Wednesday, 26 March 2025

ದಿನಕ್ಕೊಂದು ಶಿಶುಗೀತೆ

ದಿನಕ್ಕೊಂದು ಶಿಶುಗೀತೆ 

ಆಡಿಯೋ ಲಿಂಕ್

https://drive.google.com/file/d/1Wv3ZoO_AM8MZDa2pdBZ_b71OmtuCcHV6/view?usp=drivesdk

52. ಶ್ರವಣಕುಮಾರ 

ಹೇಳುವೆ ಕಥೆ ಹೇಳುವೆ 

ಕೇಳಿರಿ ಕಥೆ ಹೇಳುವೆ|

ತಂದೆ ,ತಾಯೆ ದೇವರೆಂದ 

ಕುವರನ ಕಥೆಯ ಹೇಳುವೆ॥


ಶಂತನು,ಜ್ಞಾನವಂತಿಯರ 

ಪ್ರೀತಿಯ ಪುತ್ರನಿವನು।

ಕಣ್ಣು ಕಾಣದ ಅಪ್ಪ,ಅಮ್ಮನ

ಸೇವೆಯೇ ಪೂಜೆ ಎಂದವನು ॥


ಪೋಷಕರ ತೀರ್ಥಯಾತ್ರೆಯ

ಇಂಗಿತವನು ಕೇಳಿದ ಮಗನು॥

ಈರ್ವರನ್ನು ಕರೆದೊಯ್ಯುಲು 

ಯೋಜನೆಯನು ರೂಪಿಸಿದನು॥


ಬಿದಿರಿನ ಕಂಬದ ತುದಿಗಳಿಗೆ 

ಬುಟ್ಟಿಗಳನು ಕಟ್ಟಿ।

ಬುಟ್ಟಿಯಲವರನು ಕೂರಿಸಿ 

ಹೊರಟೆಬಿಟ್ಟನು ಜಟ್ಟಿ॥


ಕಾವಡಿಯನ್ನು ಹೊತ್ತು ಶ್ರವಣನು

ಕಾಲ್ನಡಿಗೆಯಲಿ ಸಾಗಿದನು|

ದೇವರ ಪುಣ್ಯ ಕ್ಷೇತ್ರಗಳ 

ದರುಶನವನ್ನು ಮಾಡಿಸಿದನು ॥


ಕಾಡಿನಲ್ಲಿ ನಿಲ್ಲದ ಪಯಣ 

ಸೇವೆಯ ಯಜ್ಞ ಸಾಗಿರಲು।

ತಂದೆ ತಾಯಿಯು ಬಾಯಾರಿ 

ನೀರಡಿಕೆ ಎಂದಿರಲು॥


ನೀರು ತರಹೋದ ಕುವರ 

ದಶರಥನ ಬಾಣಕೆ ಬಲಿಯಾದರು।

ಇದನು ಕೇಳಿದ ತಂದೆತಾಯಿಯು 

ನೀರಡಿಕೆಯಲೆ ಪ್ರಾಣ ಬಿಟ್ಟರು ॥


ಜನುಮದಾತರ ಸೇವೆಯಗೈಯ್ದು

ನಾಡಿಗೆ ಮಾದರಿ ಈ ತರುಣ।

ತಂದೆ ತಾಯಿಯ ಪೂಜಿಸೆ ಸುಖವು 

ಎಂದು ಸಾರಿಹ ಈ ಶ್ರವಣ॥

ರಚನೆ ಮತ್ತು ಗಾಯನ

ವೇದಾ ಅಶೋಕ್ ಚಿಕ್ಕಮಗಳೂರು🖊️

ಸಂಗ್ರಹ

ರೇಣುಕಾರಾಧ್ಯ

GLPS M KOPPALU ARSIKERE 

No comments:

Post a Comment