*ದಿನಕ್ಕೊಂದು ಲೋಗೋ*
ದಿನ -47
(ಮೂಲ : ಬೆಳ್ಳಿಮೋಡ ನಲಿಕಲಿ ಸಮಗ್ರ ಸಾಹಿತ್ಯ)
ದಿನಾಂಕ : 01.12.2020
*16.ಲೋಗೋ :ಜೋಡಿ ಕೊಕ್ಕರೆ*
**ಚಟುವಟಿಕೆ ಹೆಸರು :ಗುಣಾಕಾರ*
ನಲಿಕಲಿಯ ಗಣಿತದಲ್ಲಿ ಬರುವ ಒಂದು ವಿಶಿಷ್ಟ ಲೋಗೋ ಇದಾಗಿದೆ. ಇದು ಕಲಿಕಾ ಗೋಪುರದಲ್ಲಿ *ಕಲಿಕಾಂಶ ಹಂತ* ದ ಚಟುವಟಿಕೆಗಳಲ್ಲಿ ಬರುವ ಲೋಗೋ ಆಗಿದೆ ಮತ್ತು *ಗುಂಪು 1(ತಟ್ಟೆ-1)* ರಲ್ಲಿ ಈ ಚಟುವಟಿಕೆಯು *ಶಿಕ್ಷಕರ ಸಂಪೂರ್ಣ ಸಹಾಯ* ದಲ್ಲಿ ಈ ಚಟುವಟಿಕೆಯು ನಡೆಯುತ್ತದೆ .
1ನೇ ತರಗತಿಯಲ್ಲಿ 00 ಕಾರ್ಡುಗಳು
2ನೇ ತರಗತಿಯಲ್ಲಿ 03 ಕಾರ್ಡುಗಳು
3ನೇ ತರಗತಿಯಲ್ಲಿ 02 ಕಾರ್ಡುಗಳು ಇರುತ್ತವೆ
_ಚಟುವಟಿಕೆಯ ವಿಶ್ಲೇಷಣೆ:_
• ಗಣಿತದ ಮೂಲ ಪರಿಕಲ್ಪನೆಗಳನ್ನು ಅರ್ಥಮಾಡಿಸುವುದು,
• ಮುಂದಿನ ಚಟುವಟಿಕೆಯನ್ನು ಸ್ವತಂತ್ರವಾಗಿ ನಿರ್ವಹಿಸಲು ಸಮರ್ಥರಾಗುವಂತೆ ಮಾಡುವುದು.
* ಅಮೂರ್ತ ಕಲ್ಪನೆಗಳನ್ನು ಮೂರ್ತರೂಪದ ವಸ್ತುಗಳ ಮೂಲಕ ಮನವರಿಕೆ ಮಾಡಿಕೊಡುವುದು.
_ಚಟುವಟಿಕೆಯ ಉದ್ದೇಶಗಳು_
* ತರಗತಿಗನುಸಾರ ಒಂದಂಕಿ ಸಂಖ್ಯೆಯಿಂದ 2 ಮತ್ತು 3 ಅಂಕಿಯ ಗುಣಾ ಕಾರ ಮಾಡುವ ಸಾಮರ್ಥ್ಯ ಪಡೆಯುವುದು.
* ತರಗತಿಗನುಗುಣವಾಗಿ ಮಗ್ಗಿ ಹೇಳುವುದು.(1 ರಿಂದ 15 ರವರೆಗೆ ಮಗ್ಗಿ ಹೇಳುವುದು),
* ನಿತ್ಯ ಜೀವನಕ್ಕೆ ಸಂಬಂಧಿಸಿದ ಗುಣಾಕಾರದ ಲೆಕ್ಕ ಬಿಡಿಸುವುದು,
_ಚಟುವಟಿಕೆಯನ್ನು ಹೀಗೆ ಮಾಡೋಣ:_
* ಕಾರ್ಡಿನಲ್ಲಿ ನೀಡಿರುವ ಸೂಚನೆಗಳಿಗೆ ಅನುಗುಣವಾಗಿ ಹಂತ ಹಂತವಾಗಿ ಚಟುವಟಿಕೆ ನಿರ್ವಹಿಸುವುದು,
* ಒಂದಂಕಿಯಿಂದ 2 ಮತ್ತು 3 ಅಂಕಿ ಸಂಖ್ಯೆಗಳ ಗುಣಾಕಾರ ಮಾಡಲು ಸಹಕರಿಸುವುದು.
* ನಿತ್ಯ ಜೀವನಕ್ಕೆ ಸಂಬಂಧಿಸಿದ ಗುಣಾಕಾರದ ಲೆಕ್ಕ ಬಿಡಿಸಲು ತಿಳಿವಳಿಕೆ ನೀಡುವುದು.
_ನಿರೀಕ್ಷಿತ ಕಲಿಕೆಯ ಫಲಗಳು:_
• ತರಗತಿಗನುಗುಣವಾಗಿ ಒಂದಂಕಿಯಿಂದ 2 ಮತ್ತು 3 ಅಂಕಿ ಸಂಖ್ಯೆಗಳನ್ನು ಗುಣಾಕಾರ ಮಾಡುವರು.
• ತರಗತಿಗನುಗುಣವಾಗಿ (1 ರಿಂದ 15 ರವರೆಗೆ) ಮಗ್ಗಿ ಹೇಳುವರು.
• ನಿತ್ಯಜೀವನಕ್ಕೆ ಸಂಬಂಧಿಸಿದ ಗುಣಾಕಾರದ ಸಮಸ್ಯೆಗಳನ್ನು ಬಿಡಿಸಲು ಸಮರ್ಥರಾಗುವರು.
*ಧನ್ಯವಾದಗಳು*
*1ಲಕ್ಷ* ವೀಕ್ಷಣೆ
*ನಲಿಕಲಿ app*
https://play.google.com/store/apps/details?id=a1226930.wpu
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ
No comments:
Post a Comment