*ದಿನಕ್ಕೊಂದು ಶಿಶುಗೀತೆ*
*2. ಗಾಳಿಪಟ*
ಅಣ್ಣನು ಮಾಡಿದ ಗಾಳಿಪಟ
ಬಣ್ಣದ ಹಾಳೆಯ ಗಾಳಿಪಟ
ನೀಲಿಯ ಬಾನಲಿ
ತೇಲುವ ಸುಂದರ ಬಾಲಂಗೋಸಿಯ
ನನ್ನ ಪಟ
ಬಿದಿರಿನ ಕಡ್ಡಿಯ ಗಾಳಿಪಟ ಬೆದರದ ಬೆಟ್ಟದ ಗಾಳಿಪಟ
ದಾರವ ಜಗ್ಗಿ
ದೂರದಿ ಬಗ್ಗಿ
ತಾರೆಯ ನಗಿಸುವ
ನನ್ನ ಪಟ
........ಉಳುವೀಶ
ಆಡಿಯೋ ಲಿಂಕ್
https://drive.google.com/file/d/1K9vxZA6tfR_bgs0Vi_iV6nOpNtzNmJ4p/view?usp=drivesdk
ಸಂಗ್ರಹ
ರೇಣುಕಾರಾಧ್ಯ
ಎಂ.ಕೊಪ್ಪಲು,ಅರಸೀಕೆರೆ
No comments:
Post a Comment