*ದಿನಕ್ಕೊಂದು ಲೋಗೋ**
(ಮೂಲ : ಬೆಳ್ಳಿಮೋಡ ನಲಿಕಲಿ ಸಮಗ್ರ ಸಾಹಿತ್ಯ)
ದಿನಾಂಕ : 16.10.2020
*ಲೋಗೋ :*ಹುಡುಗ ಹುಡುಗಿ*
*ಚಟುವಟಿಕೆ ಹೆಸರು : ಹಾಡು*
ನಲಿಕಲಿಯ ಭಾಷೆಯಲ್ಲಿ ಬರುವ ಒಂದು ವಿಶಿಷ್ಟ ಲೋಗೋ ಇದಾಗಿದೆ. ಇದು ಕಲಿಕಾ ಗೋಪುರದಲ್ಲಿ ಪೂರ್ವಸಿದ್ಧತಾ ಹಂತದ ಚಟುವಟಿಕೆಗಳಲ್ಲಿ ಬರುವ ಲೋಗೋ ಆಗಿದೆ ಮತ್ತು ಸಾಮೂಹಿಕ ತಟ್ಟೆಯಲ್ಲಿ ಈ ಚಟುವಟಿಕೆಯು ನಡೆಯುತ್ತದೆ .
1ನೇ ತರಗತಿಯಲ್ಲಿ 11 ಕಾರ್ಡುಗಳು
2ನೇ ತರಗತಿಯಲ್ಲಿ 10 ಕಾರ್ಡುಗಳು
3ನೇ ತರಗತಿಯಲ್ಲಿ 2 ಕಾರ್ಡುಗಳು ಇರುತ್ತವೆ.
_ಚಟುವಟಿಕೆಯ ವಿಶ್ಲೇಷಣೆ_ :
◆ಮಕ್ಕಳಿಗೆ ಹಾಡು ಎಂದರೆ ತುಂಬಾ ಆಸಕ್ತಿ ಆದ್ದರಿಂದ ಸಂಗೀತಕ್ಕೆ ತಲೆದೂಗುವ ವರಿಲ್ಲ ಎಂಬಂತೆ ಕಲಿಕಾರ್ಥಿಗಳ ಆಸಕ್ತಿಯನ್ನು ಹೆಚ್ಚಿಸಲು ಚಟುವಟಿಕೆ ಅಗತ್ಯವಾಗಿದೆ
◆ ಹಾಡುಗಳು ಮಕ್ಕಳ ಏಕಾಗ್ರತೆಯನ್ನು ಕೇಂದ್ರೀಕರಿಸುತ್ತವೆ
◆ಹಾಡುಗಳನ್ನು ರಾಗಬದ್ಧವಾಗಿ ಹೇಳಿಕೊಡುವುದರಿಂದ ಮಕ್ಕಳಲ್ಲಿ ಆಲಿಸುವಿಕೆ ಹಾಡುವ ಕೌಶಲ್ಯ ಅಭಿವ್ಯಕ್ತಿಗೆ ಅವಕಾಶ ಕಲ್ಪಿಸಿದಂತಾಗುತ್ತದೆ
_ಚಟುವಟಿಕೆ ಉದ್ದೇಶ :_
◆ಮಕ್ಕಳನ್ನು ಕಲಿಕಾ ವಾತಾವರಣದೆಡೆಗೆ ಆಕರ್ಷಿಸುವುದು.
◆ಸಂತಸದಾಯಕ ಕಲಿಕಾ ಅವಕಾಶವನ್ನು ಸೃಷ್ಟಿಸುವುದು
_ಚಟುವಟಿಕೆಯನ್ನು ಹೀಗೆ ಮಾಡೋಣ_
◆ ಮಕ್ಕಳನ್ನು ವೃತ್ತಾಕಾರದಲ್ಲಿ ನಿಲ್ಲಿಸಿ ಹಾಡುಗಳನ್ನು ರಾಗ, ತಾಳ ಲಯಬದ್ಧವಾಗಿ ಅಭಿನಯದ ಮೂಲಕ ಹಾಡಿಸುವುದು.
◆ ಮಕ್ಕಳು ಬಾಯ್ದೆರೆದು ಹಾಡುವಂತೆ ಸೂಚಿಸಿ ಅವರುಗಳು ಪುನರ್ ಉಚ್ಚರಿಸುವಂತೆ ಗಮನಿಸುವುದು
_ನಿರೀಕ್ಷಿತ ಕಲಿಕೆಯ ಫಲ :_
● ಜನಪ್ರಿಯ ಪ್ರಾಸ ಗೀತೆಗಳನ್ನು ಆಲಿಸುವರು
● ಸರಳ ಪದ್ಯಗಳನ್ನು ಪದ್ಯದ ಸಾಲುಗಳನ್ನು ಯಥಾವತ್ತಾಗಿ ಪುನರುಚ್ಚರಿಸುವರು
● ಪದ್ಯದ ವಿವರಣೆಯನ್ನು ಅರ್ಥ ಮಾಡಿಕೊಳ್ಳುವವರು
● ಆಲಿಸುವಿಕೆಯನ್ನಾಧರಿಸಿ ಸರಳ ಪ್ರಶ್ನೆಗಳಿಗೆ ಉತ್ತರಿಸುವರು
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ
*ನಲಿಕಲಿ app*
https://play.google.com/store/apps/details?id=a1226930.wpu
No comments:
Post a Comment