🏵️🏵️🏵️🏵️🏵️🏵️🏵️
*ದಿನಕ್ಕೊಂದು ಲೋಗೋ**
*ದಿನ -81*
(ಮೂಲ : ಬೆಳ್ಳಿಮೋಡ ನಲಿಕಲಿ ಸಮಗ್ರ ಸಾಹಿತ್ಯ)
ದಿನಾಂಕ : 0️⃣4️⃣➖0️⃣1️⃣➖2️⃣0️⃣2️⃣1️⃣
*13.ಲೋಗೋ :ಬಸವನ ಹುಳು*
**ಚಟುವಟಿಕೆ ಹೆಸರು : ದಾರದಿಂದ ಹೊಂದಿಸು*
ನಲಿಕಲಿಯ *ಪರಿಸರ ಅಧ್ಯಯನ* ದಲ್ಲಿ ಬರುವ ಒಂದು ವಿಶಿಷ್ಟ ಲೋಗೋ ಇದಾಗಿದೆ. ಇದು ಕಲಿಕಾ ಗೋಪುರದಲ್ಲಿ *ಬಳಕೆ ಹಂತ* ದ ಚಟುವಟಿಕೆಗಳಲ್ಲಿ ಬರುವ ಲೋಗೋ ಆಗಿದೆ ಮತ್ತು *4ನೇ ತಟ್ಟೆ** ಯಲ್ಲಿ ಈ ಚಟುವಟಿಕೆಯು ನಡೆಯುತ್ತದೆ .
1ನೇ ತರಗತಿಯಲ್ಲಿ 00 ಕಾರ್ಡುಗಳು
2ನೇ ತರಗತಿಯಲ್ಲಿ 07 ಕಾರ್ಡುಗಳು
3ನೇ ತರಗತಿಯಲ್ಲಿ 00 ಕಾರ್ಡುಗಳು ಇರುತ್ತವೆ
ಚಟುವಟಿಕೆಯ ವಿಶ್ಲೇಷಣೆ:
> ಕಲಿಕಾರ್ಥಿಗಳ ಕಲಿತ/ ಗಳಿಸಿದ ಜ್ಞಾನವನ್ನು ಸಮನ್ವಯಗೊಳಿಸುತ್ತದೆ,
> ಮಾಡಿ ಕಲಿ ತತ್ವವನ್ನು ಆಧರಿಸಿದೆ.
> ಮೂರ್ತ-ಅಮೂರ್ತ ಕಲ್ಪನೆಯನ್ನು ಹೊಂದಿಸುವ ಚಟುವಟಿಕೆಯಾಗಿದೆ,
_ಚಟುವಟಿಕೆಗಳ ಉದ್ದೇಶಗಳು:_
* ಜ್ಞಾನದ ಅಭಿವ್ಯಕ್ತಿಯನ್ನು ಚಟುವಟಿಕೆಯ ಮೂಲಕ ದೃಢೀಕರಿಸುವುದು,
* ಅನುಭವವನ್ನು ತಮ್ಮದಾಗಿಸಿಕೊಳ್ಳಲು ಅವಕಾಶ ಕಲ್ಪಿಸುವುದು.
>ಸೂಚನೆಗಳನ್ನು ಅರ್ಥ ಮಾಡಿಕೊಳ್ಳುವುದು,
_ಚಟುವಟಿಕೆಯನ್ನು ಹೀಗೆ ಮಾಡೋಣ:
_
> ಕಲಿಕಾ ಸಾಮಗ್ರಿಯನ್ನು ಮೊದಲೇ ಸಿದ್ಧಪಡಿಸಿಕೊಳ್ಳೋಣ.
> ಚಟುವಟಿಕೆ ನಿರ್ವಹಿಸಲು ಕಲಿಕಾರ್ಥಿಗಳಿಗೆ ಸರಿಯಾದ ಸೂಚನೆಗಳನ್ನು ನೀಡೋಣ.
>ಅಗತ್ಯವಿದ್ದಲ್ಲಿ ಗೆಳೆಯನ ಸಹಾಯ ಪಡೆಯಲು ತಿಳಿಸೋಣ.
> ಚಟುವಟಿಕೆ ಮುಗಿಸಿದ ನಂತರದಲ್ಲಿ ನೋಡಿ, ದೃಢೀಕರಿಸೋಣ.
>ಬಣ್ಣದ ದಾರಗಳಿಂದ ಕಲಿಕಾ ಸಾಮಗ್ರಿಯನ್ನು ಸಿದ್ಧಪಡಿಸಿ ಮಕ್ಕಳನ್ನು ಆಕರ್ಷಿಸೋಣ.
_ನಿರೀಕ್ಷಿತ ಕಲಿಕೆಯ ಫಲಗಳು:_
> ಹೇಳಿಕೆಗಳನ್ನು ಓದಿ, ಅರ್ಥಮಾಡಿಕೊಳ್ಳುವರು.
>ಚಿತ್ರಗಳೊಂದಿಗೆ ಸರಿಯಾದ ಹೇಳಿಕೆಗಳನ್ನು ಹೊಂದಿಸುವರು.
> ತಮ್ಮ ಜ್ಞಾನ/ಅನುಭವವನ್ನು ಸನ್ನಿವೇಶಕ್ಕೆ ಅನ್ವಯಿಸುವರು,
*ನಲಿಕಲಿ ವಿಡಿಯೋ ಸರಣಿ 22 ಲಿಂಕ್*
https://nalikalirenukaradhyatlm.blogspot.com/2021/01/22.html
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ
No comments:
Post a Comment