Monday, 27 May 2024

ಮಿಸ್ಸಿನ ಡೈರಿ...

 ಮಿಸ್ ಮಾಡದೇ ಓದಬೇಕಾದ ಮಿಸ್ಸಿನ ಡೈರಿ.......

ಮಿಸ್ಸಿನ ಡೈರಿ- ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬಳ ವೃತ್ತಿ ಬದುಕಿನ ಅನುಭವ ಕಥನ. ಇಷ್ಟವಿಲ್ಲದೇ ಯಾವುದೋ ಒತ್ತಡ ಹಾಗೂ ಅನಿವಾರ್ಯತೆಗೆ ಒಳಗಾಗಿ ಶಿಕ್ಷಕರ ತರಬೇತಿ ಪಡೆದು ಸರ್ಕಾರಿ ಶಾಲೆಗೆ ಶಿಕ್ಷಕಿಯಾಗಿ ಹೋಗುವ ಹೆಣ್ಣುಮಗಳೊಬ್ಬಳ ಬದುಕು ಶಾಲೆಯ ಮಕ್ಕಳೊಂದಿಗೆ ಹೇಗೆ ಸಮ್ಮಿಳಿತವಾಗುತ್ತದೆಂಬುದನ್ನು ಇಲ್ಲಿ ಕಾಣಬಹುದು. ಆ ಮೂಲಕ ತನ್ನ ವೃತ್ತಿಯನ್ನು ಅದೆಷ್ಟು ಅಗಾಧವಾಗಿ ಪ್ರೀತಿಸುತ್ತಾ, ಪೂರ್ಣ ಪ್ರಮಾಣದಲ್ಲಿ ಮಕ್ಕಳ ಮೆಚ್ಚಿನ ಶಿಕ್ಷಕಿಯಾಗಿ, ಶಾಲೆಯ ಪೋಷಕರ ಆದರಕ್ಕೆ ಪಾತ್ರವಾಗುತ್ತಾರೆಂದು ಇಲ್ಲಿನ ಪುಟಗಳು ಹೇಳುತ್ತವೆ. 


ಶಿಕ್ಷಣ ಎಂದರೆ ಕೇವಲ‌ ಓದು ಬರೆಹ ಕಲಿಯುವುದು ಮಾತ್ರವಲ್ಲ, ಪಾಠವೆಂದರೆ ಪಠ್ಯ ಪುಸ್ತಕದಲ್ಲಿ ಮುದ್ರಿತವಾದ ಪುಟಗಳಷ್ಟೇ ಅಲ್ಲ. ಅದರಾಚೆಗೆ ಮಗುವಿನ ಮಾನಸಿಕ ವಿಕಾಸವಾಗಬೇಕು, ಮಗು ಸ್ವಾವಲಂಬಿಯಾಗಿ ಬದುಕಬೇಕು, ಆ ಬದುಕಿಗೆ ಮಗುವನ್ನು ಸಿದ್ಧಗೊಳಿಸುವುದೇ ಶಿಕ್ಷಣ ಎಂದು ಲೇಖಕಿ ಇಲ್ಲಿ ಸಾರಿ ಸಾರಿ ಹೇಳುತ್ತಾರೆ.‌ ಮಗುವಿನ‌ ಮುಗ್ಧತೆಯಲ್ಲಿ ತನ್ನ ಬಾಲ್ಯವನ್ನು ಹುಡುಕುತ್ತಾ, ಅಲ್ಲಿ ಕಳೆದುಹೋಗುತ್ತಾರೆ. ಮಕ್ಕಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಾ, ಅವರ ತಪ್ಪುಗಳನ್ನು ಪ್ರೀತಿಯಿಂದಲೇ ತಿದ್ದುತ್ತಾರೆ. 


ಇದೊಂದು ಸಂಪೂರ್ಣ ಅನುಭವದ ಬರೆಹಗಳ ಸಂಕಲನ. ಇಲ್ಲಿ ಕಲ್ಪನೆಗೆ ಅವಕಾಶವಿಲ್ಲ. ತಾನು ನೋಡಿದ, ಅನುಭವಿಸಿದ, ಸಾಧಿಸಿಕೊಂಡ ವಿಚಾರಗಳ ಅಭಿವ್ಯಕ್ತಿ ಈ ಪುಸ್ತಕ. ಸಣ್ಣ ಶಾಲೆ, ಪುಟ್ಟ ಮಕ್ಕಳು, ಆದರೂ ಸಾಧಿಸುವ ಕನಸು ದೊಡ್ಡದು. ಆ ಕನಸು ನನಸಿನ‌ ಮೂರ್ತ ರೂಪವೇ ಮಿಸ್ಸಿನ ಡೈರಿ. ‌ಇದು ಮಕ್ಕಳೊಂದಿಗೆ ಬೆರೆತ, ಪೋಷಕರ ಅಚ್ಚುಮೆಚ್ಚಿನ ಮಿಸ್ಸಿನ ಡೈರಿ.





*ಮಿಸ್ಸಿನ‌ಡೈರಿ* ಓದುವ ಹಂಬಲ ಇರುವವರಿಗೆ, 

🌳 9483817009 ಗೆ ( *ಅಂಚೆಯಲ್ಲಿ ಕಳಿಸುವುದಾದರೆ 225* ) ರೂಪಾಯಿಗಳನ್ನು ಗೂಗಲ್ ಪೇ‌ ಮಾಡಿ.
🍓 ಅದರ ಸ್ಕ್ರೀನ್ ಶಾಟ್ ಕಳಿಸಿ. 

🍅 ನಿಮ್ಮ ಅಂಚೆ ವಿಳಾಸವನ್ನು ತಪ್ಪಿಲ್ಲದಂತೆ ಕಳಿಸಿ.

*ಪ್ರೀತಿಯಿಂದ ಓದುವ ಆಸಕ್ತರಿಗಾಗಿ ಮಾತ್ರಾ. ಇದು ಒತ್ತಾಯ ಅಲ್ಲ.*

No comments:

Post a Comment