1ನೇ ತರಗತಿ ಮೈಲಿಗಲ್ಲು6
*ಓ*
ಓಟ ಓರಣ ಓಲಗ
*ಔ*
ಔರಸ ಔಡಲ ಔತಣ
*ಹ*
ಹಯ ಹವಳ ಹರಹರ
*ಶ*
ಶತ ಶರ ಶಯನ
*ಸನ್ನಿವೇಶ ರಚನೆ*
*ಓಟ ಶರ ಓಲಗ ಹವಳ*
ನಮ್ಮೂರ ಮಾರಮ್ಮನ ಜಾತ್ರೆ ಪ್ರತಿ ವರ್ಷ ನಡೆಯುತ್ತದೆ. ಜಾತ್ರೆಯಲ್ಲಿ *ಓಲಗದ* ನಾದದ ಸಮೇತ ಮಾರಮ್ಮನ ರಥವು ಊರಿನ ಬೀದಿಗಳಲ್ಲಿ ಸಾಗುತ್ತದೆ.
ಈ ಜಾತ್ರೆಯಲ್ಲಿ ಮಕ್ಕಳಿಗೆ *ಓಟದ* ಸ್ಪರ್ಧೆ ಏರ್ಪಡಿಸಿರುತ್ತಾರೆ. ಜಾತ್ರೆಯಲ್ಲಿ ತಿರುಗುವ ತೊಟ್ಟಿಲು, ಹಲವಾರು ಮನರಂಜನೆಗಳು, ಪುಟ್ಟ ಪುಟ್ಟ ಅಂಗಡಿಗಳಿವೆ. ಕನಕ ಕಮಲರು, ಅವರ ತಂದೆ - ತಾಯಿಯ ಜೊತೆಗೆ ಜಾತ್ರೆಗೆ ಬಂದಿದ್ದಾರೆ. ತಂದೆ, ಕನಕನಿಗೆ ಆಟದ ಬಿಲ್ಲು ಮತ್ತು *ಶರ* ವನ್ನು ಕೊಡಿಸಿದರು ಮತ್ತು ಕಮಲಳಿಗೆ ಬಲೂನನ್ನು ಕೊಡಿಸಿದರು.
ಜಾತ್ರೆಯಲ್ಲಿ ಕಮಲಳ ತಾಯಿಗೆ ಅವಳ ಗೆಳತಿ ಭೇಟಿಯಾದರು. ಅವರ ಗೆಳತಿಯ ಹೊಸದಾದ *ಹವಳದ* ಸರವನ್ನು ನೋಡಿ ಖುಷಿಪಟ್ಟರು.
*ಸಾಧನ ಪದಗಳು*
ಹಯ ಈಶ ಶಯನ ಔರಸ
ದಶದಳ ಪರವಶ ಶವ ಆಶ
ಶತಕ ದಶಕ ಶತಶರ
ಹರಹರ ವಶ
*ವಾಕ್ಯಗಳು*
ಓಟ
ಓಟದ ಆಟ
ಓಟದ ಆಟ ಸಡಗರದ ಆಟ
ಹವಳ
ಹವಳದ ಸರ
ಕಮಲಳ ಸರ ಹವಳದ ಸರ
ಆಶ ಆಟ (ಬಾಕ್ಸ್ ಪುಸ್ತಕದಲ್ಲಿ ಮಾಡಿಸುವುದು)
ಎ ಲ ಓ ಏ
ಟ ಷ ಈ ಶ
ಇ ಆ ಕ ಊ
ಔ ಳ ತ ಹ
*ಬಿಟ್ಟ ಅಕ್ಷರ ತುಂಬಿ*
ಮ___
ಉ___
ಮದ__
ಪದ__
ಹ__
__ಲಗ
ಪ __ವ__
ಕಡ__
ಈ__
ಚಟ____
ಕ__
ಔ____
ಊ___
ಈಚ___
ತಬ___
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ
No comments:
Post a Comment