ನಿಮ್ಮ ವೇದಿಕೆ ಸರಣಿ - 7
ಸ.ಹಿ.ಪ್ರಾ.ಶಾಲೆ ಹುತ್ತಳ್ಳಿ
ಹುಂಚದಕಟ್ಟೆ ಕ್ಲಸ್ಟರ್
ತೀರ್ಥಹಳ್ಳಿ .ತಾ.
ಶಿವಮೊಗ್ಗ. ಜಿ.
ಎಲ್ಲರಿಗೂ ನಮಸ್ತೆ..
ನಲಿಕಲಿ ಎಂಬುದು ನಮ್ಮ ಹೆಮ್ಮೆ . ನಲಿಕಲಿ ಎಂಬ ಪದ್ಧತಿ ಅನೇಕ ವೈವಿಧ್ಯತೆಗಳ ಆಗರ ನಮ್ಮ ನಲಿಕಲಿ app ಬ್ಲಾಗ್ ನಲ್ಲಿ ಒಂದು ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ ಅದುವೇ ನಿಮ್ಮ ವೇದಿಕೆ
ಇದು ನಲಿಕಲಿ ಶಿಕ್ಷಕರ ಕ್ರಿಯಾಶೀಲತೆಗೆ ಒಂದು ಪುಟ್ಟ ವೇದಿಕೆಯಾಗಿದೆ ಅನೇಕ ಶಿಕ್ಷಕರಿಗೆ ಇದು ದಿಕ್ಸೂಚಿ ಸಹಾಯಕ ಆಗಬಲ್ಲದು ಎಂಬ ಆಶಯದೊಂದಿಗೆ ಇಂದು ನಿಮ್ಮ ವೇದಿಕೆಯಡಿಯಲ್ಲಿ 7ನೇ ಶಾಲೆಯ ಪರಿಚಯ ನೀಡುತ್ತಿದ್ದೇವೆ.
ಈ ದಿನದ ನಲಿಕಲಿ ಕ್ರಿಯಾಶೀಲ ಶಿಕ್ಷಕರುಗಳ ಶಾಲೆಯಾದ ಸ.ಹಿ.ಪ್ರಾ.ಶಾಲೆ ಹುತ್ತಳ್ಳಿ ಈ ಶಾಲೆಯು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹುಂಚದಕಟ್ಟೆ ಕ್ಲಸ್ಟರ್ ನ ಶಾಲೆಯಾಗಿದೆ.
ಈ ಶಾಲೆಯು 2019-20ನೇ ಸಾಲಿನ ಜಿಲ್ಲೆಯ ಅತ್ಯುತ್ತಮ ನಲಿಕಲಿ ಶಾಲೆಗಳ ಪೈಕಿ ಒಂದು ಎಂಬುದು ಹೆಮ್ಮೆಯ ಸಂಗತಿ ಈ ಶಾಲೆಯಲ್ಲಿ ನಲಿಕಲಿ ವಿಧಾನವನ್ನು ಅತ್ಯುತ್ತಮ ರೀತಿಯಲ್ಲಿ ನಡೆಸುತ್ತಿರುವ ಕೀರ್ತಿ ಈ ಶಾಲೆಯ ಕ್ರಿಯಾಶೀಲ ಶಿಕ್ಷಕ ಬಳಗಕ್ಕೆ ಸಲ್ಲುತ್ತಿದೆ ಇಲ್ಲಿಯ ಮಕ್ಕಳ ತೊಡಗುವಿಕೆ ವಿಭಿನ್ನ ವಿಧಾನ ಗಳ ಮೂಲಕ ಸಮುದಾಯದ ಮೆಚ್ಚುಗೆಗೆ ಶಾಲೆ ಪಾತ್ರವಾಗಿದೆ .ಈ ಶಾಲೆಗೆ ಭೇಟಿ ನೀಡುವ ಅನೇಕ ಅಧಿಕಾರಿಗಳು ಶಾಲೆಯ ಶಿಕ್ಷಕರ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ ಅಲ್ಲದೆ ಇಲ್ಲಿಯ ಶಿಕ್ಷಕರು ಇಲಾಖೆಯ ಅಧಿಕಾರಿಗಳ ಪ್ರೋತ್ಸಾಹವನ್ನು ಸ್ಮರಿಸುತ್ತಾರೆ. ನಲಿಕಲಿಯನ್ನು ವಿಭಿನ್ನವಾಗಿ ಅಳವಡಿಸಿಕೊಂಡಿರುವ ಶಾಲೆ ಇದಾಗಿದೆ .
ಇಲ್ಲಿಯ ಶಿಕ್ಷಕರು ಸದಾ ಮಕ್ಕಳ ಕಲಿಯುವಿಕೆಗಾಗಿ ನೂರಾರು ಸರಳ ಕಲಿಕೋಪಕರಣಗಳನ್ನು ತಯಾರಿಸಿಕೊಂಡಿದ್ದಾರೆ ಅದು ಅವರ ಶ್ರಮದಿಂದಾಗಿ ಕಡಿಮೆ ವೆಚ್ಚದಲ್ಲಿ ತಯಾರಾಗಿವೆ ಮಕ್ಕಳ ಕೈಯಿಂದಲೂ ಅನೇಕ ಕ್ರಾಫ್ಟ್ ಚಟುವಟಿಕೆ ಸರಳ ಪ್ರಯೋಗಗಳು ನಾಟಕ ಹಾಡು ಮುಂತಾದವುಗಳನ್ನು ವಿಭಿನ್ನವಾಗಿ ಮಾಡಿಸುತ್ತಿದ್ದಾರೆ
ಇಲ್ಲಿ ಮಕ್ಕಳಿಗಾಗಿ ಮಕ್ಕಳ ಸಂತೆ, ಕಲಿಕೋಪಕರಣ ಮೇಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉತ್ತಮವಾಗಿ ಆಯೋಜಿಸುತ್ತ ಬರುತ್ತಿದ್ದಾರೆ ಅಲ್ಲದೆ ವಿಶೇಷವಾಗಿ ಪರಿಸರ ಅಧ್ಯಯನದಲ್ಲಿ ಬರುವ ಯೋಜನೆಗಳು ಎಲ್ಲರಿಗೂ ಮಾದರಿಯಾಗುವಂತೆ ಈ ಶಾಲೆಯಲ್ಲಿ ಮಕ್ಕಳ ಸಹಾಯದೊಂದಿಗೆ ಮಾಡಿಸಲಾಗಿದೆ ಭಿನ್ನ ಕ್ರಾಫ್ಟ್ ಚಟುವಟಿಕೆಗಳು ಕಾಣಸಿಗುತ್ತವೆ.
ಸಾಧ್ಯವೆಂದರೆ ಸಾಧ್ಯ
ಶಿವಮೊಗ್ಗ ಡಯಟ್ ನ ವಿಭಿನ್ನ ಕಾರ್ಯಕ್ರಮವಾದ ಸಾಧ್ಯವೆಂದರೆ ಸಾಧ್ಯ ಫ್ಲೆಕ್ಸ್ ನಲ್ಲಿಯೂ ಈ ಶಾಲೆಯ ನಲಿಕಲಿ ಚಟುವಟಿಕೆಗಳ ಫೋಟೋಗಳಿಗೆ ಸ್ಥಾನ ದೊರೆತಿರುವುದು ಹೆಮ್ಮೆಯ ಸಂಗತಿಯಾಗಿದೆ
ನಲಿಕಲಿಗೆ ಸಂಬಂಧಿಸಿದಂತೆ ನಲಿಕಲಿ ವಿಶಿಷ್ಟ ತಟ್ಟೆಗಳು ವಾಲ್ ಸ್ಲೇಟ್ ಗಳು ಪಪೆಟ್ ಶೋ ಗೊಂಬೆಗಳು ಮುಖವಾಡಗಳು ವಾಚಕಗಳ ಜೋಡಣೆ ವಿಷಯವಾರು ಕಲಿಕೋಪಕರಣ ಜೋಡಣೆ ಎಲ್ಲವೂ ಕೂಡ ವಿಭಿನ್ನವಾಗಿದೆ
ಈ ಶಾಲೆಯ ನಲಿಕಲಿ ತರಗತಿ ವಿಡಿಯೋ ಮತ್ತು ನಲಿಕಲಿ ಕಲಿಕೋಪಕರಣಗಳು
(ZOOM ಮಾಡಿ ಚೌಕ ಮುಟ್ಟಿರಿ)
ಯೋಜನೆಗಳು (zoom ಮಾಡಿರಿ )
ನಲಿಕಲಿ ತಟ್ಟೆ ಪಪೆಟ್ ಶೋ ಮುಖವಾಡಗಳು
ಕ್ರಾಫ್ಟ್ ಕಾರ್ಯ ಡೈಸ್ ಮಾದರಿಗಳು
ಇವರಿಗೆ ದೊರೆತಿರುವ ಗೌರವಗಳು
★ ಜಿಲ್ಲೆಯ ಉತ್ತಮ ನಲಿಕಲಿ ಶಾಲೆ.
ತರಗತಿ ಫೋಟೋಗಳು ಮತ್ತು ಕಲಿಕೋಪರಣಗಳ ಫೋಟೋಗಳು ಮತ್ತು ಯಶೋಗಾಥೆ pdf ಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿರಿ
https://drive.google.com/file/d/1Jw-5iQLoOPZmQaQY-uPiixB9hySF70tX/view?usp=drivesdk
ನಿಮ್ಮ ವೇದಿಕೆ ಕಾರ್ಯಕ್ರಮ ಕುರಿತು ಮತ್ತು ಈ ಶಾಲೆಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಈ ಕೆಳಗಿನ ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಬಹುದು
ವಂದನೆಗಳೊಂದಿಗೆ,
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ, ಶಿವಮೊಗ್ಗ
ನಿಮ್ಮ ವೇದಿಕೆ ಕಾರ್ಯಕ್ರಮ ಮಾರ್ಗದರ್ಶಕರು
ಶ್ರೀಯುತ ಫಣೀಶ
ಹಿರಿಯ ಉಪನ್ಯಾಸಕರು
ಡಯಟ್ ಶಿವಮೊಗ್ಗ














ಇದೊಂದು ಪರಿಪೂರ್ಣ 'ನಲಿಕಲಿ ತರಗತಿ ಕೊಠಡಿ' ಎಂದೆನಿಸಿತು. ಕಲಿಕೋಪಕರಣಗಳ ಜೋಡಣೆ, ಕಲಿಕಾ ಚಪ್ಪರ ಎಲ್ಲವೂ ತುಂಬಾ ಆಕರ್ಷಣೀಯವಾಗಿವೆ. ಉತ್ತಮ ಪ್ರಯತ್ನ. ಶಿಕ್ಷಕ ವೃಂದಕ್ಕೆ ಅಭಿನಂದನೆಗಳು.
ReplyDelete