🌸🌸🌸🌸🌸🌸🌸🌸
*ದಿನಕ್ಕೊಂದು ಲೋಗೋ*
*ದಿನ -53*
(ಮೂಲ : ಬೆಳ್ಳಿಮೋಡ ನಲಿಕಲಿ ಸಮಗ್ರ ಸಾಹಿತ್ಯ)
ದಿನಾಂಕ : 07.12.2020
*22.ಲೋಗೋ :ಸ್ಕೇಲ್*
**ಚಟುವಟಿಕೆ ಹೆಸರು :ಉದ್ದಳತೆ*
ನಲಿಕಲಿಯ ಗಣಿತದಲ್ಲಿ ಬರುವ ಒಂದು ವಿಶಿಷ್ಟ ಲೋಗೋ ಇದಾಗಿದೆ. ಇದು ಕಲಿಕಾ ಗೋಪುರದಲ್ಲಿ *ಕಲಿಕಾಂಶ ಹಂತ* ದ ಚಟುವಟಿಕೆಗಳಲ್ಲಿ ಬರುವ ಲೋಗೋ ಆಗಿದೆ ಮತ್ತು *ಗುಂಪು 1(ತಟ್ಟೆ-1)* ರಲ್ಲಿ ಈ ಚಟುವಟಿಕೆಯು *ಶಿಕ್ಷಕರ ಸಂಪೂರ್ಣ ಸಹಾಯ* ದಲ್ಲಿ ಈ ಚಟುವಟಿಕೆಯು ನಡೆಯುತ್ತದೆ .
1ನೇ ತರಗತಿಯಲ್ಲಿ 01 ಕಾರ್ಡುಗಳು
2ನೇ ತರಗತಿಯಲ್ಲಿ 01 ಕಾರ್ಡುಗಳು
3ನೇ ತರಗತಿಯಲ್ಲಿ 02 ಕಾರ್ಡುಗಳು ಇರುತ್ತವೆ
_ಚಟುವಟಿಕೆಯ ವಿಶ್ಲೇಷಣೆ:_
• ಗಣಿತದ ಪರಿಕಲ್ಪನೆಗಳನ್ನು ಅರ್ಥಮಾಡಿಸುವುದು,
• ಮುಂದಿನ ಚಟುವಟಿಕೆಯನ್ನು ಸ್ವತಂತ್ರವಾಗಿ ನಿರ್ವಹಿಸಲು ಸಮರ್ಥರಾಗುವಂತೆ ಮಾಡುವುದು.
* ಅಮೂರ್ತ ಕಲ್ಪನೆಗಳನ್ನು ಮೂರ್ತರೂಪದ ವಸ್ತುಗಳ ಮೂಲಕ ಮನವರಿಕೆ ಮಾಡಿಕೊಡುವುದು
_ಚಟುವಟಿಕೆಯ ಉದ್ದೇಶಗಳು:_
* ಉದ್ದದ ಮೂಲಮಾನ ತಿಳಿಯುವುದು.
• ಉದ್ದಕ್ಕೆ ಸಂಬಂಧಿಸಿದ ಸರಳ ಸಂಕಲನ, ವ್ಯವಕಲನ ಸಮಸ್ಯೆಗಳನ್ನು ಬಿಡಿಸುವುದು.
_ಚಟುವಟಿಕೆಯನ್ನು ಹೀಗೆ ಮಾಡೋಣ:_
• ಕಾರ್ಡಿನಲ್ಲಿ ನೀಡಿರುವ ಸೂಚನೆಗೆ ಅನುಗುಣವಾಗಿ ಹಂತ ಹಂತವಾಗಿ ಚಟುವಟಿಕೆ ಮಾಡಲು ಸಹಕರಿಸುವುದು,
• ಗೇಣು, ಮೊಳ, ಮಾರುಗಳ ಪರಿಚಯ ಮಾಡಿಸುವುದು. • ಉದ್ದದ ಮೂಲಮಾನ ಮೀಟರ್‌ನ ಪರಿಚಯ ಮಾಡಿಸುವುದು.
*ಉದ್ದಗಲಕ್ಕೆ ಸಂಬಂಧಿಸಿದ ದಿನನಿತ್ಯದ ಸರಳ ಸಂಕಲನ, ವ್ಯವಕಲನ ಸಮಸ್ಯೆಗಳನ್ನು ಬಿಡಿಸಲು
_ನಿರೀಕ್ಷಿತ ಕಲಿಕೆಯ ಫಲಗಳು:_
* ಗೇಣು, ಮೊಳ, ಮಾರು ಬಳಸಿ ಉದ್ದ ಅಳೆಯುವರು.
*ಉದ್ದದ ಮೂಲಮಾನ ಮೀಟರ್ ಎಂದು ತಿಳಿಯುವರು.
• ಉದ್ದಕ್ಕೆ ಸಂಬಂಧಿಸಿದಂತೆ ಸರಳ ಸಂಕಲನ, ವ್ಯವಕಲನದ ಲೆಕ್ಕಗಳನ್ನು ಬಿಡಿಸಲು ಸಮರ್ಥರಾಗುವರು.
*ನಲಿಕಲಿ app ಲಿಂಕ್*
https://play.google.com/store/apps/details?id=a1226930.wpu
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ
No comments:
Post a Comment