Saturday, 23 January 2021

ದಿನಕ್ಕೊಂದು ಗುಂಪು ತಟ್ಟೆ 11

 🌸🌸🌸🌸🌸🌸🌸🌸

 

*ದಿನಕ್ಕೊಂದು ಗುಂಪು ತಟ್ಟೆ*

            *ದಿನ -11


 *ದಿನಾಂಕ* : 

2️⃣2️⃣➖0️⃣1️⃣➖2️⃣1️⃣


 *ವಿಷಯ : ಗಣಿತ* 


 *ಗುಂಪು ತಟ್ಟೆ : 4ನೇ ತಟ್ಟೆ/ಗುಂಪು* 


 *_ಪರಿಚಯ_* 


ಗಣಿತದ 4ನೇ ತಟ್ಟೆಯಲ್ಲಿ ಬರುವ ಲೋಗೋಗಳು


1.ಆಮೆ -ಆಮೆ ಫಝಲ್ 


2 ಗಣಕ ಯಂತ್ರ - ಗಣಕಯಂತ್ರ


3.ಡೈಸ್ -ಆಟ ಆಡೋಣ


4.ಬಾಯಿ - ಉತ್ತರ ಹೇಳುವೆ.


5.ಗೀಜಗನ ಗೂಡು - ಸಂಖ್ಯಾ ವಿಸ್ಮಯ


 *ನಿರ್ವಹಣೆ:*


ಈ  5 ಲೋಗೋಗಳು 4ನೇ ತಟ್ಟೆಯಲ್ಲಿ ಬರುತ್ತವೆ.


ಇಲ್ಲಿ ಈ 5 ಲೋಗೋಗಳು ಕಲಿಕಾ ಗೋಪುರದ ಹಂತಗಳಲ್ಲಿ *5ನೇ ಹಂತ* ವಾದ *ಬಳಕೆ ಹಂತ* ದ ಚಟುವಟಿಕೆಗಳಾಗಿ ಕಾರ್ಯ ನಿರ್ವಹಿಸುತ್ತವೆ.


4ನೇ ತಟ್ಟೆಯಲ್ಲಿ ಬಂದಿರುವ ಕಾರ್ಡ್ ಗಳ ಸಂಖ್ಯೆ 


1ನೇ ತರಗತಿ ಕಾರ್ಡ್ ಗಳು :

28 ಕಾರ್ಡ್ ಗಳು


2ನೇ ತರಗತಿ ಕಾರ್ಡ್ ಗಳು :

42 ಕಾರ್ಡ್ ಗಳು


3ನೇ ತರಗತಿ ಕಾರ್ಡ್ ಗಳು :

35 ಕಾರ್ಡ್ ಗಳು


        ಈ ಗುಂಪು *ಗೆಳೆಯನ ಭಾಗಶಃ ಸಹಾಯ* ದಲ್ಲಿ ನಿರ್ವಹಣೆಯಾಗುವುದು.

ಕಲಿಕಾಂಶ  ಹಂತ ಅಭ್ಯಾಸ ಹಂತದಲ್ಲಿ ಚಟುವಟಿಕೆಗಳನ್ನು ಮಕ್ಕಳು ಉತ್ತಮವಾಗಿ  ನೆರವೇರಿಸಿದ್ದಲ್ಲಿ  ಭಾಗಶಃ ಗೆಳೆಯರ ಸಹಾಯ ಪಡೆದು ಆಟಗಳ ಮೂಲಕ ಕಲಿತ ವಿಷಯವನ್ನು ಮತ್ತಷ್ಟು ಈ 4ನೇ ತಟ್ಟೆಯಲ್ಲಿ ದೃಢೀಕರಿಸಿಕೊಳ್ಳುವರು.



ಸುಗಮಕಾರರು ಗಣಿತ ವಿಷಯದಲ್ಲಿ 10 ನಿಮಿಷಗಳ ಸಾಮೂಹಿಕ ಚಟುವಟಿಕೆ ನಂತರದಲ್ಲಿ 10 ನಿಮಿಷ ಪ್ರಗತಿನೋಟ ನೋಡಿಕೊಂಡು ಸಾಮಾಗ್ರಿಗಳೊಂದಿಗೆ ಮಕ್ಕಳು ಕುಳಿತುಕೊಂಡ ನಂತರ 10 ನಿಮಿಷದಲ್ಲಿ ಕ್ರಮವಾಗಿ 5,4,3,2 ತಟ್ಟೆಗಳಿಗೆ ಹೋಗಿ ಮಾರ್ಗದರ್ಶನ ಮಾಡುವರು ಹೀಗೆ 5 ನೇ ಗುಂಪಿಗೆ ಮಾರ್ಗದರ್ಶನ ಮಾಡಿ 4 ನೇ ಗುಂಪಿಗೂ ಬಂದು ಮಕ್ಕಳ ಕಾರ್ಡ್  ಅವರು ಬಂದಿರುವ ಚಟುವಟಿಕೆಗಳನ್ನು ಗಮನಿಸಿ ಅದೇ ಗುಂಪಿನಲ್ಲಿ ಇರುವ ಹಿರಿಯ ವಿದ್ಯಾರ್ಥಿ ಅಥವಾ ಕಲಿಕೆಯಲ್ಲಿ ಆ ಮೈಲಿಗಲ್ಲು ಮುಗಿಸಿರುವ ಗೆಳೆಯರ ಅಗತ್ಯ ವೇಳೆ ಅನಿವಾರ್ಯವಾದ ಸಂದರ್ಭದಲ್ಲಿ ಅವರ ಸಹಾಯ ಪಡೆಯಲು ಸೂಚಿಸಿ ಚಟುವಟಿಕೆ ಸಂಬಂಧಿಸಿದಂತೆ ಮಾರ್ಗದರ್ಶನ ಮಾಡಿ 3 ನೇ ತಟ್ಟೆಗೆ ತೆರಳುವರು.


ಈ ರೀತಿಯಾಗಿ 4ನೇ ತಟ್ಟೆ/ಗುಂಪು ನಿರ್ವಹಣೆಯಾಗುವುದು


★★★★★★★★★★★


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ


 *ನಲಿಕಲಿ app ಲಿಂಕ್* 

https://play.google.com/store/apps/details?id=a1226930.wpu

No comments:

Post a Comment