Friday, 1 January 2021

ದಿನಕ್ಕೊಂದು ಲೋಗೋ 78

 🏵️🏵️🏵️🏵️🏵️🏵️🏵️

*ದಿನಕ್ಕೊಂದು ಲೋಗೋ**

       *ದಿನ -78* 

 (ಮೂಲ : ಬೆಳ್ಳಿಮೋಡ ನಲಿಕಲಿ ಸಮಗ್ರ ಸಾಹಿತ್ಯ)


ದಿನಾಂಕ : 0️⃣1️⃣➖0️⃣1️⃣➖2️⃣0️⃣2️⃣1️⃣


 *ಹೊಸ ವರ್ಷದ ಶುಭಾಶಯಗಳೊಂದಿಗೆ* 


 *10.ಲೋಗೋ :ಚಿಟ್ಟೆ* 


 **ಚಟುವಟಿಕೆ ಹೆಸರು : ಚರ್ಚೆ* 


ನಲಿಕಲಿಯ *ಪರಿಸರ ಅಧ್ಯಯನ* ದಲ್ಲಿ ಬರುವ ಒಂದು ವಿಶಿಷ್ಟ ಲೋಗೋ ಇದಾಗಿದೆ. ಇದು ಕಲಿಕಾ ಗೋಪುರದಲ್ಲಿ  *ಕಲಿಕಾಂಶ ಹಂತ* ದ ಚಟುವಟಿಕೆಗಳಲ್ಲಿ  ಬರುವ ಲೋಗೋ ಆಗಿದೆ ಮತ್ತು *2ನೇ ತಟ್ಟೆ* ಯಲ್ಲಿ *ಶಿಕ್ಷಕರ ಸಂಪೂರ್ಣ ಸಹಾಯ*ದಲ್ಲಿ ಈ ಚಟುವಟಿಕೆಯು ನಡೆಯುತ್ತದೆ .

1ನೇ ತರಗತಿಯಲ್ಲಿ 12 ಕಾರ್ಡುಗಳು

 2ನೇ ತರಗತಿಯಲ್ಲಿ 15 ಕಾರ್ಡುಗಳು

 3ನೇ ತರಗತಿಯಲ್ಲಿ 25 ಕಾರ್ಡುಗಳು  ಇರುತ್ತವೆ



 _ಚಟುವಟಿಕೆಯ ವಿಶ್ಲೇಷಣೆ :_ 


> ಕಲಿಕಾಂಶಕ್ಕೆ ಪೂರಕವಾದ ಚಿತ್ರಗಳನ್ನು ಒಳಗೊಂಡಿದೆ.


> ಕಲಿಕಾಂಶಕ್ಕೆ ಸಂಬಂಧಿಸಿದ ಸರಳ ಪ್ರಶ್ನೆಗಳನ್ನು ಒಳಗೊಂಡಿದೆ,


> ತರಗತಿಯ ಸರಳ ಸಂವಹನಕ್ಕೆ ಸಹಕಾರಿಯಾಗಿದೆ.


> ಜ್ಞಾನವನ್ನು ವಿಸ್ತಸಿಕೊಳ್ಳಲು ಸಹಕಾರಿಯಾಗಿದೆ.


 _ಚಟುವಟಿಕೆಗಳ ಉದ್ದೇಶಗಳು:_ 


>ಕಲಿಕಾಂಶವನ್ನು ಅರ್ಥಮಾಡಿಕೊಳ್ಳುವುದು,


> ಹೆಚ್ಚಿನ ಜ್ಞಾನವನ್ನು ಕಟ್ಟಿಕೊಳ್ಳಲು ಅವಕಾಶ ನೀಡುವುದು,


> ವಿಭಿನ್ನ, ವೈವಿಧ್ಯಮಯ ವಿಷಯಗಳೆಡೆಗೆ ಕಲಿಕಾರ್ಥಿಗಳನ್ನು ಸೆಳೆಯುವುದು.


 _ಚಟುವಟಿಕೆಯನ್ನು ಹೀಗೆ ಮಾಡೋಣ:_ 


* ಪೂರಕವಾದ ಮಾಹಿತಿಯನ್ನು ಸಮೀಕ್ಷೆ ಮಾಡಿ ಸಂಗ್ರಹಿಸಲು ಕಲಿಕಾರ್ಥಿಗಳಿಗೆ ಮಾಹಿತಿಯನ್ನು ನೀಡೋಣ.


> ಕಲಿಕಾರ್ಥಿಗಳು ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿ ಚರ್ಚಾ ಕಾರ್ಡ್‌ಗಳಲ್ಲಿನ ಚಿತ್ರಗಳನ್ನು ಬಳಸಿಕೊಂಡು ಆಯಾ ಸಾಮರ್ಥ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುತ್ತಾ, ಚರ್ಚಿಸುತ್ತಾ ವಿಷಯ ಮನದಟ್ಟು ಮಾಡೋಣ.


> ಹೆಚ್ಚಿನ ಕಲಿಕಾಂಶಗಳಿದ್ದಲ್ಲಿ, ಹೊಸದನ್ನು ಮೊದಲು ನಿರ್ವಹಿಸೋಣ,


> ಚರ್ಚೆಯ ವೇಳೆ ಆ ಹಂತದ ಎಲ್ಲಾ ಕಲಿಕಾರ್ಥಿಗಳ ಭಾಗವಹಿಸುವಿಕೆಯನ್ನು ಹಾಗೂ ಅವರ ವಿಷಯ ಗ್ರಹಿಕೆಯನ್ನು ಗಮನಿಸಿ ದೃಢೀಕರಿಸೋಣ.


 _ನಿರೀಕ್ಷಿತ ಕಲಿಕೆಯ ಫಲಗಳು:_ 


> ಪ್ರಶ್ನೆಗಳಿಗೆ ಉತ್ತರಿಸಲು ಸಮರ್ಥರಾಗುವರು.


* ಕಾರ್ಯಕಾರಣ ಸಂಬಂಧಗಳನ್ನು ಕಲಿಸುವರು


> ಜ್ಞಾನವನ್ನು ವಿಸ್ತರಿಸಿಕೊಳ್ಳುವದು,


> ನಿರ್ಧಾರ ಕೈಗೊಳ್ಳಲು ಸಮರ್ಥರಾಗುವರು.



 *ನಲಿಕಲಿ app ಲಿಂಕ್*

https://play.google.com/store/apps/details?id=a1226930.wpu



ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

No comments:

Post a Comment