Sunday, 17 January 2021

ದಿನಕ್ಕೊಂದು ಗುಂಪು ತಟ್ಟೆ

 🌸🌸🌸🌸🌸🌸🌸🌸

 

*ದಿನಕ್ಕೊಂದು ಗುಂಪು ತಟ್ಟೆ*

            *ದಿನ -7* 


 *ದಿನಾಂಕ* : 

1️⃣7️⃣➖0️⃣1️⃣➖2️⃣1️⃣


 *ವಿಷಯ : ಗಣಿತ* 


 *ಗುಂಪು ತಟ್ಟೆ : ಸಾಮೂಹಿಕ ತಟ್ಟೆ/ಗುಂಪು* 


 *_ಪರಿಚಯ_* 


ಗಣಿತದ ಸಾಮೂಹಿಕ ತಟ್ಟೆಯಲ್ಲಿ ಬರುವ ಲೋಗೋಗಳು


1.ಮೊಟ್ಟೆಯಿಂದ ಹೊರಬರುತ್ತಿರುವ ಕೋಳಿಮರಿ- ಪೂ. ಭಾ.ಚ.


2.ಪೆಂಗ್ವಿನ್ - ಪೂ. ಭಾ.ಚ.


3.ಕೋಗಿಲೆ - ಹಾಡು


4.ಚೆಂಡು - ಆಡಿ ಕಲಿಯೋಣ


5.ಪ್ಲೇಟಿನಲ್ಲಿ ಬ್ರಶ್ - ಕ್ರಾಫ್ಟ್





 *ನಿರ್ವಹಣೆ:*


ಈ 5 ಲೋಗೋಗಳು ಸಾಮೂಹಿಕ ತಟ್ಟೆಯಲ್ಲಿ ಬರುತ್ತವೆ.


ಇಲ್ಲಿ ಈ 5 ಲೋಗೋಗಳಲ್ಲಿ ಮೊಟ್ಟೆಯಿಂದ ಹೊರ ಬರುತ್ತಿರುವ ಕೋಳಿಮರಿ ಮತ್ತು ಪೆಂಗ್ವಿನ್ *ಪೂರ್ವಭಾವಿ ಚಟುವಟಿಕೆ* ಯಾಗಿ ಕಾರ್ಯ ನಿರ್ವಹಿಸುತ್ತವೆ  ಮತ್ತು ಕೋಗಿಲೆ ಲೋಗೋ ಕಲಿಕಾ ಗೋಪುರದ ಮೊದಲ ಹಂತವಾದ *ಪೂರ್ವ ಸಿದ್ಧತಾ ಹಂತದ* ಚಟುವಟಿಕೆಯಾಗಿ ಕಾರ್ಯ ನಿರ್ವಹಿಸಿದರೆ ಚೆಂಡು ಮತ್ತು ಪ್ಲೇಟ್ ನಲ್ಲಿ ಬ್ರಶ್ ಕಲಿಕಾ ಗೋಪುರದ 2ನೇ ಹಂತವಾದ *ಕಲಿಕಾ ಪೂರಕ ಹಂತದ* ಚಟುವಟಿಕೆಗಳಾಗಿ ಕಾರ್ಯ ನಿರ್ವಹಿಸುತ್ತವೆ.


ಸಾಮೂಹಿಕ ತಟ್ಟೆಯಲ್ಲಿ ಬಂದಿರುವ ಕಾರ್ಡ್ ಗಳ ಸಂಖ್ಯೆ 


1ನೇ ತರಗತಿ ಕಾರ್ಡ್ ಗಳು :

50 ಕಾರ್ಡ್ಸ್


2ನೇ ತರಗತಿ ಕಾರ್ಡ್ ಗಳು :

28 ಕಾರ್ಡ್ಸ್


3ನೇ ತರಗತಿ ಕಾರ್ಡ್ ಗಳು :

22 ಕಾರ್ಡ್ಸ್


        ಈ ಗುಂಪು *ಶಿಕ್ಷಕರ ಸಂಪೂರ್ಣ ಸಹಕಾರ* ದಲ್ಲಿ ಚಟುವಟಿಕೆಗಳು ನಿರ್ವಹಣೆಯಾಗುತ್ತವೆ.

ನಲಿಕಲಿ ಯಾವುದೇ ವಿಷಯದ ತರಗತಿ ತೆಗೆದುಕೊಳ್ಳುವ ಮುನ್ನ ಈ ಸಾಮೂಹಿಕ ಗುಂಪಿನ ಚಟುವಟಿಕೆ ಮಾಡಬೇಕು. ಸಾಮೂಹಿಕ ಚಟುವಟಿಕೆ ನಿರ್ವಹಿಸಿದ ನಂತರ ಉಳಿದ 5 ತಟ್ಟೆಗಳನ್ನು ನೆಲದ ಮೇಲೆ ಹಾಕಬೇಕು ಮತ್ತು ಸಾಮೂಹಿಕ ತಟ್ಟೆಗೆ ಬಂದಿರುವ ಮಕ್ಕಳ ಮಾಹಿತಿಯನ್ನು ಶಿಕ್ಷಕರು ಹಿಂದಿನ ದಿನವೇ ಅರಿತಿರಬೇಕು ಅದರನ್ವಯ ಎಷ್ಟು ಮಕ್ಕಳು ಯಾವ ತರಗತಿ ಮಕ್ಕಳು ನಾಳೆಯ ತರಗತಿಗೆ ಸಾಮೂಹಿಕ ತಟ್ಟೆಗೆ ಬಂದಿರುವರು ಎಂಬುದ ಗಮನಿಸಿ ಆ ದಿನ ಮಾಡಬಹುದಾದ ಚಟುವಟಿಕೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಹೆಚ್ಚು ಮಕ್ಕಳು ಸಾಮೂಹಿಕ ಚಟುವಟಿಕೆ ಒಮ್ಮೆಲೇ ಬಂದಾಗ  ಹಿಂದೆ ಎಷ್ಟು ಮಕ್ಕಳು ಯಾವ ಮಕ್ಕಳು ಈ ಚಟುವಟಿಕೆ ನಿರ್ವಹಿಸಿದ್ದಾರೆ ಎಂಬುದನ್ನು ಸುಗಮಕಾರರು ಗಮನಿಸಬೇಕು.

 ಉದಾ: 2ನೇ ತರಗತಿ ಒಂದು ಮಗು 3ನೇ ಮೈಲಿಗಲ್ಲು ಚಟುವಟಿಕೆಯನ್ನು ಮಾಡಿದ್ದರೆ ಅದೇ ತರಗತಿ ಇನ್ನೊಂದು ಮಗು 2ನೇ ಮೈಲಿಗಲ್ಲಿನಲ್ಲಿ ಇರುತ್ತದೆ ಆದರೆ ಆ ಮಗು 3ನೇ ಮೈಲಿಗಲ್ಲು ಚಟುವಟಿಕೆಯನ್ನು ಗೆಳೆಯರೊಂದಿಗೆ ಮಾಡಿರುತ್ತದೆ. ಮುಂದಿನ ದಿನಗಳಲ್ಲಿ 2ನೇ ಮೈಲಿಗಲ್ಲು ಇದ್ದ ಮಗು 3ನೇ ಮೈಲಿಗಲ್ಲಿಗೆ ಬಂದಾಗ ಸುಗಮಕಾರರು ನೇರವಾಗಿ ಮಗುವಿಗೆ ಆ ಚಟುವಟಿಕೆ ಈ ಹಿಂದೆ ಮಾಡಿದ್ದನ್ನು ನೆನಪಿಸಿ ಕೆಲವು ಸಾಮಾನ್ಯ ಪ್ರಶ್ನೆ ಕೇಳಿ ಮುಂದುವರೆಯಬಹುದು. ಸುಗಮಕಾರರು ಒಮ್ಮೆಲೇ ಸಾಮೂಹಿಕ ಚಟುವಟಿಕೆಗೆ ಎಲ್ಲಾ ಮಕ್ಕಳು ಬರದಂತೆ  ಸ್ವ ಕಲಿಕೆಯಲ್ಲಿ ಹೆಚ್ಚು ತೊಡಗಿಸಿ ಮುಂದಾಲೋಚನೆಯೊಂದಿಗೆ ತರಗತಿ ನಿರ್ವಹಿಸಬೇಕು ಚಟುವಟಿಕೆಯಲ್ಲಿ  ಯಾವುದಾದರೂ ಒಂದು ಅಥವಾ 2 ಚಟುವಟಿಕೆಯನ್ನು ಸುಗಮಕಾರರು ನಿಗಧಿತ 10 ನಿಮಿಷಗಳ ಕಾಲಾವಧಿಯಲ್ಲಿ ನಿರ್ವಹಿಸಬೇಕು ಮುಖ್ಯವಾಗಿ ಕಲಿಕಾ ಪೂರಕ *ಆಡಿಕಲಿಯೋಣ* ಚಟುವಟಿಕೆಗಳನ್ನು ಉತ್ತಮವಾಗಿ ನಿರ್ವಹಿಸಬೇಕು ಸಾಮೂಹಿಕ ಚಟುವಟಿಕೆ ನಿರ್ವಹಿಸಿದ ನಂತರ ಉಳಿದ ಗುಂಪು ತಟ್ಟೆಗಳನ್ನು ನೆಲದ ಮೇಲೆ ಹಾಕಿಸಿ ಮುಂದಿನ ತರಗತಿ ಪ್ರಕ್ರಿಯೆ ನಿರ್ವಹಿಸಬೇಕು .

    

ಈ ರೀತಿಯಾಗಿ 10 ನಿಮಿಷ ಅವಧಿಯಲ್ಲಿ ಸಾಮೂಹಿಕ ಚಟುವಟಿಕೆ ನಿರ್ವಹಣೆ ಮಾಡಬೇಕು.


ನಲಿಕಲಿ *ರಸಪ್ರಶ್ನೆ ಲಿಂಕ್* 

ನಾಳೆ ರಾತ್ರಿ 10ಕ್ಕೆ ಮುಕ್ತಾಯ

https://nalikalirenukaradhyatlm.blogspot.com/2021/01/app.html



ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

No comments:

Post a Comment