Saturday, 27 March 2021

ನಿಮ್ಮ ವೇದಿಕೆ -8

 


ನಿಮ್ಮ ವೇದಿಕೆ 8(ZOOM ಮಾಡಿ ವೀಕ್ಷಿಸಿ)

ಸ.ಕಿ.ಪ್ರಾ.ಶಾಲೆ ಅಬಕವಾರಿಪಲ್ಲಿ

ಬಾಗೇಪಲ್ಲಿ ತಾ.ಚಿಕ್ಕಬಳ್ಳಾಪುರ ಜಿ.




ಎಲ್ಲರಿಗೂ ನಮಸ್ತೆ..

ನಲಿಕಲಿ ಎಂಬುದು ನಮ್ಮ ಹೆಮ್ಮೆ . ನಲಿಕಲಿ ಎಂಬ ಪದ್ಧತಿ ಅನೇಕ ವೈವಿಧ್ಯತೆಗಳ ಆಗರ ನಮ್ಮ ನಲಿಕಲಿ app ಬ್ಲಾಗ್ ನಲ್ಲಿ ಒಂದು ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ ಅದುವೇ ನಿಮ್ಮ ವೇದಿಕೆ 



ಇದು ನಲಿಕಲಿ ಶಿಕ್ಷಕರ ಕ್ರಿಯಾಶೀಲತೆಗೆ ಒಂದು ಪುಟ್ಟ ವೇದಿಕೆಯಾಗಿದೆ ಅನೇಕ ಶಿಕ್ಷಕರಿಗೆ ಇದು ದಿಕ್ಸೂಚಿ ಸಹಾಯಕ ಆಗಬಲ್ಲದು ಎಂಬ ಆಶಯದೊಂದಿಗೆ ಇಂದು ನಿಮ್ಮ ವೇದಿಕೆಯಡಿಯಲ್ಲಿ 8ನೇ ಶಾಲೆಯ ಪರಿಚಯ  ನೀಡುತ್ತಿದ್ದೇವೆ.


ಈ ದಿನದ ನಲಿಕಲಿ ಕ್ರಿಯಾಶೀಲ ಶಿಕ್ಷಕರುಗಳ ಶಾಲೆಯಾದ ಸ.ಕಿ.ಪ್ರಾ.ಶಾಲೆ ಅಬಕವಾರಿಪಲ್ಲಿ ಬಾಗೇಪಲ್ಲಿ (ತಾ)ಚಿಕ್ಕಬಳ್ಳಾಪುರ (ಜಿ) ಮತ್ತು ಅಲ್ಲಿಯ ನಲಿಕಲಿ ಶಿಕ್ಷಕರಾದ ಶ್ರೀಯುತ ಮಹಮ್ಮದ್ ಜಬಿಉಲ್ಲಾರವರ ಶಾಲೆಯಾಗಿದೆ.


ಈ ಶಾಲೆಯು 2019-20ನೇ ಸಾಲಿನ ಜಿಲ್ಲೆಯ ಅತ್ಯುತ್ತಮ ನಲಿಕಲಿ ಶಾಲೆಗಳ ಪೈಕಿ ಒಂದು ಎಂಬುದು ಹೆಮ್ಮೆಯ ಸಂಗತಿ ಮತ್ತು 2020- 21ನೇ ಸಾಲಿನಲ್ಲಿ ಜಿಲ್ಲೆಯ ಉತ್ತಮ ನಲಿಕಲಿ ಪ್ರಶಸ್ತಿಯನ್ನು ಈ ಶಾಲೆಯು ಪಡೆದು ಕೊಂಡಿದೆ ಈ ಶಾಲೆಯಲ್ಲಿ ನಲಿಕಲಿ ವಿಧಾನವನ್ನು ಅತ್ಯುತ್ತಮ ರೀತಿಯಲ್ಲಿ ನಡೆಸುತ್ತಿರುವ ಕೀರ್ತಿ ಈ ಶಾಲೆಯ ಕ್ರಿಯಾಶೀಲ ಶಿಕ್ಷಕ ಬಳಗಕ್ಕೆ ಸಲ್ಲುತ್ತಿದೆ ಇಲ್ಲಿಯ ಮಕ್ಕಳ ತೊಡಗುವಿಕೆ ವಿಭಿನ್ನ ವಿಧಾನ ಗಳ ಮೂಲಕ ಸಮುದಾಯದ ಮೆಚ್ಚುಗೆಗೆ ಶಾಲೆ ಪಾತ್ರವಾಗಿದೆ .ಈ ಶಾಲೆಗೆ ಭೇಟಿ ನೀಡುವ ಅನೇಕ ಅಧಿಕಾರಿಗಳು ಶಾಲೆಯ ಶಿಕ್ಷಕರ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ ಅಲ್ಲದೆ ಇಲ್ಲಿಯ ಶಿಕ್ಷಕರು ಇಲಾಖೆಯ ಅಧಿಕಾರಿಗಳ ಪ್ರೋತ್ಸಾಹವನ್ನು ಸ್ಮರಿಸುತ್ತಾರೆ.  ನಲಿಕಲಿಯನ್ನು ವಿಭಿನ್ನವಾಗಿ ಅಳವಡಿಸಿಕೊಂಡಿರುವ ಶಾಲೆ ಇದಾಗಿದೆ .


ಇಲ್ಲಿಯ ಶಿಕ್ಷಕರು ಸದಾ ಮಕ್ಕಳ ಕಲಿಯುವಿಕೆಗಾಗಿ ನೂರಾರು ಸರಳ ಕಲಿಕೋಪಕರಣಗಳನ್ನು ತಯಾರಿಸಿಕೊಂಡಿದ್ದಾರೆ ಅದು ಅವರ ಶ್ರಮದಿಂದಾಗಿ ಕಡಿಮೆ ವೆಚ್ಚದಲ್ಲಿ ತಯಾರಾಗಿವೆ ಮಕ್ಕಳ ಕೈಯಿಂದಲೂ ಅನೇಕ ಕ್ರಾಫ್ಟ್ ಚಟುವಟಿಕೆ ಸರಳ ಪ್ರಯೋಗಗಳು ನಾಟಕ ಹಾಡು ಮುಂತಾದವುಗಳನ್ನು ವಿಭಿನ್ನವಾಗಿ ಮಾಡಿಸುತ್ತಿದ್ದಾರೆ


ಇಲ್ಲಿ ಮಕ್ಕಳಿಗಾಗಿ ನೂರಾರು ಅಂದ ಚಂದದ ಉತ್ತಮವಾದ ಕಲಿಕೋಪಕರಣಗಳನ್ನು ತಯಾರಿಸಲಾಗಿದೆ ಅಲ್ಲದೆ ಈ ಶಿಕ್ಷಕರು ನಲಿಕಲಿ ತರಬೇತಿಗಳಲ್ಲಿ ಶಿಕ್ಷಕರಿಂದಲೂ ಅನೇಕ ಕಲಿಕೋಪಕರಣ ತಯಾರಿಕೆಗಳನ್ನು ಮಾದರಿಯಾಗಿ ತಯಾರಿಸಿ ತೋರಿಸಿದ್ದಾರೆ ಈ ಶಾಲೆಯಲ್ಲಿ ಮಕ್ಕಳ ಸಹಾಯದೊಂದಿಗೆ ಮಾಡಿಸಲಾಗಿದೆ ಭಿನ್ನ ಕ್ರಾಫ್ಟ್ ಚಟುವಟಿಕೆಗಳು ಕಾಣಸಿಗುತ್ತವೆ. 


ಚಂದದ ಬಾಗಿಲು ತೋರಣ, ಚಂದದ ಚಪ್ಪರ, ಪಪೆಟ್ ಶೋ ಗೊಂಬೆಗಳು,ನಲಿಕಲಿ ರಾಜ,ನಲಿಕಲಿ ರಾಣಿಯ ಛದ್ಮವೇಷಗಳು ವಿಶಿಷ್ಟವಾಗಿವೆ


ಮುಂದುವರೆದು ಓರೆಗಾಮಿಯ ವಿಭಿನ್ನ ಚಟುವಟಿಗಳಿಗೆ ಅಧ್ಯತೆ ನೀಡಿದ್ದಾರೆ ಪೇಪರ್ ಬ್ಯಾಗ್ ಪೇಪರ್ ಟೋಪಿ ಓರೆಗಾಮಿಯ ಪಕ್ಷಿ ಎಲ್ಲವೂ ಮಕ್ಕಳಲ್ಲಿ ಆಸಕ್ತಿಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿವೆ.

ಓರೇಗಾಮಿ ವಿಡಿಯೋ









ಆಟಗಳು






ನಲಿಕಲಿಗೆ ಸಂಬಂಧಿಸಿದಂತೆ ನಲಿಕಲಿ ವಿಶಿಷ್ಟ ತಟ್ಟೆಗಳು ವಾಲ್ ಸ್ಲೇಟ್ ಗಳು ಪಪೆಟ್ ಶೋ ಗೊಂಬೆಗಳು ಮುಖವಾಡಗಳು ವಾಚಕಗಳ ಜೋಡಣೆ ವಿಷಯವಾರು ಕಲಿಕೋಪಕರಣ ಜೋಡಣೆ ಎಲ್ಲವೂ ಕೂಡ ವಿಭಿನ್ನವಾಗಿದೆ 




ನಲಿಕಲಿ ತರಬೇತಿಯಲ್ಲಿ ಕಲಿಕೋಪಕರಣ ಮತ್ತು ಹಾಡು





ಈ ಶಾಲೆಯ ನಲಿಕಲಿ ತರಗತಿ ವಿಡಿಯೋ ಮತ್ತು ನಲಿಕಲಿ ಕಲಿಕೋಪಕರಣಗಳು


ತರಗತಿ ವಿಡಿಯೋ



ಕಲಿಕೋಪಕರಣಗಳ ವಿಡಿಯೋ





ಪ್ರಶಸ್ತಿ ಸ್ವೀಕರಿಸುತ್ತಿರುವ ಕ್ಷಣ




ನಲಿಕಲಿ ರಾಣಿ



ತರಗತಿ ಫೋಟೋಗಳು ಮತ್ತು ಕಲಿಕೋಪರಣಗಳ ಫೋಟೋಗಳಿ ಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿರಿ

https://drive.google.com/file/d/1Ww05KwTrjnDrDCpJ9hHMg7ws3MA9pHbf/view?usp=drivesdk



ನಿಮ್ಮ ವೇದಿಕೆ ಕಾರ್ಯಕ್ರಮ ಕುರಿತು ಮತ್ತು ಈ ಶಾಲೆಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಈ ಕೆಳಗಿನ ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಬಹುದು


ವಂದನೆಗಳೊಂದಿಗೆ,

ರೇಣುಕಾರಾಧ್ಯ 

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ, ಶಿವಮೊಗ್ಗ


ನಿಮ್ಮ ವೇದಿಕೆ ಕಾರ್ಯಕ್ರಮ ಮಾರ್ಗದರ್ಶಕರು

ಶ್ರೀಯುತ ಫಣೀಶ

ಹಿರಿಯ ಉಪನ್ಯಾಸಕರು

ಡಯಟ್ ಶಿವಮೊಗ್ಗ

No comments:

Post a Comment