*ಸ್ವರ - ಔ ಔತ್ವ*
ಕೌ ಖೌ ಗೌ ಘೌ
ಚೌ ಛೌ ಜೌ ಝೌ
ಟೌ ಠೌ ಡೌ ಢೌ ಣೌ
ತೌ ಥೌ ದೌ ಧೌ ನೌ
ಪೌ ಫೌ ಬೌ ಭೌ ಮೌ
ಯೌ ರೌ ಲೌ ವೌ ಶೌ ಷೌ ಸೌ ಹೌ ಳೌ
*ಸಾಧನ ಪದಗಳು*
ಚೌಕ ಸೌಟು ನೌಕೆ ಚೌರಿಗೆ ಹೌದು ಚೌತಿ ತೌಡು ಪೌರ ಸೌದ ಗೌಣ ಮೌನ ಸೌದೆ ಕೌತುಕ ಕೌರವ ಗೌರವ ಗೌತಮ ಸೌರಭ ಚೌಕಾಸಿ ಪೌರವ ಚೌಕಳಿ ಪೌರುಷ ನೌಕರ ಪೌರಾಣಿಕ ಚೌಕಾಬಾರ ಸೌತೆಕಾಯಿ ಪೌರನೀತಿ ನೌಕಾಯಾನ ಭೌಗೋಳಿಕ ಕೌಂತೇಯ ತೌಲನಿಕ
*ವಾಕ್ಯಗಳು*
ಗೌರಿ, ಗೌತಮ ಚೌರಿಗೆಯಲಿ ನೀರನು ತಂದರು.ಶೌಚಾಲಯ ಶುಚಿ ಮಾಡಿದರು.ಅನಂತರ ಕೈ ಕಾಲು ತೊಳೆದು ಕೈಚೌಕದಿಂದ ಕೈ ಒರೆಸಿಕೊಂಡರು.
ಗೌರೀಶನು ಲಗೋರಿ ಆಟ ಆಡುವಾಗ ನಾಯಿ ಬೌ ಬೌ ಎಂದು ಬೊಗಳಿತು.ಗೌರೀಶನು ಹೆದರಿ ಮನೆಯ ಕಡೆಗೆ ದೌಡಾಯಿಸಿದನು.ಆಗ ಎಡವಿ ಕಾಲಿಗೆ ಗಾಯ ಆಯಿತು.ಆಗ ತಾಯಿ ಕಾಲಿನ ಗಾಯಕೆ ಔಷಧಿ ಹಾಕಿದಳು.
_ಆಶಾ ಆಟ (ಪದ ಶಬ್ದ ಆಟ_ )
*ಮೇಲಿನ ಸಾಧನ ಪದಗಳನ್ನು ನಿಮ್ಮ ಬಾಕ್ಸ್ ನೋಟ್ ಅಲ್ಲಿ ಒಂದೊಂದು ಚೌಕಕ್ಕೆ ಒಂದು ಪದ ಬರೆದು ಆಶಾ ಆಟ ಆಡಬೇಕು*
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ
No comments:
Post a Comment