿಕಲಿ ಸಮಗ್ರ ಸಾಹಿತ್ಯ)


ದಿನಾಂಕ : 0️⃣7️⃣➖0️⃣1️⃣➖2️⃣0️⃣2️⃣1️⃣


 *16.ಲೋಗೋ : ಜೇನುಹುಳು* 


 **ಚಟುವಟಿಕೆ ಹೆಸರು : ನನ್ನ ಸಾಧನೆ* 


ನಲಿಕಲಿಯ *ಪರಿಸರ ಅಧ್ಯಯನ* ದಲ್ಲಿ ಬರುವ ಒಂದು ವಿಶಿಷ್ಟ ಲೋಗೋ ಇದಾಗಿದೆ. ಇದು ಕಲಿಕಾ ಗೋಪುರದಲ್ಲಿ  *ಮೌಲ್ಯಮಾಪನಹಂತ* ದ ಚಟುವಟಿಕೆಗಳಲ್ಲಿ  ಬರುವ ಲೋಗೋ ಆಗಿದೆ  ಮತ್ತು *5ನೇ ತಟ್ಟೆ** ಯಲ್ಲಿ ಸ್ವ ಕಲಿಕೆ ಮೂಲಕ ಈ ಚಟುವಟಿಕೆಯು ನಡೆಯುತ್ತದೆ .

1ನೇ ತರಗತಿಯಲ್ಲಿ 00 ಕಾರ್ಡುಗಳು

 2ನೇ ತರಗತಿಯಲ್ಲಿ 05 ಕಾರ್ಡುಗಳು

 3ನೇ ತರಗತಿಯಲ್ಲಿ 04 ಕಾರ್ಡುಗಳು  ಇರುತ್ತವೆ


 _ಚಟುವಟಿಕೆಯ ವಿಶ್ಲೇಷಣೆ :_ 


> ಲಿಖಿತವಾದ-ಮೌಖಿಕವಾದ ಉತ್ತರವನ್ನು ಬಯಸುತ್ತದೆ. 

> ಪಡೆದ/ ಗಳಿಸಿದ ಜ್ಞಾನವನ್ನು ಪರೀಕ್ಷೆಗೊಳಪಡಿಸುತ್ತದೆ.


* ಜ್ಞಾನದ ಪುನರ್ಬಲನ ಮಾಡುತ್ತದೆ.


 _ಚಟುವಟಿಕೆಗಳ ಉದ್ದೇಶಗಳು:_ 


> ಕಲಿಕಾರ್ಥಿಗಳ ಕಲಿಕೆಯನ್ನು ದೃಢೀಕರಿಸುವುದು. 

>ನಿರ್ದಿಷ್ಟ ಕಲಿಕಾಂಶ ಪರೀಕ್ಷಿಸುವುದು.


> ಬರವಣಿಗೆಯ ಕೌಶಲವನ್ನು ಅಭಿವೃದ್ಧಿಪಡಿಸುವುದು,


 _ಚಟುವಟಿಕೆಯನ್ನು ಹೀಗೆ ಮಾಡೋಣ :_ 


> ಈ ಚಟುವಟಿಕೆಯನ್ನು ನಿರ್ವಹಿಸುವ ಕಲಿಕಾರ್ಥಿಗಳಿಗೆ ಸರಿಯಾದ ಸೂಚನೆಗಳನ್ನು ನೀಡೋಣ.


> ಪ್ರಶ್ನೆಗಳಿಗೆ ಉತ್ತರಗಳನ್ನು ತಮ್ಮ ನೋಟ್ ಪುಸ್ತಕಗಳಲ್ಲಿ ಬರೆಯಲು ಸೂಚಿಸೋಣ.

 > ಚಟುವಟಿಕೆ ಪೂರ್ಣಗೊಂಡ ನಂತರದಲ್ಲಿ ಕಲಿಕಾರ್ಥಿಗಳು ಬರೆದಿದ್ದನ್ನು ನೋಡಿ, ತಿದ್ದಿ, ದೃಢೀಕರಿಸೋಣ,


> ಯಾವುದೇ ಚಟುವಟಿಕೆಯು ಒಂದೇ ದಿನದಲ್ಲಿ ಪೂರ್ಣವಾಗಿ ಮುಗಿಯಬೇಕೆಂಬ ನಿರ್ಬಂಧವಿರುವುದಿಲ್ಲ ಎಂಬುದನ್ನು ಗಮನಿಸೋಣ


 _ನಿರೀಕ್ಷಿತ ಕಲಿಕೆಯ ಫಲಗಳು:_ 


> ಬರವಣಿಗೆಯ ಮೂಲಕ ತಮ್ಮ ಜ್ಞಾನವನ್ನು ಒರೆಹಚ್ಚುವರು.


> ಜ್ಞಾನವನ್ನು ಸ್ಮರಿಸಿ ಉತ್ತರಿಸುವರು.


> ನಿರ್ದಿಷ್ಟ ಕಲಿಕಾಂಶವನ್ನು ದೃಢೀಕರಿಸುತ್ತಾ, ಜ್ಞಾನ ಹೊಂದುವದು.


 *ನಲಿಕಲಿ app ಲಿಂಕ್*

https://play.google.com/store/apps/details?id=a1226930.wpu


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

No comments:

Post a Comment