Wednesday, 12 March 2025

ದಿನಕ್ಕೊಂದು ಶಿಶುಗೀತೆ

 *ದಿನಕ್ಕೊಂದು ಶಿಶುಗೀತೆ*

*ಆಡಿಯೋ ಲಿಂಕ್*

https://drive.google.com/file/d/16BcdKzAWV1oO72IZg8AaxsKyhPbY9M8E/view?usp=drivesdk

*39.ಅಮ್ಮಾ ಮುದ್ದಿಸೆ*

ಅಮ್ಮಾ ನಾನೇ ಬಹಳ ಎತ್ತರ!
ತಮ್ಮನ ಹಿಡಿದು ನಡೆಸುವೆನು/
ಗುಮ್ಮಬಂದರು ಹೆದರುವುದಿಲ್ಲ
ಕಮ್ಮಿ ಮಾತುಗಳಾಡುವೆನು!//

ಕಡ್ಡಿಗಳನ್ನು ಎಣಿಸಿ,ಎಣಿಸಿ
ದುಡ್ಡಿನ ಆಟವ ಆಡುವೆನು/
ಅಡ್ಡಿಪಡಿಸದೆ ನಿನ್ನಯ ಕೆಲಸಕೆ
ಲಡ್ಡನು ತಿಂದು ಮಲಗುವೆನು!//

ಜೇಡಿಮಣ್ಣಲಿ ಗಣಪನ ಮಾಡಿ
ರಾಡಿ ನೀರನು ಚೆಲ್ಲುವೆನು!/
ಆಡಲು ಬರುವ ಸ್ನೇಹಿತರನ್ನು
ಹಾಡನು ಹಾಡಿ ನಗಿಸುವೆನು//

ಜೋಡಿ,ಜೋಡಿ ಸೊನ್ನೆಯನು
ಗೋಡೆ ಮೇಲೆ ಬರೆಯುವೆನು!/
ಬೇಡದೆ ತಿನಿಸಲು ಊಟವನು
ನೋಡುತ ಬೀದಿಯ ತಿನ್ನುವೆನು//

ಮುದ್ದಿಸು ನಿನ್ನಯ ಮಡಿಲಲ್ಲಿ
ಸದ್ದನು ಮಾಡದೆ ಮಲಗುವೆನು/
ನಿದ್ದೆಯ ಮಾಡಿ ರಾತ್ರಿಯಿಡಿ
ಎದ್ದು ಶಾಲೆಗೆ ಹೊರಡುವೆನು//.

_ರಚನೆ ಮತ್ತು ಗಾಯನ_

ಸೌಭಾಗ್ಯ ಮಹಾಂತೇಶ್
ಶಿಕ್ಷಕರು ಚಿಕ್ಕಣ್ಣನ ಕೊಪ್ಪಲು
ಅರಸೀಕೆರೆ.

_ಸಂಗ್ರಹ_
ರೇಣುಕಾರಾಧ್ಯ
GLPS M ಕೊಪ್ಪಲು
ಅರಸೀಕೆರೆ

No comments:

Post a Comment