*ದಿನಕ್ಕೊಂದು ಶಿಶುಗೀತೆ*
*28. ಅರ್ಧ ಚಂದ್ರ* "
ದೇವರ ಪೆಪ್ಪರಮೆಂಟೇನಮ್ಮ
ಗಗನದೊಳಲೆಯುವ ಚಂದಿರನು ?
ಎಷ್ಟೇ ತಿಂದರು ಖರ್ಚೆ ಆಗದ
ಬೆಳೆಯುವ ಪೆಪ್ಪರಮೆಂಟಮ್ಮಾ !''
"ದಿನದಿನ ನೋಡುವೆ, ದಿನವೂ ಕರಗುತ
ಎರಡೇ ವಾರದೊಳಳಿಯುವುದು !
ಮತ್ತದು ದಿನ ದಿನ ಹೆಚ್ಚುತ ಬಂದು
ಎರಡೇ ವಾರದಿ ಬೆಳೆಯುವುದು !
ಅಕ್ಷಯವಾಗಿಹ ಪೆಪ್ಪರಮೆಂಟದು
ನನಗೂ ದೊರಕುವುದೇನಮ್ಮಾ ?"
"ನೀನೂ ದೇವರ ಬಾಲಕನಾಗಲು
ನಿನಗೂ ಕೊಡುವನು ಕಂದಯ್ಯ !"
"ದೇವರ ಬಾಲಕನಾಗಲು ಒಲ್ಲೆ
ಆತನ ಮಾರಿಹೆ ನೀನಮ್ಮಾ !
ತಾಯಿಯನಗಲಿಸಿ ದೇವರ ಹಿಡಿಸುವ
ಪೆಪ್ಪರಮೆಂಟೂ ಬೇಡಮ್ಮಾ !'
......ಕುವೆಂಪು
_ಸಂಗ್ರಹ_
ರೇಣುಕಾರಾಧ್ಯ
GLPS M KOPPALU
ARSIKERE
*ಆಡಿಯೋ ಲಿಂಕ್*
https://drive.google.com/file/d/1s0fZZto99vUBJq7FT6nbovDBOCxlYreb/view?usp=drivesdk
_ಹಾಡಿದವರು_
ಜಾವೀದ್ ಬಾಷಾ
Crp yaraballi hiriyur tq chitradurga
No comments:
Post a Comment