2ನೇ ಕನ್ನಡ ಮೈಲಿಗಲ್ಲು 7
*ಟ್ಟ*
ತಟ್ಟೆ, ಘಟ್ಟ, ಮೊಟ್ಟೆ, ಇಟ್ಟಿಗೆ, ಮೆಟ್ಟಿಲು.
*ಸಾಧನ ಪದಗಳು*
ಗುಟ್ಟು, ಹೊಟ್ಟು, ಗಟ್ಟಿ, ಮೊಟ್ಟೆ, ಜುಟ್ಟು, ಹೊಟ್ಟೆ, ಸಿಟ್ಟು, ಗುಟ್ಟು, ಇಷ್ಟ, ಕಷ್ಟ, ಬೆಟ್ಟ, ರೊಟ್ಟಿ, ತಟ್ಟೆ, ಕಟ್ಟಿಗೆ, ಕೊಟ್ಟಿಗೆ, ಇಟ್ಟಿಗೆ, ಪೊಟ್ಟಣ, ಪೆಟ್ಟಿಗೆ, ಸಾಷ್ಟಾಂಗ, ಪಟ್ಟಣ, ಕಟ್ಟಡ, ನೆಟ್ಟಗೆ, ವಿಶಿಷ್ಟ, ಪಟ್ಟಣ, ಲಟ್ಟಣಿಗೆ, ಜಗಜಟ್ಟ, ಗಟ್ಟಿಮುಟ್ಟು,
*ವಾಕ್ಯಗಳು*
1.ಪುಟ್ಟ ಪುಟ್ಟಿ ಗಳೆಯರ ಜೊತೆ ರೊಟ್ಟಿ ತಿಂದರು.
2.ಸುಟ್ಟ ಇಟ್ಟಿಗೆಯಿಂದ ಕಟ್ಟಿದ ಗೋಡೆ ಗಟ್ಟಿಯಾಗಿರುವುದು.
3.ರಾಧ ಪುಟ್ಟಿಯ ಜುಟ್ಟು ಕಟ್ಟುತಿಹಳು.
4.ತಂತಿಗೆ ಬಟ್ಟೆ ತೂಗು ಹಾಕಿಹರು.
5.ಬೆಟ್ಟದ ಮೇಲಿನ ಗುಡಿಗೆ ಜನರು ಹೋಗುತಿಹರು.
ಓದಿ ಉತ್ತರಿಸಿ
*ಹಾರೈಕೆ*
ರವಿ ಹೊಸ ಬಟ್ಟೆ ತೊಟ್ಟು ಬುಟ್ಟಿ ಹಿಡಿದು ಬೆಟ್ಟದ ಮೇಲಿರುವ ದೇವರ ಪೂಜೆಗೆಂದು ಹೊರಟನು. ಪೂಜಾರಿಗೆ ಬುಟ್ಟಿ ಕೊಟ್ಟು ಪೂಜೆ ಮಾಡಿಸಿದನು. ನಂತರ ಅವನು ಮಂಗಳಾರತಿ ತಟ್ಟೆಗೆ ಕಾಸು ಹಾಕಿ ದೇವರಿಗೆ ವಂದಿಸಿದನು.
ಬೆಟ್ಟದಿಂದ ಇಳಿದು ಬಂದ ರವಿಯು ಪೂಜಾರಿ ಕೊಟ್ಟ ಹೂ, ಕಾಯಿ, ಲಾಡು ತಂದು ಅಜ್ಜ, ಅಜ್ಜಿ, ತಾಯಿ, ತಂದೆಗೆ ಕೊಟ್ಟನು. ಅಜ್ಜ, ಅಜ್ಜಿ ರವಿಯನ್ನು ಹರಸಿದರು.
1. ರವಿ ಮಂಗಳಾರತಿ ತಟ್ಟೆಗೆ ಏನು ಹಾಕಿದ?
2. ರವಿ ತಂದೆ ತಾಯಿಗೆ ಏನೇನು ಕೊಟ್ಟನು?
*ಪದಶಬ್ದ ಆಟ*
ಬೆಟ್ಟ ಜುಟ್ಟು ಗಟ್ಟಿ ಸಜ್ಜಿಗೆ
ಕಜ್ಜಾಯ ಗಜ್ಜರಿ ರೊಟ್ಟಿ
ಲಟ್ಟಣಿಗೆ ಗೆಜ್ಜೆನಾದ ಮಜ್ಜನ
ಮೊಟ್ಟೆ ಬಟ್ಟೆ ಬಜ್ಜಿ ಮಜ್ಜಿಗೆ
ಪೆಟ್ಟು ಅಜ್ಜಿ ಹೆಜ್ಜೇನು ಪಟ್ಟಣ
ರಟ್ಟು ಇಟ್ಟಿಗೆ ಗಟ್ಟಿ ಮುಟ್ಟು ಚಿಟ್ಟೆ
*ವಾಚಕಗಳು*
*ಕಿಟ್ಟು ಪುಟ್ಟು* ಬಾರೋ ಬಾರೋ ಕಿಟ್ಟು ಈ ಮನೆಯ ಪುಟ್ಟು ಹೇಳುವೆ ಒಂದು ಗುಟ್ಟು ತಾಯಿ ಮಾಡಿದ ರೊಟ್ಟಿ ಹಂಚಿನ ಮೇಲೆ ತಟ್ಟಿ ತಿಂದರೆ ಆಗುವೆ ಗಟ್ಟಿ ಜನರ ಮನವ ಮುಟ್ಟಿ ಏರುವೆ ಸೋಲನು ಮೆಟ್ಟಿ ನೀನಾಗುವೆ ಜಗದ ಜಟ್ಟಿ ಎದುರು ಮನೆಯ ಪುಟ್ಟಿ ಕಾಲಿಗೆ ಗೆಜ್ಜೆ ಕಟ್ಟಿ ಕುಣಿದಳು ಕೈಗಳ ತಟ್ಟಿ ತಾಯಿ ಮಾಡಿದ ರೊಟ್ಟಿ ಬಡಿದ ಜೋಳದ ರೊಟ್ಟಿ ತಿಂದು ಆದಳು ಗಟ್ಟಿ ವೇದಿಕೆ ಏರುವಳು ಪುಟ್ಟಿ ಜನರ ಮನವನು ಮುಟ್ಟಿ ಸಾಧಿಸುವಳು ಗೆಜ್ಜೆ ಕಟ್ಟಿ.
*2.ರಾಣಿಯ ದುಃಖ(* ಕಿರು ನಾಟಕ) ಸೈನಿಕ(ಮಹಾರಾಜರು ಸಭೆಗೆ ಆಗಮಿಸುವರು.)ರಾಜಾಧಿರಾಜ ಮಹಾರಾಜರಿಗೆ ಜೈ. ನಗರದ ಮಹಾಪೌರ:ಮಹಾರಾಜರಿಗೆ ವಂದನೆಗಳು,ರಾಜ ಆಸೀನನಾಗಿ ಇಂದಿನ ಸಭೆಯ ವಿಷಯವೇನು ಮಹಾಪೌರರೇ? ಮಹಾಪೌರ:ಒಂದು ಮಾತು ಕೇಳಬಹುದೇ,ಒಡೆಯಾ?ಕೆಲವು ದಿನಗಳಿಂದ ಮಹಾರಾಣಿಯವರು ನೀರೂ ಸಹ ಕುಡಿಯದೆ ಮಲಗಿರುವರು ಎಂಬ ಮಾತು ಕೇಳಿದೆ.ಅವರಿಗೆ ಏನಾಗಿದೆ ಮಹಾರಾಜರೇ? ರಾಜ:ರಾಣಿಗೆ ಬಹಳ ದುಃಖವಾಗಿದೆ. ಮಹಾಪೌರ:ಅವರಿಗೆ ಯಾವ ದುಃಖ ಅರಸರೇ?. ರಾಜ:ರಾಣಿಯ ಬಳಿ ಒಂದು ಸುಂದರ ಗಿಳಿ ಇದೆ.ಅದು ವಿಶೇಷವಾದ ಗಿಳಿ.ಇಂಪಾಗಿ ಹಾಡುವ ಗಿಳಿ.ಆದರೆ ಒಂದು ವಾರದಿಂದ ಅದರ ಹಾಡು ನಿಂತು ಹೋಗಿದೆ. ಅಗಸ:ಈಗ ನಾವು ಏನಾದರೂ ಉಪಾಯ ಹೇಳಬಹುದೇ ಮಹಾರಾಜರೇ? ರಾಜ:ಧಾರಾಳವಾಗಿ ಉಪಾಯ ಹೇಳಿರಿ.ಮಹಾರಾಣಿಯವರು ಮೊದಲಿನಂತಾಗಲಿ.ಅವರ ದುಃಖ ದೂರ ಮಾಡಿದವರಿಗೆ ನಾನು ಬಹುಮಾನ ಕೊಡುವೆ.(ರಾಣಿ ಹಾಗೂ ದಾಸಿಯು ಬರುವರು.ದಾಸಿಯ ಬಳಿ ಗಿಳಿಯ ಪಂಜರ ಇದೆ.)ಜನತೆ:ಮಹಾರಾಣಿಯವರಿಗೆ ಜಯವಾಗಲಿ. ಅಗಸ:ನಾನು ಈ ನಗರದ ಅಗಸ.ನಾನೊಂದು ಹಾಡು ಹೇಳುವೆ.ಆಗ ಗಿಳಿಯು ಸಹ ಹಾಡಬಹುದು.(ಅಗಸ ಹಾಡಲು ಶುರು ಮಾಡಿದ.) ರಾಣಿ:ಸಾಕು ಸಾಕು ಈ ಹಾಡಿನಿಂದ ನನಗೆ ತಲೆ ನೋವು ಆರಂಭವಾಗಿದೆ. ಬಡಗಿ:ಮಹಾರಾಣಿಯವರೇ ನಾನು ಈ ನಗರದ ಬಡಗಿ.ನನಗೆ ಕುಣಿಯಲು ಬರುವುದು,ನಾನು ಕುಣಿಯುವುದನು ಕಂಡು ಗಿಳಿ ಖುಷಿಯಿಂದ ಹಾಡಬಹುದು.(ಬಡಗಿ ಕುಣಿಯಲು ಶುರುಮಾಡಿದನು) ರಾಣಿ:ಸಾಕು ಸಾಕು ಈ ಉಪಾಯ ಬೇಡ.ರಾಜ:ಎರಡು ಉಪಾಯಗಳು ವಿಫಲವಾಗಿವೆ ಹಾಗಾದರೆ ಇದು ಯಾರಿಂದಲೂ ಆಗದ ಕೆಲಸವೇ?ರೈತನ ಮಗಳು:ಕೊನೆಯದಾಗಿ ನಾನೊಂದು ಹೇಳುವೆ ಆಗಬಹುದೇ ಮಹಾರಾಣಿ?ರಾಣಿ:ನೀನು ಏನು ಮಾಡುವೆ ನೋಡೋಣ. ರೈತನ ಮಗಳು:ಪಂಜರದ ಗಿಳಿ ಹಾಡ ಬೇಕು ತಾನೇ?ಹಾಗಾದರೆ,ಇದು ಒಂದೇ ಉಪಾಯ ಪಂಜರದ. (ಪಂಜರದ ಬಾಗಿಲು ತೆರೆದಳು,ಗಿಳಿ ಹಾರಿ ಹೋಯಿತು.)ರಾಣಿ: ನೀನು ಏನು ಮಾಡಿದ ಹುಡುಗಿ?ಗಿಳಿ ಪಂಜರದಿಂದ ಹಾರಿಹೋಯಿತು.ಮಹಾಪೌರ:ಹುಡುಗಿ,ನೀನು ಎಂತಹ ಕೆಲಸ ಮಾಡಿದೆ?ರಾಣಿಯವರ ವಿಶೇಷ ಗಿಳಿ ಹಾರಿ ಹೋಯಿತು.ಈಗ ಏನು ಮಾಡುವುದು? ರಾಜ:ತಾಳಿರಿ,ಮಹಾಪೌರರೇ,ಮಗುನೀನು ರಾಣಿಯವರಿಗೆ ಏನು ಜವಾಬು ಕೊಡುವೆ.
【ವಾಚಕ ಟೈಪ್ ಮಾಡಿಕೊಟ್ಟವರು ಪಲ್ಲವಿ ಎಂ.ಸಹಶಿಕ್ಷಕಿ ಕೊರಟಗೆರೆ|| ತಾ||】
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ
No comments:
Post a Comment