*ದಿನಕ್ಕೊಂದು ಶಿಶುಗೀತೆ*
*ಆಡಿಯೋ ಲಿಂಕ್*
https://drive.google.com/file/d/1ataWBdAKC5SfLtRS0Rfy1WuflvUsOYoK/view?usp=drivesdk
*53.ಮತ್ತೆ ಬಂತು ಯುಗಾದಿ*
ಚೈತ್ರದ ಚಿಗುರಿನಲಿ
ಮಾವು ಬೇವು ಹಸಿರನುಟ್ಟು
ಬೆಲ್ಲದ ಸಿಹಿಯನರಸಿ
ಮತ್ತೆ ಬಂತು ಯುಗಾದಿ||
ಹೊಂಗೆ ನೆರಳ ತಂಪಿನಲಿ
ಮಾವು ಚಿಗುರು ಕಂಪಿನಲಿ
ಕೋಗಿಲೆ ದನಿ ಇಂಪು ಸೂಸಿ
ಮತ್ತೆ ಬಂತು ಯುಗಾದಿ||
ತರುಲತೆಗಳು ಕೊನರುವಲ್ಲಿ
ಅರಳಿನಿಂತ ಕುಸುಮಗಳಲಿ
ದುಂಬಿಗಳ ಝೇಂಕಾರದಲ್ಲಿ
ಮತ್ತೆ ಬಂತು ಯುಗಾದಿ||
ಹಳೆಯ ನೆನಪು ಹೊಸತು ಕನಸು
ಕೂಡಿರಲು ಬಾಳು ಸೊಗಸು
ಬದುಕು ಬೇವು-ಬೆಲ್ಲದಂತೆ
ಮತ್ತೆ ಬಂತು ಯುಗಾದಿ||
ಹೊಸ ವರುಷಕೆ ಹರುಷ ತುಂಬಿ
ನೇಸರನ ರಂಗು ಚೆಲ್ಲಿ|
ವಸುಂಧರೆಯ ಚೆಲುವನರಸಿ
ಮತ್ತೆ ಬಂತು ಯುಗಾದಿ||
ಮೇಲು ಕೀಳು ಭಾವ ತೊಡೆದು
ಸಮರಸದ ಬಾಳ ಬೆಸೆದು
ನೋವಿನಲ್ಲು ನಲಿವನರಸಿ
ಮತ್ತೆ ಬಂತು ಯುಗಾದಿ||
●●●●●●●●●●●●●●●
ರಚನೆ ಮತ್ತು ಗಾಯನ
*ಎಂ.ಜಿ.ಪರಮೇಶ್ ಮಡಬಲು*
ಕ್ಷೇತ್ರ ಸಂಪನ್ಮೂಲ ವ್ಯಕ್ತಿ, ಬಿ.ಆರ್.ಸಿ.ಕೇಂದ್ರ,
ಹೊಳೆನರಸೀಪುರ.
_ಸಂಗ್ರಹ_
ರೇಣುಕಾರಾಧ್ಯ
GLPS M KOPPALU ARSIKERE
No comments:
Post a Comment