🌸🌸🌸🌸🌸🌸🌸🌸
*ದಿನಕ್ಕೊಂದು ಲೋಗೋ*
*ದಿನ -52*
(ಮೂಲ : ಬೆಳ್ಳಿಮೋಡ ನಲಿಕಲಿ ಸಮಗ್ರ ಸಾಹಿತ್ಯ)
ದಿನಾಂಕ : 06.12.2020
*21.ಲೋಗೋ :ಲೀಟರ್*
**ಚಟುವಟಿಕೆ ಹೆಸರು :ದ್ರವದ ಅಳತೆ*
ನಲಿಕಲಿಯ ಗಣಿತದಲ್ಲಿ ಬರುವ ಒಂದು ವಿಶಿಷ್ಟ ಲೋಗೋ ಇದಾಗಿದೆ. ಇದು ಕಲಿಕಾ ಗೋಪುರದಲ್ಲಿ *ಕಲಿಕಾಂಶ ಹಂತ* ದ ಚಟುವಟಿಕೆಗಳಲ್ಲಿ ಬರುವ ಲೋಗೋ ಆಗಿದೆ ಮತ್ತು *ಗುಂಪು 1(ತಟ್ಟೆ-1)* ರಲ್ಲಿ ಈ ಚಟುವಟಿಕೆಯು *ಶಿಕ್ಷಕರ ಸಂಪೂರ್ಣ ಸಹಾಯ* ದಲ್ಲಿ ಈ ಚಟುವಟಿಕೆಯು ನಡೆಯುತ್ತದೆ .
1ನೇ ತರಗತಿಯಲ್ಲಿ 00 ಕಾರ್ಡುಗಳು
2ನೇ ತರಗತಿಯಲ್ಲಿ 01 ಕಾರ್ಡುಗಳು
3ನೇ ತರಗತಿಯಲ್ಲಿ 02 ಕಾರ್ಡುಗಳು ಇರುತ್ತವೆ
_ಚಟುವಟಿಕೆಯ ವಿಶ್ಲೇಷಣೆ:_
• ಗಣಿತದ ಪರಿಕಲ್ಪನೆಗಳನ್ನು ಅರ್ಥಮಾಡಿಸುವುದು,
• ಮುಂದಿನ ಚಟುವಟಿಕೆಯನ್ನು ಸ್ವತಂತ್ರವಾಗಿ ನಿರ್ವಹಿಸಲು ಸಮರ್ಥರಾಗುವಂತೆ ಮಾಡುವುದು.
* ಅಮೂರ್ತ ಕಲ್ಪನೆಗಳನ್ನು ಮೂರ್ತರೂಪದ ವಸ್ತುಗಳ ಮೂಲಕ ಮನವರಿಕೆ ಮಾಡಿಕೊಡುವುದು.
_ಚಟುವಟಿಕೆಯ ಉದ್ದೇಶಗಳು:_
• ಆನೌಪಚಾರಿಕ ಗಾತ್ರ ಅಳತೆಯ ಮಾನಗಳ ಬಗ್ಗೆ ತಿಳಿಯುವುದು/ ಅಳೆಯುವುದು.
*ಔಪಚಾರಿಕ ಗಾತ್ರದ ಮೂಲಮಾನ ತಿಳಿಯುವುದು,
• ಗಾತ್ರಕ್ಕೆ ಸಂಬಂಧಿಸಿದ ನಿತ್ಯಜೀವನದ ಸಂಕಲನ, ವ್ಯವಕಲನ ಸಮಸ್ಯೆಗಳನ್ನು ಬಿಡಿಸುವುದು.
_ಚಟುವಟಿಕೆಯನ್ನು ಹೀಗೆ ಮಾಡೋಣ:_
• ಕಾರ್ಡಿನಲ್ಲಿ ನೀಡಿರುವ ಸೂಚನೆಗೆ ಅನುಗುಣವಾಗಿ ಹಂತ ಹಂತವಾಗಿ ಚಟುವಟಿಕೆ ಮಾಡಲು ಸಹಕರಿಸುವುದು.
• ದ್ರವದ ಅಳತೆಯ ಕಲಿಕೋಪಕರಣ ಪ್ರದರ್ಶಿಸಿ ಪರಿಚಯಿಸುವುದು,
• ಲೀಟರ್ ಗಾತ್ರದ ಮೂಲಮಾನ ಎಂದು ಅರ್ಥೈಸುವುದು.
• ಲೀಟರ್ ಬಳಸುವ ಸಂದರ್ಭಗಳ ಪಟ್ಟಿ ತಯಾರಿಸಲು ಸಹಾಯ ಮಾಡುವುದು,
• ಗಾತ್ರಕ್ಕೆ ಸಂಬಂಧಿಸಿದ ನಿತ್ಯಜೀವನದ ಸರಳ ಸಮಸ್ಯೆಗಳನ್ನು ಬಿಡಿಸಲು ಸಹಕಾರ ನೀಡುವುದು.
_ನಿರೀಕ್ಷಿತ ಕಲಿಕೆಯ ಫಲ:_
• ಅನೌಪಚಾರಿಕ ಗಾತ್ರದ ಮಾನಗಳಾದ ಲೋಟ, ಜಗ್, ಬಕೆಟ್ ಮೂಲಕ ನೀರನ್ನು ಅಳೆಯುವರು.
ಔಪಚಾರಿಕ ಮಾನಗಳಾದ 250ಮಿ.ಲೀ.1/2ಲೀ. ಮತ್ತು 1 ಲೀಟರ್ ಬಳಸಿ ಅಳೆಯುವರು.
• ಔಪಚಾರಿಕ ಗಾತ್ರದ ಮೂಲಮಾನ ತಿಳಿಯುವರು
• ಲೀಟರ್ ಬಳಸುವ ಸಂದರ್ಭಗಳ ಬಗ್ಗೆ ತಿಳಿಯುವರು.
• ಗಾತ್ರಕ್ಕೆ ಸಂಬಂಧಿಸಿದ ನಿತ್ಯ ಜೀವನದ ಸಂಕಲನ ವ್ಯವಕಲನದ ಸಮಸ್ಯೆಗಳನ್ನು ಬಿಡಿಸುವುದು.
*ನಲಿಕಲಿ app ಲಿಂಕ್*
https://play.google.com/store/apps/details?id=a1226930.wpu
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ
No comments:
Post a Comment