*ದಿನಕ್ಕೊಂದು ಲೋಗೋ*
ದಿನ -49
(ಮೂಲ : ಬೆಳ್ಳಿಮೋಡ ನಲಿಕಲಿ ಸಮಗ್ರ ಸಾಹಿತ್ಯ)
ದಿನಾಂಕ : 03.12.2020
*18.ಲೋಗೋ :ಹುಂಜ*
**ಚಟುವಟಿಕೆ ಹೆಸರು :ಭಾಗಾಕಾರ*
ನಲಿಕಲಿಯ ಗಣಿತದಲ್ಲಿ ಬರುವ ಒಂದು ವಿಶಿಷ್ಟ ಲೋಗೋ ಇದಾಗಿದೆ. ಇದು ಕಲಿಕಾ ಗೋಪುರದಲ್ಲಿ *ಕಲಿಕಾಂಶ ಹಂತ* ದ ಚಟುವಟಿಕೆಗಳಲ್ಲಿ ಬರುವ ಲೋಗೋ ಆಗಿದೆ ಮತ್ತು *ಗುಂಪು 1(ತಟ್ಟೆ-1)* ರಲ್ಲಿ ಈ ಚಟುವಟಿಕೆಯು *ಶಿಕ್ಷಕರ ಸಂಪೂರ್ಣ ಸಹಾಯ* ದಲ್ಲಿ ಈ ಚಟುವಟಿಕೆಯು ನಡೆಯುತ್ತದೆ .
1ನೇ ತರಗತಿಯಲ್ಲಿ 00 ಕಾರ್ಡುಗಳು
2ನೇ ತರಗತಿಯಲ್ಲಿ 01 ಕಾರ್ಡುಗಳು
3ನೇ ತರಗತಿಯಲ್ಲಿ 01 ಕಾರ್ಡುಗಳು ಇರುತ್ತವೆ
_ಚಟುವಟಿಕೆಯ ವಿಶ್ಲೇಷಣೆ:_
• ಗಣಿತದ ಮೂಲ ಪರಿಕಲ್ಪನೆಗಳನ್ನು ಅರ್ಥಮಾಡಿಸುವುದು,
• ಮುಂದಿನ ಚಟುವಟಿಕೆಯನ್ನು ಸ್ವತಂತ್ರವಾಗಿ ನಿರ್ವಹಿಸಲು ಸಮರ್ಥರಾಗುವಂತೆ ಮಾಡುವುದು.
* ಅಮೂರ್ತ ಕಲ್ಪನೆಗಳನ್ನು ಮೂರ್ತರೂಪದ ವಸ್ತುಗಳ ಮೂಲಕ ಮನವರಿಕೆ ಮಾಡಿಕೊಡುವುದು.
_ಚಟುವಟಿಕೆಯ ಉದ್ದೇಶಗಳು:_
• ಭಾಗಾಕಾರದ ಅಂಶಗಳಾದ ಭಾಜ್ಯ. ಭಾಜಕ, ಭಾಗಲಬ್ಧ, ಶೇಷದ ಬಗ್ಗೆ ತಿಳಿಯುವುದು.
*ಸಂಖ್ಯೆಗಳನ್ನು ಭಾಗ ಮಾಡುವುದರ ಮೂಲಕ ಭಾಗಾಕಾರದ ಕಲ್ಪನೆ ಮೂಡಿಸುವುದು.
•1 ಅಂಕಿ ಯಿಂದ 2 ಅಂಕಿ ಸಂಖ್ಯೆಗಳನ್ನು ಭಾಗಿಸುವುದು.
• ನಿತ್ಯ ಜೀವನಕ್ಕೆ ಸಂಬಂಧಿಸಿದ ಭಾಗಾಕಾರದ ಲೆಕ್ಕ ಬಿಡಿಸುವುದು.
_ಚಟುವಟಿಕೆಯನ್ನು ಹೀಗೆ ಮಾಡೋಣ:_
• ಕಾರ್ಡಿನಲ್ಲಿರುವ ಸೂಚನೆಗೆ ಅನುಗುಣವಾಗಿ ಹಂತ ಹಂತವಾಗಿ ಭಾಗಾಕಾರ ಮಾಡುವ ಕ್ರಮ ತಿಳಿಸುವುದು. * ಅಗತ್ಯ ಕಲಿಕೋಪಕರಣಗಳನ್ನು ಹೊಂದಿಸಿಕೊಳ್ಳುವುದು.
• 1ಅಂಕಿ ಯಿಂದ 2 ಅಂಕಿ ಸಂಖ್ಯೆಗಳ ಭಾಗಾಕಾರ ಮಾಡಲು ಸಹಕಾರ ನೀಡುವುದು,
* ನಿತ್ಯ ಜೀವನಕ್ಕೆ ಸಂಬಂಧಿಸಿದ ಸರಳ ಭಾಗಾಕಾರದ ಲೆಕ್ಕ ಬಿಡಿಸುವ ಮೂಲಕ ಅರ್ಥೈಸುವುದು,
*ನಿರೀಕ್ಷಿತ ಕಲಿಕೆಯ ಫಲಗಳು:*
• ಭಾಗಾಕಾರದ ಅಂಶಗಳಾದ ಭಾಜ್ಯ ಭಾಜಕ, ಭಾಗಲಬ್ಧ ಮತ್ತು ಶೇಷದ ಬಗ್ಗೆ ತಿಳಿಯುವರು.
• ಆಂಕಿಯಿಂದ 2 ಅಂಕಿ ಸಂಖ್ಯೆಯನ್ನು ಭಾಗಿಸುವರು. • ನಿತ್ಯ ಜೀವನಕ್ಕೆ ಸಂಬಂಧಿಸಿದ ಸರಳ ಭಾಗಾಕಾರದ ಲೆಕ್ಕ ಬಿಡಿಸುವರು.
*ನಲಿಕಲಿ quiz*
https://forms.gle/NobS8bPerbxLyxi88
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ
ತೀರ್ಥಹಳ್ಳಿಸಂಕ್ಲಾಪುರ
No comments:
Post a Comment