🏵️🏵️🏵️🏵️🏵️🏵️🏵️
*ದಿನಕ್ಕೊಂದು ಲೋಗೋ**
*ದಿನ -82*
(ಮೂಲ : ಬೆಳ್ಳಿಮೋಡ ನಲಿಕಲಿ ಸಮಗ್ರ ಸಾಹಿತ್ಯ)
ದಿನಾಂಕ : 0️⃣5️⃣➖0️⃣1️⃣➖2️⃣0️⃣2️⃣1️⃣
*14.ಲೋಗೋ : ಡಬ್ಬದೊಳಗೆ ಕೈ*
**ಚಟುವಟಿಕೆ ಹೆಸರು : ಆಶುಲೇಖನ*
ನಲಿಕಲಿಯ *ಪರಿಸರ ಅಧ್ಯಯನ* ದಲ್ಲಿ ಬರುವ ಒಂದು ವಿಶಿಷ್ಟ ಲೋಗೋ ಇದಾಗಿದೆ. ಇದು ಕಲಿಕಾ ಗೋಪುರದಲ್ಲಿ *ಬಳಕೆ ಹಂತ* ದ ಚಟುವಟಿಕೆಗಳಲ್ಲಿ ಬರುವ ಲೋಗೋ ಆಗಿದೆ ಮತ್ತು *4ನೇ ತಟ್ಟೆ** ಯಲ್ಲಿ ಈ ಚಟುವಟಿಕೆಯು ನಡೆಯುತ್ತದೆ .
1ನೇ ತರಗತಿಯಲ್ಲಿ 00 ಕಾರ್ಡುಗಳು
2ನೇ ತರಗತಿಯಲ್ಲಿ 00 ಕಾರ್ಡುಗಳು
3ನೇ ತರಗತಿಯಲ್ಲಿ 01 ಕಾರ್ಡುಗಳು ಇರುತ್ತವೆ
_ಚಟುವಟಿಕೆಯ ವಿಶ್ಲೇಷಣೆ :_
> ಸರಳ ವಿಷಯಗಳನ್ನು ಕುರಿತ ಬರವಣಿಗೆಯನ್ನು ಹೊಂದಿದೆ,
> ಬರಹದ ಮೂಲಕ ಜ್ಞಾನವನ್ನು ಅಭಿವ್ಯಕ್ತಿಪಡಿಸಲು ಅವಕಾಶ ಕಲ್ಪಿಸುತ್ತದೆ.
> ವಿಷಯವನ್ನು ಸ್ವಂತ ವಾಕ್ಯಗಳಲ್ಲಿ ಬರೆಯಲು ಪ್ರೇರೇಪಿಸುತ್ತದೆ.
_ಚಟುವಟಿಕೆಗಳ ಉದ್ದೇಶಗಳು:_
> ಕಲಿತ ವಿಷಯಗಳನ್ನು ಆನ್ವಯ ಮಾಡುವುದು,
> ಬರಹ ರೂಪದ ಆಭಿವ್ಯಕ್ತಿಗೆ ಅವಕಾಶ ಕಲ್ಪಿಸುವುದು,
> ವಿಷಯಾಂಶಗಳ ಕ್ರಮಬದ್ಧ ಬರವಣಿಗೆಯನ್ನು ಪರೀಕ್ಷಿಸುವುದು
_ಚಟುವಟಿಕೆಯನ್ನು ಹೀಗೆ ಮಾಡೋಣ :_
> ಕಲಿಕಾರ್ಥಿಗಳ ಸಾಮರ್ಥ್ಯಕ್ಕನುಗುಣವಾದ ವಿಷಯಾಂಶಗಳ ಮಿಂಚುಪಟ್ಟಿಚೀಟಿಗಳನ್ನು ಸಿದ್ಧಪಡಿಸಿಕೊಳ್ಳೋಣ
> ಚೀಟಿಗಳನ್ನು ಆಯ್ಕೆಮಾಡಿಕೊಂಡು, ಅದರಲ್ಲಿರುವ ವಿಷಯಗಳನ್ನು ಕುರಿತು ಕಿರುಲೇಖನ ಬರೆಯಲು ತಿಳಿಸೋಣ
> ಕಲಿಕಾರ್ಥಿಗಳು ಬರೆದ ಕಿರುಲೇಖನಗಳನ್ನು ನೋಡಿ, ತಿದ್ದಿ ದೃಢೀಕರಿಸೋಣ,
> ಅಗತ್ಯವಿದ್ದಲ್ಲಿ, ಸೂಕ್ತ ಮಾರ್ಗದರ್ಶನ ನೀಡಬೇಕು.
>ಉತ್ತಮ ಕಿರುಲೇಖನಗಳನ್ನು ಪ್ರಶಂಸಿಸೋಣ.
_ನಿರೀಕ್ಷಿತ ಕಲಿಕೆಯ ಫಲಗಳು:_
> ಕಲಿತಿದ್ದನ್ನು ಬರವಣಿಗೆಯ ರೂಪಕ್ಕೆ ತರುವರು,
> ಸ್ವತಂತ್ರವಾಗಿ ಬರೆಯುವ ಕೌಶಲ ಬೆಳೆಸಿಕೊಳ್ಳುವರು.
*ನಲಿಕಲಿ app ಲಿಂಕ್*
https://play.google.com/store/apps/details?id=a1226930.wpu
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ
No comments:
Post a Comment