Thursday, 3 December 2020

ದಿನಕ್ಕೊಂದು ಲೋಗೋ 48

 *ದಿನಕ್ಕೊಂದು ಲೋಗೋ* 

       ದಿನ -48

 (ಮೂಲ : ಬೆಳ್ಳಿಮೋಡ ನಲಿಕಲಿ ಸಮಗ್ರ ಸಾಹಿತ್ಯ)


ದಿನಾಂಕ : 02.12.2020

 

 *17.ಲೋಗೋ :ಮರಕುಟಿಗ* 


 **ಚಟುವಟಿಕೆ ಹೆಸರು :ಸರಿ-ಬೆಸ* 


ನಲಿಕಲಿಯ ಗಣಿತದಲ್ಲಿ ಬರುವ ಒಂದು ವಿಶಿಷ್ಟ ಲೋಗೋ ಇದಾಗಿದೆ. ಇದು ಕಲಿಕಾ ಗೋಪುರದಲ್ಲಿ  *ಕಲಿಕಾಂಶ ಹಂತ* ದ ಚಟುವಟಿಕೆಗಳಲ್ಲಿ  ಬರುವ ಲೋಗೋ ಆಗಿದೆ ಮತ್ತು *ಗುಂಪು 1(ತಟ್ಟೆ-1)* ರಲ್ಲಿ ಈ ಚಟುವಟಿಕೆಯು *ಶಿಕ್ಷಕರ ಸಂಪೂರ್ಣ ಸಹಾಯ* ದಲ್ಲಿ ಈ ಚಟುವಟಿಕೆಯು ನಡೆಯುತ್ತದೆ .

1ನೇ ತರಗತಿಯಲ್ಲಿ 00 ಕಾರ್ಡುಗಳು

 2ನೇ ತರಗತಿಯಲ್ಲಿ 02 ಕಾರ್ಡುಗಳು

 3ನೇ ತರಗತಿಯಲ್ಲಿ 01 ಕಾರ್ಡುಗಳು  ಇರುತ್ತವೆ


 _ಚಟುವಟಿಕೆಯ ವಿಶ್ಲೇಷಣೆ:_ 


• ಗಣಿತದ  ಪರಿಕಲ್ಪನೆಗಳನ್ನು ಅರ್ಥಮಾಡಿಸುವುದು,


• ಮುಂದಿನ ಚಟುವಟಿಕೆಯನ್ನು ಸ್ವತಂತ್ರವಾಗಿ ನಿರ್ವಹಿಸಲು ಸಮರ್ಥರಾಗುವಂತೆ ಮಾಡುವುದು.


* ಅಮೂರ್ತ ಕಲ್ಪನೆಗಳನ್ನು ಮೂರ್ತರೂಪದ ವಸ್ತುಗಳ ಮೂಲಕ ಮನವರಿಕೆ ಮಾಡಿಕೊಡುವುದು.


 _ಚಟುವಟಿಕೆಯ ಉದ್ದೇಶಗಳು:_ 


* ವಸ್ತುಗಳನ್ನು ಗುಂಪು ಮಾಡುವ ವಿಧಾನದ ಮೂಲಕ ಸರಿ-ಬೆಸ ಗುರ್ತಿಸುವುದು.


* ನೀಡಿದ ಅಂಕಿ ಸಂಖ್ಯೆಗಳಲ್ಲಿ ಸರಿ-ಬೆಸ ಗುರ್ತಿಸುವುದು,


• ಕೊಟ್ಟ ಸಂಖ್ಯೆಯನ್ನು 2 ರಿಂದ ಭಾಗಿಸಿ, ಸರಿ-ಬೆಸ ಹೇಳಿಸುವುದು, 


 _ಚಟುವಟಿಕೆಯನ್ನು ಹೀಗೆ ಮಾಡೋಣ:_ 


* ಆಗತ್ಯ ಕಲಿಕೋಪಕರಣಗಳನ್ನು ಹೊಂದಿಸಿಕೊಳ್ಳುವುದು.


*ವಸ್ತುಗಳನ್ನು ನೀಡಿ ಗುಂಪು ಮಾಡಿ ಎಣಿಸುವ ಮೂಲಕ ಸರಿ-ಬೆಸ ಗುರ್ತಿಸಲು ಸಹಕರಿಸುವುದು.


• ನೀಡಿದ ಸಂಖ್ಯೆಗಳನ್ನು ನೋಡಿ ಸರಿ ಬೆಸ ಹೇಳುವ ವಿಧಾನವನ್ನು ತಿಳಿಯಲು ಸಹಕರಿಸುವುದು. 

* 2 ರಿಂದ 2 ಮತ್ತು 3 ಅಂಕಿಯನ್ನು ಭಾಗಿಸಿದಾಗ ಶೇಷ ೧ ಉಳಿಯುವ ಸಂಖ್ಯೆ ಸರಿ ಎಂದು ತಿಳಿಸುವುದು,


 _ನಿರೀಕ್ಷಿತ ಕಲಿಕೆಯ ಫಲಗಳು:_ 


◆ವಸ್ತುಗಳನ್ನು ಗುಂಪು ಮಾಡಿ ಸರಿ ಬೆಸ ಎಂದು ಗುರ್ತಿಸುವರು.


◆ನೀಡಿರುವ 2 ಅಂಕಿ ಮತ್ತು 3 ಅಂಕಿ ಸಂಖ್ಯೆಗಳಲ್ಲಿ ಸರಿ ಬೆಸ ಗುರ್ತಿಸುವರು. 

◆ಕೊಟ್ಟ ಸಂಖ್ಯೆಯಲ್ಲಿ 2 ರಿಂದ ಭಾಗಿಸಿ ಸರಿ ಮತ್ತು ಬೆಸ ಗುರ್ತಿಸುವರು.


 *ನಲಿಕಲಿ ರಸಪ್ರಶ್ನೆ 3 ಲಿಂಕ್*

https://nalikalirenukaradhyatlm.blogspot.com/2020/12/3-zoom.html


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

No comments:

Post a Comment