🏵️🏵️🏵️🏵️🏵️🏵️🏵️
*ದಿನಕ್ಕೊಂದು ಲೋಗೋ**
*ದಿನ -79*
(ಮೂಲ : ಬೆಳ್ಳಿಮೋಡ ನಲಿಕಲಿ ಸಮಗ್ರ ಸಾಹಿತ್ಯ)
ದಿನಾಂಕ : 0️⃣2️⃣➖0️⃣1️⃣➖2️⃣0️⃣2️⃣1️⃣
*11.ಲೋಗೋ :ಜೋಡಿ ಗುಲಾಬಿ*
**ಚಟುವಟಿಕೆ ಹೆಸರು : ಅಭ್ಯಾಸ ಪುಸ್ತಕ*
ನಲಿಕಲಿಯ *ಪರಿಸರ ಅಧ್ಯಯನ* ದಲ್ಲಿ ಬರುವ ಒಂದು ವಿಶಿಷ್ಟ ಲೋಗೋ ಇದಾಗಿದೆ. ಇದು ಕಲಿಕಾ ಗೋಪುರದಲ್ಲಿ *ಅಭ್ಯಾಸ ಹಂತ* ದ ಚಟುವಟಿಕೆಗಳಲ್ಲಿ ಬರುವ ಲೋಗೋ ಆಗಿದೆ ಮತ್ತು *1ರಿಂದ 5ನೇ ತಟ್ಟೆ* ಯಲ್ಲಿ ಈ ಚಟುವಟಿಕೆಯು ನಡೆಯುತ್ತದೆ .
1ನೇ ತರಗತಿಯಲ್ಲಿ 62 ಕಾರ್ಡುಗಳು
2ನೇ ತರಗತಿಯಲ್ಲಿ 57 ಕಾರ್ಡುಗಳು
3ನೇ ತರಗತಿಯಲ್ಲಿ 82 ಕಾರ್ಡುಗಳು ಇರುತ್ತವೆ
_ಚಟುವಟಿಕೆಯ ವಿಶ್ಲೇಷಣೆ :_
>ಕಲಿಕಾರ್ಥಿಗಳು ಮಾಡುವ ಎಲ್ಲ ಚಟುವಟಿಕೆಗಳಿಗೆ ಒಂದು ದಾಖಲೆ.
> ಕಲಿಕಾರ್ಥಿಗಳು ಕಲಿತಿರುವ ಜ್ಞಾನವನ್ನು ದೃಢೀಕರಿಸುವ ಮೂಲಕ ಖಾತ್ರಿಪಡಿಸುತ್ತದೆ.
> ವಿಷಯಾಂಶ/ಕಲಿಕಾಂಶವನ್ನು ಅಭ್ಯಾಸ ಮಾಡಿಸುತ್ತದೆ.
_ಚಟುವಟಿಕೆಗಳ ಉದ್ದೇಶಗಳು:_
> ಕಲಿಕಾರ್ಥಿಗಳ ಕಲಿಕೆಯನ್ನು ಪ್ರತಿ ಹಂತದಲ್ಲಿಯೂ ದೃಢೀಕರಿಸುವುದು,
>ಓದುವ ಮತ್ತು ಬರೆಯುವ ಕೌಶಲ ಬೆಳೆಸುವುದು.
> ಕಲಿಕೆಯ ದೃಡೀಕರಣದ ದಾಖಲೆ ನಿರ್ವಹಿಸುವುದು.
_ಚಟುವಟಿಕೆಯನ್ನು ಹೀಗೆ ಮಾಡೋಣ:
_
> ಕಲಿಕಾ ಪ್ರಕ್ರಿಯೆಯಲ್ಲಿ ಪ್ರತಿ ಹಂತದಲ್ಲೂ ಓದಿ, ಬರೆಯಲು ಇರುವ ಈ ಪುಸ್ತಕವನ್ನು ಪ್ರತಿ ಹಂತದಲ್ಲೂ ನೋಡಿ, ತಿದ್ದಿ ಕಲಿಕೆಯ ದೃಡೀಕರಣ ಮಾಡೋಣ.
> ಇದರಲ್ಲಿನ ಚಟುವಟಿಕೆಗಳನ್ನು ಆಯಾ ಹಂತಕ್ಕೆ ಬಂದ ಕಲಿಕಾರ್ಥಿಗಳು ನಿರ್ವಹಿಸುವಂತೆ ಮಾರ್ಗದರ್ಶನ ನೀಡೋಣ.
> ಅಂದಿನ ಚಟುವಟಿಕೆಯನ್ನು ಅಂದೇ ಮುಗಿಸಿದ ನಂತರ ಗೃಹಪಾಠ ನೀಡಿದರೆ ಮರುದಿನ ತಪ್ಪದೆ ನೋಡಿ, ತಿದ್ದಿ ದಿನಾಂಕವನ್ನು ನಮೂದಿಸೋಣ.
>ಬರೆಯುವ ಮುನ್ನ ಸರಿಯಾದ ಸೂಚನೆಗಳನ್ನು ನೀಡೋಣ.
_ನಿರೀಕ್ಷಿತ ಕಲಿಕೆಯ ಫಲಗಳು:_
> ಬರವಣಿಗೆಯ ಕೌಶಲ ಬೆಳೆಸಿಕೊಳ್ಳುವರು.
> ಓದಿ ಉತ್ತರಿಸಲು ಸಮರ್ಥರಾಗುವರು.
> ಕಲಿಕೆಯನ್ನು ಬರವಣಿಗೆಯ ಮೂಲಕ ವ್ಯಕ್ತಪಡಿಸುವರು.
ಸೂಚನೆ:- ಕ.ಪೂ.ಹ, ಕ.ಹ, ಅ.ಹ. ಬ.ಹ, ಮೌ ಹಂತಗಳಲ್ಲಿಯೂ ಅಭ್ಯಾಸ ಪುಸ್ತಕ ಬಳಕೆಯಾಗಿದೆ.
*ನಲಿಕಲಿ app ಲಿಂಕ್*
https://play.google.com/store/apps/details?id=a1226930.wpu
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ
No comments:
Post a Comment