Saturday, 17 October 2020

ದಿನಕ್ಕೊಂದು ಲೋಗೋ(3)

*ದಿನಕ್ಕೊಂದು ಲೋಗೋ**
 (ಮೂಲ : ಬೆಳ್ಳಿಮೋಡ ನಲಿಕಲಿ ಸಮಗ್ರ ಸಾಹಿತ್ಯ)

ದಿನಾಂಕ : 18.10.2020

 *3.ಲೋಗೋ :ಇಲಿಗಳ ಮಧ್ಯೆ ಗಂಟೆ* 

 **ಚಟುವಟಿಕೆ ಹೆಸರು : ಸರಳ ಸಂಭಾಷಣೆ* 

ನಲಿಕಲಿಯ ಭಾಷೆಯಲ್ಲಿ ಬರುವ ಒಂದು ವಿಶಿಷ್ಟ ಲೋಗೋ ಇದಾಗಿದೆ. ಇದು ಕಲಿಕಾ ಗೋಪುರದಲ್ಲಿ  ಪೂರ್ವಸಿದ್ಧತಾ ಹಂತದ ಚಟುವಟಿಕೆಗಳಲ್ಲಿ  ಬರುವ ಲೋಗೋ ಆಗಿದೆ ಮತ್ತು ಸಾಮೂಹಿಕ ತಟ್ಟೆಯಲ್ಲಿ ಈ ಚಟುವಟಿಕೆಯು ನಡೆಯುತ್ತದೆ .
1ನೇ ತರಗತಿಯಲ್ಲಿ 01 ಕಾರ್ಡುಗಳು
 2ನೇ ತರಗತಿಯಲ್ಲಿ 02 ಕಾರ್ಡುಗಳು
 3ನೇ ತರಗತಿಯಲ್ಲಿ 00 ಕಾರ್ಡುಗಳು  ಇರುತ್ತವೆ

 _ಚಟುವಟಿಕೆ ವಿಶ್ಲೇಷಣೆ:_ 

◆ ಈ ಚಟುವಟಿಕೆ “ನೋಡಿ ಕಲಿ, ಕೇಳಿ ಕಲಿ, ಮಾಡುತ್ತಾ ಕಲಿ' ತತ್ವಗಳನ್ನಾಧರಿಸಿದೆ.

◆ ಇದು ಕಲಿಕಾರ್ಥಿಗಳ ಆಲಿಸುವ, ಅರ್ಥೈಸಿಕೊಳ್ಳುವ, ಗ್ರಹಿಸುವ ಪ್ರತಿಕ್ರಿಯಿಸುವ ಕೌಶಲಗಳನ್ನು ಬೆಳೆಸುವುದು.

◆ ಸರಳ ಸಂಭಾಷಣೆಗಳು ಕಲಿಕಾರ್ಥಿಗಳ ಮಾನಸಿಕ ಮಟ್ಟ ಆಧರಿಸಿ ರಚಿತವಾಗಿವೆ,

◆ ಇದರಲ್ಲಿ ಅನುಸರಿಸಿರುವ ನಾಟಕ ಶೈಲಿ ಕಲಿಕಾರ್ಥಿಗಳು ವಯಸ್ಸಿಗೆ ತಕ್ಕಂತೆ ಇದೆ.

 _ಚಟುವಟಿಕೆ ಉದ್ದೇಶಗಳು_ :

• ಕಲಿಕೆಯೊಂದಿಗೆ ಉತ್ತಮ ಮನೋರಂಜನೆಯನ್ನು ಒದಗಿಸುತ್ತದೆ[ ಸಂತಸದಾಯಕ ಕಲಿಕೆ]
 • ಆಲಿಸುವ, ಮಾತನಾಡುವ, ಸಂವಹನ ಕೌಶಲಗಳನ್ನು ಅಭಿವೃದ್ಧಿಪಡಿಸುವುದು.

• ಸಂದರ್ಭೋಚಿತ ಅಭಿನಯ ಮತ್ತು ಸಂಭಾಷಣೆ ಕೌಶಲ ಬೆಳೆಸುವುದು.
 _
ಚಟುವಟಿಕೆಯನ್ನು ಹೀಗೆ ಮಾಡೋಣ_ 

★ಅಗತ್ಯ ಪರಿಕರಗಳಾದ ಪೊಪೆಟ್, ಪರದೆ, ಬೆಳಕಿನ ವ್ಯವಸ್ಥೆ ಮಾಡಿಕೊಳ್ಳುವುದು,

★ಅಗತ್ಯ ವಿದ್ದಲ್ಲಿ ಹಿರಿಯ ತರಗತಿಯ ಕಲಿಕಾರ್ಥಿಗಳ ನೆರವನ್ನು ಪಡೆಯುವುದು,

★ ಸಂಭಾಷಣೆಯನ್ನು ಕಲಿಕಾರ್ಥಿಗಳಿಗೆ ಅರ್ಥವಾಗುವಂತೆ ನಿಧಾನವಾಗಿ ಹೇಳುವುದನ್ನು ಅಭ್ಯಾಸ ಮಾಡಿಬವುದು.
 ★ಈ ಚಟುವಟಿಕೆಯಲ್ಲಿರುವ ಕಲಿಕಾರ್ಥಿಗಳನ್ನು ತೊಡಗಿಸಿಕೊಳ್ಳುವುದು.

★ ಕಡ್ಡಿಯಂಟಿಸಿರುವ ಪೊಪೆಟ್ ಹಾಗೂ ಪರದೆಯನ್ನು ಬಳಸಿ ಕಲಿಕಾರ್ಥಿಗಳಿಗೆ ಸೃಜನಶೀಲತೆಯನ್ನು ಬೆಳೆಸುವುದು.

 _ನಿರೀಕ್ಷಿತ ಕಲಿಕೆಯ ಫಲ:_ 

● ಸಂಭಾಷಣೆಯಲ್ಲಿ ತೊಡಗುವರು.

● ಇತರರ ಭಾಷೆ-ಭಾವನೆಯನ್ನು ಗ್ರಹಿಸಿ ಪ್ರತಿಕ್ರಿಯಿಸುವರು.

● ನಿರೂಪಣೆ ಸಾಮರ್ಥ್ಯ, ಭಾವಾಭಿವ್ಯಕ್ತಿ ಯನ್ನು ಬೆಳೆಸಿಕೊಳ್ಳುವರು.

● ಆಲಿಸಿ ಅರ್ಥೈಸಿಕೊಂಡು ಸರಳ ಪ್ರಶ್ನೆಗಳಿಗೆ ಉತ್ತರಿಸಿದರು.
● ಸಂತಸದಾಯಕ ಕಲಿಕೆ.

ಮಾದರಿ ಪೊಪೆಟ್ CLICK


ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ

 *ನಲಿಕಲಿ app*

No comments:

Post a Comment