Friday, 28 February 2025

ದಿನಕ್ಕೊಂದು ಶಿಶುಗೀತೆ

*ದಿನಕ್ಕೊಂದು ಶಿಶುಗೀತೆ*

*30. ನನ್ನ ನವಿಲೇ*

ನನ್ನ ನವಿಲೆ ನನ್ನ ನವಿಲೆ
       ಬಾರೆ ಇಲ್ಲಿಗೆ
ಅಂಕು ಡೊಂಕು ಹೆಜ್ಜೆ ಹಾಕಿ
     ಹೊರಟೆ ಎಲ್ಲಿಗೆ ll ಪ ll

ನಿನ್ನ ಧ್ವನಿಯು ಎಷ್ಟು ಮಧುರ
    ಹೇಗೆ ಹೇಳಲಿ
ನಿನ್ನ ರೂಪ ಎನಿತು ಅಂದ
   ಹೇಗೆ ಹೊಗಳಲಿ ll೧ll

ಹಲವು ಬಗೆಯ ಬಣ್ಣದಿಂದ
      ನಿನ್ನಗರಿಗಳು
ಮುತ್ತು ರತ್ನ ಹವಳದಂತೆ
  ಹೊಳೆಯುತ್ತಿರುವುದು ll೨ll

ನಿನ್ನ ಕಣ್ಣರೇಖೆ ಚೆಂದ
    ಚಿನ್ನದುಂಗುರ
ತಲೆಯ ಮೇಲೆ ತೆನೆತುರಾಯಿ
    ಬಹಳ ಸುಂದರ ll ೩ ll

ಮೇಘಮಾಲೆ ತಿರುಗುತಿರಲು
        ಕೇಕೆ ಹಾಕುವೆ
ಮಣಿದು ಕುಣಿದು ಹರುಷದಿಂದ
       ಹಾಡ ಹಾಡುವೆ ll೪ ll

ನಿನಗೆ ತಿನ್ನಲು ಕಾಳು ಕೊಡುವೆ
    ಬಾರೆ ಇಲ್ಲಿಗೆ
ಪ್ರೀತಿಯಿಂದ ಮುತ್ತ ನೊಂದ
    ಕೊಡುವೆ ಮೆಲ್ಲಗೆ ll೫ ll

ನಿನಗೆ ಅಂದ ಚಂದದೊಂದು
      ಮನೆಯ ಕಟ್ಟುವೆ
ಪ್ರೇಮದಿಂದ ನಿನ್ನ ನಾನು
      ಸಾಕಿ ಸಲಹುವೆ ll ೬ ll

_ಸಂಗ್ರಹ_
ರೇಣುಕಾರಾಧ್ಯ
GLPS M KOPPALU
ARSIKERE

*ಆಡಿಯೋ ಲಿಂಕ್*

https://drive.google.com/file/d/1trqR2cOP57MOekybmpTDjF6Zqr1anCKN/view?usp=drivesdk

_ಹಾಡಿದವರು_
ಶಾರದ. H. S
ಸಹಶಿಕ್ಷಕಿ
GHPS .G. ಹೊಸಹಳ್ಳಿ
ಅರಸೀಕೆರೆ ತಾಲ್ಲೂಕ್

No comments:

Post a Comment