Wednesday, 29 January 2025

ದಿನಕ್ಕೊಂದು ಶಿಶುಗೀತೆ

 

*ದಿನಕ್ಕೊಂದು ಶಿಶುಗೀತೆ*

*4. ಸಣ್ಣ ಮದುವೆ*

ಕಪ್ಪೆ ಕರಕರ
ತುಪ್ಪ ಜಲಿಜಲಿ

ಮಾವಿನ ವಾಟೆ
ಮರದಲಿ ಕೋಟೆ

ಹದ್ದಿನ ಕೈಯಲಿ
ಸುದ್ದಿ ಕಳುಹಿಸಿ

ಕಾಗೆಯ ಕೈಯಲಿ
ಕಂಕಣ ಕಟ್ಟಿಸಿ

ನಳ್ಳಿಯ ಕೈಯಲಿ
ನಗಾರಿ ಹೊಡೆಸಿ

ಸೊಳ್ಳೆಯ ಕೈಯಲಿ
ಸೋಬಾನೆ ಹೇಳಿಸಿ

ಸಣ್ಣಿ ಮದುವೆ ಶನಿವಾರ
ಊಟಕೆ ಬನ್ನಿ ಬುಧವಾರ


ಆಡಿಯೋ ಲಿಂಕ್ ಕ್ಲಿಕ್ಕಿಸಿ

(ಹಾಡಿದವರು - Shubha H S arsikere)

https://drive.google.com/file/d/1KBk-Pe_UU_yxIZYEmYJ9Z_2YMGF7CriG/view?usp=drivesdk


ಸಂಗ್ರಹ
ರೇಣುಕಾರಾಧ್ಯ
GLPS M.KOPPALU
ARSIKERE


1 comment: