Thursday, 20 March 2025

ದಿನಕ್ಕೊಂದು ಶಿಶುಗೀತೆ

ದಿನಕ್ಕೊಂದು ಶಿಶುಗೀತೆ

 *47.ಗುಬ್ಬಿ* 

ಚಿಂವ್ ಚಿಂವ್ ಗುಬ್ಬಿ

ಚಿಂವ್ ಚಿಂವ್ ಗುಬ್ಬಿ

ಹೊರಟಿರುವೆ ನೀ

ಎಲ್ಲಿಗೆ ನುಗ್ಗಿ....


ಮಹಡಿ ಮೇಲೆಯೇ

ಸ್ವಲ್ಪ ತಾಳು ....

ತರುವೆನು ನಿನಗೆ

ವಿಧ ವಿಧ ಕಾಳು...


ಗೂಡಿನ ಒಳಗೆ ನಿನ್ನಯ 

ವಾಸ.....

ಬೇಡವೇ ಬೇಡ ಈ ಜನರ

ಸಹವಾಸ....


ಕ್ಷೀಣಿಸುತ್ತಿದೆ ನಿನ್ನಯ

ಸಂತತಿ...

ಕೇಳುವವರಿಲ್ಲ ನಿನ್ನಯ

ವಿನಂತಿ...


ಜ್ಞಾನ ವಿಜ್ಞಾನ ಶಿಖರವ

 ಏರಿರುವರು....

ನಿನ್ನೀ ಅಳಿವಿಗೆ ಕಾರಣವ

ಹುಡುಕಿರುವರು...


ರಚನೆ ಮತ್ತು ಗಾಯನ

ರೇಣುಕಾರಾಧ್ಯ 

GLPS M KOPPALU ARSIKERE

ಆಡಿಯೋ ಲಿಂಕ್ 1

https://drive.google.com/file/d/1N4OGXgFjn5vu2mRN7BA6MtS10dadTaZj/view?usp=drivesdk

ಆಡಿಯೋ ಲಿಂಕ್ 2

https://drive.google.com/file/d/1MwbyrBogFqLl0SwEjSPsEuuAopA9761x/view?usp=drivesdk

No comments:

Post a Comment