Friday, 31 January 2025

ದಿನಕ್ಕೊಂದು ಶಿಶುಗೀತೆ

 *ದಿನಕ್ಕೊಂದು ಶಿಶುಗೀತೆ* 


*6.ಸಣ್ಣಾತ* 


ನಾ ಏನಿನ್ನೂ ಸಣ್ಣಾತಂತ ! 

ನಾಯಿ ಮಾತ್ರ ದೊಡ್ಡ !


ಅಣ್ಣನಿಗೇನೂ ತಲೆಯೇ ಇಲ್ಲ. 

ಪಾಪಾನಿಗಿಂತ ದಡ್ಡ !


ಎಷ್ಟು ವರುಷ ನನಗೆ ? ಆರು; 

ನಾಯಿಗೆ ಬರೀ ಮೂರು. 

ಪೇಟೆಗೆ ನಾಯಿ, ನಾನು ಬೇಡ; 

ಸಣ್ಣಾತಂತ ! ಯಾರು ?


ನಾಯಿಯ ಜಂಬ ! ಬಿಗಿ ಒಂದೇಟು ! 

ಛೀ ಹೋಗೋ ! ಲೇ ನಾಯಿ ! 

ಕೊoಯೋ ಕೊಂಯೋ ಅಳತೀ ಯಾಕೋ ? 

ದೊಡ್ಡಾತಂತ ! ಸಾಯಿ !


ಆರ್.ವಿ.ಕುಲಕರ್ಣಿ


 _ಸಂಗ್ರಹ_

ರೇಣುಕಾರಾಧ್ಯ

GLPS M KOPPALU 

ARSIKERE 


 *ಆಡಿಯೋ ಲಿಂಕ್*

https://drive.google.com/file/d/1MpcvULnYuwAcQP5X55UBbhP0_kWwb6Up/view?usp=drivesdk

ಹಾಡಿದವರು

MADHUSUMA S G

GHPS BAIRAMBUDHI

ARSIKERE

No comments:

Post a Comment