*ದಿನಕ್ಕೊಂದು ಶಿಶುಗೀತೆ*
*1. ನಾಯಿಮರಿ ನಾಯಿಮರಿ*
ನಾಯಿಮರಿ ನಾಯಿಮರಿ ತಿಂಡಿ ಬೇಕೆ
ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು
ನಾಯಿಮರಿ ನಿನಗೆ ತಿಂಡಿ ಏಕೆ ಬೇಕು
ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು
ನಾಯಿಮರಿ ಕಳ್ಳ ಬಂದರೇನು ಮಾಡುವೆ
ಕುಂಯಿ ಕುಂಯಿ ಬೌ ಎಂದು ಕೂಗಿ ಪಾಡುವೆ
ಜಾಣಮರಿ ತಾಳು ಹೋಗಿ ತಿಂಡಿ ತರುವೆನು
ತಾ ನಿನ್ನ ಮನೆಯ ನಾನು ಕಾಯುತಿರುವೆನು
ಜಿ. ಪಿ. ರಾಜರತ್ನಂ
ಆಡಿಯೋ ಲಿಂಕ್
https://drive.google.com/file/d/1KAPh7lJgMl1W3hWcHh4Jfe45br2SoTTV/view?usp=drivesdk
ಸಂಗ್ರಹ
ರೇಣುಕಾರಾಧ್ಯ
ಎಂ.ಕೊಪ್ಪಲು ಅರಸೀಕೆರೆ
ಇದೆ ತರಹದ ಹಾಡುಗಳು ಇದ್ದರೆ ಶೇರ್ ಮಾಡಿ sir
ReplyDelete