🏵️🏵️🏵️🏵️🏵️🏵️🏵️
*ದಿನಕ್ಕೊಂದು ಲೋಗೋ**
*ದಿನ -83*
(ಮೂಲ : ಬೆಳ್ಳಿಮೋಡ ನಲಿಕಲಿ ಸಮಗ್ರ ಸಾಹಿತ್ಯ)
ದಿನಾಂಕ : 0️⃣6️⃣➖0️⃣1️⃣➖2️⃣0️⃣2️⃣1️⃣
*15.ಲೋಗೋ : ಸೂರ್ಯಕಾಂತಿ*
**ಚಟುವಟಿಕೆ ಹೆಸರು : ನೆನಪಿನ ಆಟ*
ನಲಿಕಲಿಯ *ಪರಿಸರ ಅಧ್ಯಯನ* ದಲ್ಲಿ ಬರುವ ಒಂದು ವಿಶಿಷ್ಟ ಲೋಗೋ ಇದಾಗಿದೆ. ಇದು ಕಲಿಕಾ ಗೋಪುರದಲ್ಲಿ *ಮೌಲ್ಯಮಾಪನಹಂತ* ದ ಚಟುವಟಿಕೆಗಳಲ್ಲಿ ಬರುವ ಲೋಗೋ ಆಗಿದೆ ಮತ್ತು *5ನೇ ತಟ್ಟೆ** ಯಲ್ಲಿ ಸ್ವ ಕಲಿಕೆ ಮೂಲಕ ಈ ಚಟುವಟಿಕೆಯು ನಡೆಯುತ್ತದೆ .
1ನೇ ತರಗತಿಯಲ್ಲಿ 02 ಕಾರ್ಡುಗಳು
2ನೇ ತರಗತಿಯಲ್ಲಿ 00 ಕಾರ್ಡುಗಳು
3ನೇ ತರಗತಿಯಲ್ಲಿ 02 ಕಾರ್ಡುಗಳು ಇರುತ್ತವೆ
_ಚಟುವಟಿಕೆಯ ವಿಶ್ಲೇಷಣೆ :_
>ಆಟದ ರೂಪದಲ್ಲಿರುವುದರಿಂದ ಕಲಿಕಾರ್ಥಿಗಳನ್ನು ಆಕರ್ಷಿಸುತ್ತದೆ.
> ಸಕ್ರಿಯವಾಗಿ ಭಾಗವಹಿಸುವಂತೆ ಮಾಡುತ್ತದೆ.
>ವಿಭಿನ್ನ ರೀತಿಯ ಚಟುವಟಿಕೆಯಾಗಿದೆ.
_ಚಟುವಟಿಕೆಗಳ ಉದ್ದೇಶಗಳು:_
> ಕಲಿಕಾರ್ಥಿಗಳ ಕಲಿಕೆಯನ್ನು ಆಟದ ಮೂಲಕ ಮೌಲ್ಯಮಾಪನ ಮಾಡುವುದು,
> ಕಲಿಕೆಯನ್ನು ದೃಢೀಕರಿಸಿ ದಾಖಲಿಸುವುದು,
> ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮಾಡುವುದು
_ಚಟುವಟಿಕೆಯನ್ನು ಹೀಗೆ ಮಾಡೋಣ :_
> ಆಟಕ್ಕೆ ಸಂಬಂಧಿಸಿದ ಕಲಿಕಾ ಸಾಮಗ್ರಿಗಳನ್ನು ಮುಂಚಿತವಾಗಿಯೇ ಸಿದ್ಧಪಡಿಸಿಕೊಳ್ಳೋಣ.
> ಆಟದ ಬೋರ್ಡ್, ಡೈಸ್ ನಡೆಸುವ ಕಾಯಿಗಳನ್ನು ಹಾಗೂ ಆಟ ಆಡಲು ಸರಿಯಾದ ಸೂಚನೆಗಳನ್ನು ನೀಡೋಣ.
> ಆಟದ ಬೊರ್ಡ್ ಕಾರ್ಡ್‌ನಲ್ಲಿರುವ ಸೂಚನೆಗಳಿಗೆ ಅನುಗುಣವಾಗಿ ಆಟವಾಡಲು ತಿಳಿಸೋಣ
> ಚಟುವಟಿಕೆಯು ಮುಗಿದ ನಂತರದಲ್ಲಿ ಕಲಿಕೆಯನ್ನು ದೃಢೀಕರಿಸೋಣ.
_ನಿರೀಕ್ಷಿತ ಕಲಿಕೆಯ ಫಲಗಳು:_
> ಕಲಿತಿದ್ದನ್ನು ಗಳಿಸಿದ ಜ್ಞಾನವನ್ನು ಪುನರ್ಮನನ ಮಾಡುವರು,
> ಮೌಖಿಕ-ಲಿಖಿತವಾಗಿ ಅಭಿವ್ಯಕ್ತಿಸುವರು.
> ಆಟಗಳ ಮೂಲಕ ಮೌಲ್ಯಮಾಪನದಲ್ಲಿ
ಭಾಗಿಯಾಗುವರು.
ನಲಿಕಲಿ *ನಿಮ್ಮ ವೇದಿಕೆ*
ಶಾಲೆ ಲಿಂಕ್
https://nalikalirenukaradhyatlm.blogspot.com/2021/01/5.html
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ
No comments:
Post a Comment