*ದಿನಕ್ಕೊಂದು ಶಿಶುಗೀತೆ*
*18.ಪುಟ್ಟ ರೈತ!*
ನಾನು ಪುಟ್ಟ ಬಹಳ ದಿಟ್ಟ
ಕಾಯಿ ಹೊತ್ತು ತರುವೆ/
ಒಂದೊಂದೇ ತಂದು ಹಾಕಿ
ರಾಶಿ ಮಾಡಿ ಬಿಡುವೆ!//
ತುಂಟನಲ್ಲ ನೋಡಿ ನಾನು
ಕೆಲಸದಲ್ಲಿ 'ಇರುವೆ'!/
ಇರುವೆಗೂಡು ತುಳಿಯದಂತೆ
ದಾಟಿ ನಾನು ಬರುವೆ//
ಅಪ್ಪ ಹೋಗು ಅಟ್ಟ ಹತ್ತು
ಕಾಯಿ ನಾನೆ ಕೊಡುವೆ/
ಒಂದು ಎರಡು ಮೂರು ನಾಲ್ಕು
ಎಣಿಸಿ ಲೆಕ್ಕವಿಡುವೆ//
ಅಮ್ಮ ಹೋಗಿ ನೀರು ತಾರೆ
ದಾಹವಾಯ್ತು ನನಗೆ/
ಬೆವರ ಸುರಿಸಿ ದುಡಿವ ಪುಟ್ಟ
ರೈತ ನಾನೇ ಮನೆಗೆ//
ಅಜ್ಜಿ ತಾತ ನಿಮಗೆ ನಾನು
ಎಳನೀರನ್ನು ತರಲೆ?/
ನಗಲೇ ಬೇಡಿ ನನ್ನ ನೋಡಿ
ನಾನೇನಲ್ಲ 'ತರಲೆ'!//
_ರಚನೆ ಮತ್ತು ಹಾಡಿದವರು_
ಭಾಗ್ಯ ಮಂಜುನಾಥ್.
ಎ.ಮಲ್ಲಾಪುರ.
ಅರಸೀಕೆರೆ.ತಾ.
ಆಡಿಯೋ ಲಿಂಕ್
https://drive.google.com/file/d/1dIOmpptwd5qGuJMP6iWrXlkd9_jKjBmD/view?usp=drivesdk
_ಸಂಗ್ರಹ_
ರೇಣುಕಾರಾಧ್ಯ
GLPS M KOPPALU
ARSIKERE
No comments:
Post a Comment