Monday, 11 January 2021

ದಿನಕ್ಕೊಂದು ಗುಂಪು ತಟ್ಟೆ ಭಾಷೆ 1

 🌸🌸🌸🌸🌸🌸🌸🌸

 

*ದಿನಕ್ಕೊಂದು ಗುಂಪು ತಟ್ಟೆ*

            *ದಿನ -2* 


 *ದಿನಾಂಕ* : 

1️⃣1️⃣➖0️⃣1️⃣➖2️⃣1️⃣


 *ವಿಷಯ : ಭಾಷೆ* 


 *ಗುಂಪು ತಟ್ಟೆ : 1ನೇ ತಟ್ಟೆ/ಗುಂಪು* 


 *_ಪರಿಚಯ_* 


ಬಾಷೆಯ 1ನೇ ತಟ್ಟೆಯಲ್ಲಿ ಬರುವ ಲೋಗೋಗಳು


1.ಇಂಜಿನ್ ರೈಲು - ಚಿತ್ರ ರೈಲು ಮತ್ತು ಅಕ್ಷರ ರೈಲು

2.ಸೀತಾಫಲ- ಸೀತಾಫಲ

3.ತಾರಾನಾಥ-ತಾರಾನಾಥ

4.ಗುಣಿತಾಕ್ಷಿ-ಗುಣಿತಾಕ್ಷಿ

5.ಕರು-ಆಕಾರ ಗುರ್ತಿಸುವ    ಅಕ್ಷರ ಪಟ್ಟಿ.

6.ಜೋಡಿ ಪೆನ್ಸಿಲ್-ಅಭ್ಯಾಸ ಪುಸ್ತಕ(ರೇಖಾಭ್ಯಾಸ)


 *ನಿರ್ವಹಣೆ* 


ಈ 6 ಲೋಗೋಗಳು 1ನೇ ತಟ್ಟೆಯಲ್ಲಿ ಬರುತ್ತವೆ

 

ಇಲ್ಲಿ ಈ 6 ಲೋಗೋಗಳು ಕಲಿಕಾ ಗೋಪುರದ ಹಂತಗಳಲ್ಲಿ *2ನೇ ಹಂತ* ವಾದ *ಕಲಿಕಾ ಪೂರಕ ಹಂತದ* ಚಟುವಟಿಕೆಗಳಾಗಿ ಕಾರ್ಯ ನಿರ್ವಹಿಸುತ್ತವೆ.

ವಿಶಿಷ್ಟವಾಗಿ ಅಭ್ಯಾಸ ಪುಸ್ತಕ 1ನೇ ತರಗತಿಯ ರೇಖಾಭ್ಯಾಸದ ಚಟುವಟಿಕೆಯಾಗಿ ಕಲಿಕಾ ಪೂರಕ ಹಂತದ ಚಟುವಟಿಕೆಯಾಗಿ ಇಲ್ಲಿ ಅಭ್ಯಾಸ ಪುಸ್ತಕವು ಬಳಕೆಯಾಗಿದೆ.

1ನೇ ತಟ್ಟೆಯಲ್ಲಿ ಬಂದಿರುವ ಕಾರ್ಡ್ ಗಳ ಸಂಖ್ಯೆ

1ನೇ ತರಗತಿ ಕಾರ್ಡ್ ಗಳು

 : 12+1[ಅಭ್ಯಾಸಪುಸ್ತಕ ಹಾಳೆ]

2ನೇ ತರಗತಿಕಾರ್ಡ್ ಗಳು 0

3ನೇ ತರಗತಿ ಕಾರ್ಡ್ ಗಳು 0

ಬರುತ್ತವೆ.


ಈ ಗುಂಪು *ಶಿಕ್ಷಕರ ಭಾಗಶಃ ಸಹಾಯ* ದಲ್ಲಿ ನಿರ್ವಹಣೆಯಾಗುತ್ತದೆ.


ಸುಗಮಕಾರರು ಭಾಷಾ ವಿಷಯದಲ್ಲಿ 10 ನಿಮಿಷಗಳಲ್ಲಿ ಸಾಮೂಹಿಕ ಚಟುವಟಿಕೆ ನಿರ್ವಹಿಸಿದ ನಂತರದಲ್ಲಿ  ಮಕ್ಕಳು 10 ನಿಮಿಷ ಅವಧಿಯಲ್ಲಿ ಪ್ರಗತಿನೋಟ ನೋಡಿಕೊಂಡು ಸಾಮಾಗ್ರಿಗಳೊಂದಿಗೆ ಅವರವರ ಗುಂಪುಗಳಿಗೆ ಹೋಗಿ ಕುಳಿತುಕೊಳ್ಳುವರು ನಂತರ 10 ನಿಮಿಷದಲ್ಲಿ ಶಿಕ್ಷಕರು ಕ್ರಮವಾಗಿ 5️⃣➡️4️⃣➡️3️⃣➡️1️⃣ ತಟ್ಟೆಗಳಿಗೆ ಹೋಗಿ ಮಾರ್ಗದರ್ಶನ ಮಾಡುವರು ಹೀಗೆ 3ನೇ ಗುಂಪಿಗೆ ಮಾರ್ಗದರ್ಶನ ಮಾಡಿ 1 ನೇ ಗುಂಪಿಗೆ ಮಾರ್ಗದರ್ಶನ ಮಾಡುವರು 1ನೇ ಗುಂಪಿನ ಮಾರ್ಗದರ್ಶನ ಮುಗಿದ ನಂತರ 2 ನೇ ಗುಂಪು ಕಲಿಕಾಂಶ ಗುಂಪಿಗೆ ಹೋಗುವರು.

    

ಈ ರೀತಿಯಾಗಿ 1 ನೇ ತಟ್ಟೆ ನಿರ್ವಹಣೆಯಾಗುವುದು.

◆◆◆◆◆◆◆◆◆◆◆◆◆


ಈ ದಿನದ *ಕಲಿಯುತ್ತಾ ನಲಿಯೋಣ* ಬಾನುಲಿ ಕಾರ್ಯಕ್ರಮ ಲಿಂಕ್


https://nalikalirenukaradhyatlm.blogspot.com/search/label/%E0%B2%95%E0%B2%B2%E0%B2%BF%E0%B2%AF%E0%B3%81%E0%B2%A4%E0%B3%8D%E0%B2%A4%E0%B2%BE%20%E0%B2%A8%E0%B2%B2%E0%B2%BF%E0%B2%AF%E0%B3%8B%E0%B2%A3?m=1



ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

No comments:

Post a Comment