Monday, 19 October 2020

ದಿನಕ್ಕೊಂದು ಲೋಗೋ 4

 *ದಿನಕ್ಕೊಂದು ಲೋಗೋ**

 (ಮೂಲ : ಬೆಳ್ಳಿಮೋಡ ನಲಿಕಲಿ ಸಮಗ್ರ ಸಾಹಿತ್ಯ)


ದಿನಾಂಕ : 19.10.2020


 *4.ಲೋಗೋ :ಡಬ್ಬದ ಮೇಲೆ ಮಂಗ* 

🐒

 📦


 **ಚಟುವಟಿಕೆ ಹೆಸರು : ಆಟ* 


ನಲಿಕಲಿಯ ಭಾಷೆಯಲ್ಲಿ ಬರುವ ಒಂದು ವಿಶಿಷ್ಟ ಲೋಗೋ ಇದಾಗಿದೆ. ಇದು ಕಲಿಕಾ ಗೋಪುರದಲ್ಲಿ  ಪೂರ್ವಸಿದ್ಧತಾ ಹಂತದ ಚಟುವಟಿಕೆಗಳಲ್ಲಿ  ಬರುವ ಲೋಗೋ ಆಗಿದೆ ಮತ್ತು ಸಾಮೂಹಿಕ ತಟ್ಟೆಯಲ್ಲಿ ಈ ಚಟುವಟಿಕೆಯು ನಡೆಯುತ್ತದೆ .

1ನೇ ತರಗತಿಯಲ್ಲಿ 05 ಕಾರ್ಡುಗಳು

 2ನೇ ತರಗತಿಯಲ್ಲಿ 03 ಕಾರ್ಡುಗಳು

 3ನೇ ತರಗತಿಯಲ್ಲಿ 01 ಕಾರ್ಡುಗಳು  ಇರುತ್ತವೆ


 _ಚಟುವಟಿಕೆ ವಿಶ್ಲೇಷಣೆ:_


● ಕಲಿಕಾರ್ಥಿಗಳ ಮನಸ್ಸು ಸದಾ ಹೊಸದರತ್ತೆ ಪುಟಿಯುತ್ತಿರುತ್ತದೆ.


● ಆಟ ಎಂದರೆ ಕಲಿಕಾರ್ಥಿಗಳಿಗೆ ವಿಶೇಷವಾದ ಆಸಕ್ತಿ ಇದೆ.


● ಆಟ ಕಲಿಕಾರ್ಥಿಗಳಿಗೆ ಎಂದೂ ಆಲಸ್ಯ ಮಾಡುವುದಿಲ್ಲ.


●ಸೋಮಾರಿತನದ ವರನ್ನು ಎದ್ದು ಕುಣಿಯುವಂತೆ ಮಾಡುವ ಶಕ್ತಿ ಈ ಚಟುವಟಿಕೆಗಿದೆ.


 _ಚಟುವಟಿಕೆ ಉದ್ದೇಶಗಳು:_ 


● ಕಲಿಕಾರ್ಥಿಗಳಲ್ಲಿ ಭಾಗವಹಿಸುವಿಕೆಯನ್ನು ಉಂಟುಮಾಡುವುದು.


● ಕಲಿಕಾ ಸನ್ನಿವೇಶವನ್ನು ಕಲಿಕಾರ್ಥಿಗೆ ಇಷ್ಟವಾಗಿಸುವುದು.


● ಆಡಿ ಕಲಿ ತತ್ವದ ಮೂಲಕ ಕಲಿಕಾರ್ಥಿಗಳ ಮನಸ್ಸನ್ನು ಆಕರ್ಷಿಸುವುದು.


 _ಚಟುವಟಿಕೆಯನ್ನು ಹೀಗೆ ಮಾಡೋಣ_ 

★ಈ ಚಟುವಟಿಕೆಗಳು ಭಿನ್ನ ಸ್ವರೂಪದ್ದಾಗಿದೆ (ಮುದ್ರಿತ ಕಾರ್ಡುಗಳಲ್ಲಿ ಸ್ಪಷ್ಟ ಸೂಚನೆ ನೀಡಿದೆ).


★ ಕಲಿಕಾರ್ಥಿಗಳೆಲ್ಲರೂ (ಮುಖ್ಯವಾಗಿ ಈ ಚಟುವಟಿಕೆ ಮಾಡಬೇಕಾದವರು) ಸಕ್ರಿಯವಾಗಿ ಭಾಗವಹಿಸುವಂತೆ

ನೋಡಿಕೊಳ್ಳುವುದು.


★ ಮುಕ್ತ ವಾತಾವರಣದಲ್ಲಿ ಆಟ ಆಡಿಸುವುದು.


★ ಕಲಿಕಾರ್ಥಿಗಳ ಅಭಿಪ್ರಾಯಗಳನ್ನು ಕೇಳುವುದು,


★ ಆಟದ ವೈವಿಧ್ಯತೆ, ವಿಶೇಷತೆಗಳನ್ನು ಕಾಯ್ದುಕೊಳ್ಳುವುದು.


★ಆಟದಿಂದ ಪಾಠದೆಡೆಗೆ' ಎಂಬುದನ್ನು ಚಟುವಟಿಕೆಯ ಮೂಲಕ ಮಾಡಿ ತೋರಿಸುವುದು.


 _ನಿರೀಕ್ಷಿತ ಕಲಿಕೆಯ ಫಲ:_ 


◆ ಮೌಖಿಕ ಸೂಚನೆಗಳನ್ನು ಅರ್ಥಮಾಡಿಕೊಳ್ಳುವರು. 

◆ ಸರದಿಯ ನಿಯಮಗಳನ್ನು ಪಾಲಿಸುವರು.


◆ ಇತರರ ಅಭಿಪ್ರಾಯಗಳನ್ನು ಗೌರವಿಸುವರು.


◆ ಸೂಚನೆಗಳನ್ನು ಅರ್ಥಮಾಡಿಕೊಂಡು ಕಾರ್ಯರೂಪಕ್ಕೆ ತರುವರು.


 *ಮಾದರಿ* 

2ನೇ ತರಗತಿ 40ನೇ ಮೆಟ್ಟಿಲು *ವ್ಯಂಜನಾಕ್ಷರ ಆಟ* 

Click ಚಟುವಟಿಕೆ ಮಾದರಿ ವಿಡಿಯೋ


 *ನಲಿಕಲಿ app


ರೇಣುಕಾರಾಧ್ಯ 

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

No comments:

Post a Comment