Friday, 8 January 2021

ದಿನಕ್ಕೊಂದು ಲೋಗೋ 85

 🏵️🏵️🏵️🏵️🏵️🏵️🏵️

*ದಿನಕ್ಕೊಂದು ಲೋಗೋ**

       *ದಿನ -85* 

 (ಮೂಲ : ಬೆಳ್ಳಿಮೋಡ ನಲಿಕಲಿ ಸಮಗ್ರ ಸಾಹಿತ್ಯ)


ದಿನಾಂಕ : 0️⃣8️⃣➖0️⃣1️⃣➖2️⃣0️⃣2️⃣1️⃣


 *17.ಲೋಗೋ : ಇರುವೆ ಸಾಲು* 


 **ಚಟುವಟಿಕೆ ಹೆಸರು : ಯೋಜನೆ* 


ನಲಿಕಲಿಯ *ಪರಿಸರ ಅಧ್ಯಯನ* ದಲ್ಲಿ ಬರುವ ಒಂದು ವಿಶಿಷ್ಟ ಲೋಗೋ ಇದಾಗಿದೆ. ಇದು ಕಲಿಕಾ ಗೋಪುರದಲ್ಲಿ  *ಮೌಲ್ಯಮಾಪನಹಂತ* ದ ಚಟುವಟಿಕೆಗಳಲ್ಲಿ  ಬರುವ ಲೋಗೋ ಆಗಿದೆ  ಮತ್ತು *5ನೇ ತಟ್ಟೆ** ಯಲ್ಲಿ ಸ್ವ ಕಲಿಕೆ ಮೂಲಕ ಈ ಚಟುವಟಿಕೆಯು ನಡೆಯುತ್ತದೆ .

1ನೇ ತರಗತಿಯಲ್ಲಿ 02 ಕಾರ್ಡುಗಳು

 2ನೇ ತರಗತಿಯಲ್ಲಿ 02 ಕಾರ್ಡುಗಳು

 3ನೇ ತರಗತಿಯಲ್ಲಿ 03 ಕಾರ್ಡುಗಳು  ಇರುತ್ತವೆ


 _ಚಟುವಟಿಕೆಯ ವಿಶ್ಲೇಷಣೆ :_ 



> ನಿರ್ದಿಷ್ಟ ಸನ್ನಿವೇಶದಲ್ಲಿ ತಮ್ಮ ಸೃಜನಾತ್ಮಕತೆಯನ್ನು ಹೊರಹಾಕಲು ಅವಕಾಶ ನೀಡಿದೆ. 

> ನಿರ್ದೇಶಿತ ಚಟುವಟಿಕೆಯನ್ನು ಮಾಡಲು ಪ್ರೇರೇಪಿಸುತ್ತದೆ.


 _ಚಟುವಟಿಕೆಗಳ ಉದ್ದೇಶಗಳು:_ 


> ಕಲಿಕಾರ್ಥಿಗಳಲ್ಲಿ ತಾರ್ಕಿಕ ಮನೋಭಾವನೆಯನ್ನು ಬೆಳೆಸುವುದು,


> ಸಂಗ್ರಹಣೆ ಮತ್ತು ವ್ಯವಸ್ಥಿತ ಜೋಡಣಾ ಸಾಮರ್ಥ್ಯ ಬೆಳೆಸುವುದು. 

> ಪರಿಕಲ್ಪನೆಗಳಿಗೆ ಮೂರ್ತರೂಪ ನೀಡುವುದನ್ನು ಅಭ್ಯಾಸ ಮಾಡಿಸುವುದು,


 _ಚಟುವಟಿಕೆಯನ್ನು ಹೀಗೆ ಮಾಡೋಣ :_ 


> ಪೂರ್ವಯೋಜಿತವಾಗಿಯೇ ಈ ಚಟುವಟಿಕೆಗಳಿಗೆ ಅಗತ್ಯವಾದ ಸಾಮಗ್ರಿಗಳನ್ನು ಸಂಗ್ರಹಿಸೋಣ.

 > ಕಲಿಕಾರ್ಥಿಗಳಿಗೆ/ ಗುಂಪಿಗೆ ಸರಿಯಾದ ಸೂಚನೆಗಳನ್ನು ನೀಡೋಣ


> ಆಗತ್ಯವಿದ್ದಲ್ಲಿ ಸೂಕ್ತ ಸಲಹೆಗಳೊಂದಿಗೆ ಮಾರ್ಗದರ್ಶನ ಮಾಡೋಣ. 

> ಯೋಜನೆ/ಮಾದರಿಗಳನ್ನು ಉತ್ತಮವಾಗಿ ತಯಾರಿಸಲು ಶ್ರಮ ಹಂಚಿಕೆ ಮಾಡೋಣ,


> ಸೂಕ್ತ ಮೇಲ್ವಿಚಾರಣೆಯೊಂದಿಗೆ ಕೊನೆಯಲ್ಲಿ ದೃಡೀಕರಿಸಿ, ಮಾದರಿ/ ಯೋಜನೆಗಳನ್ನು ಪ್ರದರ್ಶಿಸೋಣ


 _ನಿರೀಕ್ಷಿತ ಕಲಿಕೆಯ ಫಲಗಳು:_ 


> ನಿರ್ದಿಷ್ಟ ಕಲಿಕಾಂಶವನ್ನು ತಮ್ಮದಾಗಿಸಿಕೊಳ್ಳುವರು.


> ತಮ್ಮ ಸೃಜನಶೀಲ ಸಾಮರ್ಥ್ಯವನ್ನು ವ್ಯಕ್ತಪಡಿಸುವರು. > 

ನಿತ್ಯ ಜೀವನದಲ್ಲಿ ಅಚ್ಚುಕಟ್ಟುತನವನ್ನು ರೂಢಿಸಿಕೊಳ್ಳುವರು.


 *ನಲಿಕಲಿ app ಲಿಂಕ್* 

https://play.google.com/store/apps/details?id=a1226930.wpu


ರೇಣುಕಾರಾಧ್ಯ 

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

No comments:

Post a Comment