Monday, 2 October 2023

ನಿಮ್ಮ ವೇದಿಕೆ - 9

 ನಿಮ್ಮ ವೇದಿಕೆ 9(ZOOM ಮಾಡಿ ವೀಕ್ಷಿಸಿ)

ಸ.ಹಿ.ಪ್ರಾ.ಶಾಲೆ. ಯಡೇಹಳ್ಳಿ

ಸಕಲೇಶಪುರ ತಾ.ಹಾಸನಜಿ.


ಎಲ್ಲರಿಗೂ ನಮಸ್ತೆ..


ನಲಿಕಲಿ ಎಂಬುದು ನಮ್ಮ ಹೆಮ್ಮೆ . ನಲಿಕಲಿ ಎಂಬ ಪದ್ಧತಿ ಅನೇಕ ವೈವಿಧ್ಯತೆಗಳ ಆಗರ ನಮ್ಮ ನಲಿಕಲಿ app ಬ್ಲಾಗ್ ನಲ್ಲಿ ಒಂದು ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ ಅದುವೇ ನಿಮ್ಮ ವೇದಿಕೆ 

ಇದು ನಲಿಕಲಿ ಶಿಕ್ಷಕರ ಕ್ರಿಯಾಶೀಲತೆಗೆ ಒಂದು ಪುಟ್ಟ ವೇದಿಕೆಯಾಗಿದೆ ಅನೇಕ ಶಿಕ್ಷಕರಿಗೆ ಇದು ದಿಕ್ಸೂಚಿ ಸಹಾಯಕ ಆಗಬಲ್ಲದು ಎಂಬ ಆಶಯದೊಂದಿಗೆ ಇಂದು ನಿಮ್ಮ ವೇದಿಕೆಯಡಿಯಲ್ಲಿ ಶಾಲೆಯ ಪರಿಚಯ ನೀಡುತ್ತಿದ್ದೇವೆ.


            ಈ ದಿನದ ನಲಿಕಲಿ ಕ್ರಿಯಾಶೀಲ ಶಿಕ್ಷಕರುಗಳ ಶಾಲೆಯಾದ ಸ.ಹಿಪ್ರಾ.ಶಾಲೆ ಯಡೇಹಳ್ಳಿ.ಸಕಲೇಶಪುರ (ತಾ)ಹಾಸನ (ಜಿ) ಮತ್ತು ಅಲ್ಲಿಯ ನಲಿಕಲಿ ಶಿಕ್ಷಕರು ಹಾಗೂ ರಾಜ್ಯ ನಲಿಕಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಮಮತ ‌ಡಿ ರವರ ಶಾಲೆಯಾಗಿದೆ.


ಈ ಶಾಲೆಯು ಜಿಲ್ಲೆಯ ಅತ್ಯುತ್ತಮ ನಲಿಕಲಿ ಶಾಲೆಗಳ ಪೈಕಿ ಒಂದು ಎಂಬುದು ಹೆಮ್ಮೆಯ ಸಂಗತಿ ಮತ್ತು 2020- 21ನೇ ಸಾಲಿನಲ್ಲಿ ಜಿಲ್ಲೆಯ ಉತ್ತಮ ನಲಿಕಲಿ ಈ ಶಾಲೆಯಲ್ಲಿ ನಲಿಕಲಿ ವಿಧಾನವನ್ನು ಅತ್ಯುತ್ತಮ ರೀತಿಯಲ್ಲಿ ನಡೆಸುತ್ತಿರುವ ಕೀರ್ತಿ ಈ ಶಾಲೆಯ ಕ್ರಿಯಾಶೀಲ ಶಿಕ್ಷಕ ಬಳಗಕ್ಕೆ ಸಲ್ಲುತ್ತಿದೆ ಇಲ್ಲಿಯ ಮಕ್ಕಳ ತೊಡಗುವಿಕೆ ವಿಭಿನ್ನ ವಿಧಾನ ಗಳ ಮೂಲಕ ಸಮುದಾಯದ ಮೆಚ್ಚುಗೆಗೆ ಶಾಲೆ ಪಾತ್ರವಾಗಿದೆ .ಈ ಶಾಲೆಗೆ ಭೇಟಿ ನೀಡುವ ಅನೇಕ ಅಧಿಕಾರಿಗಳು ಶಾಲೆಯ ಶಿಕ್ಷಕರ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ ಅಲ್ಲದೆ ಇಲ್ಲಿಯ ಶಿಕ್ಷಕರು ಇಲಾಖೆಯ ಅಧಿಕಾರಿಗಳ ಪ್ರೋತ್ಸಾಹವನ್ನು ಸ್ಮರಿಸುತ್ತಾರೆ. ನಲಿಕಲಿಯನ್ನು ವಿಭಿನ್ನವಾಗಿ ಅಳವಡಿಸಿಕೊಂಡಿರುವ ಶಾಲೆ ಇದಾಗಿದೆ .

ಇಲ್ಲಿಯ ಶಿಕ್ಷಕರು ಸದಾ ಮಕ್ಕಳ ಕಲಿಯುವಿಕೆಗಾಗಿ ನೂರಾರು ಸರಳ ಕಲಿಕೋಪಕರಣಗಳನ್ನು ತಯಾರಿಸಿಕೊಂಡಿದ್ದಾರೆ ಅದು ಅವರ ಶ್ರಮದಿಂದಾಗಿ ಕಡಿಮೆ ವೆಚ್ಚದಲ್ಲಿ ತಯಾರಾಗಿವೆ ಮಕ್ಕಳ ಕೈಯಿಂದಲೂ ಅನೇಕ ಕ್ರಾಫ್ಟ್ ಚಟುವಟಿಕೆ ಸರಳ ಪ್ರಯೋಗಗಳು ನಾಟಕ ಹಾಡು ಮುಂತಾದವುಗಳನ್ನು ವಿಭಿನ್ನವಾಗಿ ಮಾಡಿಸುತ್ತಿದ್ದಾರೆ.

ಪ್ರಶಸ್ತಿ ಪತ್ರ



ಶಾಲೆಯ ಯಶೋಗಾಥೆ

           

         ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯಡೇಹಳ್ಳಿ ಸಕಲೇಶಪುರ ತಾಲೂಕು ಹಾಸನ ಜಿಲ್ಲೆ

             

                       ನಮ್ಮ ಶಾಲೆಯ ಧ್ಯೇಯ ವಾಕ್ಯ; ನಮ್ಮ ಶಾಲೆ  ಅಭಿವೃಧ್ದಿ ನನ್ನ ಕನಸ್ಸು

 ಶಾಲೆಯ ಹಿನ್ನೆಲೆ:  ನಮ್ಮ ಶಾಲೆಯು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯಡೇಹಳ್ಳಿ  .ಬೆಳಗೊಡು ಕ್ಲಸ್ಟರ್, ಸಕಲೇಶಪುರ ತಾಲೂಕು , ಹಾಸನ ಜಿಲ್ಲೆ. ರಾಷ್ಟ್ರೀಯ ಹೆದ್ದಾರಿಯಿಂದ 100 ಮೀಟರ್ ದೂರದಲ್ಲಿರುವ  ಈ ಶಾಲೆ ಸುತ್ತಮುತ್ತ ಕಾಫಿ ಗಿಡಗಳಿರುವ ತೋಟಗಳ ಮಧ್ಯದಲ್ಲಿ ಈ ಶಾಲೆ ಇದೆ. ಸುಮಾರು 100  ಕುಟುಂಬಗಳನ್ನು ಒಳಗೊಂಡಂತೆ  ಈ ಊರಿನ  ಜನಸಂಖ್ಯೆ ಇದ್ದು ಈ ಶಾಲೆ ಬರುವ ಎಲ್ಲಾ ಮಕ್ಕಳು ಹೆಚ್ಚಾಗಿ ಕೂಲಿಕಾರ್ಮಿಕರ ಮಕ್ಕಳಾಗಿದ್ದು,ಪ್ರತಿಭಾವಂತರು ಸಹ  ಆಗಿದ್ದಾರೆ. ಈಶಾಲೆಯಲ್ಲಿ 3 ಜನ ಶಿಕ್ಷಕರಿದ್ದು ಶೀಲಾ ಡಿ.ಸಿ ಪ್ರಭಾರಿ ಮುಖ್ಯ ಶಿಕ್ಷಕಿ,ವಾಣಿ ಸಹ ಶಿಕ್ಷಕಿ,ಮಮತ ಡಿ ಸಹ ಶಿಕ್ಷಕಿ ಕರ್ತವ್ಯ ನಿರತ ಶಿಕ್ಷಕರು.  4 ಶಾಲಾ ಕೊಠಡಿಗಳು ಒಂದು  ರಂಗಮಂದಿರವಿದೆ.ಇದು ಮಕ್ಕಳಿಗೆ ಬೆಳಗಿನ ಪ್ರಾರ್ಥನೆ ಮಾಡಲು ಸಹಪಠ್ಯ ಚಟುವಟಿಕೆ ಮಾಡಲು ಅವಶ್ಯವಾಗಿದೆ.



ಭೌತಿಕ ಸೌಲಭ್ಯಗಳು

 ಗೇಟ್ ಮತ್ತು ಕಾಂಪೌಡ್ ವ್ಯವಸ್ಥೆ:  ಶಾಲೆಯು ವಿಶಾಲವಾದ ಆವರಣ ಹೊಂದಿದೆ 3 ಕಡೆ ಸಿಮೆಂಟಿನ  ಕಾಂಪೌಡ್ ಇದ್ದು ಒಂದು ಕಡೆ ತಂತಿ ಬೇಲಿಯ ವ್ಯವಸ್ಥೆ ಇದೆ.  ಶಾಲೆಯ ಮುಂಭಾಗದಲ್ಲಿ ಒಂದು ದೊಡ್ಡ     ಕಬ್ಬಿಣದ ಗೇಟ್ ಇದ್ದು ಶಾಲಾ ಭದ್ರತೆಗೆ ಸೂಕ್ತವಾಗಿದೆ. 

ಆಟದ ಮೈದಾನ:

ವಿಶಾಲವಾದ ಆಟದ ಮೈದಾನ ಶಾಲೆಯ ಹಿಂಬಾಗದಲ್ಲಿ ಇದೆ. ಕಬಡಿ, ವಾಲಿಬಾಲ್, ಶೇಟಲ್ ಕಾಕ್  ಆಟದ ಜೊತೆಗೆ ಇನ್ನುಳಿದ  ಆಟ ಆಡಲು ಮಕ್ಕಳಿಗೆ ಯೋಗ್ಯವಾಗಿದೆ.

 

ಸುಂದರ ಕೈತೋಟ

 ಶಾಲೆಯು ಸುಂದರವಾದ ಕೈತೋಟವಿದೆ ,ಆದರೆ ಭದ್ರತೆ ಇಲ್ಲಾ ದನಕರುಗಳು ಬಂದು ಮಕ್ಕಳು ಬೆಳೆದ ಗಿಡಗಳನ್ನು ತಿಂದು ಹೋಗುತ್ತವೆ.ಗ್ರಾಮ ಪಂಚಾಯ್ತಿ ಗಮನಕ್ಕೆ ತಂದಿದ್ದೇವೆ.  ಅಡುಗೆಗೆ ಬೇಕಾದ ಹಸಿರು ತರಕಾರಿಗಳು ಸಿಗುತ್ತವೆ. ಮತ್ತು ಪ್ರತಿ ಮಕ್ಕಳ ಹೆಸರಿನಲ್ಲಿ ಒಂದೊಂದು ಪಾರ್ಟ್  ಮೂಲಕ ಒಂದೊಂದು ಹೂವಿನ ಗಿಡಗಳನ್ನು ನೆಡಿಸಿ ಅದರ ಪೋಷಣಾ ಜವಬ್ದಾರಿಯನ್ನು ಮಕ್ಕಳಿಗೆ ವಹಿಸಲಾಗಿದೆ. ಮಕ್ಕಳು ಆಸಕ್ತಿಯಿಂದ ಮಾಡುತ್ತಿದ್ದಾರೆ. ಜೊತೆಗೆ 10 ತೆಂಗಿನಮರಗಳಿದ್ದುದಿನನಿತ್ಯ ಅಡುಗೆಗೆ ಬೇಕಾದ ತೆಂಗಿನಕಾಯಿಗಳು ಸಿಗುತ್ತಿವೆ ಅದರ ಉಪಯೋಗ ಸಂಪೂರ್ಣವಾಗಿ ಮಕ್ಕಳಿಗೆ ಬಳಕೆ ಆಗುತ್ತಿದೆ.

   ಶೌಚಾಲಯ ವ್ಯವಸ್ಥೆ;

  ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕವಾದ ಶೌಚಾಲಯ ವ್ಯವಸ್ಥೆ ಇದೆ.         ಎಲ್ಲಾ ಶೌಚಾಲಯಗಳು ಸ್ವಚ್ಚವಾಗಿವೆ.

 

ಗ್ರಂಥಾಲಯ:

ಯಡೇಹಳ್ಳಿ ಶಾಲೆಯಲ್ಲಿ ಒಂದು ಸುಂದರವಾದ ಗ್ರಂಥಾಲಯವಿದ್ದು ಸುಮಾರು 1300 ಪುಸ್ತಕಗಳನ್ನು ಸಂಗ್ರಹಿಸಲಾಗಿದ್ದು ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಶಾಲಾ ಪ್ರಾರ್ಥನಾ ಸಮಯದಲ್ಲಿ ಪುಸ್ತಕ ಪರಿಚಯ ಕಾರ್ಯಕ್ರಮವಿರುತ್ತದೆ. ಅಲ್ಲಿ ತಮಗೆ ಸಿಕ್ಕಿರುವ ಪುಸ್ತಕ ಪರಿಚಯವನ್ನ ಪ್ರತಿನಿತ್ಯ ಒಬೊಬ್ಬ ವಿದ್ಯಾರ್ಥಿಗಳಂತೆ  ನಿರ್ವಹಿಸುತ್ತಾರೆ. ಪುಸ್ತಕಗಳನ್ನು ಸಂಗ್ರಹಿಸಲು ಕಾಫಿ ಬೆಳೆಗಾರರ ಮಂಡಳಿಯಿಂದ ಕಬ್ಬಿಣದ ಬೀರುಗಳನ್ನುಕೊಡುಗೆಯಾಗಿ ಕೊಟ್ಟಿರುತ್ತಾರೆ


ತಾಂತ್ರಿಕ ಸೌಲಭ್ಯಗಳು:

 ಈ ಶಾಲೆಯಲ್ಲಿ ದಾನಿಗಳು ಮಕ್ಕಳಿಗೆ ಅನುಕೂಲವಾಗುವಂತೆ TV ಯನ್ನ ಕೊಡುಗೆಯಾಗಿ ನೀಡಿದ್ದಾರೆ. ಇದರಿಂದ ಮಕ್ಕಳಿಗೆ ಡಿಜಿಟಲ್ ಮೂಲಕ ಶಿಕ್ಷಣ ಪಡೆಯಲು ಅನುಕೂಲವಾಗುತ್ತಿದೆ ಪಠ್ಯ ಹಾಗೂ ಪಠ್ಯೆತರ ವಿಷಯಗಳ ಕಲಿಕೆಗೆ ಹೆಚ್ಚಿನ  ಅನುಕೂಲವಾಗುತ್ತಿದೆ.ಬಿಡುವಿನ ವೇಳೆಯಲ್ಲಿ ಇದರ ಅನುಕೂಲವಾಗುತ್ತಿದೆ. ಮತ್ತು ಗ್ರಾಮಪಂಚಾಯ್ತಿ ವತಿಯಿಂದ ಸ್ಪೀಕರ್ ಕೊಡುಗೆಯಾಗಿ ನೀಡಿದ್ದು ಮಕ್ಕಳಿಗೆ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಮಕ್ಕಳ ಭಾಷಣವನ್ನ ಮಾಡುವಾಗ ಹಾಡು ಹೇಳುವಾಗ ಇದರ ಸದುಪಯೋಗವಾಗುತ್ತಿದೆ.


ನಲಿಕಲಿ ಕೊಠಡಿ:

 ನಮ್ಮ ಶಾಲೆಯಲ್ಲಿ ಒಂದು ಉತ್ತಮ ನಲಿಕಲಿ ವಾತವರಣವಿರುವ ನಲಿಕಲಿ ಕೊಠಡಿಯಿದ್ದುನಲಿಕಲಿ ತರಗತಿಗೆ ಬೇಕಾದ ಎಲ್ಲಾ ವಸ್ತುಗಳನ್ನು ಕ್ರಮಬಧ್ದವಾಗಿ ಜೋಡಿಸಲಾಗಿದೆ.

 ಕಲಿಕಾಚಪ್ಪರ, ಸ್ಲೇಟ್ ಮಾದರಿಯ ವಾಲ್ ಸ್ಲೇಟು, ಕಾರ್ಡಗಳ ಜೋಡಣೆಗಾಗಿ  ನೂತನ ಬ್ಯಾಗ್ ವ್ಯವಸ್ಥೆ, ಕಲಿಕಾಸಾಮಗ್ರಿಗಳ ಜೋಡಣೆ, ಪಪೆಟ್ ಸ್ಕ್ರೀನ್, ಕಲಿಕಾ ತಟ್ಟೆಗಳ ಹಾಕಲು ಟೇಬಲ್ ವ್ಯವಸ್ಥೆ, ಕಲಿಕಾ ಚಪ್ಪರ ಮುಖವಾಡ ಕರೀಟಗಳು ಹೀಗೆ ಸಾಕಷ್ಟು  ವಸ್ತುಗಳನ್ನು  ಜೋಡಿಸಲಾಗಿದೆ



 ಕಾರ್ಡ್ಗಳ ಜೋಡಣೆ: ಮಕ್ಕಳ ಕಲಿಕೆಗೆ ಅವಶ್ಯಕವಾದ ಕಾರ್ಡ್ ಜೋಡಣೆಗೆ 4 ವಿಷಯಗಳಿಗೆ 3 ತರಗತಿಗೆ ಒಂದೊಂದು ಬಣ್ಣದಲ್ಲಿ ಜೋಡಿಸಲಾಗಿದೆ.ಈ ಬ್ಯಾಗ್ ಗೆ ಪ್ರತಿ  ಜೇಬಿಗೂ ಒಂದೊಂದು ಮೈಲಿಗಲ್ಲಿನ ಸಂಖ್ಯೆ ನೀಡಿದ್ದು ಮಕ್ಕಳಿಗೆ ಕಾರ್ಡ್ ತೆಗೆಯಲು ಕಲಿಕೆ ಆದ ನಂತರ ಪುನಃ ಜೋಡಿಸಲು ಅನುಕೂಲವಾಗಿದೆ.

ಕಲಿಕಾಚಪ್ಪರ

ಕಲಿಕಾ ಚಪ್ಪರದಲ್ಲಿ ಮಕ್ಕಳು ಮಾಡಿದ ಕ್ರಾಫ್ಟ್ ತೂಗು ಹಾಕಲು ತರಗತಿವಾರು ವಿಷಯವಾರು  4 ಬಾಗಗಳನ್ನು ಮಾಡಿಕೊಳ್ಳಲಾಗಿದೆ  ಹೆಚ್ಚಾಗಿ ಇಂಗ್ಲಿಷ್ ವಿಷಯಕ್ಕೆ ಗಮನ ನೀಡಲಾಗಿದ್ದು ಸಾಕಷ್ಟು ಇಂಗ್ಲಿಷ್ ವರ್ಡ್ಸ್ಗಳನ್ನ ಬರೆಯಲಾಗಿದೆ.ಬಿಡುವಿನ ವೇಳೆಯಲ್ಲಿ ಮಕ್ಕಳು ಓದುತ್ತಾರೆ.

ಮುಖವಾಡಗಳು:

 ವಿವಿಧ ಮುಖವಾಡಗಳನ್ನ ಕನ್ನಡ, ಇಂಗ್ಲಿಷ್, ಪರಿಸರ ಅಧ್ಯ ಯನ ವಿಷಯಕ್ಕೆ ಸಂಬಂದಿಸಿದಂತೆ ಇವೆ  ಮಕ್ಕಳಿಗೆ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಅನೂಕೂಲವಾಗಿದೆ.

ಕಲಿಕಾ ತಟ್ಟೆಗಳು;

ಕಲಿಕಾ ತಟ್ಟೆಗಳನ್ನು ಹಾಕಲು ಮಕ್ಕಳಿಗೆ ಮರದ ಟೇಬಲ್ ಮತ್ತು ಪ್ಲಾಸ್ಡಿಕ್ ಕುರ್ಚಿಯ ವ್ಯವಸ್ಥೆ ಮಾಡಲಾಗಿದೆ.

ಓದುವ ಮೂಲೆ ಮತ್ತು ಮಕ್ಕಳ ಕೃತಿ ಸಂಪುಟ:

 ಮಕ್ಕಳಿಗೆ ಹೆಚ್ಚಿನ ಓದಿಗಾಗಿ ರಿಡಿಂಗ್ ಕಾರ್ನರ್ ಮತ್ತು ಮಕ್ಕಳು  ಬರೆದ ಪದಗಳನ್ನು ,ಲೆಕ್ಕಗಳನ್ನು, ಚಿತ್ರಗಳನ್ನು ಸಂಗ್ರಹಿಸಿಡಲು ಪ್ರತಿ ಮಗುವಿಗೆ ಒಂದೊಂದು ಫೈಲ್ ಈಡಲಾಗಿದೆ.

 ವಾಲ್ ಸ್ಲೇಟ್:

 ಪ್ರತಿ ಮಗುವಿಗೂ ಸುಂದರ ವಾಲ್ ಸ್ಲೇಟ್ನ್ನು ಸ್ಲೇಟ್ ಮಾದರಿಯಲ್ಲಿ ಮಾಡಿದ್ದು ಪ್ರತಿ ಸ್ಲೇಟ್ ನಲ್ಲಿ  ಇಂಗ್ಲಿಷ್ ಬರಹಕ್ಕೆ 4 ಗೆರೆಗಳನ್ನು ಹಾಕಲಾಗಿದ್ದು ಹೆಚ್ಚಿನಅಭ್ಯಾಸಕ್ಕೆ ಸೂಕ್ತವಾಗಿದೆ.


ಕಲಿಕಾ ಸಾಮಗ್ರಿಗಳ ಜೋಡಣೆ:

 ವಿಷಯವಾರು ತರಗತಿವಾರು 3 ಬಣ್ಣಗಳಿರುವ ಡಬ್ಬಿಯಲ್ಲಿ ಮೈಲಿಗಲ್ಲು ಮತ್ತು ಮೆಟ್ಟಿಲು ಸಂಖ್ಯೆ  ನಮೂದಿಸಲಾಗಿದೆ.


 ವಿವಿಧ ರೀತಿಯ ಕೀರಿಟಗಳು: ಮಕ್ಕಳು ಚಡುವಟಿಕೆ ಆನಂದಿಸಲು ಓರಿಗಾಮಿ ಚಟುವಟಿಕೆ ಮಾಡಿಸಲಾಗಿದೆ.


   ಪ್ರಗತಿನೋಟ: ವಿಷಯವಾರು ತರಗತಿವಾರು ಮಕ್ಕಳ ಕಲಿಕೆ ದೃಢೀಕರಣಕ್ಕೆ ಈ ರೀತಿಯಾಗಿ ಜೋಡಿಸಲಾಗಿದೆ.

ಅಡುಗೆ ಕೋಣೆ:

 ಅಡುಗೆಕೋಣೆಯು ವ್ಯವಸ್ಥಿತವಾಗಿದ್ದು ಸ್ವಚ್ಚತೆಯನ್ನು ಕಾಪಾಡಿಕೊಳ್ಳಲಾಗುತ್ತಿದೆ. ಶಾಲೆಯಲ್ಲಿ ಬೆಳೆಯುವ ತರಕಾರಿಗಳಿಂದ  ಬಿಸಿಯೂಟಕ್ಕೆ ಬಳಸಲಾಗುತ್ತಿದೆ.

ಕುಡಿಯುವ ನೀರಿನ ವ್ಯವಸ್ಥೆ:

 ಮಕ್ಕಳಿಗೆ ಕುಡಿಯಲು ಗ್ರಮಪಂಚಾಯ್ತಿಯಿಂದ ಬಿಡುವ ನೀರನ್ನೆ ಒಂದು ಸ್ಟೀಲ್ ಡ್ರಮ್ನಲ್ಲಿ ಕಾಯಿಸಿ ಆರಿಸಿದ ನೀರನ್ನ ಹಾಕಿರುವುದರಿಂದ  ಮಕ್ಕಳಿಗೆ ಕುಡಿಯಲು ಅನುಕೂಲವಾಗಿದೆ.

ವಿದ್ಯುತ್  ವ್ಯವಸ್ಥೆ:

ಶಾಲೆಯ ವಿದ್ಯುತ್ ವ್ಯವಸ್ಥೆಯನ್ನು ಹೊಂದಿದೆ TV ಮತ್ತು  speaker ಗೆ ಅವಶ್ಯಕತೆ ಇದೆ.


 ಶಾಲೆಯ ನಾವಿನ್ಯತೆಯ  ವಿಶೇಷತೆಗಳು:

ಸಮವಸ್ತ್ರ : ಇಲಾಖೆಯಿಂದ ಸರಬರಾಜಾಗಿರುವ  ಸಮವಸ್ತ್ರದ ಜೊತೆಗೆ  ಟ್ರ್ಯಾಕ್ ಸೂಟ್ ವಾರದಲ್ಲಿ ಒಂದು ದಿನ ವ್ಯವಸ್ಥೆ 

ಮಾಡಲಾಗಿದೆ. ಶೂ ಮತ್ತು ಸಾಕ್ಸ್ ಇಲಾಖೆಯಿಂದ ಸರಬರಾಜಾಗಿದೆ


ಉಚಿತ  ಪಠ್ಯಪುಸ್ತಕಗಳು ; ಇಲಾಖೆಯಿಂದ ಸರಬರಾಜಾಗಿದೆ.


 ಸಾಂಸ್ಕೃತಿಕ ಕಾರ್ಯಕ್ರಮಗಳು; 

 ಪ್ರತಿಭಾಕಾರಂಜಿ ನಡೆಯುವುದಕ್ಕಿಂತ ಮುಂಚೆ ಶಾಲಾಹಂತದಲ್ಲಿ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿವಂತೆ ನೋಡಿಕೊಂಡುಹೆಚ್ಚಿನ ಪ್ರೋತ್ಸಹಿಸುವನಿಟ್ಟಿನಲ್ಲಿಕಾರ್ಯಕೈಗೊಳ್ಳಲಾಗಿದೆ.

 You  tube  ಚಾನಲ್: 

ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಮತ್ತು ಕೋವಿಡ್ ಸಂದರ್ಭದಲ್ಲಿ ತೆರೆದ ಚಾನಲ್ ಇವತ್ತಿನ ತನಕ ಮಕ್ಕಳ ಕಲಿಕೆಗೆ ತರಗತಿ ಪ್ರಕ್ರಿಯೆಗೆ ತಕ್ಕಂತೆ ವಿಷಯಗಳನ್ನು ನೀಡುವುದರಿಂದ  ಜೊತೆಗೆ ಕಲಿಕೋಪಕರಣ ಮೂಲಕ ಕಲಿಕಾ ಪ್ರಕ್ರಿಯೆ ಹೇಗೆ ವಿದ್ಯಾಪ್ರವೇಶ್ ವಿಡಿಯೋಗಳು , ಕಲಿಕಾಚೇತರಿಕೆ ವಿಡಿಯೋಗಳು  ಮಾಡಲಾಗಿದ್ದು ಇದು ನಮ್ಮ ಶಾಲಾ ಶಿಕ್ಷಕರಿಗೆ ಮಾತ್ರವಲ್ಲ ಹೊರ ಜಿಲ್ಲೆಯ ಶಿಕ್ಷಕರು ಇದರ ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ.


  FLN& ಭಾಷಾ ಮಾಸಚರಣೆ : 

ಕ್ರೀಯಾಸಂಶೋಧನೆ: ಎಲ್ಲಾ ಶಿಕ್ಷಕರು ಮಕ್ಕಳಲ್ಲಿ ಉಂಟಾಗಿರುವ ಕಲಿಕಾಕೊರತೆ ಕಂಡುಕೊಂಡು  ಪ್ರತಿ ಶಿಕ್ಷಕರು ಒಂದೊಂದು ಕ್ರೀಯಾಸಂಶೋಧನೆ ಮಾಡಿದ್ದಾರೆ ಅದರಲ್ಲಿ ಯಶಸ್ಸನ್ನು ಕಂಡುಕೊಂಡಿದ್ದಾರೆ.

ವಿಕಲಚೇತನ ಮಗುವಿಗೆ ಶಿಕ್ಷಣ: 

ಸಾಮಾನ್ಯ ಮಕ್ಕಳ ಜೊತೆ ಆ ಮಗುವಿಗೆ  ಕಲಿಕೆಗೆ ಹೆಚ್ಚಿನ ಒತ್ತು ನೀಡತ್ತಿರುವುದು.


ಹೆಣ್ಣು ಮಕ್ಕಳ  ಸುಭದ್ರತೆಗೆ ಶಿಕ್ಷಣ ಸಂಯೋಜಕರಿಂದ  pocso  ಮಾಹಿತಿ:

         ಮಕ್ಕಳ ಕಲಿಕೆ : 

ಮಕ್ಕಳು ತುಂಬಾ ಆಸಕ್ತಿಯಿಂದ ಕಲಿಯುತ್ತಿದ್ದಾರೆ ಅದು ಕಲಿತ ಪದಗಳನ್ನ ನೋಡದೆ ಬರೆಯುವುದು, ವಾಚಕಗಳನ್ನು ಸ್ವರಭಾರಗಳಿಂದ ಓದುವುದು, ಇಂಗ್ಲಿಷ್  ಕಥೆಗಳಓದುವುದು, ಪಾಠಗಳನ್ನು ಓದುವುದು, ಮಿಂಚುಪಟ್ಟಿ ಮೂಲಕ ಪದರಚನೆ ಮಾಡುವುದು, ಪಾಠೋಪಕರಣದ ಮೂಲಕ ಕಲಿಕೆ ಉಂಟಾಗುವುದು  ಎಲ್ಲವನ್ನು ತುಂಬಾ ಆಸಕ್ತಿಯಿಂದ   ಕಲಿಯುತ್ತಿದ್ದಾರೆ, ಮನೆಯಲ್ಲು ಹೆಚ್ಚಿನ ಕೆಲಸ ಓದಿಗೆ ಸಂಬಂಧಿಸಿದಂತೆ ಮಾಡುತ್ತಿದ್ದಾರೆ ಕಲಿಕೆಗೆ ಸಂಬಂಧಿಸಿದಂತೆ ಮಕ್ಕಳಲ್ಲಿ ಸ್ಫರ್ಧಾಮನೋಭಾವ ಬೆಳೆಯುತ್ತಿದೆ.

                                               

ಸಂಭ್ರಮ ಶನಿವಾರ: 

ಪ್ರತಿ ಮೂರನೇ ಶನಿವಾರ ಬ್ಯಾಗ್ ಲೇಸ್ ಡೇ ಆ ದಿನದಂದು ಒಂದೊಂದು ವಿಷಯದ ಕುರಿತು ಚರ್ಚೆ ನಡೆಯುತ್ತಿದೆ.

ತಾಲೂಕು ಹಂತದ ಪ್ರತಿಭಾ ಕಾರಂಜಿಯಲ್ಲಿ ಮಕ್ಕಳ ಭಾಗವಹಿಸುವಿಕೆ: ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಆನೇಕ ಬಹುಮಾನಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ

ಶಾಲೆಗೆ ಸಂದ ಗೌರವಗಳು:

ನಲಿಕಲಿಯಲ್ಲಿ ಅತ್ಯತ್ತಮ ನಲಿಕಲಿ ಶಾಲೆ ಎಂಬ ತಾಲೂಕಿನ ಹೆಗ್ಗಳಿಕೆಗೆ ಪಾತ್ರವಾಗಿದೆ. ಉತ್ತಮ ಶಾಲಾವಾತವರಣ ವಿರುವುದರಿಂದ ಆ ಊರಿನ ಜನರ ಹೆಗ್ಗಳಿಕೆಗೆ ಪಾತ್ರವಾಗಿದೆ.    

      ಮುಂದಿನ ಗುರಿಗಳು:

ಮಕ್ಕಳು ಕುಳಿತು ಓದಲು ಕಲ್ಲಿನ ಬೆಂಚ್ ವ್ಯವಸ್ಥೆ ಶಾಲಾ ಮುಂಬಾಗ

ಶಾ ಲಾ ಹೊರಗಿನ ಗೋಡೆಗೆ ರೈಲು ಮಾದರಿ ಬಣ್ಣ ಮಾಡಿಸುವುದು

ಶಾಲಾಮುಖ್ಯ ದ್ವಾರಕ್ಕೆ ಭದ್ರತೆ ಒದಗಿಸುವುದು 

ಪುಸ್ತಕ ಮಳಿಗೆ  ತೆರೆಯುವುದು

ನಲಿಕಲಿ ಮಕ್ಕಳಿಗೆ ಅಭಿನಂದನ ಕಾರ್ಯಕ್ರಮ.

   ಉಪಸಂಹಾರ:ನಮ್ಮ ಶಾಲಾ ಅಭಿವೃದ್ಧಿ ನಮ್ಮ ಕನಸ್ಸು ಕಾರ್ಯಕ್ರಮದಡಿ ಹಳೆಯ ಕನಸು ಈಡೇರಿದಂತೆ   ಹೊಸ   ಕನಸು ಹುಟ್ಟಿ ಕೊಳ್ಳುತ್ತದೆ ಇದು ಮತ್ತೊಂದು ಮೈಲಿಗಲ್ಲಿನ ಬುನಾದಿ ಆಗಿದೆ.  

     ಶಾಲೆಯ ಯಶೋಗಾಥೆಯ ಪೋಟೋ ಸಹಿತ pdf ಫೈಲ್ ವೀಕ್ಷಣೆಗೆ ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ

https://drive.google.com/file/d/1PfGLLmIdTSfAcwQIJb6jpryu5Cz0lwHO/view?usp=drivesdk

ನಲಿಕಲಿ ತರಗತಿ ಕೊಠಡಿ ವೀಕ್ಷಣೆಗಾಗಿ 



ವಂದನೆಗಳು


ರೇಣುಕಾರಾಧ್ಯ ಪಿ. ಪಿ.

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ

ಎಂ.ಕೊಪ್ಪಲು ಅರಸೀಕೆರೆ

ಹಾಸನ


   ನಿಮ್ಮ ವೇದಿಕೆ                     

ಮಾರ್ಗದರ್ಶಕರು


   ಶ್ರೀಯುತ ಫಣೀಶ ಎಂ.ಎಸ್.

ಉಪ ಪ್ರಾಂಶುಪಾಲರು

      *ಡಯಟ್ ಹಾಸನ*


ನಿಮ್ಮ ಶಾಲೆಗಳ ಯಶೋಗಾಥೆ ಪ್ರಕಟಿಸಲು ಸಂಪರ್ಕಿಸಿ

Renukaradhya

6361565131




1 comment: