*ದಿನಕ್ಕೊಂದು ಲೋಗೋ*
ದಿನ -46
(ಮೂಲ : ಬೆಳ್ಳಿಮೋಡ ನಲಿಕಲಿ ಸಮಗ್ರ ಸಾಹಿತ್ಯ)
ದಿನಾಂಕ : 30.11.2020
*15.ಲೋಗೋ :+-×÷*
**ಚಟುವಟಿಕೆ ಹೆಸರು :ಮಿಶ್ರಕ್ರಿಯೆ*
ನಲಿಕಲಿಯ ಗಣಿತದಲ್ಲಿ ಬರುವ ಒಂದು ವಿಶಿಷ್ಟ ಲೋಗೋ ಇದಾಗಿದೆ. ಇದು ಕಲಿಕಾ ಗೋಪುರದಲ್ಲಿ *ಕಲಿಕಾಂಶ ಹಂತ* ದ ಚಟುವಟಿಕೆಗಳಲ್ಲಿ ಬರುವ ಲೋಗೋ ಆಗಿದೆ ಮತ್ತು *ಗುಂಪು 1(ತಟ್ಟೆ-1)* ರಲ್ಲಿ ಈ ಚಟುವಟಿಕೆಯು *ಶಿಕ್ಷಕರ ಸಂಪೂರ್ಣ ಸಹಾಯ* ದಲ್ಲಿ ಈ ಚಟುವಟಿಕೆಯು ನಡೆಯುತ್ತದೆ .
1ನೇ ತರಗತಿಯಲ್ಲಿ 01 ಕಾರ್ಡುಗಳು
2ನೇ ತರಗತಿಯಲ್ಲಿ 04 ಕಾರ್ಡುಗಳು
3ನೇ ತರಗತಿಯಲ್ಲಿ 02 ಕಾರ್ಡುಗಳು ಇರುತ್ತವೆ
_ಚಟುವಟಿಕೆಯ ವಿಶ್ಲೇಷಣೆ:_
• ಗಣಿತದ ಮೂಲ ಪರಿಕಲ್ಪನೆಗಳನ್ನು ಅರ್ಥಮಾಡಿಸುವುದು,
• ಮುಂದಿನ ಚಟುವಟಿಕೆಯನ್ನು ಸ್ವತಂತ್ರವಾಗಿ ನಿರ್ವಹಿಸಲು ಸಮರ್ಥರಾಗುವಂತೆ ಮಾಡುವುದು.
* ಅಮೂರ್ತ ಕಲ್ಪನೆಗಳನ್ನು ಮೂರ್ತರೂಪದ ವಸ್ತುಗಳ ಮೂಲಕ ಮನವರಿಕೆ ಮಾಡಿಕೊಡುವುದು.
_ಚಟುವಟಿಕೆಯ ಉದ್ದೇಶಗಳು:_
• ಗಣಿತದ ಮೂಲ ಕ್ರಿಯೆಗಳಾದ ಸಂಕಲನ ಮತ್ತು ವ್ಯವಕಲನ ಒಟ್ಟಿಗೆ ಮಾಡುವ ಸಾಮರ್ಥ್ಯ ಪಡೆಯುವುದು.
• ವಸ್ತುಗಳನ್ನು ಬಳಸಿ ಮಿಶ್ರಕ್ರಿಯೆ ಮಾಡುವ ಸಾಮರ್ಥ್ಯ ಪಡೆಯುವುದು.
* ದಶಕ ಸಹಿತ ಮತ್ತು ದಶಕ ರಹಿತ ಮಿಶ್ರಕ್ರಿಯೆ ಮಾಡಲು ತಿಳಿಯುವುದು,
_ಚಟುವಟಿಕೆಯನ್ನು ಹೀಗೆ ಮಾಡೋಣ:
_
* ಕಾರ್ಡಿನಲ್ಲಿರುವ ಸೂಚನೆಗೆ ಅನುಗುಣವಾಗಿ ಹಂತ ಹಂತವಾಗಿ ಚಟುವಟಿಕೆ ನಿರ್ವಹಿಸುವುದು,
* ವಸ್ತುಗಳನ್ನು ಬಳಸಿ ಮಿಶ್ರಕ್ರಿಯೆ ಮಾಡಲು ಸಹಕರಿಸುವುದು,
• ಅಗತ್ಯ ಕಲಿಕೋಪಕರಣಗಳನ್ನು ಹೊಂದಿಸಿಕೊಳ್ಳುವುದು,
* 1, 2 ಮತ್ತು 3 ಅಂಕಿ ಸಂಖ್ಯೆಗಳ ಮಿಶ್ರಕ್ರಿಯೆ ಮಾಡಲು ಚಟುವಟಿಕೆ ಮಾಡಿಸುವುದು.
* ದಶಕ ರಹಿತ ಮತ್ತು ದಶಕ ಸಹಿತ ಮಿಶ್ರಕ್ರಿಯೆ ಮಾಡಲು ಸಹಕಾರ ನೀಡುವುದು.
_ನಿರೀಕ್ಷಿತ ಕಲಿಕೆಯ ಫಲ:_
* ಗಣಿತದ ಮೂಲ ಕ್ರಿಯೆಗಳಲ್ಲಿ ಸಂಕಲನ ಮತ್ತು ವ್ಯವಕಲನ ಒಟ್ಟಿಗೆ ಮಾಡಲು ಸಮರ್ಥರಾಗುತ್ತಾರೆ.
* ವಸ್ತುಗಳನ್ನು ಬಳಸಿ ಮಿಶ್ರಕ್ರಿಯೆ ಮಾಡುವರು.
* ದಶಕ ರಹಿತ ಮತ್ತು ದಶಕ ಸಹಿತ ಮಿಶ್ರಕ್ರಿಯೆ ಮಾಡಲು ಸಮರ್ಥರಾಗುತ್ತಾರೆ.
*ನಲಿಕಲಿ ಸರಣಿ ವಿಡಿಯೋಗಳು 17*
https://nalikalirenukaradhyatlm.blogspot.com/2020/11/17_29.html
*ನಲಿಕಲಿ app*
https://play.google.com/store/apps/details?id=a1226930.wpu
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ
No comments:
Post a Comment