🙏🏻 *50ರ ಸಂಭ್ರಮ* 🙏🏻
🌸🌸🌸🌸🌸🌸🌸🌸
*ದಿನಕ್ಕೊಂದು ಲೋಗೋ*
*ದಿನ -50*
(ಮೂಲ : ಬೆಳ್ಳಿಮೋಡ ನಲಿಕಲಿ ಸಮಗ್ರ ಸಾಹಿತ್ಯ)
ದಿನಾಂಕ : 04.12.2020
*19.ಲೋಗೋ :ಪಾರಿವಾಳ*
**ಚಟುವಟಿಕೆ ಹೆಸರು :ಭಿನರಾಶಿ*
ನಲಿಕಲಿಯ ಗಣಿತದಲ್ಲಿ ಬರುವ ಒಂದು ವಿಶಿಷ್ಟ ಲೋಗೋ ಇದಾಗಿದೆ. ಇದು ಕಲಿಕಾ ಗೋಪುರದಲ್ಲಿ *ಕಲಿಕಾಂಶ ಹಂತ* ದ ಚಟುವಟಿಕೆಗಳಲ್ಲಿ ಬರುವ ಲೋಗೋ ಆಗಿದೆ ಮತ್ತು *ಗುಂಪು 1(ತಟ್ಟೆ-1)* ರಲ್ಲಿ ಈ ಚಟುವಟಿಕೆಯು *ಶಿಕ್ಷಕರ ಸಂಪೂರ್ಣ ಸಹಾಯ* ದಲ್ಲಿ ಈ ಚಟುವಟಿಕೆಯು ನಡೆಯುತ್ತದೆ .
1ನೇ ತರಗತಿಯಲ್ಲಿ 00 ಕಾರ್ಡುಗಳು
2ನೇ ತರಗತಿಯಲ್ಲಿ 00 ಕಾರ್ಡುಗಳು
3ನೇ ತರಗತಿಯಲ್ಲಿ 01 ಕಾರ್ಡುಗಳು ಇರುತ್ತವೆ
_ಚಟುವಟಿಕೆಯ ವಿಶ್ಲೇಷಣೆ:_
• ಗಣಿತದ ಪರಿಕಲ್ಪನೆಗಳನ್ನು ಅರ್ಥಮಾಡಿಸುವುದು,
• ಮುಂದಿನ ಚಟುವಟಿಕೆಯನ್ನು ಸ್ವತಂತ್ರವಾಗಿ ನಿರ್ವಹಿಸಲು ಸಮರ್ಥರಾಗುವಂತೆ ಮಾಡುವುದು.
* ಅಮೂರ್ತ ಕಲ್ಪನೆಗಳನ್ನು ಮೂರ್ತರೂಪದ ವಸ್ತುಗಳ ಮೂಲಕ ಮನವರಿಕೆ ಮಾಡಿಕೊಡುವುದು.
*ಚಟುವಟಿಕೆಯ ಉದ್ದೇಶಗಳು:*
• ಭಿನ್ನರಾಶಿ ಎಂದರೇನು ಎಂದು ತಿಳಿಯುವುದು,
• 1/4. 1/2. 3/4 ಎಂದರೇನೆಂದು ತಿಳಿಯುವುದು, • ಅಂಶ ಮತ್ತು ಭೇದ ಬರೆಯುವುದನ್ನು ತಿಳಿಯುವುದು.
• ವಸ್ತು ಮತ್ತು ಚಿತ್ರಗಳ ಸಹಾಯದಿಂದ ಭಿನ್ನರಾಶಿಗಳ ಪರಿಕಲ್ಪನೆ ಅರಿಯುವುದು.
_ಚಟುವಟಿಕೆಯನ್ನು ಹೀಗೆ ಮಾಡೋಣ:
_
* ಕಾರ್ಡಿನಲ್ಲಿ ನೀಡಿರುವ ಸೂಚನೆಗೆ ಅನುಗುಣವಾಗಿ ಹಂತ ಹಂತವಾಗಿ ಚಟುವಟಿಕೆ ಮಾಡಲು ಸಹಕರಿಸುವುದು.
*ಅಗತ್ಯ ಕಲಿಕೋಪಕರಣಗಳನ್ನು ಹೊಂದಿಸಿಕೊಳ್ಳುವುದು,
• ವಸ್ತುಗಳು ಮತ್ತು ಚಿತ್ರಗಳ ಸಹಾಯದಿಂದ ಭಿನ್ನರಾಶಿಗಳ ಪರಿಕಲ್ಪನೆ ಕಟ್ಟಿಕೊಳ್ಳಲು ಸಹಕರಿಸುವುದು,
•1/4. 1/2. 3/4 ಎಂದರೇನೆಂದು ತಿಳಿಯಲು ಅನುಕೂಲಿಸುವುದು.
_ನಿರೀಕ್ಷಿತ ಕಲಿಕೆಯ ಫಲಗಳು:_
• ವಸ್ತು ಮತ್ತು ಚಿತ್ರಗಳ ಸಹಾಯದಿಂದ ಭಿನ್ನರಾಶಿಗಳ ಪರಿಕಲ್ಪನೆ ಆರಿಯುವರು.
* ಅಂಶ ಮತ್ತು ಭೇದ ಗುರುತಿಸುವರು.
* 1/4. 1/2. 3/4 ಏನನ್ನು ಸೂಚಿಸುತ್ತವೆ ಎಂಬುದನ್ನು ತಿಳಿಯುವರು.
*ನಲಿಕಲಿ app*
https://play.google.com/store/apps/details?id=a1226930.wpu
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ
No comments:
Post a Comment