Sunday, 12 June 2022

ವಿದ್ಯಾ ಪ್ರವೇಶ ದಿನ -1

 *ವಿದ್ಯಾಪ್ರವೇಶ ದಿನ-1* 


✒️🚁🎮🎨🎲🧮📏🔍


*ಅವಧಿ -1* (40ನಿ)

*ಶುಭಾಶಯ ವಿನಿಮಯ* 

(ಮಕ್ಕಳೊಂದಿಗೆ ಶಿಕ್ಷಕರ

 ಬೆಳಗಿನ ಕುಶಲೋಪರಿ)  


ಸಾಮರ್ಥ್ಯ: ಶುಭಾಶಯಗಳು ಮತ್ತು ಸ್ವಾಗತದಂತಹ ಸಾಮಾಜಿಕ ನಡವಳಿಕೆಯ ಅಭಿವೃದ್ಧಿ. ಚಟುವಟಿಕೆಯ ಉದ್ದೇಶ: 

ಆತ್ಮೀಯತೆ ಭಾವನೆಯನ್ನು ಮೂಡಿಸುವುದು. 

ಸಾಮಗ್ರಿ: ಬಲೂನ್/ಹೂವು/ಚಾಕಲೇಟ್

ವಿಧಾನ:

೧. ಮಕ್ಕಳು ಚಪ್ಪಾಳೆ ತಟ್ಟುತ್ತಾ ತರಗತಿಯನ್ನು ಪ್ರವೇಶಿಸಲಿ.

೨. ಮಗು ತರಗತಿಯನ್ನು ಪ್ರವೇಶಿಸುವಾಗ ಶಿಕ್ಷಕರು ಮಗುವಿಗೆ “ನಮಸ್ತೆ, ಗುಡ್ ಮಾರ್ನಿಂಗ್” ಎಂದು ಗ್ರೀಟ್ 

ಮಾಡುವುದು.

೩. ನಂತರ ಪ್ರತಿ ಮಗುವಿನ ಹೆಸರನ್ನು ಕೇಳಿ, ಅವನ/ಅವಳ ಹೆಸರನ್ನು ಹೇಳಿ ಹೂ/ಬಲೂನ್/ಚಾಕಲೇಟ್ ನೀಡಿ

ಸ್ವಾಗತಿಸಿ.

ಉದಾ : “ಗೀತಾ, ನಿನಗೆ ಸ್ವಾಗತ, wel come” ಎಂದು ಹೇಳಿ ಸ್ವಾಗತಿಸುವುದು.


*ಮಾತು ಕತೆ* 

( ಶಿಕ್ಷಕರು - ಮಕ್ಕಳೊಂದಿಗಿನ ಬೆಳಗಿನ ಸಾಮೂಹಿಕ ಚಟುವಟಿಕೆ)

 ಚಟುವಟಿಕೆ-೧: ನನ್ನ ಕುರಿತು (ಗುರಿ-೧)

ಸಾಮರ್ಥ್ಯ: ಸ್ವಯಂ ಪ್ರಜ್ಞೆ, ಧನಾತ್ಮಕ ವೈಯುಕ್ತಿಕ ಪರಿಕಲ್ಪನೆಗಳ ಅಭಿವೃದ್ಧಿ, ಆಲಿಸುವುದು ಮತ್ತು ಮಾತನಾಡುವುದು.

ಉದ್ದೇಶ: ತನ್ನ ಕುರಿತು ಮಾತನಾಡಲು ಪ್ರೇರೇಪಿಸುವುದು.

ಸಾಮಗ್ರಿ:

ವಿಧಾನ : ಮಕ್ಕಳನ್ನು ವೃತ್ತಾಕಾರದಲ್ಲಿ ನಿಲ್ಲಿಸಿ..

೨. “ಹಲೋ, ಮಕ್ಕಳೇ ಗುಡ್ ಮಾರ್ನಿಂಗ್” (ನಿಮ್ಮ ಕೈಬೀಸಿ) ಎಂದು ಹೇಳುವ ಮೂಲಕ ಅವರನ್ನು ಸ್ವಾಗತಿಸಿ ಮತ್ತು

ಮೂರು ಬಾರಿ ಚಪ್ಪಾಳೆ ತಟ್ಟಿ.

೩. ಹಾಯ್ ಟೀಚರ್, ಗುಡ್ ಮಾರ್ನಿಂಗ್” (ಕೈ ಬೀಸುವ ಮೂಲಕ) ಎಂದು ಹೇಳುವ ಮೂಲಕ ಪ್ರತಿಕ್ರಿಯಿಸಲು

ಮಕ್ಕಳಿಗೆ ತಿಳಿಸಿ ಮತ್ತು ಮೂರು ಬಾರಿ ಚಪ್ಪಾಳೆ ತಟ್ಟಲು ತಿಳಿಸಿ..

೪. ಅವರ ಬಗ್ಗೆ ಮಾತನಾಡಲು ಪ್ರೋತ್ಸಾಹಿಸಿ.

(ಉದಾ : “ಮಹೇಶ, ಬೆಳಿಗ್ಗೆ ಏನು ತಿಂಡಿ ತಿಂದು ಬಂದೆ?”, “ಸಲೀನಾ, ನಿನಗೆ ಯಾವ ತಿಂಡಿ ಇಷ್ಟ?)

* ೨ನೇ ತರಗತಿಯ ಮಕ್ಕಳಿಗೆ ಅವರ, ಪೋಷಕರು ಹಾಗೂ ಒಡಹುಟ್ಟಿದವರ ಹೆಸರುಗಳನ್ನು ಹೇಳಲು ಪ್ರೋತ್ಸಾಹಿಸಬಹುದು; 

ಮೂರನೇ ತರಗತಿಯವರು ತಮ್ಮ ಕುಟುಂಬದ ಬಗ್ಗೆ ಮಾತನಾಡಬಹುದು.

---–------------------------------

 

ಅವಧಿ-2 (40ನಿ)

*ನನ್ನ ಸಮಯ* 

ತರಗತಿಯ ಎಲ್ಲಾ ಕಲಿಕಾಮೂಲೆಗಳಿಗೆ ಶಿಕ್ಷಕರು ಮಕ್ಕಳನ್ನು ಕರೆದೊಯ್ದು, ಪ್ರತಿ ಮೂಲೆಯಲ್ಲಿನ ಸಾಮಗ್ರಿಗಳು ಹಾಗೂ 

ಅವುಗಳ ಬಳಕೆಯ ಕುರಿತು ಮಾರ್ಗದರ್ಶನ ಮಾಡುತ್ತಾರೆ ಹಾಗೂ ಕೆಲವು ಮಾದರಿ ಚಟುವಟಿಕೆಗಳನ್ನು ಪರಿಚಯಿಸುತ್ತಾರೆ. 

ಮಕ್ಕಳಿಗೆ ಪ್ರಶ್ನೆಗಳನ್ನು ಕೇಳುತ್ತ ಅವರ ಅರ್ಥೈಸಿಕೊಳ್ಳುವಿಕೆಯನ್ನು ಖಾತ್ರಿಪಡಿಸಿಕೊಳ್ಳುವುದು.



----------------------------–----–-

ಅವಧಿ-3(40ನಿ)

*ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ* (ಶಿಕ್ಷಕರಿಂದ 

ನಿರ್ದೇಶಿತ ಚಟುವಟಿಕೆ)

 ಸಾಮರ್ಥ್ಯ : ದೃಷ್ಟಿ, ಜ್ಞಾನ, ಸ್ಮರಣೆ, ಪರಿಸರದ ಅರಿವು.

ಚಟುವಟಿಕೆ : ನೋಡು ಮತ್ತು ಹೇಳು (ಗುರಿ. ೩)

ಉದ್ದೇಶ : ನೋಡಿದ ವಸ್ತುಗಳನ್ನು ನಿಗದಿತ ಸಮಯದಲ್ಲಿ ಸ್ಮರಿಸಿ ಹೇಳುವ ಕೌಶಲವನ್ನು ಬೆಳೆಸುವುದು.

ಅಗತ್ಯ ಸಾಮಗ್ರಿಗಳು : ತರಗತಿ ಅಥವಾ ಅಡುಗೆಕೋಣೆಯಲ್ಲಿ ಲಭ್ಯವಿರುವ ಹಣ್ಣುಗಳು, ತರಕಾರಿಗಳು, ಪಾತ್ರೆಗಳು ಹಾಗೂ 

ಇತರೆ ಸಾಮಾನ್ಯ ವಸ್ತುಗಳು.

ವಿಧಾನ : ಮಕ್ಕಳನ್ನು ಅರ್ಧವೃತ್ತಾಕಾರದಲ್ಲಿ ಕೂರಿಸುವುದು. ೮ ರಿಂದ ೧೦ ವಸ್ತುಗಳನ್ನು ಕೆಲವು ನಿಮಿಷಗಳ ಕಾಲ 

ಮಕ್ಕಳಿಗೆ ತೋರಿಸುವುದು. ನಂತರ ವಸ್ತುಗಳನ್ನು ಮುಚ್ಚುವುದು. ಈಗ ಮಕ್ಕಳು ನೋಡಿದ್ದನ್ನು ಸ್ಮರಿಸಿ ಹೇಳಲು ಅವಕಾಶ 

ನೀಡುವುದು. ನಂತರ ಆ ವಸ್ತುಗಳ ಚಿತ್ರಗಳನ್ನು ಪ್ರದರ್ಶಿಸಿ ಅವುಗಳಲ್ಲಿ ಹೋಲಿಕೆ ಇರುವ ಮತ್ತು ಇಲ್ಲದಿರುವ ಹಾಗೂ 

ಪರಸ್ಪರ ಸಂಬ0ಧ ಇರುವ ವಸ್ತುಗಳ ಚಿತ್ರಗಳನ್ನು ವಿಂಗಡಿಸಲು ತಿಳಿಸುವುದು. ಈ ಕ್ರಿಯೆಯು ಯೋಜಿತವಾಗಿ ಮತ್ತು 

ನಿಧಾನವಾಗಿ ಸಾಗಬೇಕು.

ತರಗತಿ-೨

ತಾನು ನೋಡಿದ ವಸ್ತುಗಳಲ್ಲಿ ಪರಸ್ಪರ ಸಂಬಂಧ ಮತ್ತು ಹೋಲಿಕೆ ಇರುವ ವಸ್ತುಗಳನ್ನು ವಿಂಗಡಿಸುವುದು ಮತ್ತು ಪಟ್ಟಿ 

ಮಾಡಲು ಹೇಳುವುದು.

ತರಗತಿ-೩

ಈ ಚಟುವಟಿಕೆಗೆ ಸಂಬ0ಧಿಸಿದ ಪ್ರಶ್ನೆಗಳನ್ನು ಕೇಳುವುದು.

ಉದಾ:- ೧. ವಸ್ತುಗಳನ್ನು ಯಾವ ಆಧಾರದ ಮೇಲೆ ವಿಂಗಡಿಸಿದೆ?

೨. ಕೆಂಪು ಬಣ್ಣದ ತರಕಾರಿಗಳ ಹೆಸರನ್ನು ಹೇಳು?

* ಬಳಸಬೇಕಾದ ಅಭ್ಯಾಸ ಹಾಳೆಗಳು: IL-೧ ( ೦೧, ೦೨,೦೩ನೇ ತರಗತಿ)

----------------------–---------


ಅವಧಿ -4 (40ನಿ)

*ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳ ಚಟುವಟಿಕೆ)

 ಸಾಮರ್ಥ್ಯ : ಸೂಕ್ಷö್ಮ ಚಲನಾ ಕೌಶಲಗಳ ಅಭಿವೃದ್ಧಿ ಮತ್ತು ಸೃಜನಶೀಲತೆಯ ವಿಕಾಸ, ಹಂಚಿಕೊಳ್ಳುವುದು.

ಚಟುವಟಿಕೆ : ಒತ್ತು ಚಿತ್ರರಚನೆ (ಗುರಿ - ೧)

ಉದ್ದೇಶಗಳು :

ಸೂಕ್ಮ ಸ್ನಾಯುಗಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ.

ಏಕಾಗ್ರತೆಯೊಂದಿಗೆ ಬಣ್ಣಗಳ ಪರಿಚಯವಾಗುತ್ತದೆ.

ಹಂಚಿಕೊಳ್ಳುವ ಮತ್ತು ಹೊಂದಾಣಿಕೆ ಮಾಡಿಕೊಳ್ಳುವ ಮನೋಭಾವನೆ ಬೆಳೆಯುತ್ತದೆ.

ಸಾಮಗ್ರಿಗಳು : ಬಣ್ಣ ಮತ್ತು ಪೇಪರ್

ವಿಧಾನ : ಎರಡು ಮಕ್ಕಳಿಗೆ ಒಂದು ಬಟ್ಟಲಿನಂತೆ ಬಣ್ಣ ಹಾಗೂ ಹಾಳೆಗಳನ್ನು ಕೊಡುವುದು. ಪ್ರತಿ ಮಗುವಿಗೆ ತನ್ನ ಆಯ್ಕೆಯ 

ಚಿತ್ರವನ್ನು ಬರೆಯಲು ಹೇಳುವುದು ನಂತರ ತನ್ನ ತೋರು ಬೆರಳುಗಳ ತುದಿ ಅಥವಾ ಹೆಬ್ಬೆರಳನ್ನು ಬಣ್ಣದಲ್ಲಿ ಅದ್ದಿ ಕಾಗದದ 

ಮೇಲೆ ಒತ್ತು ಚಿತ್ರ ರಚಿಸಲು ಹೇಳುವುದು. ಇದೇ ರೀತಿ ಅಕ್ಷರಗಳು ಮತ್ತು ಅಂಕಿಗಳಿಗೂ ಬೆರಳನ್ನು ಬಳಸಿ ಬಣ್ಣ ಹಚ್ಚುವುದು.

ಮಾರ್ಪಾಡುಗಳು : ಮಕ್ಕಳು ಎಲೆಗಳನ್ನು ಬಣ್ಣದಲ್ಲಿ ಅದ್ದಿ ಕಾಗದದ ಮೇಲೆ ಒತ್ತು ಚಿತ್ರಗಳನ್ನು ಮಾಡುವುದು. ಇದೇ ರೀತಿ 

ಪಾದ ಮತ್ತು ಹಸ್ತಗಳ ಒತ್ತು ಚಿತ್ರಗಳನ್ನು ರಚಿಸಲು ಹೇಳಬಹುದು.

ವಿವರ : ೨ ಮತ್ತು ೩ನೇ ತರಗತಿಗೆ ಅವರ ಕಲ್ಪನೆಗೆ ತಕ್ಕಂತೆ ಚಿತ್ರ ಬಿಡಿಸಲು ಅವಕಾಶ ನೀಡುವುದು.

-------------------------------


ಅವಧಿ -5(60ನಿ)

 *ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ* 


 *ಆಲಿಸುವುದು ಮತ್ತುಮಾತನಾಡುವುದು* 

ಸಾಮರ್ಥ್ಯ: ನೆನಪಿಸಿಕೊಳ್ಳುವುದು, ಕ್ರಮಾನುಗತ ಆಲೋಚನೆ, ಪದ ಸಂಪತ್ತಿನ ಅಭಿವೃದ್ಧಿ, ಅನುಭವ ಹಂಚಿಕೆ

ಚಟುವಟಿಕೆ : ಅನುಭವ ಹಂಚಿಕೆ, ( ಗುರಿ ೨) ಇಅಐ-೧

ಉದ್ದೇಶಗಳು:

* ಮಗು ತಾನು ತಿಳಿದುಕೊಂಡಿದ್ದನ್ನು ನೆನಪಿಸಿಕೊಳ್ಳುವುದು,

* ವಿಷಯಗಳನ್ನು ಕ್ರಮಾನುಗತವಾಗಿ ಆಲೋಚಿಸಿ ಜೋಡಿಸುವುದು. * ತಮ್ಮ ಮಾತುಗಳಲ್ಲಿ ಹೊಸ ಪದಗಳು 

ಸೇರಿಕೊಳ್ಳುತ್ತಿರುವುದನ್ನು ಗಮನಿಸುವುದು.

ಅಗತ್ಯ ಸಾಮಗ್ರಿಗಳು - ಇಲ್ಲ

ವಿಧಾನ : ಮಕ್ಕಳನ್ನು ವೃತ್ತಾಕಾರದಲ್ಲಿ ಕಣ್ಣುಮುಚ್ಚಿ ಕೂರುವಂತೆ ಹೇಳುವುದು. ಹಿಂದಿನ ದಿನ ಅಥವಾ ವಾರದ ಕೊನೆಯ 

ದಿನವನ್ನು ಹೇಗೆ ಕಳೆದರು ಎಂದು ಯೋಚಿಸಲು ತಿಳಿಸಿ, ಅವಕಾಶ ನೀಡುವುದು. ನಂತರ ಸರಳ ಪ್ರಶ್ನೆಗಳನ್ನು ಕೇಳಿ ಉತ್ತರ 

ಪಡೆಯುವುದು.

* ನೀನು ಈ ದಿನ ಎಷ್ಟು ಗಂಟೆಗೆ ಎದ್ದೆ?

* ಶಾಲೆಗೆ ಬರುವಾಗ ನಿನ್ನ ಬಳಿ ಏನಿತ್ತು?

* ದಾರಿಯಲ್ಲಿ ಏನೇನು ನೋಡಿದೆ?

* ನಿನ್ನೆಯ ದಿನವನ್ನು ನೀನು ಹೇಗೆ ಕಳೆದೆ?

* ನಿನ್ನೆ ಏನಾದರೂ ವಿಶೇಷ ಘಟನೆ ನಡೆದಿದ್ರೆ ನಮ್ಮ ಬಳಿ ಹಂಚಿಕೊಳ್ಳುವೆಯಾ?

* ನಿನ್ನೆ ನೀನು ಗೆಳೆಯರ ಜೊತೆ ಯಾವ ಆಟ ಆಡಿದೆ?

ತರಗತಿವಾರು ವಿವರ : ೨ನೇ ತರಗತಿಯ ಮಕ್ಕಳಿಗೆ ಸರಳ ಪ್ರಶ್ನೆಗಳನ್ನು ಕೇಳಿ ಅವರ ಅನುಭವಗಳನ್ನು ವಿಸ್ತಾರಗೊಳಿಸಲು 

ಅವಕಾಶ ಕಲ್ಪಿಸುವುದು. ೩ನೇ ತರಗತಿಯ ಮಕ್ಕಳಿಗೆ ಮುಕ್ತ ಅವಕಾಶ ನೀಡಿ ತಮ್ಮ ಅನುಭವಗಳನ್ನು ಕ್ರಮಬದ್ಧವಾಗಿ ಜೋಡಿಸಿ 

ಹೇಳಲು ತಿಳಿಸುವುದು. ಹಿಂದಿನ ಇತರ ಅನುಭವಗಳನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸುವುದು.


 

*ಅರ್ಥಗ್ರಹಿಕೆಯೊಂದಿಗಿನ ಓದು*

 

ಸಾಮರ್ಥ್ಯ: ಮುದ್ರಿತ ಪಠ್ಯದ ಅರಿವು, ಪದ ಗುರುತಿಸುವಿಕೆ, ಅರ್ಥಗ್ರಹಿಕೆ, ಪದ ಸಂಪತ್ತಿನ ಬೆಳವಣಿಗೆ ಮತ್ತು ಪರಿಸರದ 

ಅರಿವು.

ಚಟುವಟಿಕೆ :

೧. ಚಿತ್ರಸಂಪುಟ (ಗುರಿ-೨) ವಿಷಯ:’ಉದ್ಯಾನದಲ್ಲಿ ನೀವು ನೋಡಿರುವ ವಸ್ತುಗಳು/ವಿಷಯಗಳು’

ಉದ್ದೇಶಗಳು:

ಚಿತ್ರ ಓದುವುದು ಮತ್ತು ಚರ್ಚಿಸಿ ಅರ್ಥಮಾಡಿಕೊಳ್ಳುವುದು.

ಸಂತೋಷ ಮನೋರಂಜನೆ ಹಾಗೂ ಇತರೆ ಉದ್ದೇಶಗಳಿಗಾಗಿ ಸ್ವತಂತ್ರವಾಗಿ ಓದುವುದು.

ಅಗತ್ಯ ಸಾಮಗ್ರಿಗಳು: ಉದ್ಯಾನವನಕ್ಕೆ ಸಂಬ0ಧಿಸಿದ ಚಿತ್ರಗಳು, ಉದ್ಯಾನವನದಲ್ಲಿ ನೋಡಬಹುದಾದ ವಿಷಯವಸ್ತುಗಳ 

ಕುರಿತ ಕಥನ/ ಕವಿತೆ/ ಹಾಡುಗಳ ಪಟ್ಟಿ.

ವಿಧಾನ : ಮಕ್ಕಳಿಗೆ ಪರಿಚಿತವಿರುವ ಹಾಡು ಮತ್ತು ಶಿಶುಗೀತೆಗಳಿಗೆ ಸಂಬAಧಿಸಿದ ಚಿತ್ರಗಳನ್ನು ಗುರುತಿಸುವುದು.

* ಹಾಡು/ ಕಥೆಯಲ್ಲಿರುವ ವಿಶೇಷ ಪದಗಳನ್ನು ಗುರುತಿಸಿ ಹೆಸರಿಸುವುದು.

* ಹಾಡು/ ಕಥೆಯಲ್ಲಿ ಬರುವ ಮುಖ್ಯ ಪಾತ್ರಗಳನ್ನು ಗುರುತಿಸುವುದು ಮತ್ತು ಪುನರಾವರ್ತಿತ ಪದ/ ಸಾಲುಗಳನ್ನು 

ಹೇಳುವುದು/ಬರೆಯುವುದು.

* ಮಾದರಿ ಚಿತ್ರಗಳನ್ನು (ಉದ್ಯಾನವನಕ್ಕೆ ಸಂಬ0ಧಿಸಿದ) ಓದುವುದು ಮತ್ತು ಅದರ ಕುರಿತಾಗಿ ಪ್ರತಿಕ್ರಿಯಿಸುತ್ತಾ ಶಿಕ್ಷಕರೊಂದಿಗೆ 

ಚರ್ಚಿಸುವರು.

ವೈಯಕ್ತಿಕ ಚಿತ್ರ ಸಂಪುಟ.- ಕಥೆ ಅಥವಾ ಹಾಡುಗಳಲ್ಲಿ ಬರುವ ವಸ್ತುಗಳು ಅಥವಾ ವಿಶೇಷ ಪದಗಳನ್ನು ಪ್ರತಿ 

ಮಗು ಸನ್ನಿವೇಶ ಚಿತ್ರಗಳನ್ನು ಓದಿ ಗ್ರಹಿಸಿ ವೈಯಕ್ತಿಕವಾಗಿ ಚರ್ಚಿಸಲು ಅನುವು ಮಾಡಿಕೊಡುವುದು. ಆ ಚಿತ್ರ ಓದಿನ 

ಗ್ರಹಿಕೆಗಳನ್ನು ಅಭಿವ್ಯಕ್ತಿಸುವುದನ್ನು ಖಾತ್ರಿಮಾಡಿಕೊಳ್ಳುವುದು.

ಉದಾ : ಹೂಗಳು, ಮರಗಳು, ಪಕ್ಷಿಗಳು ಮಕ್ಕಳ ಆಟಿಕೆಯ ಸಾಮಗ್ರಿಗಳು, ಕುಳಿತುಕೊಳ್ಳುವ ಆಸನಗಳು ಇತ್ಯಾದಿ. ಚಿತ್ರಗಳು/ 

ವಿಡಿಯೋಗಳು/ ಕ್ಷೇತ್ರಭೇಟಿ.

ಶಿಕ್ಷಕರು ಸುಗಮಕಾರಿಕೆಯಲ್ಲಿ ಬಳಸಬಹುದಾದ ಬೆಳವಣಿಗೆಯ ಪ್ರಶ್ನೆಗಳು:

ಉದ್ಯಾನವನವನ್ನು ನೋಡಿರುವಿರಾ?

ನೀವು ಉದ್ಯಾನವನಗಳಲ್ಲಿ ಏನೇನು ನೋಡಿರುವಿರಿ?

ನಿಮ್ಮಊರಿನಲ್ಲಿ ಇರುವ ಉದ್ಯಾನವನಗಳಲ್ಲಿ ಯಾವ ಯಾವ ರೀತಿಯ ವಸ್ತು ಮತ್ತು ವಿಷಯಗಳನ್ನು ಗಮನಿಸಿದ್ದೀರಿ?

ನಿಮ್ಮಇಷ್ಟದ ಉದ್ಯಾನವನದಲ್ಲಿ ಏನೇನು ಇದ್ದರೆ ನಿನಗೆ ಖುಷಿಯಾಗುತ್ತದೆ?

ನಿಮ್ಮ ಶಾಲೆಯಲ್ಲಿ ಸುಂದರ ಉದ್ಯಾನವನ ನಿರ್ಮಾಣ ಮಾಡುವುದಾದರೆ ನೀನು ಏನೇನು ಜವಾಬ್ದಾರಿ ತೆಗೆದುಕೊಳ್ಳುವೆ?

ಉದ್ಯಾನವನ ನಿರ್ಮಾಣ ಮಾಡುವುದದಕ್ಕೆ ಯಾವೆಲ್ಲ ಸಾಮಗ್ರಿಗಳ ಅವಶ್ಯಕತೆ ಇದೆ? ಇತ್ಯಾದಿ

ಹೀಗೆ ಶಿಕ್ಷಕರು ತಮ್ಮ ಸ್ಥಳೀಯ ಸಂದರ್ಭಕ್ಕನುಗುಣವಾದ ಪ್ರಶ್ನಾವಳಿಗಳನ್ನು ರೂಪಿಸಿಕೊಂಡು ತರಗತಿಯನ್ನು ಅನುಕೂಲಿಸುವುದು.

ಉದ್ಯಾನವನಕ್ಕೆ ಸಂಬAಧಿಸಿದ ಚಿತ್ರಗಳನ್ನು/ ಚಿತ್ರಪಟಗಳನ್ನು/ ವಿಡಿಯೋ/ ಹಾಡು/ಕಥೆಗಳನ್ನೂ ಬಳಸಿ ಅಥವಾ ಪ್ರದರ್ಶಿಸಿ 

ಮಕ್ಕಳೊಂದಿಗೆ ಚರ್ಚಿಸಬಹುದು.

ಸದರಿ ಸಂದರ್ಭದಲ್ಲಿ ಶಿಕ್ಷಕರು ಮಕ್ಕಳನ್ನು ಮುಕ್ತವಾಗಿ ಮಾತನಾಡಲು, ಪ್ರಶ್ನೆಗಳನ್ನು ಕೇಳಲು ಹಾಗೂ ತಮ್ಮ ಸಹಜ 

ಭಾಷೆಯಲ್ಲಿ ಚರ್ಚಿಸಲು ಅವಕಾಶಗಳನ್ನು ಮಾಡಿಕೊಡುವುದು.

ಶಿಕ್ಷಕರು ೨ ಮತ್ತು ೩ನೇ ತರಗತಿಯ ಮಕ್ಕಳು ೧ನೇ ತರಗತಿಯ ಮಕ್ಕಳೊಂದಿಗೆ ಪರಸ್ಪರ ಚರ್ಚಿಸಲು ಸಹಾಯ ಒದಗಿಸಲು 

ಸೂಚಿಸುವುದು ಮತ್ತು ವಿಷಯದ ವಿಸ್ತಾರವನ್ನು ಚರ್ಚಿಸುವಾಗ ಎಲ್ಲಾ ಮಕ್ಕಳೂ ಅಭಿವ್ಯಕ್ತಿಸುವುದನ್ನು ಖಾತ್ರಿಪಡಿಕೊಳ್ಳುವುದು. 

ಜೊತೆಗೆ ೨ನೇ ಮತ್ತು ೩ನೇ ತರಗತಿಯ ಮಕ್ಕಳಿಗೂ ಅವರ ವಯೋಮಾನಕ್ಕನುಗುಣವಾದ ವಿಷಯ ವ್ಯಾಪ್ತಿಯ ಉನ್ನತ 

ಚಿಂತನೆಗಳು ಚರ್ಚೆಯಲ್ಲಿ ಬರುವಂತೆ ತರಗತಿಯನ್ನು ಅನುಕೂಲಿಸುವುದು.

(ಸದರಿ ಚಟುವಟಿಕೆಯ ಮುಂದುವರೆದ ಭಾಗವು ೫ನೇ ದಿನದಲ್ಲಿ ಮುಂದುವರೆಯುವುದು)

*ಉದ್ದೇಶಿತ ಬರಹ*  

ಸಾಮರ್ಥ್ಯ: ಬರವಣಿಗೆಯ ಆರಂಭಿಕ ಕೌಶಲಗಳನ್ನು ಅಭ್ಯಾಸ ಮಾಡಿಸುವುದು, ಬರವಣಿಗೆಯೆಡೆಗೆ ಮಕ್ಕಳನ್ನು 

ಸೆಳೆಯುವುದು.

ಚಟುವಟಿಕೆ: ತೋಚಿದಂತೆ ಗೀಚು (ಗುರಿ – ೨) ಇಅW-೧

ಉದ್ದೇಶಗಳು:

* ಬರವಣಿಗೆಯ ಕೌಶಲಗಳನ್ನು ರೂಢಿಸಿಕೊಳ್ಳುವುದು.

* ಸೂಕ್ಷö್ಮ ಸ್ನಾಯು ಕೌಶಲಗಳನ್ನು ಅಭಿವೃದ್ಧಿಗೊಳಿಸುವುದು.

ಅಗತ್ಯ ಸಾಮಗ್ರಿ: ವಾಲ್‌ಸ್ಲೇಟ್, ಸೀಮೆ ಸುಣ್ಣ

ವಿಧಾನ :

* ವಾಲ್‌ಸ್ಲೇಟ್ ಮೇಲೆ ಮಕ್ಕಳು ಇಷ್ಟ ಬಂದ0ತೆ ಗೀಚಲು/ ಬರೆಯಲು ತಿಳಿಸುವುದು.

* ಎಲ್ಲ ಮಕ್ಕಳ ಬರೆಹ/ಚಿತ್ರ ರಚನೆಯನ್ನು ವೀಕ್ಷಿಸಿ ಪ್ರೋತ್ಸಾಹಿಸುವುದು.

* ಚಿತ್ರಗಳನ್ನು ಬರೆಯಲು ಪ್ರೇರೇಪಿಸುವುದು.

ತರಗತಿವಾರು ವಿವರ: ೨ ಮತ್ತು ೩ನೇ ತರಗತಿ ಮಕ್ಕಳಿಗೆ ವಾಲ್‌ಸ್ಲೇಟ್ ಮೇಲೆ ಇಷ್ಟ ಬಂದ0ತೆ ಚಿತ್ರಿಸಲು/ಬರೆಯಲು 

ತಿಳಿಸುವುದು.

------------------------------------


 ಅವಧಿ - 6(40ನಿ)

*ಹೊರಾಂಗಣ ಆಟಗಳು*


ಚಟುವಟಿಕೆ : ಹೊರಾಂಗಣ ಆಟದ ಸ್ಥಳ ಮತ್ತು ವಸ್ತುಗಳನ್ನು ತಿಳಿದುಕೊಳ್ಳುವುದು. (ಗುರಿ-೧)

ಸಾಮರ್ಥ್ಯ: ಸ್ಥೂಲ ಸ್ನಾಯು ಚಲನ ಕೌಶಲ ಬೆಳವಣಿಗೆ, ನಿರ್ಧಾರ ತೆಗೆದುಕೊಳ್ಳುವಿಕೆ.

ಸಾಮಗ್ರಿಗಳು : ಸ್ಕಿಪ್ಪಿಂಗ್ ರೋಪ್ಸ್, ಚೆಂಡುಗಳು, ಬ್ಯಾಟ್ಸ್.

ವಿಧಾನ :

• ಮಕ್ಕಳಿಗೆ ಹೊರಾಂಗಣ ಆಟದ ಸ್ಥಳ ಮತ್ತು ಸಂಬ0ಧಿತ ವಸ್ತುಗಳನ್ನು ಪರಿಚಯಿಸುವುದು.

• ಈ ಕೆಳಗಿನ ಸುರಕ್ಷತಾ ನಿಯಮಗಳನ್ನು ತಿಳಿಸುವುದು.

 ಆಟದ ಮೈದಾನದ ಸಲಕರಣೆಗಳ ಬಳಿ ಇರುವಾಗ ಎಂದಿಗೂ ಓಡಬೇಡಿ ಅಥವಾ ಇತರರನ್ನು ತಳ್ಳಬೇಡಿ ಮತ್ತು 

ಎಳೆಯಬೇಡಿ.

 ನೀವು ಇತರರೊಂದಿಗೆ ಚೆಂಡನ್ನು ಹಂಚಿಕೊ0ಡಾಗ, ನಿಮ್ಮ ಸರದಿಗೆ ಕಾಯಬೇಕು ಮತ್ತು ಸುರಕ್ಷಿತವಾಗಿ ಆಡಲು 

ಮರೆಯದಿರಿ.

(ಎರಡನೇ ಹಾಗೂ ಮೂರನೇ ತರಗತಿಯ ಮಕ್ಕಳಿಗೂ ಈ ನಿಯಮಗಳನ್ನು ತಿಳಿಸುವುದು.)

 ------------------------------

ಅವಧಿ - 7(40ನಿ)

*ಕಥಾ ಸಮಯ*


ಶೀರ್ಷಿಕೆ : ಸಿಂಹ ಮತ್ತು ಇಲಿ

ಸಾಮಗ್ರಿಗಳು : ಕಥೆಯ ಸಾಹಿತ್ಯ

ಉದ್ದೇಶಗಳು :

ಆಲಿಸುವ ಸಾಮರ್ಥ್ಯ ಬೆಳೆಸುವುದು.

ಊಹಿಸುವ ಕೌಶಲವನ್ನು ಹೆಚ್ಚಿಸುವುದು.

ವಿಧಾನ : ಕಥಾ ಸಾಹಿತ್ಯ ನಿರೂಪಣೆ

ಶಿಕ್ಷಕರು ಕಥೆ ಹೇಳುವ ಮುನ್ನ ಕಥೆಯನ್ನು ಓದಿ ಅರ್ಥೈಸಿಕೊಳ್ಳಬೇಕು.

ಕಥೆ ಹೇಳುವಾಗ ಶಿಕ್ಷಕರು ಮಕ್ಕಳೊಂದಿಗೆ ವೃತ್ತದಲ್ಲಿ ಕುಳಿತುಕೊಳ್ಳಬೇಕು.

ಸೂಕ್ತ ಆಂಗಿಕ ಚಲನೆಯೊಂದಿಗೆ ಸರಳ ಭಾಷೆಯಲಿ ್ಲಕಥೆಯನ್ನು ಹೇಳಬೇಕು.

ಸರಳ ಪ್ರಶ್ನೆಗಳ್ನು ಕೇಳಿ ಕಥೆಯನ್ನು ಅರ್ಥೈಸಬೇಕು.

ಕಥೆ : ಒಮ್ಮೆ ಕಾಡಿನ ರಾಜನಾದ ಸಿಂಹವು ಆಹಾರಕ್ಕಾಗಿ ಕಾಡೆಲ್ಲಾ ಅಲೆದಾಡಿತು. ಎಷ್ಟು ಹುಡುಕಾಡಿದರೂ ಆ ದಿನ ಒಂದೂ 

ಪ್ರಾಣಿಯು ಅದರ ಕಣ್ಣಿಗೆ ಬೀಳಲಿಲ್ಲ. ಸಮಯ ಮೀರಿದ್ದರಿಂದ ಕಂಗಾಲಾದ ಸಿಂಹವು ಸುಸ್ತಾಗಿ ಒಂದು ಮರದಡಿಯಲ್ಲಿ 

ಮಲಗಿತು. ಇದರ ಪರಿವೆಯೇ ಇಲ್ಲದೇ ಇಲಿ ಮರಿಯೊಂದು ಮರದ ಬುಡದಲ್ಲಿದ್ದ ಬಿಲದಿಂದ ಹೊರಗೆ ಬಂದು 

ಆಟವಾಡತೊಡಗಿತ್ತು. ಆಟವಾಡುತ್ತಾ ಸಿಂಹದ ಮೈಮೇಲೆಲ್ಲಾ ಓಡಾಡುತ್ತಿತ್ತು. ಇದರಿಂದ ಸಿಟ್ಟಿಗೆದ್ದ ಸಿಂಹವು ತನ್ನ ಕೈಯಲ್ಲಿ 

ಇಲಿಮರಿಯನ್ನು ಹಿಡಿದು, ಎಲೈ ಪಿಳ್ಳೆಯೇ ನೀನು ನನ್ನ ಬೆರಳಿನಷ್ಟಿರುವೆ. ನನ್ನ ಮೈಮೇಲೆ ಓಡಾಡಲು ನಿನಗೆಷ್ಟು ಧೈರ್ಯ? 

ಹಸಿವೆಯಿಂದ ಬಳಲುತ್ತಿರುವ ನನ್ನ ನಿದ್ರಾ ಭಂಗಮಾಡಿದೆ. ನಿನ್ನನ್ನು ಈಗಲೇ ಒಂದೇ ಬಾರಿಗೆ ತಿಂದು ಮುಗಿಸುವೆ ಎಂದು 

ಘರ್ಜಿಸಿತು. ಅದಕ್ಕೆ ಹೆದರಿದ ಇಲಿಮರಿಯು ಅಯ್ಯಾ! ಮೃಗರಾಜ ತಿಳಿಯದೇ ತಪ್ಪು ಮಾಡಿದೆ. ನನ್ನನ್ನು ಬಿಟ್ಟು ಬಿಡು. 

ಮೇಲಾಗಿ ನನ್ನನ್ನು ತಿಂದರೂ ಹೊಟ್ಟೆ ತುಂಬಲಾರದು, ದಯವಿಟ್ಟು ಕನಿಕರಿಸು ಎಂದು ಅಂಗಲಾಚಿತು. ಇಂದು ನನ್ನನ್ನು ಬಿಟ್ಟು 

ಉಪಕಾರ ಮಾಡಿದರೆ, ನಾನು ನಿನಗೆ ಎಂದಾದರೂ ಸಹಾಯ ಮಾಡುವೆ ಎಂದಿತು. ಒಂದುಕ್ಷಣ ಆಲೋಚಿಸಿದ ಸಿಂಹವು 

ಕಾಡಿನ ರಾಜನಾದ ನನಗೆ ನಿನ್ನ ಸಹಾಯವೇ!? ಎಂದು ಅಪಹಾಸ್ಯದಿಂದ ನಗುತ್ತಾ, ಎಲ್ಲಾದರೂ ಹೋಗಿ ಬದುಕಿಕೊ ಎಂದು 

ಹೇಳಿ ಇಲಿ ಮರಿಯನ್ನು ಬಿಸಾಡಿತು. ಬದುಕಿದೆಯಾ ಬಡಜೀವವೇ ಎಂದು ಇಲಿಯು ಓಡಿ ಬಿಲವನ್ನು ಸೇರಿಕೊಂಡಿತು.

ಕೆಲವು ದಿನಗಳ ನಂತರ ದೂರದಲೆಲ್ಲೋ ಸಿಂಹವು ಕಾಪಾಡಿ, ಕಾಪಾಡಿ ಎಂದು ಚೀರುತ್ತಿದ್ದ ಧ್ವನಿ ಇಲಿಮರಿಗೆ ಕೇಳಿಸಿತು. 

ಆ ಧ್ವನಿ ಬಂದ ದಿಕ್ಕಿಗೆ ಇಲಿಮರಿಯು ಓಡಿಹೋಗಿ ನೋಡಿತು. ಸಿಂಹವು ಬಲೆಯೊಳಗೆ ಬಿದ್ದು ಹೊರಬರಲಾರದೇ 

ಒದ್ದಾಡುತ್ತಿತ್ತು. ಇದನ್ನು ಗಮನಿಸಿದ ಇಲಿಯು ಎಲೈ ರಾಜನೇ ಸ್ವಲ್ಪ ನಿಲ್ಲು, ನಾನು ನನ್ನ ಚೂಪಾದ ಹಲ್ಲುಗಳಿಂದ ಈ 

ಬಲೆಯನ್ನು ಕತ್ತರಿಸಿ ನಿನ್ನನ್ನು ಪಾರು ಮಾಡವೆ ಎಂದಿತು. ಅದೇ ರೀತಿ ಬಲೆಯನ್ನು ಕಟ್..ಕಟ್.. ಎಂದು ಕಡಿದು ಸಿಂಹವನ್ನು 

ಬಿಡಿಸಿತು. ಬಲೆಯಿಂದ ಹೊರಬಂದ ಸಿಂಹವು ಇಲಿಮರಿಗೆ ಕೃತಜ್ಞತೆಯನ್ನು ತಿಳಿಸಿತು. ಇಲಿಯು ಸಿಂಹವು ತನಗೆ ಮಾಡಿದ 

ಉಪಕಾರಕ್ಕೆ ಪ್ರತ್ಯುಪಕಾರವನ್ನು ಮಾಡಿದೆನೆಂಬ ಸಂತೋಷದಿ0ದ ತನ್ನ ಬಿಲವನ್ನು ಸೇರಿಕೊಂಡಿತು. ಕಥೆಯನ್ನು ಹೇಳಿದ

ನಂತರ ಸರಳ ಪ್ರಶ್ನೆಗಳನ್ನು ಕೇಳಿ.

೧) ಈ ಕಥೆಯಲ್ಲಿ ಬರುವ ಪಾತ್ರಗಳನ್ನು ಹೆಸರಿಸಿ.

೨) ಇಲಿಯನ್ನು ತಿಂದು ಹಾಕುವೆನೆಂದು ಸಿಂಹವು ಏಕೆ ಹೇಳಿತು?

(ಕಥೆಯನ್ನು ಆನಂದಿಸುವುದರ ಜೊತೆಗೆ, ಆಲಿಸುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿ ಕೊಳ್ಳುವುದು)

----------------------------

 

ಅವಧಿ -8(20ನಿ)

*ಮತ್ತೆ ಸಿಗೋಣ*

ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು ಪುನರಾವರ್ತಿಸಿ/ನೆನಪಿಸಿ

ಈ ದಿನ ಮಕ್ಕಳು ನಿರ್ವಹಿಸಿದ ಎಲ್ಲಾ ಚಟುವಟಿಕೆಗಳನ್ನು ಪೋಷಕರೊಂದಿಗೆ ಮತ್ತು ಕುಟುಂಬದ ಸದಸ್ಯರೊಂದಿಗೆ 

ಹಂಚಿಕೊಳ್ಳಲು ಪ್ರೋತ್ಸಾಹಿಸಿ.

ಮರುದಿನ ಮಕ್ಕಳು ಸಂತೋಷದಿ0ದ ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು ಏರ್ಪಡಿಸಿ, ಬೀಳ್ಕೊಡಿ.

“ನೀನೇ ಮಾಡಿ ನೋಡು” ಚಟುವಟಿಕೆಯನ್ನು ಮಾಡಲು ಅನುಕೂಲವಾಗುವಂತೆ ಯೋಜನೆ ರೂಪಿಸಿ.


[ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ]

------------------------------


 *ವಂದನೆಗಳೊಂದಿಗೆ* ,

ರೇಣುಕಾರಾಧ್ಯ ಪಿ ಪಿ 

    ಶಿಕ್ಷಕರು (ನಲಿಕಲಿ ರಾ.ಸಂ.ವ್ಯ.)

ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು

ಅರಸೀಕೆರೆ, ಹಾಸನ


 *ಸಲಹೆ ಮತ್ತು ಮಾರ್ಗದರ್ಶನ* 

ಶ್ರೀಯುತ ಎಂ.ಎಸ್.ಫಣೀಶ 

ಹಿರಿಯ ಉಪನ್ಯಾಸಕರು ಡಯಟ್ ಹಾಸನ


ಶ್ರೀಯುತ ಆರ್.ಡಿ.ರವೀಂದ್ರ

ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಕೊಪ್ಪ

No comments:

Post a Comment