*ದಿನಕ್ಕೊಂದು ಲೋಗೋ**
(ಮೂಲ : ಬೆಳ್ಳಿಮೋಡ ನಲಿಕಲಿ ಸಮಗ್ರ ಸಾಹಿತ್ಯ)
ದಿನಾಂಕ : 17.10.2020
*2. *ಲೋಗೋ :ಬಾಯಿ* 👄
*ಚಟುವಟಿಕೆ ಹೆಸರು : ಕಥೆ*
ನಲಿಕಲಿಯ ಭಾಷೆಯಲ್ಲಿ ಬರುವ ಒಂದು ವಿಶಿಷ್ಟ ಲೋಗೋ ಇದಾಗಿದೆ. ಇದು ಕಲಿಕಾ ಗೋಪುರದಲ್ಲಿ ಪೂರ್ವಸಿದ್ಧತಾ ಹಂತದ ಚಟುವಟಿಕೆಗಳಲ್ಲಿ ಬರುವ ಲೋಗೋ ಆಗಿದೆ ಮತ್ತು ಸಾಮೂಹಿಕ ತಟ್ಟೆಯಲ್ಲಿ ಈ ಚಟುವಟಿಕೆಯು ನಡೆಯುತ್ತದೆ .
1ನೇ ತರಗತಿಯಲ್ಲಿ 6 ಕಾರ್ಡುಗಳು
2ನೇ ತರಗತಿಯಲ್ಲಿ 3 ಕಾರ್ಡುಗಳು
3ನೇ ತರಗತಿಯಲ್ಲಿ 1 ಕಾರ್ಡುಗಳು ಇರುತ್ತವೆ
_ಚಟುವಟಿಕೆ ವಿಶ್ಲೇಷಣೆ:_
• ಕಥೆಗಳು ಕಲಿಕಾರ್ಥಿಗಳಲ್ಲಿ ಕಲ್ಪನಾ ಶಕ್ತಿಯನ್ನು ಬೆಳೆಸುತ್ತದೆ.
* ಆಲಿಸುವ ಕೌಶಲ ವೃದ್ಧಿಯಲ್ಲಿ ಕಥೆಗಳು ಪರಿಣಾಮಕಾರಿ ಸಾಧನಗಳಾಗಿವೆ.
* ಕಥೆಗಳು ಸಂಬಂಧಿಸಿದ ಉದ್ದೇಶ ಈಡೇರಿಸಿ, ಗ್ರಹಣಶಕ್ತಿಯನ್ನು ಬೆಳೆಸುತ್ತವೆ.
*ಪ್ರಭುತ್ವ ಮಟ್ಟದ ಸಂಭಾಷಣೆ ಕೌಶಲವನ್ನು ಬೆಳೆಸಲು ಕಥೆಗಳು ಸಹಕಾರಿಯಾಗಿವೆ.
_ಚಟುವಟಿಕೆ ಉದ್ದೇಶಗಳು:_
* ಕಲಿಕಾರ್ಥಿಗಳ ಅವಧಾನವನ್ನು ಕೇಂದ್ರೀಕರಿಸುವುದು.
* ಕಲಿಕಾ ವಾತಾವರಣಕ್ಕೆ ಕಲಿಕಾರ್ಥಿಗಳನ್ನು ಆಕರ್ಷಿಸುವುದು.
* ಕಲಿಕಾರ್ಥಿಗಳೊಂದಿಗೆ ಮುಕ್ತ ಸಂಭಾಷಣಾ ಕೌಶಲ ಬೆಳೆಸುವುದು.
◆ _ಚಟುವಟಿಕೆಯನ್ನು ಹೀಗೆ ಮಾಡೋಣ:_
* ಈ ಚಟುವಟಿಕೆಯಲ್ಲಿರುವ ಕಲಿಕಾರ್ಥಿಗಳನ್ನು ಕೇಂದ್ರವಾಗಿರಿಸಿ ಕಥೆ ಹೇಳುವುದು.
*ಸೂಕ್ತ ಸ್ವರ ಭಾರ ಹಾಗೂ ಧ್ವನಿ ಏರಿಳಿತ ದೊಂದಿಗೆ ಕಥೆಯನ್ನು ಹೇಳುವುದು.
* ಭಾವನೆಯ ಅಭಿವ್ಯಕ್ತಿ ಕಥೆ ಹೇಳುವುದರ ಮತ್ತೊಂದು ಮಜಲು ಎಂದು ಅರಿಯುವುದು.
* ಕಥೆಯನ್ನು ಹೇಳಿದ ನಂತರ ಸರಳ, ಮುಕ್ತ ಪ್ರಶ್ನೋತ್ತರವನ್ನು ಮಾಡುವುದು.
• ಕಥೆಗಳಲ್ಲಿನ ವಿಷಯ-ಸಾರಾಂಶ ಕ್ಕಿಂತ ಮೌಲ್ಯಗಳಿಗೆ ಹೆಚ್ಚು ಒತ್ತು ಕೊಡುವುದು.
_ನಿರೀಕ್ಷಿತ ಕಲಿಕೆಯ ಫಲ:_
●ಕಥೆಗಳನ್ನು ಆಲಿಸುವುದರೊಂದಿಗೆ ಅರ್ಥಮಾಡಿಕೊಳ್ಳುವವರು.
● ಆಲಿಸಿದ ನಂತರ ಯಾರು? ಯಾವಾಗ? ಎಲ್ಲಿ? ಏಕೆ? ಏನು? ಹೇಗೆ? ಎಂಬ ಪ್ರಶ್ನೆಗಳಿಗೆ ಉತ್ತರಿಸುವರು.
ಮೇಲೆ app ನಲ್ಲಿ ಮುಟ್ಟಿ ಕಥೆಗಳನ್ನು ಆಲಿಸಬಹುದು
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ
No comments:
Post a Comment