Thursday, 20 February 2025

ದಿನಕ್ಕೊಂದು ಶಿಶುಗೀತೆ

 *ದಿನಕ್ಕೊಂದು ಶಿಶುಗೀತೆ*

*25. ರೆಕ್ಕೆ ಇದ್ದರೆ ಸಾಕೆ*

ರೆಕ್ಕೆ ಇದ್ದರೆ ಸಾಕೆ? ಹಕ್ಕಿಗೆ ಬೇಕು ಬಾನು
ಬಯಲಲಿ ತೇಲುತ ತಾನು  ಮ್ಯಾಲೆ ಹಾರೋಕೆ।।
ಕಾಲೊಂದಿದ್ದರೆ ಸಾಕೆ? ಚಿಗರೆಗೆ ಬೇಕು ಕಾನು
ಗಾಳಿಯ ಮೇಲೆ ತಾನು  ಜಿಗಿದು ಓಡೋಕೆ

ಹೂ ಒಂದಿದ್ದರೆ ಸಾಕೆ, ಬ್ಯಾಡವೆ ಗಾಳಿ?
ನೀವೆ ಹೇಳಿ ಕಂಪ ಬೀರೋಕೆ
ಮುಖ ಒಂದಿದ್ದರೆ ಸಾಕೆ, ದುಂಬಿಯ ತಾವ
ಬ್ಯಾಡವೆ ಹೂವ? ಜೇನ ಹೀರೋಕೆ

ನೀರೊಂದಿದ್ದರೆ ಸಾಕೆ, ಬ್ಯಾಡವೆ ಹಳ್ಳ
ಬಲ್ಲವ ಬಲ್ಲ ತೊರೆಯು ಹರಿಯೋಕೆ
ಮೋಡ ಇದ್ದರೆ  ಸಾಕೆ, ಬ್ಯಾಡವೆ ಭೂಮಿ?
ಹೇಳಿ ಸ್ವಾಮಿ ಮಳೆಯು ಸುರಿಯೋಕೆ

ಕಣ್ಣೊಂದಿದ್ದರೆ ಸಾಕೆ, ಬ್ಯಾಡವೆ ಮಂದೆ?
ಕಣ್ಣಿನ ಮುಂದೆ ನಿಮಗೆ ಕಾಣೋಕೆ
ಕೊರಳೊಂದಿದ್ದರೆ ಸಾಕೆ, ಬ್ಯಾಡವೆ ಹಾಡು?
ಎಲ್ಲರ ಜೋಡಿ ಕೂಡಿ ಹಾಡೋಕೆ

.....- ಎಚ್. ಎಸ್. ವೆಂಕಟೇಶಮೂರ್ತಿ

_ಸಂಗ್ರಹ_
ರೇಣುಕಾರಾಧ್ಯ
GLPS M KOPPALU
ARSIKERE

_ಹಾಡಿದವರು_
ನಟರಾಜ್ ಶಿಕ್ಷಕರು
ಸ.ಕಿ.ಪ್ರಾ.ಶಾಲೆ.ಜನ್ನಾವರ ಅರಸೀಕೆರೆ

ಆಡಿಯೋ ಲಿಂಕ್

https://drive.google.com/file/d/1nQa_y5jkfzWPl6VUBiYWmyWgShGH3emB/view?usp=drivesdk


No comments:

Post a Comment