ಎಲ್ಲರಿಗೂ ನಮಸ್ತೆ..
【ZOOM ಮಾಡಬಹುದು】
ನಲಿಕಲಿ ಎಂಬುದು ನಮ್ಮ ಹೆಮ್ಮೆ . ನಲಿಕಲಿ ಎಂಬ ಪದ್ಧತಿ ಅನೇಕ ವೈವಿಧ್ಯತೆಗಳ ಆಗರ ನಮ್ಮ ನಲಿಕಲಿ app ಬ್ಲಾಗ್ ನಲ್ಲಿ ಒಂದು ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ ಅದುವೇ ನಿಮ್ಮ ವೇದಿಕೆ
ಇದು ನಲಿಕಲಿ ಶಿಕ್ಷಕರ ಕ್ರಿಯಾಶೀಲತೆಗೆ ಒಂದು ಪುಟ್ಟ ವೇದಿಕೆಯಾಗಿದೆ ಅನೇಕ ಶಿಕ್ಷಕರಿಗೆ ಇದು ದಿಕ್ಸೂಚಿ ಸಹಾಯಕ ಆಗಬಲ್ಲದು ಎಂಬ ಆಶಯದೊಂದಿಗೆ ಇಂದು ನಿಮ್ಮ ವೇದಿಕೆಯಡಿಯಲ್ಲಿ 5ನೇ ಶಾಲೆಯ ಪರಿಚಯ ನೀಡುತ್ತಿದ್ದೇವೆ.
ಸ.ಕಿ.ಪ್ರಾ.ಶಾಲೆ ಗುಡ್ಡೆ ಆಲಳ್ಳಿ ತಾಳಗುಪ್ಪ (ಕ್ಲ) ಸಾಗರ ತಾ.ಶಿವಮೊಗ್ಗ ಜಿ.
ಶಾಲೆಯ ಪರಿಚಯ ವಿಡಿಯೋ
ಈ ದಿನದ ನಲಿಕಲಿ ಕ್ರಿಯಾಶೀಲ ಶಿಕ್ಷಕಿಯರಾದಂತಹ ಶ್ರೀಮತಿ ವೀಣಾ ಪಿ ಅವರು ಮತ್ತು ಅವರ ಶಾಲೆ. ಈ ಶಾಲೆಯು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಶಾಲೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗುಡ್ಡೆ ಆಲಳ್ಳಿ ತಾಳಗುಪ್ಪ ಕ್ಲಸ್ಟರ್ ನ ಏಕೋಪಾಧ್ಯಯ ಶಾಲೆಯಾಗಿದೆ
ಈ ಶಾಲೆಯು 2019-20ನೇ ಸಾಲಿನ ಜಿಲ್ಲೆಯ ಅತ್ಯುತ್ತಮ ನಲಿಕಲಿ ಶಾಲೆಗಳ ಪೈಕಿ ಒಂದು ಎಂಬುದು ಹೆಮ್ಮೆಯ ಸಂಗತಿ ಮತ್ತು ರಾಜ್ಯದಲ್ಲಿ ಉತ್ತಮ ಶಾಲೆಗಳಲ್ಲಿ ಒಂದು ಎಂದರು ತಪ್ಪಾಗದು ಈ ಶಾಲೆಯಲ್ಲಿ ನಲಿಕಲಿ ವಿಧಾನವನ್ನು ಅತ್ಯುತ್ತಮ ರೀತಿಯಲ್ಲಿ ನಡೆಸುತ್ತಿರುವ ಕೀರ್ತಿ ಇಲ್ಲಿಯ ಶಿಕ್ಷಕಿಯವರಿಗೆ ಸಲ್ಲುತ್ತಿದೆ ಇಲ್ಲಿಯ ಮಕ್ಕಳ ತೊಡಗುವಿಕೆ ವಿಭಿನ್ನ ವಿಧಾನ ಗಳ ಮೂಲಕ ಸಮುದಾಯದ ಮೆಚ್ಚುಗೆಗೆ ಮತ್ತು ಇಲಾಖೆಯ ಮೆಚ್ಚುಗೆಗೆ ಶಾಲೆ ಪಾತ್ರವಾಗಿದೆ .ಈ ಶಾಲೆಗೆ ಭೇಟಿ ನೀಡುವ ಅನೇಕ ಅಧಿಕಾರಿಗಳು ಶಾಲೆಯ ಶಿಕ್ಷಕರ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ ಅಲ್ಲದೆ ಇಲ್ಲಿಯ ಶಿಕ್ಷಕರು ಇಲಾಖೆಯ ಅಧಿಕಾರಿಗಳ ಪ್ರೋತ್ಸಾಹವನ್ನು ಸ್ಮರಿಸುತ್ತಾರೆ. ನಲಿಕಲಿಯನ್ನು ವಿಭಿನ್ನವಾಗಿ ಅಳವಡಿಸಿಕೊಂಡಿರುವ ಶಾಲೆ ಇದಾಗಿದೆ .
ಈ ಶಾಲೆಯಲ್ಲಿ ಎಲ್ಲ ವಿಷಯಗಳಿಗೂ ವಿಭಿನ್ನ ಕಲಿಕೋಪಕರಣ ಇಲ್ಲಿ ಲಭ್ಯವಿದೆ ಅದು ಸುಂದರವಾಗಿ ಅಚ್ಚುಕಟ್ಟಾಗಿ ಇವುಗಳನ್ನು ತಯಾರಿಸಿ ಸದ್ಭಳಕೆ ಮಾಡುತ್ತಿದ್ದಾರೆ ಅಲ್ಲದೆ ಇವರ ಕಾರ್ಯಗಳು ಡಯಟ್ ಶಿವಮೊಗ್ಗದ ವಿಶೇಷ ಕಾರ್ಯವಾದ ಸಾಧ್ಯವೆಂದರೆ ಸಾಧ್ಯ ಫ್ಲೆಕ್ಸ್ ನಲ್ಲಿ ಸಾಕಷ್ಟು ಬಾರಿ ಅವಕಾಶ ಪಡೆದಿರುವ ಕೀರ್ತಿ ಸಲ್ಲುತ್ತದೆ ಅವುಗಳ ಫೋಟೋಗಳನ್ನು ಕೂಡ ಇಲ್ಲಿ ನೀವು ನೋಡಬಹುದು.
ಮತ್ತು ಶಿಕ್ಷಣ ವಾರ್ತೆಯಲ್ಲಿಯೂ ಇವರ ಶಾಲೆಯ ಕುರಿತು ಲೇಖನ ಬಂದಿರುವುದು ಈ ಶಾಲೆಯ ಗುಣಮಟ್ಟದ ಕಲಿಕೆಗೆ ಶಾಲೆಯ ಸಾಧನೆಗೆ ಸಾಕ್ಷಿಯಾಗಿದೆ.
ಇಲ್ಲಿ ಮಕ್ಕಳಿಂದ ಶಿಕ್ಷಕಿಯರು ಮಾಡಿಸಿರುವ ಕ್ರಾಫ್ಟ್ ಕಾರ್ಯಗಳಂತೂ ಸುಂದರವಾಗಿವೆ ಇಲ್ಲಿಯ ಪರಿಸರವು ಸುಂದರತೆಯಿಂದ ಕೂಡಿದೆ ಮಕ್ಕಳ ಕಲಿಯುವಿಕೆಯು ಆಕರ್ಷಣೆಯಾಗಿದೆ
ಈ ಶಾಲೆಯ ಶಿಕ್ಷಕಿಯಾದಂತಹ ಶ್ರೀಮತಿ ವೀಣಾ ರವರು ತಮ್ಮ ಸ್ನೇಹಿತರಾದ ಶರತ್ ಸೋಮು ರವರು ಲಕ್ಷ್ಮಿ ಮತ್ತು ಡಾ.ದೀಪಾ ರವರ ಸಹಾಯದಿಂದ ಶಾಲೆಯ ನಲಿಕಲಿ ಕೊಠಡಿ ಸೇರಿದಂತೆ ಶಾಲೆಯನ್ನು ಸುಂದರಗಾಣಿಸಿದ್ದಾರೆ ಅಲ್ಲದೆ ಸ್ಥಳೀಯ ದಾನಿಗಳು sdmc ಅವರ ನೆರವಿನಿಂದ ಸುಂದರ ಮುಖ್ಯದ್ವಾರದ ಕಮಾನು ಮಕ್ಕಳಿಗೆ ಬ್ಲೇಜರ್ ಮಾದರಿಯ ಸಮವಸ್ತ್ರಗಳು ಎಲ್ಲರ ಕಣ್ಮನ ಸೆಳೆಯುತ್ತವೆ ಕೇವಲ ಮೊದಲು 4 ಮಕ್ಕಳಿದ್ದ ಶಾಲೆ ಇಂದು 21 ಸಂಖ್ಯೆ ಏರಿಸಿಕೊಂಡಿದೆ ಅಂದರೆ ಅವರ ಶ್ರಮದ ಕೈಗನ್ನಡಿ ಕಾಣುತ್ತಿದೆ.ವಿಭಿನ್ನ ವಾಲ್ ಸ್ಲೇಟ್ ಗಳು ಕನ್ನಡ ಇಂಗ್ಲೀಷ್ ಗೆ ಪ್ರತ್ಯೇಕವಾಗಿ ಸುಂದರವಾಗಿ ಮಾಡಿಸಿದ್ದಾರೆ ನಲಿಕಲಿ ತಟ್ಟೆಗಳು ಸುಂದರವಾಗಿ ಮಾದರಿಯಾಗಿವೆ ಎಲ್ಲಕ್ಕೂ ಮುಖ್ಯವಾಗಿ ಕಾರ್ಡ್ ಜೋಡಣೆ ಮಾಡಿರುವ ರೀತಿಯೂ ಅದ್ದೂರಿಯಾಗಿ ಶಾಶ್ವತ ಕಾರ್ಯವಾಗಿದೆ ಶ್ರೀಮತಿ ವೀಣಾ ರವರ ಕೈಯಿಂದ ವಿಶಿಷ್ಟ ಕಲಿಕೋಪಕರಣಗಳು ತಯಾರಾಗಿವೆ ಅಲ್ಲದೆ ಕಲಿಕೋಪಕರಣಗಳ ತಯಾರಿಕೆ ಸ್ಪರ್ದೆಯಲ್ಲಿಯೂ ರಾಜ್ಯ ಹಂತದವರೆಗೂ ಇವರು ಆಯ್ಕೆಯಾಗಿರುವುದು ಇವರ ಕಲಿಕೋಪಕರಣಗಳ ತಯಾರಿಕೆಯ ಸೃಜನಶೀಲತೆಗೆ ಸಾಕ್ಷಿಯಾಗಿದೆ.
ಇವರ ಶಾಲೆಗೆ ರಾಜ್ಯ ನಲಿಕಲಿ ಸಂಪನ್ಮೂಲ ವ್ಯಕ್ತಿಗಳಾದನಂತಹ ಶ್ರೀಯುತ ರವೀಂದ್ರ ಆರ್ ಡಿ ಸರ್ ಅವರು ಭೇಟಿ ನೀಡಿ ಇವರ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ ಅಲ್ಲದೆ ಶಿವಮೊಗ್ಗ ಡಯಟ್ ನ ಹಿಂದಿನ ಉಪನಿರ್ದೇಶಕರು ಶ್ರೀಯುತ ನಂಜಯ್ಯ ಸರ್ ಮತ್ತು ಜಿಲ್ಲಾ ನಲಿಕಲಿ ನೋಡಲ್ ಅಧಿಕಾರಿಗಳು ಹಿರಿಯ ಉಪನ್ಯಾಸಕರು ಆದಂತಹ ಶ್ರೀಯುತ ಫಣಿಶ್ ಸರ್ ಮತ್ತು ಶ್ರೀಯುತ ಡಾ.ಹರಿಪ್ರಸಾದ್ ಹಿರಿಯ ಉಪನ್ಯಾಸಕರು ಸಾಗರ ತಾ ಕ್ಷೇತ ಶಿಕ್ಷಣಾಧಿಕಾರಿಗಳು ಶ್ರೀಮತಿ ಬಿಂಬ ಮೇಡಂ ಅವರು ಕ್ಷೇತ್ರ ಸಮನ್ವಯಾಧಿಕಾರಿಗಳು ಸಂಪನ್ಮೂಲ ವ್ಯಕ್ತಿಗಳು ಭೇಟಿ ನೀಡಿ ಶಾಲೆಯ ಅಭಿವೃದ್ಧಿ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಶಿಕ್ಷಕರು ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ ಎಂಬುದಕ್ಕೆ ಶ್ರೀಮತಿ ವೀಣಾ ರವರು ಎಲ್ಲರಿಗೂ ಮಾದರಿಯಾಗಿದ್ದಾರೆ ಈ ಕಾರ್ಯದಲ್ಲಿ ಅಲ್ಲಿಯ ಸ್ಥಳೀಯರ ಆಸಕ್ತಿ ದಾನಿಗಳ ಶ್ರಮವನ್ನು ವೀಣಾರವರು ಸ್ಮರಿಸುತ್ತಾ ಶಾಲೆಯ ಕುರಿತು ಇನ್ನೂ ಅನೇಕ ಗುರಿಗಳನ್ನು ಹೊಂದಿದ್ದಾರೆ ಅವರ ಈ ಕಾರ್ಯಕ್ಕೆ ಇಲಾಖೆ ವತಿಯಿಂದ 2020-21 ನೇ ಸಾಲಿನ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿಯೂ ಸಂದಿದೆ ಅವರ ಕನಸುಗಳೆಲ್ಲ ಈಡೇರಲಿ ಶಾಲೆ ಇನ್ನೂ ದೊಡ್ಡ ಮಟ್ಟಕ್ಕೆ ಬೆಳೆಯಲಿ.
ಅವರ ಶಾಲೆಯ ನಲಿಕಲಿ ತರಗತಿ ವಿಡಿಯೋ ಮತ್ತು ನಲಿಕಲಿ ಕಲಿಕೋಪಕರಣಗಳು ಮತ್ತು ಅವರ ಶಾಲೆಯ ನಲಿಕಲಿ ಯಶೋಗಾಥೆ ಫೈಲ್ ಕೂಡ ಇಲ್ಲಿ ಲಭ್ಯವಿದೆ ಅವರ ಕಾರ್ಯವು ಎಲ್ಲರಿಗೂ ಪ್ರೇರಣೆ ನೀಡುತ್ತದೆ ಉತ್ಸಾಹ ಮೂಡಿಸುತ್ತದೆ .
ಇವರ ಕಾರ್ಯಕ್ಕೆ ನಿಮ್ಮದೊಂದು ಮೆಚ್ಚುಗೆಯ ನುಡಿಯನ್ನು ಈ ಕಾಮೆಂಟ್ ಬಾಕ್ಸ್ ನಲ್ಲಿ ಬರೆಯುವ ಮೂಲಕ ಅವರ ಹೆಚ್ಚಿನ ಕಾರ್ಯಗಳಿಗೆ ನೀವು ಪ್ರೇರಕರಾಗಿ
ವಾಲ್ ಸ್ಲೇಟ್ ಗಳು
ಕಾರ್ಡ್ ಜೋಡಣೆ ಮತ್ತು ನಲಿಕಲಿ ತಟ್ಟೆ ಮಾದರಿ
ಮಕ್ಕಳ ಸಮವಸ್ತ್ರ
ಹಿಂದಿನ ಡಯಟ್ ಶಿವಮೊಗ್ಗ ಉಪನಿರ್ದೇಶಕರಾದ ಶ್ರೀಯುತ ನಂಜಯ್ಯ ಸರ್ ಡಯಟ್ ಹಿರಿಯ ಉಪನ್ಯಾಸಕರು ನಲಿಕಲಿ ಜಿಲ್ಲಾ ನೋಡಲ್ ಅಧಿಕಾರಿಗಳು ಆದಂತಹ ಶ್ರೀಯುತ ಫಣೀಶ ಸರ್ ಮತ್ತು ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ಆರ್ ಡಿ ರವೀಂದ್ರ ಸರ್ ಭೇಟಿ
ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಮನ್ವಯಾಧಿಕಾರಿಳಿಂದ ಮತ್ತು ಅನೇಕ ಅಧಿಕಾರಿ ತಂಡದಿಂದ ಶಾಲೆ ಮಕ್ಕಳ ಕಲಿಕೆ ಪರಿಶೀಲನೆ ಮತ್ತು ಮೆಚ್ಚುಗೆ
ಶಿಕ್ಷಣ ವಾರ್ತೆಯಲ್ಲಿ ಶಾಲೆ ಕುರಿತು ಲೇಖನ ಪ್ರಕಟಣೆ
ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಸ್ವೀಕಾರ
ಶಾಲೆಯ ನಲಿಕಲಿ ಯಶೋಗಾಥೆ ಫೈಲ್ ನೋಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿರಿ
https://drive.google.com/file/d/1BFpl6hklUnfrEvmJkT8TJVnqaHSvh-df/view?usp=drivesdk
ನಲಿಕಲಿ ತರಗತಿ ಫೋಟೋಗಳ pdf ವೀಕ್ಷಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿರಿ
https://drive.google.com/file/d/1kjfwPdSZmE9irE1eXU5HOHLbnxkVys5E/view?usp=drivesdk
ನಿಮ್ಮ ವೇದಿಕೆ ಕಾರ್ಯಕ್ರಮ ಕುರಿತು ಮತ್ತು ಈ ಶಾಲೆಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಈ ಕೆಳಗಿನ ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಬಹುದು
ವಂದನೆಗಳೊಂದಿಗೆ,
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ, ಶಿವಮೊಗ್ಗ
ನಿಮ್ಮ ವೇದಿಕೆ ಕಾರ್ಯಕ್ರಮ ಮಾರ್ಗದರ್ಶಕರು
ಶ್ರೀಯುತ ಫಣೀಶ
ಹಿರಿಯ ಉಪನ್ಯಾಸಕರು
ಡಯಟ್ ಶಿವಮೊಗ್ಗ















ಅಭಿನಂದನೆಗಳು ವೀಣಾ ಮೇಡಂ ನಲಿಕಲಿ ತಾರೆಯರು ಗುಂಪಿನ ನಿಮ್ಮ ವೇದಿಕೆ ಈ ಕಾರ್ಯಕ್ರಮದ ಅಡಿ ಶಿಕ್ಷಕರು ನಮ್ಮ ಸಾಗರ ತಾಲೂಕಿನ ಶಾಲೆಯನ್ನು ವೀಕ್ಷಿಸುತ್ತಾರೆ ಇದೇ ರೀತಿ ನಮ್ಮ ತಾಲೂಕಿನ ಹೆಚ್ಚು ಶಾಲೆಗಳು ಗುರುತಿಸು ವಂತಾಗಲಿ ಎಂದು ಆಶಿಸುತ್ತೇವೆ.
ReplyDeleteನಿಮ್ಮದು ಅಮೋಘವಾದ ಸಾಧನೆ ಮೇಡಂ ನಿಮ್ಮ ಈ ಸಾಧನೆ ನಮಗೆಲ್ಲ ಸೂರ್ತಿ.....ಅಭಿನಂದನೆಗಳು💐💐💐🙏🙏🙏💐💐
ReplyDelete