Saturday, 28 November 2020

ನಿಮ್ಮ ವೇದಿಕೆ

 ನಿಮ್ಮವೇದಿಕೆ - 3

ಸ.ಕಿ.ಪ್ರಾ.ಶಾಲೆ ಕಲ್ಕುರ್ಚಿ

ಸಿರಿಗೆರೆ ಕ್ಲಸ್ಟರ್ 

ಶಿವಮೊಗ್ಗ ತಾ.ಜಿ.


ಎಲ್ಲರಿಗೂ ನಮಸ್ತೆ..

ನಲಿಕಲಿ ಎಂಬುದು ನಮ್ಮ ಹೆಮ್ಮೆ . ನಲಿಕಲಿ ಎಂಬ ಪದ್ಧತಿ ಅನೇಕ ವೈವಿಧ್ಯತೆಗಳ ಆಗರ ನಮ್ಮ ನಲಿಕಲಿ app ಬ್ಲಾಗ್ ನಲ್ಲಿ ಒಂದು ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ ಅದುವೇ ನಿಮ್ಮ ವೇದಿಕೆ 

ಇದು ನಲಿಕಲಿ ಶಿಕ್ಷಕರ ಕ್ರಿಯಾಶೀಲತೆಗೆ ಒಂದು ಪುಟ್ಟ ವೇದಿಕೆಯಾಗಿದೆ ಅನೇಕ ಶಿಕ್ಷಕರಿಗೆ ಇದು ದಿಕ್ಸೂಚಿ ಸಹಾಯಕ ಆಗಬಲ್ಲದು ಎಂಬ ಆಶಯದೊಂದಿಗೆ ಇಂದು ನಿಮ್ಮ ವೇದಿಕೆಯಡಿಯಲ್ಲಿ 3ನೇ ಶಾಲೆಯ ಪರಿಚಯ  ನೀಡುತ್ತಿದ್ದೇವೆ.

ಈ ದಿನದ ನಲಿಕಲಿ ಕ್ರಿಯಾಶೀಲ ಶಿಕ್ಷಕಿಯರಾದಂತಹ ಶ್ರೀಮತಿ ಮೇದಿನಿ ಕೆ ಮತ್ತು ರೇಖಾ ಎಂ ಹೆಚ್  ಅವರು ಮತ್ತು ಅವರ ಶಾಲೆ. ಈ ಶಾಲೆಯು ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ತಾಲ್ಲೂಕಿನ  ಶಾಲೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಲ್ಕುರ್ಚಿ ಸಿರಿಗೆರೆ ಕ್ಲಸ್ಟರ್  ಶಾಲೆಯಾಗಿದೆ


ಈ ಶಾಲೆಯು 2019-20ನೇ ಸಾಲಿನ ಜಿಲ್ಲೆಯ ಅತ್ಯುತ್ತಮ ನಲಿಕಲಿ ಶಾಲೆಗಳ ಪೈಕಿ ಒಂದು ಎಂಬುದು ಹೆಮ್ಮೆಯ ಸಂಗತಿ ಈ ಶಾಲೆಯಲ್ಲಿ ನಲಿಕಲಿ ವಿಧಾನವನ್ನು ಅತ್ಯುತ್ತಮ ರೀತಿಯಲ್ಲಿ ನಡೆಸುತ್ತಿರುವ ಕೀರ್ತಿ ಇಬ್ಬರು ಶಿಕ್ಷಕಿಯರಿಗೆ ಸಲ್ಲುತ್ತಿದೆ ಇಲ್ಲಿಯ ಮಕ್ಕಳ ತೊಡಗುವಿಕೆ ವಿಭಿನ್ನ ವಿಧಾನ ಗಳ ಮೂಲಕ ಸಮುದಾಯದ ಮೆಚ್ಚುಗೆಗೆ ಶಾಲೆ ಪಾತ್ರವಾಗಿದೆ .ಈ ಶಾಲೆಗೆ ಭೇಟಿ ನೀಡುವ ಅನೇಕ ಅಧಿಕಾರಿಗಳು ಶಾಲೆಯ ಶಿಕ್ಷಕರ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ ಅಲ್ಲದೆ ಇಲ್ಲಿಯ ಶಿಕ್ಷಕರು ಇಲಾಖೆಯ ಅಧಿಕಾರಿಗಳ ಪ್ರೋತ್ಸಾಹವನ್ನು ಸ್ಮರಿಸುತ್ತಾರೆ.  ನಲಿಕಲಿಯನ್ನು ವಿಭಿನ್ನವಾಗಿ ಅಳವಡಿಸಿಕೊಂಡಿರುವ ಶಾಲೆ ಇದಾಗಿದೆ .

ಈ ಶಾಲೆಯಲ್ಲಿ ಎಲ್ಲ ವಿಷಯಗಳಿಗೂ ವಿಭಿನ್ನ ಕಲಿಕೋಪಕರಣ ರಾಶಿ ಇಲ್ಲಿ ಲಭ್ಯವಿದೆ ಅದು ಸುಂದರವಾಗಿ ಅಚ್ಚುಕಟ್ಟಾಗಿ ಇವುಗಳನ್ನು ತಯಾರಿಸಿ ಸದ್ಭಳಕೆ ಮಾಡುತ್ತಿದ್ದಾರೆ ಅಲ್ಲದೆ ಇವರ ಕಾರ್ಯಗಳು ಡಯಟ್ ಶಿವಮೊಗ್ಗದ ವಿಶೇಷ ಕಾರ್ಯವಾದ ಸಾಧ್ಯವೆಂದರೆ ಸಾಧ್ಯ ಫ್ಲೆಕ್ಸ್ ನಲ್ಲಿ ಸಾಕಷ್ಟು ಬಾರಿ ಅವಕಾಶ ಪಡೆದಿರುವ ಕೀರ್ತಿ ಸಲ್ಲುತ್ತದೆ ಅವುಗಳ ಫೋಟೋಗಳನ್ನು ಕೂಡ ಇಲ್ಲಿ ನೀವು ನೋಡಬಹುದು.


ಇಲ್ಲಿ ಮಕ್ಕಳಿಂದ ಶಿಕ್ಷಕಿಯರು ಮಾಡಿಸಿರುವ ಕ್ರಾಫ್ಟ್ ಕಾರ್ಯಗಳಂತೂ ಸುಂದರವಾಗಿವೆ ಇಲ್ಲಿಯ ಪರಿಸರವು ಸುಂದರ ಕೈತೋಟದಿಂದ ಕೂಡಿದೆ ಮಕ್ಕಳ ಕಲಿಯುವಿಕೆಗಾಗಿ ಕುಟೀರವೂ ಇಲ್ಲಿಯ ಒಂದು ಆಕರ್ಷಣೆಯಾಗಿದೆ

ಅವರ ಶಾಲೆಯ ನಲಿಕಲಿ ತರಗತಿ ವಿಡಿಯೋ ಮತ್ತು ನಲಿಕಲಿ ಕಲಿಕೋಪಕರಣಗಳು ಮತ್ತು ಅವರ ಶಾಲೆಯ ನಲಿಕಲಿ ಯಶೋಗಾಥೆ ಫೈಲ್ ಕೂಡ ಇಲ್ಲಿ ಲಭ್ಯವಿದೆ ಅವರ ಕಾರ್ಯವು ಎಲ್ಲರಿಗೂ ಪ್ರೇರಣೆ ನೀಡುತ್ತದೆ ಉತ್ಸಾಹ ಮೂಡಿಸುತ್ತದೆ .

ಇವರ ಕಾರ್ಯಕ್ಕೆ ನಿಮ್ಮದೊಂದು ಮೆಚ್ಚುಗೆಯ ನುಡಿಯನ್ನು ಈ ಕಾಮೆಂಟ್ ಬಾಕ್ಸ್ ನಲ್ಲಿ ಬರೆಯುವ ಮೂಲಕ ಅವರ ಹೆಚ್ಚಿನ ಕಾರ್ಯಗಳಿಗೆ ನೀವು ಪ್ರೇರಕರಾಗಿ


ನಲಿಕಲಿ ತರಗತಿ ವಿಡಿಯೋ zoom ಮಾಡಿರಿ






ಕಲಿಕೋಪಕರಣಗಳ

ವಿಡಿಯೋ zoom ಮಾಡಿರಿ




ಡಯಟ್ ಶಿವಮೊಗ್ಗದ ಸಾಧ್ಯವೆಂದರೆ ಸಾಧ್ಯ ಫ್ಲೆಕ್ಸ್ ನಲ್ಲಿ ಶಾಲೆಯ ಸಾಧನೆ








ಮಕ್ಕಳ ಕ್ರಾಫ್ಟ್ ಗಳು






ಈ ಶಾಲೆಯ ನಲಿಕಲಿ ಯಶೋಗಾಥೆ ಫೈಲ್ ವೀಕ್ಷಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿರಿ

https://drive.google.com/file/d/1BRougHBaSeqQRtnRj2qUQueYcu2sWqfW/view?usp=drivesdk



ನಲಿಕಲಿ app ನ ಕಲಿಕೋಪಕರಣ ವಿಭಾಗದಲ್ಲಿ ಈ ಶಾಲೆಯ ಕಲಿಕೋಪಕರಣ pdf ದೊರೆಯುವುದು


ವಂದನೆಗಳು....

ರೇಣುಕಾರಾಧ್ಯ

ತೀರ್ಥಹಳ್ಳಿ


                   


   ನಿಮ್ಮ ವೇದಿಕೆ                     

ಮಾರ್ಗದರ್ಶಕರು


             ಶ್ರೀಯುತ ಫಣೀಶ

 ಹಿರಿಯ ಉಪನ್ಯಾಸಕರು*

      *ಡಯಟ್ ಶಿವಮೊಗ್ಗ*

1 comment:

  1. ಸುಂದರ ಕೆಲಸ.ಆಳವಾಗಿ ಚಿಂತಿಸುವ ಜೊತೆಗೆ ಮಕ್ಕಳ ಕಲಿಕೆಗೆ ಪೂರಕ ಕಲಿಕೆಗೆ ಸಹಾಯಕ..ಅಭಿನಂದನೆಗಳೂ 👌

    ReplyDelete