Saturday, 23 January 2021

ದಿನಕ್ಕೊಂದು ಗುಂಪು ತಟ್ಟೆ 10

 🌸🌸🌸🌸🌸🌸🌸🌸

 

*ದಿನಕ್ಕೊಂದು ಗುಂಪು ತಟ್ಟೆ*

            *ದಿನ -10* 


 *ದಿನಾಂಕ* : 

2️⃣0️⃣➖0️⃣1️⃣➖2️⃣1️⃣


 *ವಿಷಯ : ಗಣಿತ* 


 *ಗುಂಪು ತಟ್ಟೆ : 3ನೇ ತಟ್ಟೆ/ಗುಂಪು* 


 *_ಪರಿಚಯ_* 


ಗಣಿತದ 3ನೇ ತಟ್ಟೆಯಲ್ಲಿ ಬರುವ ಲೋಗೋಗಳು

ಕೇವಲ ಒಂದು ಲೋಗೋ ಮಾತ್ರ ಈ ತಟ್ಟೆಯಲ್ಲಿ ಬರುತ್ತದೆ


1.ಜೋಡಿಗಿಳಿ -ಅಭ್ಯಾಸ ಪುಸ್ತಕ



 *ನಿರ್ವಹಣೆ:*


ಈ 1 ಲೋಗೋ 3ನೇ ತಟ್ಟೆಯಲ್ಲಿ ಬರುತ್ತವೆ.


ಇಲ್ಲಿ ಈ 1 ಲೋಗೋ ಕಲಿಕಾ ಗೋಪುರದ ಹಂತಗಳಲ್ಲಿ 

*4ನೇ ಹಂತ* ವಾದ  *ಅಭ್ಯಾಸ ಹಂತದ ಚಟುವಟಿಕೆ* ಯಾಗಿ ಕಾರ್ಯ ನಿರ್ವಹಿಸುತ್ತವೆ.


3ನೇ ತಟ್ಟೆಯಲ್ಲಿ ಬಂದಿರುವ ಕಾರ್ಡ್ ಗಳ ಸಂಖ್ಯೆ


1ನೇ ತರಗತಿ ಕಾರ್ಡುಗಳು :

39 ಅಭ್ಯಾಸ ಪುಸ್ತಕ ಹಾಳೆಗಳು


2ನೇ ತರಗತಿ ಕಾರ್ಡುಗಳು

55 ಅಭ್ಯಾಸ ಪುಸ್ತಕ ಹಾಳೆಗಳು


3ನೇ ತರಗತಿ ಕಾರ್ಡುಗಳು

61 ಅಭ್ಯಾಸ ಪುಸ್ತಕ ಹಾಳೆಗಳು


ಈ ಗುಂಪು *ಗೆಳೆಯರ ಸಂಪೂರ್ಣ ಸಹಾಯ* ದಲ್ಲಿ ನಿರ್ವಹಣೆಯಾಗುವುದು.ಕಲಿಕಾಂಶ ಹಂತದಲ್ಲಿ ಕಲಿಕೆಯು ಉತ್ತಮವಾಗಿ ನೆರವೇರಿದ್ದಲ್ಲಿ ಗೆಳೆಯರ ಸಂಪೂರ್ಣ  ಸಹಕಾರ ಪಡೆದು ಇಲ್ಲಿ ಚಟುವಟಿಕೆಗಳನ್ನು ಮಕ್ಕಳು ಮಾಡುವರು.


ಸುಗಮಕಾರರು ಗಣಿತ ವಿಷಯದಲ್ಲಿ 10 ನಿಮಿಷಗಳ ಸಾಮೂಹಿಕ ಚಟುವಟಿಕೆ ನಂತರದಲ್ಲಿ 10 ನಿಮಿಷ ಪ್ರಗತಿನೋಟ ನೋಡಿಕೊಂಡು ಸಾಮಾಗ್ರಿಗಳೊಂದಿಗೆ ಮಕ್ಕಳು ಕುಳಿತುಕೊಂಡ ನಂತರ 10 ನಿಮಿಷದಲ್ಲಿ ಕ್ರಮವಾಗಿ 5,4,3,2 ತಟ್ಟೆಗಳಿಗೆ ಹೋಗಿ ಮಾರ್ಗದರ್ಶನ ಮಾಡುವರು ಹೀಗೆ 4 ನೇ ಗುಂಪಿಗೆ ಮಾರ್ಗದರ್ಶನ ಮಾಡಿ 3 ನೇ ಗುಂಪಿಗೂ ಬಂದು ಮಕ್ಕಳ ಅಭ್ಯಾಸ ಪುಸ್ತಕ ಅವರು ಬಂದಿರುವ ಚಟುವಟಿಕೆಗಳನ್ನು ಗಮನಿಸಿ ಅಗತ್ಯ ಇರುವ ಮಕ್ಕಳಿಗೆ ಮಾರ್ಗದರ್ಶನ ಮಾಡಿ  ಮಾಡಬೇಕಾದ  ಚಟುವಟಿಕೆ ಸಂಬಂಧಿಸಿದಂತೆ ಮಾರ್ಗದರ್ಶನ ಮಾಡಿ ಅಗತ್ಯ ಇದ್ದರೆ ಗೆಳೆಯರ ಸಹಕಾರ ಪಡೆಯಲು ತಿಳಿಸಿ ಆ ಗುಂಪಿನಲ್ಲಿ ಮೈಲಿಗಲ್ಲು ಮುಗಿಸಿದ ಮಗುವಿಗೂ ಅಥವಾ ಹಿರಿಯ ವಿದ್ಯಾರ್ಥಿಗೂ ಜೊತೆಗಾರರಿಗೆ ನೆರವು ನೀಡಲು ಸೂಚಿಸಿ 2 ನೇ ತಟ್ಟೆಗೆ ತೆರಳುವರು.


ಈ ರೀತಿಯಾಗಿ 3ನೇ ತಟ್ಟೆ/ಗುಂಪು ನಿರ್ವಹಣೆಯಾಗುವುದು


★★★★★★★★★★★


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ


 *ನಲಿಕಲಿ ರಸಪ್ರಶ್ನೆ 7* 

ಫಲಿತಾಂಶ

https://nalikalirenukaradhyatlm.blogspot.com/2021/01/7_20.html

No comments:

Post a Comment