*ದಿನಕ್ಕೊಂದು ಶಿಶುಗೀತೆ*
*40.ಎಲ್ಲಿಗೆ ಹೊರಟೆ*
ನೀರಿಗೆ ಹೊರಟೆನವ್ವ ತಂಗಿ
ನೀರಿಗೆ ಹೊರಟಿನಾ
ಬಾಗಿ ಬಾಗಿ ಸೇದಿ ಸೇದಿ
ಸೋತು ಹೋದೆ ನಾll ಪll
ತಾಯವ್ವಕೊಟ್ಟ ತಾಮ್ರದ ಬಿಂದಿಗೆ
ಬಗಲಲಿ ಹಿಡಿದೆನಾ
ಅಪ್ಪ ಹೊಸೆದ ಹೊಸ ಹಗ್ಗ
ಬಲಗೈಲಿ ಹಿಡಿದೆನಾll೧ll
ಗಟ್ಟಿಯಾಗಿ ಹಗ್ಗವ ಕಟ್ಟಿ
ಬಿಂದಿಗೆ ಬಿಟ್ಟೇನಾ
ಶಕ್ತಿ ಎಲ್ಲಾ ಒಟ್ಟುಗೂಡಿಸಿ
ಜಗ್ಗೇ ಜಗ್ಗೇ ನಾll೨ll
ನೀರನು ಕಾಯಿಸಿ ಸ್ನಾನವ ಮಾಡಿ
ಮಡಿಯನು ಉಟ್ಟೇನಾ
ತಂದೆ ತಾಯಿ ದೇವರು ಎಂದು
ಪಾದಕೆ ಬಿದ್ದೇನಾ ll೩ll
*ಗಾಯನ*
ಶಾರದ. H. S
ಸಹಶಿಕ್ಷಕಿ
GHPS .G. ಹೊಸಹಳ್ಳಿ
ಅರಸೀಕೆರೆ ತಾಲ್ಲೂಕ್
*ಸಂಗ್ರಹ*
ರೇಣುಕಾರಾಧ್ಯ
GLPS M KOPPALU
ARSIKERE
*ಆಡಿಯೋಲಿಂಕ್*
https://drive.google.com/file/d/18GtF2UZ6w3JshREq8_E5ZSF76OmNZR2N/view?usp=drivesdk
No comments:
Post a Comment