Sunday, 29 November 2020

ದಿನಕ್ಕೊಂದು ಲೋಗೋ 45

 *ದಿನಕ್ಕೊಂದು ಲೋಗೋ* 

       ದಿನ -45

 (ಮೂಲ : ಬೆಳ್ಳಿಮೋಡ ನಲಿಕಲಿ ಸಮಗ್ರ ಸಾಹಿತ್ಯ)


ದಿನಾಂಕ : 29.11.2020

 

 *14.ಲೋಗೋ :ಬಾತುಕೊಳಿ* 🦆


 **ಚಟುವಟಿಕೆ ಹೆಸರು :ವ್ಯವಕಲನ* 


ನಲಿಕಲಿಯ ಗಣಿತದಲ್ಲಿ ಬರುವ ಒಂದು ವಿಶಿಷ್ಟ ಲೋಗೋ ಇದಾಗಿದೆ. ಇದು ಕಲಿಕಾ ಗೋಪುರದಲ್ಲಿ  *ಕಲಿಕಾಂಶ ಹಂತ* ದ ಚಟುವಟಿಕೆಗಳಲ್ಲಿ  ಬರುವ ಲೋಗೋ ಆಗಿದೆ ಮತ್ತು *ಗುಂಪು 1(ತಟ್ಟೆ-1)* ರಲ್ಲಿ ಈ ಚಟುವಟಿಕೆಯು *ಶಿಕ್ಷಕರ ಸಂಪೂರ್ಣ ಸಹಾಯ* ದಲ್ಲಿ ಈ ಚಟುವಟಿಕೆಯು ನಡೆಯುತ್ತದೆ .

1ನೇ ತರಗತಿಯಲ್ಲಿ 04 ಕಾರ್ಡುಗಳು

 2ನೇ ತರಗತಿಯಲ್ಲಿ 04 ಕಾರ್ಡುಗಳು

 3ನೇ ತರಗತಿಯಲ್ಲಿ 04 ಕಾರ್ಡುಗಳು  ಇರುತ್ತವೆ


 _ಚಟುವಟಿಕೆಯ ವಿಶ್ಲೇಷಣೆ:_ 


• ಗಣಿತದ ಮೂಲ ಪರಿಕಲ್ಪನೆಗಳನ್ನು ಅರ್ಥಮಾಡಿಸುವುದು,


• ಮುಂದಿನ ಚಟುವಟಿಕೆಯನ್ನು ಸ್ವತಂತ್ರವಾಗಿ ನಿರ್ವಹಿಸಲು ಸಮರ್ಥರಾಗುವಂತೆ ಮಾಡುವುದು.


* ಅಮೂರ್ತ ಕಲ್ಪನೆಗಳನ್ನು ಮೂರ್ತರೂಪದ ವಸ್ತುಗಳ ಮೂಲಕ ಮನವರಿಕೆ ಮಾಡಿಕೊಡುವುದು.


 _ಚಟುವಟಿಕೆಯ ಉದ್ದೇಶಗಳು:_ 


* ವಸ್ತುಗಳನ್ನು ಬಳಸಿ ವ್ಯವಕಲನ ಮಾಡುವ ಸಾಮರ್ಥ್ಯ ಪಡೆಯುವುದು.


* 1, 2 ಮತ್ತು 3 ಅಂಕಿ ಸಂಖ್ಯೆಗಳ ವ್ಯವಕಲನ ಮಾಡಲು ಸಮರ್ಥರಾಗುವುದು.


• ದಶಕ ರಹಿತ ಮತ್ತು ದಶಕ ಸಹಿತವಾಗಿ ವ್ಯವಕಲನ ಮಾಡುವ ಸಾಮರ್ಥ್ಯ ಪಡೆಯುವುದು. 

* ನಿತ್ಯ ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಿಡಿಸುವ ಕೌಶಲ ಪಡೆಯುವುದು,


 _ಚಟುವಟಿಕೆಯನ್ನು ಹೀಗೆ ಮಾಡೋಣ:

* ಕಾರ್ಡಿನಲ್ಲಿ ನೀಡಿರುವ ಸೂಚನೆಗೆ ಅನುಗುಣವಾಗಿ ಹಂತ ಹಂತವಾಗಿ ಚಟುವಟಿಕೆ ನಿರ್ವಹಿಸುವುದು.


ವಸ್ತುಗಳನ್ನು ಬಳಸಿ ವ್ಯವಕಲನ ಮಾಡಲು ನೆರವಾಗುವುದು.


*ಅಗತ್ಯವಿರುವ ಕಲಿಕಾ ಸಾಮಗ್ರಿಗಳನ್ನು ಹೊಂದಿಸಿಕೊಳ್ಳುವುದು, 

* 1, 2 ಮತ್ತು 3 ಅಂಕಿ ಸಂಖ್ಯೆಗಳ ವ್ಯವಕಲನವನ್ನು ದಶಕ ರಹಿತ ಮತ್ತು ದಶಕ ಸಹಿತ ಮಾಡಲು ಸಹಕರಿಸುವುದು


• ನಿತ್ಯ ಜೀವನಕ್ಕೆ ಸಂಬಂಧಿಸಿದ ವ್ಯವಕಲನದ ಸರಳ ಸಮಸ್ಯೆಗಳನ್ನು ಬಿಡಿಸಲು ನೆರವಾಗುವುದು,


 _ನಿರೀಕ್ಷಿತ ಕಲಿಕೆಯ ಫಲಗಳು:_ 


ವಸ್ತುಗಳನ್ನು ಬಳಸಿ ಸಂಕಲನ ಮಾಡುವ ಸಾಮರ್ಥ್ಯ ಗಳಿಸುವರು, 


* 1, 2 ಮತ್ತು 3 ಅಂಕಿ ಸಂಖ್ಯೆಗಳ ವ್ಯವಕಲನ ಮಾಡಲು ತಿಳಿಯುವರು.


* ದಶಕ ರಹಿತ ಮತ್ತು ದಶಕ ಸಹಿತವಾಗಿ ವ್ಯವಕಲನ ಮಾಡುವ ಸಾಮರ್ಥ್ಯ ಪಡೆಯುವರು. 

*ನಿತ್ಯ ಜೀವನಕ್ಕೆ ಸಂಬಂಧಿಸಿದ ವ್ಯವಕಲನ ಸಮಸ್ಯೆ ಬಿಡಿಸುವ ಕೌಶಲ ಪಡೆಯುವರು.


 *ನಿಮ್ಮ ವೇದಿಕೆ* 

ಸ.ಕಿ.ಪ್ರಾ.ಶಾಲೆ ಕಲ್ಕುರ್ಚಿ ಯಶೋಗಾಥೆ ಲಿಂಕ್

https://nalikalirenukaradhyatlm.blogspot.com/2020/11/blog-post_94.html



ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

No comments:

Post a Comment